ನಿಮಗೂ ಮಳೆಗಾಲದಲ್ಲಿ ಚರ್ಮದ ಸಮಸ್ಯೆ ಕಂಡುಬರುತ್ತಾ? ಟೆನ್ಶನ್ ಬಿಡಿ ವೈದ್ಯರು ನೀಡಿರುವ ಈ ಸಲಹೆ ಟ್ರೈ ಮಾಡಿ
ಮಳೆಗಾಲದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಈ ಸಮಯದಲ್ಲಿ, ವಿವಿಧ ರೀತಿಯ ಸೋಂಕುಗಳು ಹರಡುವ ಸಾಧ್ಯತೆ ಇರುತ್ತದೆ. ಮಾತ್ರವಲ್ಲ ಈ ಸಮಯದಲ್ಲಿ ಬರುವ ಕೆಲವು ಆರೋಗ್ಯ ಸಮಸ್ಯೆಗಳು ಜೀವಕ್ಕೆ ಅಪಾಯ ಉಂಟು ಮಾಡುವಷ್ಟು ಗಂಭೀರವಾಗಿರುತ್ತವೆ. ಹಾಗಾಗಿ ಮಳೆಗಾಲದಲ್ಲಿ ಸೋಂಕುಗಳನ್ನು ತಪ್ಪಿಸಲು ಪ್ರಯತ್ನಿಸಬೇಕು. ಅದಕ್ಕೆ ಪೂರಕವಾಗಿ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತನ್ನ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಬೇಕು. ಇದಕ್ಕಾಗಿ ಮನೆಯಲ್ಲಿಯೇ ಕೆಲವು ಅಭ್ಯಾಸಗಳನ್ನು ಮಾಡಬೇಕು ಇದರಿಂದ ರೋಗ ಬರುವುದನ್ನು ತಡೆಯಬಹುದಾಗಿದೆ.

ಮಾನ್ಸೂನ್ ಆರಂಭವಾಗಿದೆ. ಈ ಮಳೆಗಾಲ (rainy season) ಎಷ್ಟು ಚೆಂದವೋ ಅಷ್ಟೇ ಭಯಾನಕ. ಯಾಕೆ ಗೊತ್ತಾ? ಮಳೆಗಾಲ ಆರಂಭವಾದರೆ ಸಾಲು ಸಾಲು ರೋಗಗಳು ಕೂಡ ಬೆನ್ನಟ್ಟಿ ಬರುತ್ತದೆ. ಅದರಲ್ಲಿಯೂ ವಿವಿಧ ರೀತಿಯ ಚರ್ಮಕ್ಕೆ ಸಂಬಂಧಿಸಿದ ಸೋಂಕುಗಳ ಅಪಾಯವೂ ಹೆಚ್ಚಾಗಿರುತ್ತದೆ. ಮಾತ್ರವಲ್ಲ ಈ ಸಮಯದಲ್ಲಿ ಅಂದರೆ ಮಾನ್ಸೂನ್ ನಲ್ಲಿ ಹರಡುವ ಸೋಂಕುಗಳು ಗಂಭೀರವಾಗಿದ್ದು ಜೀವಕ್ಕೆ ಮಾರಕವಾಗಬಹುದು. ಆದ್ದರಿಂದ, ಈ ಸಮಯದಲ್ಲಿ ಸೋಂಕುಗಳನ್ನು ತಪ್ಪಿಸಲು ಆದಷ್ಟು ಪ್ರಯತ್ನಿಸಬೇಕು. ಹಾಗಾಗಿ ಮಳೆಗಾಲ ಆರಂಭವಾದಾಗಲೇ ಇದಕ್ಕೆ ಪೂರಕವಾಗಿರುವ ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳಬೇಕು. ಅದರಲ್ಲಿಯೂ ಕೆಲವು ಮನೆಮದ್ದುಗಳು ಸೋಂಕುಗಳಿಂದ ನಿಮ್ಮನ್ನು ರಕ್ಷಿಸಬಹುದು. ಹಾಗಾದರೆ ಆರೋಗ್ಯವಾಗಿರಲು ಮತ್ತು ಚರ್ಮದ ಸೋಂಕಿನಿಂದ ಮುಕ್ತಿ ಪಡೆಯಲು ಯಾವ ರೀತಿಯ ಆರೋಗ್ಯಕರ ಅಭ್ಯಾಸಗಳನ್ನು (A healthy habit) ಮಾಡಿಕೊಳ್ಳಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.
ಮಳೆಗಾಲದಲ್ಲಿ ಕಂಡು ಬರುವ ತೇವಾಂಶದಿಂದಾಗಿ, ಸೊಳ್ಳೆಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಇದು ವಿವಿಧ ರೀತಿಯ ಚರ್ಮದ ಸೋಂಕುಗಳಿಗೆ ಕಾರಣವಾಗಬಹುದು. ಮಾತ್ರವಲ್ಲ ಜಠರಗರುಳಿನ ಸೋಂಕುಗಳು ಸಹ ಹರಡುವ ಅಪಾಯವಿರುತ್ತದೆ. ಈ ಬಗ್ಗೆ ದೆಹಲಿ ಆಯುರ್ವೇದ ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ. ಆರ್.ಪಿ. ಪರಾಶರ್ ಅವರು ಕೆಲವು ಮಾಹಿತಿ ಹಂಚಿಕೊಂಡಿದ್ದು ಅವರು ಹೇಳುವ ಪ್ರಕಾರ, ಆರ್ದ್ರ ಮಳೆಗಾಲದಲ್ಲಿ ಚರ್ಮ, ಹೊಟ್ಟೆ, ಕಣ್ಣು ಮತ್ತು ವೈರಲ್ ಸೋಂಕುಗಳು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಋತುವಿನಲ್ಲಿ ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ಗಂಭೀರ ವೈರಲ್ ಸೋಂಕುಗಳು ಬರುವ ಸಾಧ್ಯತೆಯೂ ಇರುತ್ತದೆ. ಇದರ ಜೊತೆಗೆ, ಕಾಲರಾ, ಟೈಫಾಯಿಡ್, ಶೀತ ಮತ್ತು ನ್ಯುಮೋನಿಯಾದಂತಹ ಗಂಭೀರ ಸೋಂಕುಗಳು ಸಹ ಸಂಭವಿಸಬಹುದು. ಈ ಸೋಂಕುಗಳಲ್ಲಿ ಕೆಲವೊಮ್ಮೆ ರೋಗಿಯ ಸ್ಥಿತಿ ಗಂಭೀರವಾಗಬಹುದು. ಆದ್ದರಿಂದ, ಈ ಸೋಂಕುಗಳು ನಿಮ್ಮನ್ನು ಮುಟ್ಟದಂತೆ ತಡೆಯಲು ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಮತ್ತು ಮನೆಮದ್ದುಗಳನ್ನು ಪ್ರಯತ್ನಿಸಬೇಕು ಎಂದಿದ್ದಾರೆ.
ಇದನ್ನೂ ಓದಿ: ಚರ್ಮದೊಳಗೆ ಕೂದಲು ಬೆಳೆದರೆ ಈ ಸಮಸ್ಯೆ ಖಂಡಿತ, ವೈದ್ಯರ ಈ ಎರಡು ಸಲಹೆ ಪಾಲಿಸಿ
ಶಿಲೀಂಧ್ರ ಮತ್ತು ಚರ್ಮದ ಸೋಂಕನ್ನು ತಪ್ಪಿಸುವುದು ಹೇಗೆ?
ಡಾ. ಆರ್.ಪಿ. ಪರಾಶರ್ ಹೇಳುವ ಪ್ರಕಾರ, ಸಾಮಾನ್ಯವಾಗಿ ಶಿಲೀಂಧ್ರ ಸೋಂಕುಗಳು ಮತ್ತು ಯಾವುದೇ ರೀತಿಯ ಚರ್ಮಕ್ಕೆ ಸಂಬಂಧಿಸಿದ ಸೋಂಕನ್ನು ತಪ್ಪಿಸಲು, ಆಂಟಿ ಫಂಗಲ್ ಪೌಡರ್ ಬಳಸುವುದು ಉತ್ತಮ. ಅದರಲ್ಲಿಯೂ ಮಳೆಗಾಲದಲ್ಲಿ ನಿಮ್ಮ ಉಗುರು ಬಿಡಬೇಡಿ. ಚಿಕ್ಕದಾಗಿ ಇರುವಂತೆ ನೋಡಿಕೊಳ್ಳಿ. ಕೊಳಕು ಕೈಗಳಿಂದ ನಿಮ್ಮ ಮುಖವನ್ನು ಯಾವುದೇ ಕಾರಣಕ್ಕೂ ಮುಟ್ಟಬೇಡಿ, ಕೈಗಳನ್ನು ತೊಳೆದ ನಂತರ ಮಾತ್ರ ನಿಮ್ಮ ಮುಖವನ್ನು ಸ್ಪರ್ಶಿಸಿ. ಸಾಧ್ಯವಾದರೆ ಪ್ರತಿನಿತ್ಯ ಅರಿಶಿನ ಹಾಲು ಕುಡಿಯಲು ಪ್ರಯತ್ನಿಸಿ. ನಿಮ್ಮ ದೇಹವನ್ನು ಯಾವಾಗಲೂ ಹೈಡ್ರೇಟ್ ಆಗಿರಿಸಿಕೊಳ್ಳಿ, ಇದು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ. ಹಣೆಯ ಮೇಲೆ ಅಥವಾ ದೇಹದ ಯಾವುದೇ ಭಾಗದಲ್ಲಿ ಬೆವರು ಸಂಗ್ರಹವಾಗಲು ಬಿಡಬೇಡಿ. ಈ ವಿಧಾನಗಳಿಂದ ನಿಮಗೆ ಪರಿಹಾರ ಸಿಗದಿದ್ದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿ ಅಥವಾ ಹತ್ತಿರದ ಆಸ್ಪತ್ರೆಗೆ ಹೋಗಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








