AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳಿಗೆ ಬೀದಿ ಬದಿ ಆಹಾರ ನೀಡುವ ಮುನ್ನ ಈ ವಿಚಾರ ತಿಳಿದಿರಲಿ: ಡಾ. ನಂದಿತಾ ರತ್ನಂ

ಮಕ್ಕಳ ಆರೋಗ್ಯ: ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭವಲ್ಲ, ಹಾಗಂತ ಸರಿಯಾದ ಆಹಾರಕ್ರಮಗಳನ್ನು ಪಾಲಿಸಿದರೆ ಇದು ಕಷ್ಟವೂ ಅಲ್ಲ. ಅದರಲ್ಲಿಯೂ ಈ ಸಮಯದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಹಾಗಾದರೆ ಮಕ್ಕಳಿಗೆ ಈ ಸಮಯದಲ್ಲಿ ಯಾವ ರೀತಿಯ ಆಹಾರಗಳನ್ನು ನೀಡಬೇಕು? ಮಳೆಗಾಲದಲ್ಲಿ ರಸ್ತೆ ಬದಿ ಆಹಾರವನ್ನು ಮಕ್ಕಳು ತಿಂದರೆ ಏನೆಲ್ಲಾ ಸಮಸ್ಯೆ ಆಗುತ್ತದೆ? ಈ ವಿಷಯದ ಕುರಿತಂತೆ ಯಶವಂತಪುರ ಮಣಿಪಾಲ ಆಸ್ಪತ್ರೆಯ ಕನ್ಸಲ್ಟೆಂಟ್ ಪಿಡಿಯಾಟ್ರಿಕ್ಸ್ ಮತ್ತು ಮಕ್ಕಳ ತೀವ್ರ ನಿಗಾ ವಿಭಾಗದ ಡಾ. ನಂದಿತಾ ರತ್ನಂ ಟಿವಿ9 ಕನ್ನಡ ಜೊತೆ ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ.

ಮಕ್ಕಳಿಗೆ ಬೀದಿ ಬದಿ ಆಹಾರ ನೀಡುವ ಮುನ್ನ ಈ ವಿಚಾರ ತಿಳಿದಿರಲಿ: ಡಾ. ನಂದಿತಾ ರತ್ನಂ
ಡಾ. ನಂದಿತಾ ರತ್ನಂ ನೀಡಿರುವ ಆರೋಗ್ಯ ಸಲಹೆ
ಪ್ರೀತಿ ಭಟ್​, ಗುಣವಂತೆ
|

Updated on: Jun 30, 2025 | 4:15 PM

Share

ಮಳೆಗಾಲ (Rainy season) ಆರಂಭವಾಗುತ್ತಿದ್ದಂತೆ ಆರೋಗ್ಯ ಸಮಸ್ಯೆಗಳು ಕೂಡ ಬರುತ್ತದೆ. ಹಾಗಾಗಿ ನಾವು ಆರೋಗ್ಯವಾಗಿರಬೇಕು ಎಂದರೆ ನಮ್ಮ ಆಹಾರಕ್ರಮ ಸರಿಯಾಗಿ ಇರಬೇಕಾಗುತ್ತದೆ. ಅದರಲ್ಲಿಯೂ ಈ ಸಮಯದಲ್ಲಿ ಮಕ್ಕಳ ಆರೋಗ್ಯದ (Children’s health) ಬಗ್ಗೆ ಪೋಷಕರು ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ. ಏಕೆಂದರೆ ಅವರ ಆಹಾರಕ್ರಮ ಸರಿಯಾಗಿ ಇದ್ದಾಗ ಮಾತ್ರ ಆರೋಗ್ಯ ಚೆನ್ನಾಗಿರಲು ಸಾಧ್ಯವಾಗುತ್ತದೆ. ಮಕ್ಕಳು ಆಸೆ ಪಡುತ್ತಾರೆ ಎಂದು ಹೆಚ್ಚಾಗಿ ಹೊರಗೆ ಸಿಗುವಂತಹ ಆಹಾರ ಕೊಡುವ ಮೊದಲು ಅವು ನಮ್ಮ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದೇ? ಎಂಬುದನ್ನು ಯೋಚಿಸಬೇಕಾಗುತ್ತದೆ. ತಾತ್ಕಾಲಿಕವಾಗಿ ಸಿಗುವ ಬಾಯಿ ರುಚಿಗಿಂತ ದೀರ್ಘಾವಧಿಯ ಆರೋಗ್ಯ (health) ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಹಾಗಾದರೆ ಮಕ್ಕಳಿಗೆ ಈ ಸಮಯದಲ್ಲಿ ಯಾವ ರೀತಿಯ ಆಹಾರಗಳನ್ನು ನೀಡಬೇಕು? ಮಳೆಗಾಲದಲ್ಲಿ ರಸ್ತೆ ಬದಿ ಆಹಾರವನ್ನು ಮಕ್ಕಳು ತಿಂದರೆ ಏನೆಲ್ಲಾ ಸಮಸ್ಯೆ ಆಗುತ್ತದೆ? ಈ ವಿಷಯದ ಕುರಿತು ಯಶವಂತಪುರ ಮಣಿಪಾಲ ಆಸ್ಪತ್ರೆಯ (Manipal Hospital Yeshwanthpur) ಕನ್ಸಲ್ಟೆಂಟ್ ಪಿಡಿಯಾಟ್ರಿಕ್ಸ್ ಮತ್ತು ಮಕ್ಕಳ ತೀವ್ರ ನಿಗಾ ವಿಭಾಗದ ಡಾ. ನಂದಿತಾ ರತ್ನಂ (Dr. Nanditha Rathinam) ಟಿವಿ9 ಕನ್ನಡ ಜೊತೆ ಕೆಲವು ಮಾಹಿತಿ ಹಂಚಿಕೊಂಡಿದ್ದು, ಅವರು ತಿಳಿಸಿರುವ ಈ ಸಲಹೆಗಳನ್ನು ಅನುಸರಿಸುವ ಮೂಲಕ ಮಳೆಗಾಲದಲ್ಲಿ ನಿಮ್ಮ ಮಗುವಿನ ಆರೋಗ್ಯ ಕಾಪಾಡಬಹುದಾಗಿದೆ.

ಡಾ. ನಂದಿತಾ ರತ್ನಂ ತಿಳಿಸಿರುವ ಮಾಹಿತಿ ಪ್ರಕಾರ, ಮಳೆಗಾಲದಲ್ಲಿ ಮಕ್ಕಳಿಗೆ ರಸ್ತೆ ಬದಿ ಆಹಾರ ನೀಡುವುದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ. ಏಕೆಂದರೆ ಮಳೆಗಾಲದಲ್ಲಿ ಸ್ವಚ್ಛತೆ ಕಾಪಾಡುವುದು ಒಂದು ದೊಡ್ಡ ಸಮಸ್ಯೆಯಾಗಿರುತ್ತದೆ. ಅದಲ್ಲದೆ ಮಳೆ ನೀರಿನಲ್ಲಿ ಕ್ರಿಮಿ, ಧೂಳು, ಬೇರೆ ಬೇರೆ ಕಡೆಗಳಿಂದ ಬರುವ ನೀರು ಹೀಗೆ ಇವೆಲ್ಲವೂ ಒಟ್ಟುಗೂಡಿದಾಗ ಇದರಿಂದ ಸೋಂಕುಗಳು ಬರುವ ಅಪಾಯ ಹೆಚ್ಚಾಗಿರುತ್ತದೆ. ಈ ರೀತಿಯ ನೀರು ಆಹಾರದಲ್ಲಿ ಸೇರಿಕೊಂಡಾಗ ಮಕ್ಕಳಿಗೆ ನಾನಾ ರೀತಿಯ ಕಾಯಿಲೆಗಳು ಬರುವ ಅಪಾಯ ಹೆಚ್ಚಾಗಿರುತ್ತದೆ.

ಮಕ್ಕಳು ಬೀದಿ ಬದಿಯ ಆಹಾರ ಸೇವನೆ ಮಾಡಿದರೆ ಏನಾಗುತ್ತೆ?

ಡಾ. ನಂದಿತಾ ಅವರು ನೀಡಿರುವ ಮಾಹಿತಿ ಪ್ರಕಾರ, “ಮಳೆಗಾಲದಲ್ಲಿ ಮಕ್ಕಳು ಬೀದಿ ಬದಿಯ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಅವರಿಗೆ ಹೊಟ್ಟೆ ನೋವು, ಟೈಫರ್ಡ್, ವಾಂತಿ ಈ ರೀತಿಯ ಕಾಯಿಲೆಗಳು ಬರುವ ಅಪಾಯ ಹೆಚ್ಚಾಗಿರುತ್ತದೆ. ಏಕೆಂದರೆ ಹೊರಗೆ ಸಿಗುವಂತಹ ಆಹಾರಗಳನ್ನು ತಯಾರಿಸುವಾಗ ಸ್ವಚ್ಛತೆ ಬಗ್ಗೆ ಹೆಚ್ಚಾಗಿ ಗಮನಹರಿಸುವುದಿಲ್ಲ. ಅದರಲ್ಲಿಯೂ ಸ್ವಚ್ಛವಾದ ನೀರನ್ನು ಬಳಸುವುದಿಲ್ಲ. ಜೊತೆಗೆ ಆಹಾರ ತಯಾರಾದ ಮೇಲೆ ಅವುಗಳನ್ನು ಹೇಗೆ ಶೇಖರಿಸಿ ಇಡುತ್ತಾರೆ ಎಂಬುದು ಕೂಡ ಬಹಳ ಮುಖ್ಯವಾಗುತ್ತದೆ. ಕೆಲವು ಕಡೆ ಬಿಸಿಯಾದ ಆಹಾರಗಳನ್ನು ಪ್ಲಾಸ್ಟಿಕ್ ಪ್ಲೇಟ್ ಮತ್ತು ಕವರ್ ಗಳಲ್ಲಿ ಹಾಕಿ ಕೊಡುತ್ತಾರೆ. ಇದರಿಂದಲೂ ಆಹಾರ ವಿಷವಾಗಬಹುದು. ನಿಮ್ಮ ಮಕ್ಕಳು ಹೆಚ್ಚಿನ ಸಮಯ ಹೊರಗೆ ತಿನ್ನುತ್ತಿದ್ದರೆ ಅವರಿಗೆ ಶಕ್ತಿ ಸಿಗಬಹುದು ಆದರೆ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಸಿಗುವುದಿಲ್ಲ.

ಇದನ್ನೂ ಓದಿ
Image
ಶಾಲೆ ಜತೆ ಮಳೆಯ ಆರಂಭ, ಮಕ್ಕಳ ಆರೋಗ್ಯ ಮುಂಜಾಗೃತೆ ಹೇಗೆ?
Image
ಚಿಕ್ಕ ವಯಸ್ಸಿಗೆ ತಾಯಿಯಾಗುವವರೇ ಎಚ್ಚರ!
Image
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
Image
ಸಿಸೇರಿಯನ್‌, ನಾರ್ಮಲ್ ಡೆಲಿವರಿಯಾದ ಬಾಣಂತಿಯರಿಗೆ ಡಾ. ಶಿಲ್ಪಾ ಹೇಳೋದೇನು?

ಇದನ್ನೂ ಓದಿ: ಶಾಲೆ ಜತೆ ಮಳೆಯ ಆರಂಭ, ಮಕ್ಕಳ ಆರೋಗ್ಯ ಮುಂಜಾಗೃತೆ ಹೇಗೆ? ಇಲ್ಲಿದೆ ನೋಡಿ ಡಾ. ಭರತ್ ಸಲಹೆ

ಡಾ. ನಂದಿತಾ ರತ್ನಂ ಅವರ ವಿಡಿಯೋ ಇಲ್ಲಿದೆ ನೋಡಿ:

ಮಳೆಗಾಲದಲ್ಲಿ ಹಣ್ಣುಗಳ ಸೇವನೆಯಿಂದ ಆರೋಗ್ಯ ಹಾಳಾಗಬಹುದೇ?

ಡಾ. ನಂದಿತಾ ಅವರು ಟಿವಿ9 ಕನ್ನಡಕ್ಕೆ ತಿಳಿಸಿರುವ ಮಾಹಿತಿ ಪ್ರಕಾರ, ಮಕ್ಕಳು ಮಳೆಗಾಲದಲ್ಲಿ ಮಾವಿನಹಣ್ಣು, ಹಲಸಿನ ಹಣ್ಣು ಹೀಗೆ ನಾನಾ ರೀತಿಯ ಹಣ್ಣುಗಳನ್ನು ಸೇವನೆ ಮಾಡುವುದಕ್ಕೆ ಬಹಳ ಇಷ್ಟಪಡುತ್ತಾರೆ. ಆದರೆ ಇವುಗಳನ್ನು ಸರಿಯಾಗಿ ತೊಳೆಯದೆಯೇ ಮಕ್ಕಳಿಗೆ ನೀಡಬಾರದು. ಏಕೆಂದರೆ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಬಹಳ ಕಡಿಮೆ ಇರುವುದರಿಂದ ಕಾಯಿಲೆಗಳು ಬೇಗ ಬರುತ್ತದೆ. ಹಾಗಾಗಿ ಹಣ್ಣುಗಳನ್ನು ಮಕ್ಕಳಿಗೆ ಕೊಡುವಾಗ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಬೇಕಾದಲ್ಲಿ ನೀವು ಬಿಸಿನೀರಿನಲ್ಲಿ ತೊಳೆದು ಕೊಡ ಕೊಡಬಹುದು. ಮಕ್ಕಳು ಯಾವುದೇ ರೀತಿಯ ಆಹಾರಗಳನ್ನು ಸೇವನೆ ಮಾಡುವ ಮೊದಲು ಚೆನ್ನಾಗಿ ಕೈ ತೊಳೆಯುವುದಕ್ಕೆ ಅಭ್ಯಾಸ ಮಾಡಿಸಿ. ಬಿಸಿಯಾದ ಆಹಾರಗಳ ಸೇವನೆ ಮಾಡುವುದು ಒಳ್ಳೆಯದು. ಹೊರಗಡೆ ಸಿಗುವಂತಹ ಆಹಾರಗಳು ಸ್ವಚ್ಛವಾಗಿದ್ದು, ಶೇಖರಣೆ ಮಾಡುವ ವಿಧಾನ ಸರಿಯಾಗಿ ಇದ್ದರೆ ಆಗ ಮಾತ್ರ ಸೇವನೆ ಮಾಡಲು ಅವಕಾಶ ಕೊಡಿ. ಆದಷ್ಟು ಮನೆ ಊಟವನ್ನೇ ನೀಡಿ. ಏಕೆಂದರೆ ತಾತ್ಕಾಲಿಕವಾಗಿ ಸಿಗುವ ಬಾಯಿ ರುಚಿಗಿಂತ ದೀರ್ಘಾವಧಿಯ ಆರೋಗ್ಯ ಬಗ್ಗೆ ಹೆಚ್ಚಿನ ಗಮನ ನೀಡುವುದು ಬಹಳ ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ