ಚರ್ಮದೊಳಗೆ ಕೂದಲು ಬೆಳೆದರೆ ಈ ಸಮಸ್ಯೆ ಖಂಡಿತ, ವೈದ್ಯರ ಈ ಎರಡು ಸಲಹೆ ಪಾಲಿಸಿ
ಕೂದಲು ಚರ್ಮದ ಮೇಲೆ ಅಲ್ಲ, ಚರ್ಮದೊಳಗೆ ಬೆಳೆಯಲು ಪ್ರಾರಂಭಿಸಿದರೆ, ಅದು ಚರ್ಮದ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ ಎಂದರ್ಥ, ಈ ಒಳಮುಖ ಕೂದಲನ್ನು ಹೇಗೆ ತೊಡೆದುಹಾಕಬೇಕೆಂದರೆ ಏನ್ ಮಾಡಬೇಕು, ವೈದ್ಯರು ಹೇಳಿರುವ ಈ ಎರಡು ಸಲಹೆಗಳನ್ನು ಪಾಲಿಸಿ, ಅವುಗಳು ಯಾವುವು? ಇಲ್ಲಿದೆ ನೋಡಿ ವಿಡಿಯೋ

ಚರ್ಮದ ಒಳಮುಖವಾಗಿ ಬೆಳೆಯುವ ಕೂದಲು, ಅಂದರೆ ಚರ್ಮದ ಮೇಲೆ ಅಲ್ಲ ಚರ್ಮದೊಳಗೆ ಕೂದಲು ಬೆಳೆದರೆ ಇದನ್ನು ಒಳಮುಖ ಕೂದಲು ಎಂದು ಕರೆಯಲಾಗುತ್ತದೆ. ಇದು ಚರ್ಮಕ್ಕೆ ಹಿಂಸೆ ನೀಡುವ ಕೂದಲು ಎಂದು ಕರೆಯುತ್ತಾರೆ. ಒಳಮುಖ ಕೂದಲಿನ ಸಮಸ್ಯೆಯು ಹಲವು ವಿಭಿನ್ನ ಕಾರಣಗಳಿಂದ ಉಂಟಾಗಬಹುದು. ಇದಕ್ಕೆ ಪ್ರಮುಖ ಕಾರಣ ಚರ್ಮದ ಆರೈಕೆ ತಪ್ಪಾಗಿರುವುದು. ಕೈ ಮತ್ತು ಕಾಲುಗಳಲ್ಲಿ ಇಂತಹ ಕೂದಲು ಬೆಳೆಯುವುದು ಕಂಡುಬಂದರೆ, ಅದನ್ನು ಸ್ಟ್ರಾಬೆರಿ ಚರ್ಮ ಎಂದೂ ಕರೆಯುತ್ತಾರೆ. ಈ ಒಳಮುಖ ಕೂದಲುಗಳು ಕೆಟ್ಟದಾಗಿ ಕಾಣುವುದಲ್ಲದೆ, ಚರ್ಮದ ಆಕರ್ಷಣೆಯನ್ನು ಹಾಳು ಮಾಡುತ್ತದೆ. ಅಲ್ಲದೆ ಇದರಿಂದ ಚರ್ಮವು ಊದಿಕೊಂಡಂತೆ ಕಾಣುತ್ತದೆ. ಈ ಒಳಮುಖ ಕೂದಲನ್ನು ತೆಗೆದುಹಾಕಲು ಚರ್ಮರೋಗ ತಜ್ಞೆ ಡಾ. ಗುರ್ವೀನ್ ವಾರೈಚ್ ಅವರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಕೇವಲ 2 ಸಲಹೆಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಈ ಒಳಮುಖ ಕೂದಲಿನ ಸಮಸ್ಯೆಯನ್ನು ನಿವಾರಿಸಬಹುದು ಎಂದು ಹೇಳಿದ್ದಾರೆ.
ಒಳ ಕೂದಲು ಬೆಳೆಯಲು ಕಾರಣ?
ಕಾಲಿನ ಕೂದಲುಗಳು ಉದುರುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಇದಕ್ಕೆ ಶೇವಿಂಗ್ ಮಾಡುವುದೇ ಪ್ರಮುಖ ಕಾರಣ ಎಂದು ಡಾ. ಗುರ್ವೀನ್ ವಾರೈಚ್ ಹೇಳುತ್ತಾರೆ. ಶೇವಿಂಗ್ ಮಾಡುವುದರಿಂದ ಕೂದಲು ಉದುರುವಿಕೆ ಉಂಟಾಗಬಹುದು. ಈ ಕಾರಣದಿಂದ ಡ್ರೈ ಶೇವಿಂಗ್ ಮಾಡದಂತೆ ವಿಶೇಷ ಕಾಳಜಿ ವಹಿಸಿ ಎಂದು ಹೇಳಿದ್ದಾರೆ. ಒಂದು ವೇಳೆ ಶೇವಿಂಗ್ ಮಾಡಲೇಬೇಕು ಎಂದರೆ ಕೂದಲು ಬೆಳವಣಿಗೆಯ ದಿಕ್ಕಿನಲ್ಲಿ ಶೇವ್ ಮಾಡಿ. ಇದು ಕೂದಲು ಉದುರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಆಗಾ ಒಳ ಕೂದಲು ಬೆಳೆಯುವುದಿಲ್ಲ.
ಇದನ್ನೂ ಓದಿ: ಹೆಣ್ಣುಮಕ್ಕಳಿಗೆ ಎಡಭಾಗದಲ್ಲಿ ಏಕೆ ಮೂಗು ಚುಚ್ಚುತ್ತಾರೆ ಗೊತ್ತಾ? ಇದರ ಹಿಂದಿದೆ ವೈಜ್ಞಾನಿಕ ಕಾರಣ
ವೈದ್ಯರ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಕಾಲಿನ ಕೂದಲನ್ನು ಶೇವಿಂಗ್ ಮಾಡಿಕೊಳ್ಳುವ ಹುಡುಗಿಯರು, ಇನ್ನೂ ಒಳಮುಖ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿರುವವರು, ವ್ಯಾಕ್ಸಿಂಗ್ ನಂತರ ಕೆಲವು ದಿನಗಳವರೆಗೆ ಬಿಗಿಯಾದ ಬಟ್ಟೆಗಳನ್ನು ಧರಿಸುವುದನ್ನು ನಿಲ್ಲಿಸಿ. ವ್ಯಾಕ್ಸಿಂಗ್ ಮಾಡುವ ಮೊದಲು ಮತ್ತು ನಂತರ ನಿಮ್ಮ ಚರ್ಮವನ್ನು ತೇವಗೊಳಿಸಿ ಮತ್ತು ಎಫ್ಫೋಲಿಯೇಟ್ ಮಾಡಲು ಮರೆಯಬೇಡಿ. ಚರ್ಮದ ಮೇಲೆ ಒಳಮುಖ ಕೂದಲು ಇರುವ ಜನರು ನಿಯಮಿತವಾಗಿ ತಮ್ಮ ಚರ್ಮವನ್ನು ಎಫ್ಫೋಲಿಯೇಟ್ ಮಾಡಬೇಕು. ಸ್ಕ್ರಬ್ ಅನ್ನು ಬಳಸಬಹುದು ಗ್ಲೈಕೋಲಿಕ್ ಆಸಿಡ್ ಟೋನರ್ ನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ಹಚ್ಚಬಹುದು. ಅದು ಚರ್ಮದ ಮೇಲೆ ಗೋಚರಿಸುವ ಒಳಮುಖ ಕೂದಲಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:25 pm, Sat, 28 June 25