ಮಲಗುವ ಮುನ್ನ ಈ 4 ಅಭ್ಯಾಸಗಳನ್ನು ಬಿಟ್ಟರೆ ಸುಖ ನಿದ್ರೆ ಖಂಡಿತ
ಮಲಗುವ ಮುನ್ನ ನೀವು ಪಾಲಿಸುವಂತಹ ಕೆಲವೊಂದು ಅಭ್ಯಾಸಗಳೇ ನಿಮ್ಮ ನಿದ್ರೆಗೆ ಭಂಗವನ್ನು ತರುತ್ತದೆ. ಇದರಿಂದ ದೇಹದ ಆರೋಗ್ಯದಲ್ಲೂ ವ್ಯತ್ಯಾಸಗಳು ಉಂಟಾಗುತ್ತದೆ. ಹಾಗಾಗಿ ಉತ್ತಮ ನಿದ್ರೆ ಪಡೆಯಬೇಕೆಂದರೆ ಪ್ರತಿ ರಾತ್ರಿ ಮಲಗುವಾಗ ಈ 4 ತಪ್ಪುಗಳನ್ನು ಮಾಡಬೇಡಿ ಎಂದು ವೈದ್ಯ ಸೌರಭ್ ಸೇಥಿ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಈ ಬಗ್ಗೆ ವಿಡಿಯೋ ಇಲ್ಲಿದೆ ನೋಡಿ.

ಮಲಗುವ ಮುನ್ನ ಕೆಲವರಿಗೆ ಈ ಕೆಟ್ಟ ಅಭ್ಯಾಸಗಳು ಇರುತ್ತದೆ. ಇದು ಆರೋಗ್ಯದ ಮೇಲೆ ದೊಡ್ಡ ಪರಿಣಾಮವನ್ನು ಉಂಟು ಮಾಡುತ್ತದೆ. ವೈದ್ಯರು ಈ ಬಗ್ಗೆ ಎಚ್ಚರವಾಗಿರಲು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ನಿದ್ರೆ ಚೆನ್ನಾಗಿದ್ದರೆ, ದೇಹ ಮತ್ತು ಮನಸ್ಸು ಎರಡೂ ತಾಜಾತನದಿಂದ ಇರುತ್ತದೆ. 8 ರಿಂದ 9 ಗಂಟೆಗಳ ಕಾಲ ಮಲಗಿದ್ರು ಕೆಲವರಿಗೆ ಮರುದಿನ ಸುಸ್ತು, ದೇಹ ಭಾರವಾಗಿರುತ್ತದೆ. ಆಗಾಗ್ಗೆ ಇಂತಹ ಸಮಸ್ಯೆಯನ್ನು ಅನುಭವಿಸುತ್ತಲೇ ಇರುತ್ತಾರೆ. ಕೆಲವು ಕೆಟ್ಟ ಅಭ್ಯಾಸಗಳು ಅದಕ್ಕೆ ಕಾರಣ ಎಂದು ಹಾರ್ವರ್ಡ್ ವೈದ್ಯ ಸೌರಭ್ ಸೇಥಿ ಅವರು ಈ ಬಗ್ಗೆ ಹೇಳಿದ್ದಾರೆ. ಈ ಬಗ್ಗೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ನಿದ್ರೆಯನ್ನು ಹಾಳುಮಾಡುವ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಕೆಲವು ಅಭ್ಯಾಸಗಳಿವೆ. ವಿಶೇಷವಾಗಿ ಮಲಗುವ ಮೊದಲು ಮಾಡುವ ಈ 4 ತಪ್ಪುಗಳು ನಮ್ಮ ದೇಹಕ್ಕೆ ತುಂಬಾ ಹಾನಿಕಾರಕವಾದ ಸಮಸ್ಯೆಗಳನ್ನು ಉಂಟು ಮಾಡಬಹುದು ಎಂದು ಹೇಳಿದ್ದಾರೆ.
ಈ ನಾಲ್ಕು ಕೆಟ್ಟ ಅಭ್ಯಾಸಗಳು ಬಿಟ್ಟುಬಿಡಿ
ಹೆಚ್ಚು ಭೋಜನ ಮಾಡುವುದು: ಮಲಗುವ ಮುನ್ನ ಭಾರವಾದ ಆಹಾರವನ್ನು ಸೇವಿಸಬಾರದು. ಇದು ಹೊಟ್ಟೆ ಉಬ್ಬರ, ನಿದ್ರೆಯಲ್ಲಿ ತೊಂದರೆ ಮತ್ತು ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಆದ್ದರಿಂದ, ಮಲಗುವ 3-4 ಗಂಟೆಗಳ ಮೊದಲು ರಾತ್ರಿ ಊಟ ಮಾಡಬೇಕು ಮತ್ತು ಹಗುರವಾದ ಆಹಾರವನ್ನು ಸೇವಿಸಬೇಕು.
ಫೋನ್ ಬಳಸಬಾರದು: ಕೆಲವರು ಮಲಗುವಾಗ ಹಾಸಿಗೆಯಲ್ಲಿ ಮಲಗಿ ತಡರಾತ್ರಿಯವರೆಗೆ ಫೋನ್ ಬಳಸುತ್ತಾರೆ. ವೈದ್ಯರ ಪ್ರಕಾರ, ಈ ಅಭ್ಯಾಸ ನಿದ್ರೆಗೆ ತುಂಬಾ ಕೆಟ್ಟದು. ಫೋನ್‌ನ ನೀಲಿ ಬೆಳಕು ಮೆದುಳಿಗೆ ನಿದ್ರೆಯ ಸಂಕೇತಗಳನ್ನು ನೀಡುವುದಿಲ್ಲ, ಇದು ಮೆಲಟೋನಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ನಿದ್ರೆಗೆ ತೊಂದರೆ ಉಂಟಾಗಬಹುದು. ಉತ್ತಮ ನಿದ್ರೆಗಾಗಿ, ಮಲಗುವ ಮೊದಲು ಕನಿಷ್ಠ 1 ಗಂಟೆ ಫೋನ್, ಟಿವಿ ಮತ್ತು ಲ್ಯಾಪ್‌ಟಾಪ್‌ನಿಂದ ದೂರವಿರಿ.
ವೈದ್ಯ ಸೌರಭ್ ಸೇಥಿ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಚಹಾ ಅಥವಾ ಕಾಫಿ ಕುಡಿಯಬಾರದು: ರಾತ್ರಿಯಲ್ಲಿ ಚಹಾ ಅಥವಾ ಕಾಫಿಯಂತಹ ಕೆಫೀನ್ ಇರುವ ವಸ್ತುಗಳನ್ನು ಕುಡಿಯುವುದರಿಂದ ನಿದ್ರೆಗೆ ಭಂಗ ಬರಬಹುದು. ಕೆಫೀನ್ ಮೆದುಳನ್ನು ಸಕ್ರಿಯಗೊಳಿಸುತ್ತದೆ, ಇದರಿಂದಾಗಿ ನೀವು ದೀರ್ಘಕಾಲ ಎಚ್ಚರವಾಗಿರುತ್ತೀರಿ. ಮರುದಿನ ಸುಸ್ತು ಉಂಟಾಗುತ್ತದೆ. ಮಲಗುವ 6 ಗಂಟೆಗಳ ಮೊದಲು ಚಹಾ ಅಥವಾ ಕಾಫಿ ಕುಡಿಯಬೇಕು.
ಇದನ್ನೂ ಓದಿ: ಪದೇ ಪದೇ ಮೂತ್ರ ಸೋಂಕು ಬರುತ್ತಿದೆಯೇ? ಚಿಂತೆ ಬೇಡ ಇಲ್ಲಿದೆ ನೋಡಿ ಪರಿಹಾರ
ಒತ್ತಡದಿಂದ ನಿದ್ರಿಸುವುದು: ವೈದ್ಯರು ಒತ್ತಡದಿಂದ ಮಲಗದಂತೆ ಸಲಹೆ ನೀಡುತ್ತಾರೆ. ಒತ್ತಡವು ದೇಹದಲ್ಲಿನ ಹಾರ್ಮೋನುಗಳಿಗೆ ತೊಂದರೆ ಉಂಟು ಮಾಡಬಹುದು. ಹೊಟ್ಟೆಯ ಆರೋಗ್ಯಕ್ಕೂ ಹಾನಿ ಮಾಡುತ್ತದೆ. ಆದ್ದರಿಂದ, ಮಲಗುವ ಮೊದಲು, ಧ್ಯಾನ ಮಾಡಿ, ಆಳವಾದ ಉಸಿರನ್ನು ತೆಗೆದುಕೊಳ್ಳಿ ಅಥವಾ ಲಘು ಯೋಗ ಮಾಡಿ, ಇದರಿಂದ ಮನಸ್ಸು ಶಾಂತವಾಗುತ್ತದೆ ಮತ್ತು ನೀವು ಚೆನ್ನಾಗಿ ನಿದ್ರೆ ಮಾಡಬಹುದು.
ಅರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








