AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಲಕ್ ಎಲೆ, ಕಿತ್ತಳೆ, ಆವಕಾಡೊ ಚರ್ಮದ ಆರೋಗ್ಯಕ್ಕೆ ಪ್ರತಿದಿನ ಸೇವಿಸಿ

ವಾತಾವರಣಕ್ಕೆ ಹೊಂದಿಕೊಳ್ಳುವಂತೆ, ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಅದರಲ್ಲೂ ಚರ್ಮಕ್ಕೆ ಹೆಚ್ಚಿನ ಪೋಷಣೆ ಹಾಗೂ ರಕ್ಷಣೆ ಬೇಕು. ಚರ್ಮದ ರಕ್ಷಣೆಗೆ ಅಥವಾ ಆರೈಕೆಗೆ, ಇಲ್ಲಿ ತಜ್ಞರು ನೀಡಿರುವ ಸಿಂಪಲ್​ ಆಹಾರಗಳನ್ನು ಸೇವನೆ ಮಾಡಿದ್ರೆ ಸಾಕು. ಇದು ಚರ್ಮದ ಜತೆಗೆ ದೇಹದ ಇತರ ಭಾಗಕ್ಕೂ ಹೆಚ್ಚಿನ ಪೋಷಕಾಂಶಗಳನ್ನು ನೀಡುತ್ತದೆ. ಈ ಬಗ್ಗೆ ಇಲ್ಲಿದೆ ವಿಡಿಯೋ

ಪಾಲಕ್ ಎಲೆ, ಕಿತ್ತಳೆ, ಆವಕಾಡೊ ಚರ್ಮದ ಆರೋಗ್ಯಕ್ಕೆ ಪ್ರತಿದಿನ ಸೇವಿಸಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಸಾಯಿನಂದಾ|

Updated on: Jun 27, 2025 | 3:47 PM

Share

ದೇಹದಲ್ಲಿ ವಾತಾವರಣಕ್ಕೆ(weather) ತಕ್ಕಂತೆ ಬದಲಾವಣೆಗಳು ಆಗುತ್ತದೆ. ವಾತಾವರಣಕ್ಕೆ ಬೇಕಾದ ರೀತಿಯಲ್ಲಿ ದೇಹವನ್ನು ಕೂಡ ನಾವು ಸಿದ್ದ ಮಾಡಬೇಕು. ಅದಕ್ಕಾಗಿ ಕೆಲವೊಂದು ಆಹಾರಗಳಲ್ಲಿ ಋತುಮಾನಕ್ಕೆ ತಕ್ಕಂತೆ ಬದಲಾವಣೆ ಮಾಡುಬೇಕು ಎನ್ನುವುದು ತಜ್ಞರ ಸಲಹೆ. ಈಗಿನ ವಾತಾರಣಕ್ಕೆ ಈ ಆಹಾರಗಳನ್ನು ತಿನ್ನುವುದು ಉತ್ತಮ. ಚರ್ಮದ ಆರೈಕೆ (skin care) ಹಾಗೂ ರಕ್ಷಣೆಗೆ ಯಾವೆಲ್ಲ ಆಹಾರಗಳನ್ನು ಸೇವನೆ ಮಾಡಬೇಕು ಎಂಬುದನ್ನು ಚರ್ಮರೋಗ ತಜ್ಞರಾದ, ಡಾ. ಅಂಕುರ್ ಸರಿನ್ ಮತ್ತು ಡಾ. ಜುಶ್ಯಾ ಭಾಟಿಯಾ ಸರಿನ್ ಕೆಲವು ಆಹಾರಗಳನ್ನು ಸೇವನೆ ಮಾಡುವಂತೆ ಮಾರ್ಗದರ್ಶನ ನೀಡಿದ್ದಾರೆ. ಈ ಬಗ್ಗೆ ವಿಡಿಯೋವೊಂದನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಚರ್ಮಕ್ಕೆ ಒಂದಲ್ಲ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾದ ಕೆಲವು ಆಹಾರ ಪದಾರ್ಥಗಳಿವೆ, ಇದರಿಂದ ವಿಟಮಿನ್ ಸಿ, ವಿಟಮಿನ್ ಇ, ಕಾಲಜನ್ ಉತ್ಪಾದಿಸುವ ಗುಣಗಳು ಹಾಗೂ ಚರ್ಮಕ್ಕೆ ಜಲಸಂಚಯನವನ್ನು ಸಹ ಒದಗಿಸುತ್ತವೆ. ಚರ್ಮಕ್ಕೆ ಹೊಳಪನ್ನು ತರುವ ಮತ್ತು ಚರ್ಮದ ರಕ್ಷಣೆ ಮಾಡುವ ಈ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಉತ್ತಮ. ಅಂತಹ ಆಹಾರಗಳು ಯಾವುವು, ಇಲ್ಲಿದೆ ನೋಡಿ.

ಚರ್ಮಕ್ಕೆ ಉತ್ತಮ ಆಹಾರಗಳು

ಪಾಲಕ್ ಎಲೆ : ಒಂದು ಬಟ್ಟಲು ಪಾಲಕ್ ಎಲೆಗಳನ್ನು ತಿಂದರೆ ಚರ್ಮಕ್ಕೆ ವಿಟಮಿನ್ ಎ ಸಿಗುತ್ತದೆ. ಪಾಲಕ್ ಎಲೆಗಳನ್ನು ತಿನ್ನುವುದರಿಂದ ಚರ್ಮದ ಬೆಳವಣಿಗೆ ಹಾಗೂ ರಕ್ಷಣೆ ಉತ್ತಮವಾಗಿರುತ್ತದೆ, ಬೇಯಿಸಿದ ಪಾಲಕ್​​ ತಿನ್ನಬೇಕು ಎಂಬುದು ತಜ್ಞರ ಸಲಹೆ.

ಇದನ್ನೂ ಓದಿ
Image
ಗಂಡನಾದವನು ತನ್ನ ಸಂಸಾರದ ಈ ವಿಷಯಗಳ ಬಗ್ಗೆ ಯಾರ ಬಳಿಯೂ ಹೇಳಬಾರದು
Image
ದೇಹದ ಆರೋಗ್ಯಕ್ಕೆ ವಿವಿಧ ಮುದ್ರೆಗಳು: ಪತಂಜಲಿ ಮಾಹಿತಿ
Image
ಒಂದು ಗ್ಲಾಸ್‌ ನೀರಿಗೆ ಅರಶಿನ ಹಾಕುವ ಟ್ರೆಂಡ್‌ ಇಷ್ಟೊಂದು ಡೇಂಜರಾ?
Image
ಮಾದಕ ವಸ್ತುಗಳಿಂದ ದೂರವಿರಿ, ಆರೋಗ್ಯವನ್ನು ಕಾಪಾಡಿಕೊಳ್ಳಿ

ಕಿತ್ತಳೆ : ಪ್ರತಿದಿನ ಒಂದು ಕಿತ್ತಳೆ ತಿನ್ನುವುದರಿಂದ ವಿಟಮಿನ್ ಸಿ ಸಿಗುತ್ತದೆ. ಇದು ದೇಹದ ದೈನಂದಿನ ವಿಟಮಿನ್ ಸಿ ಅವಶ್ಯಕತೆಯ 90 ಪ್ರತಿಶತವನ್ನು ಪೂರೈಸುತ್ತದೆ. ಇದು ಕಾಲಜನ್ ಹೆಚ್ಚಿಸುತ್ತದೆ. ಇದಲ್ಲದೆ, ವರ್ಣದ್ರವ್ಯವು ಕಡಿಮೆ ಮಾಡುತ್ತದೆ.

ವೈದ್ಯರ ವಿಡಿಯೋ ಇಲ್ಲಿದೆ ನೋಡಿ:

ಆವಕಾಡೊ : ನಿಮ್ಮ ದಿನನಿತ್ಯದ ಆಹಾರದಲ್ಲಿ ಆವಕಾಡೊ ಸೇರಿಸಿ. ಇದು ದೇಹಕ್ಕೆ ಹೆಚ್ಚಿನ ಪ್ರಮಾಣದ ಬಯೋಟಿನ್ ನೀಡುತ್ತದೆ. ಹಾಗೂ ಇದು ಉಗುರುಗಳಿಗೂ ಪ್ರಯೋಜನವನ್ನು ನೀಡುತ್ತದೆ. ಆರೋಗ್ಯಕರ ಕೂದಲಿನ ಬೆಳವಣಿಗೆ ಮತ್ತು ಉಗುರು ಬೆಳವಣಿಗೆಗೆ ಆವಕಾಡೊವನ್ನು ಪ್ರತಿದಿನ ತಿನ್ನಬಹುದು.

ಇದನ್ನೂ ಓದಿ: ಗಂಡನಾದವನು ತನ್ನ ಸಂಸಾರದ ಈ ವಿಷಯಗಳ ಬಗ್ಗೆ ಯಾರ ಬಳಿಯೂ ಹೇಳಬಾರದು

ವಾಲ್ನಟ್: ಪ್ರತಿದಿನ 3 ರಿಂದ 4 ವಾಲ್ನಟ್ಸ್ ತಿನ್ನುವ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ. ಇದು ದೇಹದ ಒಮೆಗಾ -3 ಅಗತ್ಯವನ್ನು ಪೂರೈಸುತ್ತದೆ. ಹಾಗೂ ಚರ್ಮವನ್ನು ತೇವಗೊಳಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ಚರ್ಮದ ಮೇಲೆ ಜಲಸಂಚಯನವನ್ನು ಕಾಪಾಡಿಕೊಳ್ಳುತ್ತದೆ. ಅಲ್ಲದೆ, ವಾಲ್ನಟ್ಸ್ ಸೇವನೆಯು ಕೂದಲಿಗೆ ಹೊಳಪನ್ನು ನೀಡುತ್ತದೆ. ವಾಲ್ನಟ್ಸ್ ಅನ್ನು ಆರೋಗ್ಯಕರ ತಿಂಡಿಯಾಗಿ ತಿನ್ನಬಹುದು. ಅವು ತೂಕ ನಿರ್ವಹಣೆಯಲ್ಲಿಯೂ ಸಹಾಯಕವಾಗಿವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!