AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Doctors Day 2025: ಕ್ಯಾನ್ಸರ್ ಚಿಕಿತ್ಸೆಗೆ ಎಐ ತಂತ್ರಜ್ಞಾನ ಹೇಗೆ ಸಹಕಾರಿ? ಈ ಬಗ್ಗೆ ಕ್ಯಾನ್ಸರ್ ತಜ್ಞ ಡಾ. ಅಕ್ಷತ್ ಮಲಿಕ್ ಹೇಳೋದೇನು?

ವೈದ್ಯರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜುಲೈ 1 ರಂದು ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಡಾ. ಬಿಧನ್ ಚಂದ್ರ ರಾಯ್ ಅವರು ವೈದ್ಯಕೀಯ ರಂಗಕ್ಕೆ ನೀಡಿದ ಅಮೋಘ ಕೊಡುಗೆಗಳನ್ನು ನೆನೆಯುವ ಮೂಲಕ ವೈದ್ಯರಿಗೂ ಗೌರವ ಸಲ್ಲಿಸಲು ಆಚರಣೆ ಮಾಡಲಾಗುತ್ತದೆ. ಹೌದು, ಇಂದು ವೈದ್ಯಕೀಯ ಕ್ಷೇತ್ರಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ರೋಗವನ್ನು ಪತ್ತೆ ಹಚ್ಚಿ ಅದಕ್ಕೆ ಸರಿಯಾಗಿ ಚಿಕಿತ್ಸೆ ನೀಡುವಲ್ಲಿ ವೈದ್ಯರು ಸಶಕ್ತರಾಗಿದ್ದಾರೆ. ಅದರಲ್ಲಿ ಈ ಕ್ಯಾನ್ಸರ್ ಪ್ರಕರಣಗಳಲ್ಲಿ ರೋಗನಿರ್ಣಯಕ್ಕಾಗಿ ಎಐಯನ್ನು ಹೆಚ್ಚು ಬಳಸಲಾಗುತ್ತಿದೆ. ಆದರೆ ಈ ಎಐ ವೈದ್ಯರ ಪಾಲಿಗೆ ವರದಾನವೋ, ಹೊರೆಯಾಗಿದೆಯೋ ಈ ಬಗ್ಗೆ ಕ್ಯಾನ್ಸರ್ ತಜ್ಞರು ಏನ್ ಹೇಳ್ತಾರೆ? ಈ ಕುರಿತಾದ ಮಾಹಿತಿ ಇಲ್ಲಿದೆ.

National Doctors Day 2025: ಕ್ಯಾನ್ಸರ್ ಚಿಕಿತ್ಸೆಗೆ ಎಐ ತಂತ್ರಜ್ಞಾನ ಹೇಗೆ ಸಹಕಾರಿ? ಈ ಬಗ್ಗೆ ಕ್ಯಾನ್ಸರ್ ತಜ್ಞ ಡಾ. ಅಕ್ಷತ್ ಮಲಿಕ್ ಹೇಳೋದೇನು?
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಎಐ ತಂತ್ರಜ್ಞಾನImage Credit source: andriy onufriyenko/Moment/Getty Images
ಸಾಯಿನಂದಾ
|

Updated on: Jul 01, 2025 | 8:26 AM

Share

ಇತ್ತೀಚೆಗಿನ ದಿನಗಳಲ್ಲಿ ಮಾರಕ ಕಾಯಿಲೆ ಕ್ಯಾನ್ಸರ್ (cancer) ಪ್ರಕರಣಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದೆ. ಆದರೆ ಈ ಕಾಯಿಲೆ ಇದೆ ಎಂದು ಗೊತ್ತಾಗುವ ಹೊತ್ತಿಗೆಗಾಗಲೇ ಮೂರು, ನಾಲ್ಕನೇ ಹಂತ ತಲುಪಿ ಆಗಿರುತ್ತದೆ. ಹೀಗಾಗಿ ಈ ಕ್ಯಾನ್ಸರ್ ಕಾಯಿಲೆಯನ್ನು ಮುಂಚಿತವಾಗಿ ಪತ್ತೆ ಹಚ್ಚುವುದು ಬಹಳ ಕಷ್ಟಕರ. ಆದರೆ ಈ ಮಾರಕ ಕಾಯಿಲೆಯನ್ನು ವೇಗ ಹಾಗೂ ನಿಖರವಾಗಿ ಪತ್ತೆ ಹಚ್ಚಲು ಎಐ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಈ ತಂತ್ರಜ್ಞಾನವು ಕ್ಯಾನ್ಸರ್‌ ರೋಗವನ್ನು ಮೊದಲೇ ಗುರುತಿಸಲು, ಕಡಿಮೆ ಸಮಯದಲ್ಲಿ ಕಾಯಿಲೆ ಯಾವ ಹಂತಕ್ಕೆ ತಲುಪಿದೆ ಎಂದು ತಿಳಿದುಕೊಂಡು, ಅದಕ್ಕೆ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ನೀಡಲು ಸಹಾಯ ಮಾಡುತ್ತದೆ. ಆದರೆ ಕ್ಯಾನ್ಸರ್ ಕಾಯಿಲೆ ಪತ್ತೆ ಹಚ್ಚಲು, ಶಸ್ತ್ರ ಚಿಕಿತ್ಸೆಗೆ ಎಐ ತಂತ್ರಜ್ಞಾನ (AI Technology) ಎಷ್ಟು ಪ್ರಯೋಜನಕಾರಿಯಾಗಿದೆ. ಈ ಬಗ್ಗೆ ನವದೆಹಲಿಯ ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿಯ ಪ್ರಧಾನ ಸಲಹೆಗಾರ ಡಾ. ಅಕ್ಷತ್ ಮಲಿಕ್ (Dr Akshat Malik, Principal Consultant, Surgical Oncology at Max Hospital, Saket, New Delhi) ಹೇಳೋದೇನು? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಎಐ ಪರಿಕರಗಳು ದಿನನಿತ್ಯದ ಕ್ಯಾನ್ಸರ್ ರೋಗನಿರ್ಣಯದ ಅತ್ಯಗತ್ಯ ಭಾಗವಾಗಿದೆ. ವೈದ್ಯರು ಸ್ಕ್ಯಾನ್‌ಗಳು, ಸ್ಲೈಡ್‌ಗಳು ಮತ್ತು ಜೆನೆಟಿಕ್ ಪರೀಕ್ಷೆಗಳನ್ನು ಹೆಚ್ಚಿನ ನಿಖರತೆಯೊಂದಿಗೆ ಅರ್ಥೈಸಲು ಇದು ಸಹಾಯ ಮಾಡುತ್ತವೆ. ಎಐ ಮಾದರಿಗಳು ಈಗ ಮ್ಯಾಮೊಗ್ರಾಮ್‌ಗಳು, ಸಿಟಿಗಳು, ಎಂಆರ್ ಐ ಮತ್ತು ರೋಗಶಾಸ್ತ್ರ ಸ್ಲೈಡ್‌ಗಳನ್ನು ಸೆಕೆಂಡುಗಳಲ್ಲಿ ಸ್ಕ್ಯಾನ್ ಮಾಡುತ್ತವೆ. ಇದು ಅನುಮಾನಾಸ್ಪದ ಪ್ರದೇಶಗಳನ್ನು ಹೈಲೈಟ್ ಮಾಡಿ, ರೇಡಿಯಾಲಜಿಸ್ಟ್‌ಗಳು ಮತ್ತು ರೋಗಶಾಸ್ತ್ರಜ್ಞರು ಗೆಡ್ಡೆಯ ಪ್ರದೇಶಗಳ ಮೇಲೆ ತ್ವರಿತವಾಗಿ ಗಮನಹರಿಸಲು ಸಹಾಯ ಮಾಡುತ್ತವೆ. ಈ ತಂತ್ರಜ್ಞಾನವು ಗೆಡ್ಡೆಯ ಹರಡುವಿಕೆಯನ್ನು ಮೊದಲೇ ಗುರುತಿಸಿ, ರೋಗನಿರ್ಣಯದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಡಾ. ಅಕ್ಷತ್ ಮಲಿಕ್ ಎಂದು ತಿಳಿಸಿದ್ದಾರೆ.

ಕ್ಯಾನ್ಸರ್-ಚಾಲನಾ ರೂಪಾಂತರಗಳು ಮತ್ತು ಬಯೋಮಾರ್ಕರ್‌ಗಳನ್ನು ಗುರುತಿಸಲು ಕೃತಕ ಬುದ್ಧಿಮತ್ತೆಯೂ ಜೀನೋಮಿಕ್ ಮತ್ತು ಆಣ್ವಿಕ ಡೇಟಾವನ್ನು ಪ್ರಕ್ರಿಯೆಗೊಳಿಸುತ್ತದೆ. ಇದು ರೋಗಿಗೆ ಸರಿಯಾದ ಚಿಕಿತ್ಸೆಗಳನ್ನು ನೀಡಲು ಸಹಾಯ ಮಾಡುತ್ತದೆ . ಎಐ ಚಾಲಿತ ಜೀನೋಮಿಕ್ ವಿಶ್ಲೇಷಣೆಯು ರೋಗಿಯ ಗೆಡ್ಡೆಯು ಚಿಕಿತ್ಸೆಗೆ ಹೇಗೆ ವರ್ತಿಸಬಹುದು ಹಾಗೂ ಜೀನ್ ಗಳಲ್ಲಿ ಆಗುವ ಬದಲಾವಣೆಗಳನ್ನು ಕಂಡುಹಿಡಿಯಲು ಸಹಕಾರಿಯಾಗಿದೆ ಎಂದಿದ್ದಾರೆ ಕ್ಯಾನ್ಸರ್‌ ತಜ್ಞರು.

ಇದನ್ನೂ ಓದಿ
Image
ವೈದ್ಯ ಲೋಕದಲ್ಲಿ ಆದ ಬದಲಾವಣೆ ಬಗ್ಗೆ ಡಾ. ಅಣ್ಣಯ್ಯ ಕುಲಾಲ್ ಮಾಹಿತಿ
Image
ಮಲಗುವ ಮುನ್ನ ಈ 4 ಅಭ್ಯಾಸಗಳನ್ನು ಬಿಟ್ಟರೆ ಸುಖ ನಿದ್ರೆ ಖಂಡಿತ
Image
ಚರ್ಮದ ಸಮಸ್ಯೆಗೆ ವೈದ್ಯರು ನೀಡಿರುವ ಈ ಸಲಹೆ ಟ್ರೈ ಮಾಡಿ
Image
ನಮಗಾಗಿ ಸೇವೆ ಮಾಡುವ ವೈದ್ಯರಿಗೆ ಒಂದು ದಿನ

ಇದನ್ನೂ ಓದಿ : National Doctors Day 2025: ಕಾಲಕಾಲಕ್ಕೆ ವೈದ್ಯ ಲೋಕದಲ್ಲಿ ಆದ ಬದಲಾವಣೆಗಳೇನು?

ರೋಗಿಯ ಇತಿಹಾಸ, ಇಮೇಜಿಂಗ್ ಮತ್ತು ಜೆನೆಟಿಕ್ ಪ್ರೊಫೈಲ್‌ ಗಳನ್ನು ಸಂಯೋಜಿಸುವ ಮೂಲಕ ಎಐ ಗೆಡ್ಡೆಯೂ ಯಾವ ಹಂತದಲ್ಲಿದೆ ಹಾಗೂ ಯಾವ ರೀತಿಯ ಚಿಕಿತ್ಸೆ ಸೂಕ್ತ ಎಂದು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಈ ಎಐ ಮಾದರಿಗಳು ರೋಗಿಯ ಫಲಿತಾಂಶಗಳ ಕುರಿತು ಮುನ್ಸೂಚಕ ಅಂಕಗಳನ್ನು ನೀಡುತ್ತವೆ, ರೋಗಿಯ ಅಗತ್ಯತೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲು ಹಾಗೂ ಹೆಚ್ಚಿನ ಅಪಾಯವನ್ನು ಮೊದಲೇ ಗುರುತಿಸಲು ಸಹಕಾರಿಯಾಗಿದೆ. ಬಾಯಿಯ ಅಥವಾ ಗರ್ಭಕಂಠದ ಕ್ಯಾನ್ಸರ್‌ ತಪಾಸಣೆ ವೇಳೆಯಲ್ಲಿ ಯಾವ ರೋಗಿಗಳಿಗೆ ತಕ್ಷಣದ ಗಮನ ನೀಡಬೇಕು ಎಂಬುದನ್ನು ತಿಳಿಸಲು ಎಐ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ ಡಾ. ಮಲಿಕ್.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!