AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೆಗಳ ಕಿವಿ ಗಾತ್ರದಲ್ಲಿ ಏಕೆ ಅಷ್ಟೊಂದು ದೊಡ್ಡದಾಗಿರುತ್ತೆ ಗೊತ್ತಾ?

ಆನೆಗಳು ಬುದ್ಧಿವಂತ ಜೀವಿಗಳು ಮಾತ್ರವಲ್ಲದೆ ಅವುಗಳು ಮನುಷ್ಯನಂತೆಯೇ ಭಾವನೆಗಳೊಂದಿಗೆ ಬದುಕುವ ಸಂಘ ಜೀವಿ. ಇವು ದೈತ್ಯವಾಗಿರುವುದು ಮಾತ್ರವಲ್ಲದೆ ಇವುಗಳ ಕಿವಿಗಳು ಕೂಡ ತುಂಬಾನೇ ದೊಡ್ಡದಾಗಿರುತ್ತೆ ಅಲ್ವಾ. ಅಷ್ಟಕ್ಕೂ ಆನೆಗಳ ಕಿವಿಗಳು ಏಕೆ ಇಷ್ಟೊಂದು ದೊಡ್ಡದಾಗಿರುತ್ತೆ ಗೊತ್ತಾ? ಈ ಕುರಿತ ಇಂಟರೆಸ್ಟಿಂಗ್‌ ಮಾಹಿತಿ ಇಲ್ಲಿದೆ.

ಆನೆಗಳ ಕಿವಿ ಗಾತ್ರದಲ್ಲಿ ಏಕೆ ಅಷ್ಟೊಂದು ದೊಡ್ಡದಾಗಿರುತ್ತೆ ಗೊತ್ತಾ?
ಆನೆಗಳ ಕಿವಿ ದೊಡ್ಡದಾಗಿರುವುದೇಕೆImage Credit source: Getty Images
ಮಾಲಾಶ್ರೀ ಅಂಚನ್​
|

Updated on: Jun 28, 2025 | 6:12 PM

Share

ದೈತ್ಯಾಕಾರದ ಆನೆಗಳು (elephants) ತುಂಬಾನೇ ಬುದ್ಧಿವಂತ ಪ್ರಾಣಿ. ಮನುಷ್ಯರಂತೆಯೇ ಇವುಗಳು ತಮ್ಮ ಕುಟುಂಬದೊಂದಿಗೆ ಒಟ್ಟಾಗಿ ಬದುಕುವ ಭಾವನಾತ್ಮಕ ಜೀವಿಗಳು. ಸೂಕ್ಷ್ಮ ಸ್ವಭಾವವನ್ನು ಹೊಂದಿರುವ ಆನೆಗಳನ್ನು ಬಹುತೇಕ ಎಲ್ಲರೂ ನೋಡಿಯೇ ಇರುತ್ತಾರೆ ಅಲ್ವಾ. ಜೊತೆಗೆ ಈ ಮುಗ್ಧ ಮನಸ್ಸಿನ ಪ್ರಾಣಿಯೆಂದರೆ ಹಲವರಿಗೆ ಸಿಕ್ಕಾಪಟ್ಟೆ ಇಷ್ಟ. ನಿಮಗೂ ಕೂಡಾ ಆನೆ ಅಂದ್ರೆ ಇಷ್ಟನಾ? ಹಾಗಿದ್ರೆ ದೈತ್ಯಾಕಾರವನ್ನು ಹೊಂದಿರುವ ಈ ಪ್ರಾಣಿಯ ಕಿವಿಗಳು ಕೂಡಾ  ಏಕೆ ದೊಡ್ಡದಾಗಿರುತ್ತವೆ? (Why are elephants’ ears big) ಇದರ ಹಿಂದೆ ಏನಾದ್ರೂ ಕಾರಣವಿದೆಯೇ ಎಂಬುದರ ಕುತೂಹಲಕಾರಿ ಮಾಹಿತಿಯನ್ನು ತಿಳಿಯಿರಿ.

ಆನೆಗಳ ಕಿವಿ ಏಕೆ ದೊಡ್ಡದಾಗಿರುತ್ತವೆ?

ಆನೆಗಳು ತಮ್ಮ ಕಿವಿಗಳನ್ನು ಅಲ್ಲಾಡಿಸುತ್ತಾ ನಿಂತಿರುವುದನ್ನು ನೀವು ನೋಡಿರುತ್ತೀರಿ ಅಲ್ವಾ. ಆದ್ರೆ ಯಾವತ್ತಾದ್ರೂ ಆನೆಗಳಿಗೆ ಇಷ್ಟು ದೊಡ್ಡ ಕಿವಿ ಏಕೆ  ಇದೆ ಎಂಬುದನ್ನು ಯೋಚಿಸಿದ್ದೀರಾ? ಸಾಮಾನ್ಯವಾಗಿ ಆನೆಗಳ ಕಿವಿಗಳು ದೊಡ್ಡದಾಗಿ ಅಗಲವಾಗಿರುತ್ತವೆ. ಅದರಲ್ಲೂ ಆಫ್ರಿಕನ್‌  ಆನೆಗಳ ಕಿವಿಗಳು 6.6 ಅಡಿ ಉದ್ದ ಮತ್ತು 4 ಅಡಿ ಅಗಲವಿದೆ. ಹವಾಮಾನ ಪರಿಸ್ಥಿತಿಗಳನ್ನು ಅವಲಂಬಿಸಿ ಆಕಾರ ಮತ್ತು ಗಾತ್ರದಲ್ಲಿ ಒಂದಷ್ಟು ಬದಲಾವಣೆಗಳಿರುತ್ತವೆ. ಆನೆಗಳ ಹೀಗೆ ಆನೆಗಳಿಗೆ ದೊಡ್ಡ ಕಿವಿ ಇರುವುದ ಹಿಂದೆಯೂ ಒಂದು ವೈಜ್ಞಾನಿಕ ಕಾರಣವಿದೆಯಂತೆ. ಅದೇನೆಂದರೆ ಆನೆ ಈ ದೊಡ್ಡ ದೊಡ್ಡ ಕಿವಿಗಳ ಮೂಲಕವೇ ತನ್ನ ದೇಹದ ಉಷ್ಣತೆ ಹೆಚ್ಚಾಗಂತೆ ಕಾಪಾಡಿಕೊಳ್ಳುತ್ತವೆಯಂತೆ.  ಆನೆಯು ತನ್ನ ದೈತ್ಯಾಕಾರದ ದೇಹದ ಶಾಖವನ್ನು ತನ್ನ ಕಿವಿಗಳ ಮೂಲಕ ಬಿಡುಗಡೆ ಮಾಡುತ್ತದೆ. ಶಾಖ ಮಾತ್ರವಲ್ಲ, ಆನೆಯ ಕಿವಿಗಳು ಅದರ ದೇಹದ ರಕ್ತ ಪರಿಚಲನೆಯನ್ನು ಸಹ ನಿಯಂತ್ರಿಸುತ್ತವೆ. ಆಫ್ರಿಕಾದಲ್ಲಿ ತೀವ್ರವಾದ ಶಾಖದಿಂದಾಗಿ, ಅಲ್ಲಿನ ಆನೆಗಳ ಕಿವಿಗಳು ತುಂಬಾ ದೊಡ್ಡದಾಗಿರುತ್ತವೆ. ಹೀಗೆ ಇವುಗಳ  ಕಿವಿಗಳು ದೇಹದ ಉಷ್ಣತೆಯನ್ನು ನಿಯಂತ್ರಿಸಲು ನಿರ್ಣಾಯಕವಾಗಿದೆ.

ಆನೆಯ ಕಿವಿಗಳ ಪ್ರಮುಖ ಕಾರ್ಯಗಳಲ್ಲಿ ಥರ್ಮೋರ್ಗ್ಯುಲೇಷನ್ ಒಂದು . ಅವುಗಳ ಕಿವಿಗಳ ದೊಡ್ಡ ಮೇಲ್ಮೈ ವಿಸ್ತೀರ್ಣವು ದೇಹದ ಹೆಚ್ಚುವರಿ ಶಾಖವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಕಿವಿಗಳಲ್ಲಿರುವ ರಕ್ತನಾಳಗಳು ದೇಹದಿಂದ ಬೆಚ್ಚಗಿನ ರಕ್ತವನ್ನು ಒಯ್ಯುತ್ತವೆ ಮತ್ತು ಅದು ಕಿವಿಗಳ ಮೂಲಕ ಹರಿಯುವಾಗ, ಶಾಖವು ಸುತ್ತಮುತ್ತಲಿನ ತಂಪಾದ ಗಾಳಿಯಲ್ಲಿ ಹರಡುತ್ತದೆ. ಈ ಪ್ರಕ್ರಿಯೆಯು ಬಿಸಿ ವಾತಾವರಣದಲ್ಲಿ, ವಿಶೇಷವಾಗಿ ಆಫ್ರಿಕಾದಲ್ಲಿ, ತಾಪಮಾನವು ವಿಪರೀತವಾಗಿರುವ ಪ್ರದೇಶಗಳಲ್ಲಿ ಆನೆಗಳನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಹೀಗೆ ಕಿವಿಗಳನ್ನು ಬಡಿಯುವ ಮೂಲಕ ಅಥವಾ ಹಿಡಿದಿಟ್ಟುಕೊಳ್ಳುವ ಮೂಲಕ, ಆನೆಗಳು ಗಾಳಿಯ ಹರಿವನ್ನು ಹೆಚ್ಚಿಸುತ್ತವೆ ಮತ್ತು ತಂಪಾಗಿಸುವಿಕೆಯನ್ನು ಹೆಚ್ಚಿಸುತ್ತವೆ.

ಇದನ್ನೂ ಓದಿ
Image
ಹೆಣ್ಣುಮಕ್ಕಳಿಗೆ ಎಡಭಾಗದಲ್ಲಿ ಏಕೆ ಮೂಗು ಚುಚ್ಚುತ್ತಾರೆ ಗೊತ್ತಾ?
Image
ನೀವು ಸ್ಲಿಮ್‌ ಆಗಿ ಕಾಣಬಾರದೆಂದರೆ ಈ ಬಣ್ಣದ ಬಟ್ಟೆಗಳನ್ನು ಧರಿಸಬೇಡಿ
Image
ಅಂಡರ್‌ವೇರ್‌ಗೂ ಇದ್ಯಾ ಎಕ್ಸ್‌ಪೈರಿ ಡೇಟ್?
Image
ಗಂಡ-ಹೆಂಡ್ತಿಯ ನಡುವೆ ವಯಸ್ಸಿನ ಅಂತರ ಎಷ್ಟಿದ್ದರೆ ಸೂಕ್ತ?

ಇದನ್ನೂ ಓದಿ: ಹೆಣ್ಣುಮಕ್ಕಳಿಗೆ ಎಡಭಾಗದಲ್ಲಿ ಏಕೆ ಮೂಗು ಚುಚ್ಚುತ್ತಾರೆ ಗೊತ್ತಾ? ಇದರ ಹಿಂದಿದೆ ವೈಜ್ಞಾನಿಕ ಕಾರಣ

ಇದಲ್ಲದೆ ಆನೆಗಳ ದೊಡ್ಡ ಕಿವಿಗಳು ಅವುಗಳಿಗೆ ಕಡಿಮೆ ಆವರ್ತನದ ಶಬ್ದಗಳನ್ನು ಸ್ಪಷ್ಟವಾಗಿ ಕೇಳಲು ಸಹಾಯ ಮಾಡುತ್ತವೆ. ಅಂದ್ರೆ ಆನೆಗಳು ತಮ್ಮ ಕಿವಿಗಳ ಚಲನೆಯ ಮೂಲಕ ಶಬ್ದದ ಮೂಲವನ್ನು ನಿಖರವಾಗಿ ಗುರುತಿಸುತ್ತವೆ..  ಇದು ಅವುಗಳಿಗೆ ಮೈಲುಗಳಷ್ಟು ದೂರ ಸಂವಹನ ನಡೆಸಲು, ಚಲನೆಗಳನ್ನು ಸಂಘಟಿಸಲು ಅಥವಾ ಅಪಾಯವನ್ನು ಗಮನಿಸಲು ಸಹಾಯ ಮಾಡುತ್ತದೆ. ಅಲ್ಲದೆ ಸೂಕ್ಷ್ಮವಾದ ಕಿವಿಯು ಹವಾಮಾನ ಬದಲಾವಣೆಗಳು ಮತ್ತು ಧ್ವನಿ ತರಂಗಗಳನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತದೆ. ಜೊತೆಗೆ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಮತ್ತು ಹಿಂಡಿನೊಳಗಿನ ಸಂವಹನ ನಡೆಸುವಲ್ಲಿ ಕಿವಿಗಳು ಪ್ರಮುಖ ಪಾತ್ರ ವಹಿಸುತ್ತವೆ ಹಾಗೂ ಹಿಂಡಿನೊಳಗೆ ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಆನೆಗಳ ಕಿವಿಗಳ ಮೇಲೆ ಅತ್ಯಂತ ಸೂಕ್ಷ್ಮ ಚರ್ಮವಿದ್ದು, ಇದು ಅವುಗಳ ಪರಿಸರದಲ್ಲಿನ ಸೂಕ್ಷ್ಮ ಬದಲಾವಣೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!