National Doctor’s Day 2025: ವೈದ್ಯೋ ಹರಿ ನಾರಾಯಣ: ನಮಗಾಗಿ ಸೇವೆ ಮಾಡುವ ವೈದ್ಯರಿಗೆ ಒಂದು ದಿನ
ಭಾರತವು ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸುತ್ತದೆ. ವೈದ್ಯರು ಮಾಡಿದ ಸಮರ್ಪಣೆಗೆ ಹಾಗೂ ಸೇವೆಗೆ ಒಂದು ರೀತಿಯ ಗೌರವವನ್ನು ಈ ದಿನದಂದು ನೀಡಲಾಗುತ್ತದೆ. ಈ ದಿನದಂದು ಅವರಿಗೆ ವಿಶೇಕ್ಷ ಧ್ಯೇಯದೊಂದು ಆಚರಣೆ ಮಾಡಲಾಗುತ್ತದೆ. ಈ ಬಾರಿ ಯಾವ ಧ್ಯೇಯದೊಂದಿಗೆ ಆಚರಣೆ ಮಾಡಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ ನೋಡಿ.

ವೈದ್ಯೋ ಹರಿ ನಾರಾಯಣ ಎಂಬ ಮಾತು ಸುಳ್ಳಲ್ಲ, ಎಲ್ಲರೂ ವೈದ್ಯರನ್ನು ದೇವರಂತೆ ಕಾಣುತ್ತಾರೆ, ವೈದ್ಯರು ಜೀವ ನೀಡುವ ಭಗವಂತ, ಹಾಗಾಗಿ ವೈದ್ಯರನ್ನು ಶ್ರೇಷ್ಠ ಭಾವನೆಯಿಂದ ಕಾಣುತ್ತಾರೆ. ಈ ಕಾರಣಕ್ಕೆ ಅವರ ಸೇವೆ ಮತ್ತು ನೆನಪಿಗಾಗಿ ಪ್ರತಿ ವರ್ಷ ಜುಲೈ 1ರಂದು ಭಾರತವು ರಾಷ್ಟ್ರೀಯ ವೈದ್ಯರ ದಿನವನ್ನು (National Doctor’s Day 2025) ಆಚರಿಸುತ್ತದೆ. ಪ್ರತಿ ವರ್ಷ ಈ ದಿನವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಈ ಆಚರಣೆಗೆ ಧ್ಯೇಯ ಇರುತ್ತದೆ. ಈ ದಿನವನ್ನು ಇಂತಹ ವಿಷಯಕ್ಕಾಗಿ ಘೋಷಣೆ ಮಾಡುತ್ತೇವೆ ಎಂಬ ಧ್ಯೇಯವನ್ನು ಇಟ್ಟುಕೊಂಡಿರುತ್ತಾರೆ. ಈ ಬಾರಿಯ ಉದ್ದೇಶ, ಧ್ಯೇಯ ಏನು ಎಂಬ ಬಗ್ಗೆ ಇಲ್ಲಿದೆ ನೋಡಿ.
ರಾಷ್ಟ್ರೀಯ ವೈದ್ಯರ ದಿನದ ಧ್ಯೇಯವಾಕ್ಯವೇನು?
ಪ್ರತಿ ವರ್ಷ, ರಾಷ್ಟ್ರೀಯ ವೈದ್ಯರ ದಿನವನ್ನು ಒಂದು ನಿರ್ದಿಷ್ಟ ವಿಷಯದೊಂದಿಗೆ ಆಚರಿಸಲಾಗುತ್ತದೆ. ಈ ವರ್ಷದ ವಿಷಯ “ಮುಖವಾಡದ ಹಿಂದೆ, ಗುಣಪಡಿಸುವವರನ್ನು ಯಾರು ಗುಣಪಡಿಸುತ್ತಾರೆ?” (Behind the Mask: Who Heals the Healers?) ಈ ಮೂಲಕ ವೃತ್ತಿಪರ ವೈದ್ಯರು ಎದುರಿಸುವ ಭಾವನಾತ್ಮಕ ಮತ್ತು ಮಾನಸಿಕ ಹೋರಾಟಗಳನ್ನು ಎತ್ತಿ ತೋರಿಸುತ್ತದೆ. ನಮ್ಮ ಆರೈಕೆ ಮಾಡುವ ವೈದ್ಯರು ತಮ್ಮ ಪಾತ್ರಗಳನ್ನು ಮೀರಿ ಸಮಾಜದ ಆರೋಗ್ಯ ಹಾಗೂ ಯೋಗಕ್ಷೇಮವನ್ನು ಕಾಣುತ್ತಾರೆ.
ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಏಕೆ ಆಚರಿಸಲಾಗುತ್ತದೆ?
ಸಾರ್ವಜನಿಕ ಆರೋಗ್ಯ ಸೇವೆಯ ಪ್ರವರ್ತಕ ಮತ್ತು ಗೌರವಾನ್ವಿತ ವೈದ್ಯ ಡಾ. ಬಿಧನ್ ಚಂದ್ರ ರಾಯ್ ಅವರನ್ನು ಗೌರವಿಸಲು ಭಾರತ ಸರ್ಕಾರವು 1991 ರಲ್ಲಿ ಭಾರತದಲ್ಲಿ ವೈದ್ಯರ ದಿನವನ್ನಾಗಿ ಆಚರಣೆಯನ್ನು ಮಾಡಿತು. ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಮತ್ತು ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ಡಾ. ರಾಯ್ ಜುಲೈ 1, 1882 ರಂದು ಜನಿಸಿ, ಜುಲೈ 1 1962 ರಲ್ಲಿ ನಿಧನರಾದರು. ಅವರ ಪರಂಪರೆಯನ್ನು ಮುಂದುವರಿಸಲು, ಹಾಗೂ ವೈದ್ಯರಿಗೆ ಸ್ಫೂರ್ತಿಯಾಗಿರುವ ಅವರ ಆದರ್ಶಗಳನ್ನು ಬೆಳೆಸಿಕೊಳ್ಳಬೇಕು ಎಂಬ ಉದ್ದೇಶದಿಂದ ಅವರ ದಿನವನ್ನು ಆಚರಣೆ ಮಾಡಲಾಗುತ್ತದೆ. ಹಾಗೂ ದೇಶದ ವೈದ್ಯಕೀಯ ಕ್ಷೇತ್ರಕ್ಕೆ ಅವರು ಮಹತ್ವದ ಕೊಡುಗೆಯನ್ನು ನೀಡಿದ್ದಾರೆ.
ಇದನ್ನೂ ಓದಿ: ಪದೇ ಪದೇ ಮೂತ್ರ ಸೋಂಕು ಬರುತ್ತಿದೆಯೇ? ಚಿಂತೆ ಬೇಡ ಇಲ್ಲಿದೆ ನೋಡಿ ಪರಿಹಾರ
ರಾಷ್ಟ್ರೀಯ ವೈದ್ಯರ ದಿನದ ಮಹತ್ವ:
ನಮ್ಮ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡುವಲ್ಲಿ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ನಿರಂತರ ಸಮರ್ಪಣೆ, ಕಠಿಣ ಪರಿಶ್ರಮ ತ್ಯಾಗವನ್ನು ಮಾಡಿದ್ದಾರೆ. ಅವರಿಗೆ ಧನ್ಯವಾದ ಹೇಳಲು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಣೆ ಮಾಡಬೇಕಿದೆ. ಈ ದಿನವನ್ನು ಬಳಸ ಅರ್ಥಪೂರ್ಣವಾಗಿ ಮಾಡಬೇಕು ಎಂಬುದು ಈ ದಿನದ ಉದ್ದೇಶವಾಗಿರಬೇಕು. ಈ ದಿನದಂದು, ಉಚಿತ ಆರೋಗ್ಯ ಶಿಬಿರಗಳು, ಸಮ್ಮೇಳನಗಳು, ವಿಚಾರ ಸಂಕಿರಣಗಳು ಮತ್ತು ಪ್ರಶಸ್ತಿ ಪ್ರದಾನ ಸಮಾರಂಭಗಳಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








