AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವ್ಯಾರೂ ತಪ್ಪಿಯೂ ನೀರಿನಲ್ಲಿ ಅರಶಿನ ಬೆರೆಸುವ ಟ್ರೆಂಡಿ ವಿಡಿಯೋ ಮಾಡೋಕೆ ಹೋಗ್ಬೇಡಿ; ಯಾಕೆ ಗೊತ್ತಾ?

ಕಳೆದ ಕೆಲವು ದಿನಗಳಿಂದ ರಾತ್ರಿಯ ಕತ್ತಲೆಯಲ್ಲಿ ಮೊಬೈಲ್‌ ಟಾರ್ಚ್‌ ಆನ್‌ ಮಾಡಿ ಅದರ ಮೇಲೆ ಒಂದು ಗ್ಲಾಸ್‌ ನೀರು ಇಟ್ಟು ಅದಕ್ಕೆ ಅರಶಿನ ಬೆರೆಸುವ ಟ್ರೆಂಡ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಎಲ್ಲರೂ ಈ ಅರಶಿನ ಟ್ರೆಂಡನ್ನೇ ಫಾಲೋ ಮಾಡ್ತಿದ್ದಾರೆ. ಆದ್ರೆ ಇದು ಎಷ್ಟೊಂದು ಡೇಂಜರ್‌ ಗೊತ್ತಾ? ನೀವು ಕೂಡಾ ಈ ರೀತಿಯ ವಿಡಿಯೋ ಮಾಡ್ಬೇಕು ಅಂದ್ಕೊಂಡಿದ್ರೆ ಇದರಿಂದ ಏನೆಲ್ಲಾ ಸಮಸ್ಯೆ ಆಗುತ್ತೆ ಅನ್ನೋದನ್ನು ಮೊದಲು ನೋಡಿ.

ನೀವ್ಯಾರೂ ತಪ್ಪಿಯೂ ನೀರಿನಲ್ಲಿ ಅರಶಿನ ಬೆರೆಸುವ ಟ್ರೆಂಡಿ ವಿಡಿಯೋ ಮಾಡೋಕೆ ಹೋಗ್ಬೇಡಿ; ಯಾಕೆ ಗೊತ್ತಾ?
ಟ್ಯಾರೋ ಕಾರ್ಡ್‌ ಎಕ್ಸರ್ಟ್‌ ನೀಲಂ ಟಿ. Image Credit source: Neelam T/Instagram
ಮಾಲಾಶ್ರೀ ಅಂಚನ್​
|

Updated on: Jun 26, 2025 | 4:36 PM

Share

ಸೋಷಿಯಲ್‌ ಮೀಡಿಯಾ ಅಂದ್ರೆನೇ ಹಾಗೆ, ಇಲ್ಲಿ ಒಂದಲ್ಲಾ ಒಂದು ವಿಷಯ ಸಖತ್‌ ವೈರಲ್‌ ಆಗುತ್ತವೆ. ಯಾವುದಾದ್ರೂ ವಿಷ್ಯ ಟ್ರೆಂಡ್‌ ಆದ್ರೆ ಸಾಕು ಬಳಕೆದಾರರು ಅದೇ ವಿಷಯದ ಬಗ್ಗೆ ವಿಡಿಯೋ ಮಾಡಿ ಹರಿ ಬಿಡುತ್ತಾರೆ. ಇದಕ್ಕೆ ಬೆಸ್ಟ್‌ ಉದಾಹರಣೆ ಅಂದ್ರೆ ಇದೀಗ ಟ್ರೆಂಡ್‌ ಆಗ್ತಿರೋ ಅರಶಿನ ನೀರಿನ ಟ್ರೆಂಡ್ (Viral Turmeric Glass Trend).‌ ಈಗಂತೂ ಯಾರು ನೋಡಿದ್ರೂ, ಕತ್ತಲೆ ಕೋಣೆಯಲ್ಲಿ ಮೊಬೈಲ್‌ ಟಾರ್ಚ್‌ ಆನ್‌ ಮಾಡಿ, ಅದರ ಮೇಲೆ ಒಂದು ಗ್ಲಾಸ್‌ ನೀರಿಟ್ಟು ಬಳಿಕ ಅದಕ್ಕೆ ಅರಶಿನ ಪುಡಿ ಹಾಕುವಂತಹ ವಿಡಿಯೋಗಳನ್ನೇ ಮಾಡುತ್ತಿದ್ದಾರೆ. ಆದ್ರೆ ಈ ಒಂದು ಪ್ರಯೋಗ ಮಾಡುವುದರಿಂದ ಮನೆಯಲ್ಲಿ ಏನೆಲ್ಲಾ ಸಮಸ್ಯೆ ಆಗುತ್ತೆ ಗೊತ್ತಾ? ಈ ಬಗೆಗಿನ ಒಂದಷ್ಟು ಮಾಹಿತಿಯನ್ನು  ಟ್ಯಾರೋ ಕಾರ್ಡ್‌ ಎಕ್ಸರ್ಟ್‌ ನೀಲಂ ಟಿ. (Neelam T) ಎಂಬವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನೀರಿಗೆ ಅರಶಿನ ಬೆರೆಸುವ ಟ್ರೆಂಡ್‌ ಪಾಲಿಸಿದ್ರೆ ಆಗುವ ಸಮಸ್ಯೆಗಳು:

ಇತ್ತೀಚಿನ ದಿನಗಳಲ್ಲಿ ಕತ್ತಲೆ ಕೋಣೆಯಲ್ಲಿ ಒಂದು ಗ್ಲಾಸ್‌ ನೀರಿಗೆ ಅರಶಿನ ಹಾಕುವಂತಹ ರೀಲ್ಸ್‌ ವಿಡಿಯೋಗಳು ಭಾರೀ ಟ್ರೆಂಡ್‌ ಸೃಷ್ಟಿಸಿದೆ. ಇದಂತೂ ತುಂಬಾ ಮಜಾವಾಗಿದೆ ಎಂದು ಎಲ್ರೂ ತಮ್ಮ ತಮ್ಮ ಮನೆಗಳಲ್ಲಿ ಈ ಪ್ರಯೋಗವನ್ನು ಮಾಡ್ತಿದ್ದಾರೆ. ಆದ್ರೆ ಮಜಾವಾಗಿರುವ ಈ ಟ್ರೆಂಡ್‌ನಿಂದ ಮನೆಯಲ್ಲಿ ಸಾಕಷ್ಟು ಸಮಸ್ಯೆ ಉಂಟು ಮಾಡುತ್ತದೆ, ಇದು ಮುಖ್ಯವಾಗಿ ಋಣಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂಬುದನ್ನು ಟ್ಯಾರೋ ಕಾರ್ಡ್‌ ಎಕ್ಸರ್ಟ್‌ ನೀಲಂ ಟಿ. (Kannada_tarot) ಹೇಳಿದ್ದಾರೆ. ಈ ಬಗ್ಗೆ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ
Image
ವಾರದ ಯಾವ ದಿನ ಚಿನ್ನ ಖರೀದಿಸಿದರೆ ಒಳ್ಳೆಯದು ಗೊತ್ತಾ
Image
ಬೆಕ್ಕು ಆದಾಗೇ ನಿಮ್ಮ ಮನೆಗೆ ಬಂದ್ರೆ ಏನರ್ಥ, ಅದೃಷ್ಟ ಕೈ ಹಿಡಿಯುತ್ತಾ?
Image
Vastu Tips: ನಿಮ್ಮ ಪರ್ಸನಲ್ಲಿಯೂ ಈ ರೀತಿ ನೋಟಿದ್ದರೆ ಕಷ್ಟ ತಪ್ಪಿದ್ದಲ್ಲ
Image
ಪರ್ಸ್‌ನಲ್ಲಿ ಹೆಂಡ್ತಿ ಫೋಟೋ ಇಟ್ಕೊಂಡ್ರೆ ಏನಾಗುತ್ತೆ ಗೊತ್ತಾ?

ಇದನ್ನೂ ಓದಿ: ವಾರದ ಯಾವ ದಿನ ಚಿನ್ನ ಖರೀದಿಸಿದರೆ ಒಳ್ಳೆಯದು ಗೊತ್ತಾ?

ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by Neelam T (@kannada_tarot)

ನೀರಿಗೆ ಅರಶಿನ ಹಾಕಿ ಅದಕ್ಕೆ ಲೈಟ್‌ ಹಾಕುವಂತಹದ್ದು ಅಥವಾ ಕೆಂಡ, ಬೆಂಕಿಯ ಮೇಲೆ ಇಡುವುದು ಹೀಗೆ ಈ ರೀತಿಯ ಮ್ಯಾಜಿಕ್‌ ಮಾಡೋದನ್ನು ತಂತ್ರಕ್ರಿಯೆ ಅಂತ ಕರಿತಾರೆ. ಮಾಟ-ಮಂತ್ರ, ವಶೀಕರಣ ಮಾಡುವವರು ಈ ತಂತ್ರಕ್ರಿಯೆಯನ್ನು ಅನುಸರಿತ್ತಾರೆ. ಈ ತಂತ್ರವನ್ನು ನೀವು ಮನೆಯಲ್ಲಿ ತಮಾಷೆಗಾಗಿ ಬಳಸಿದರೂ ನಿಮ್ಮ ಸುತ್ತಲೂ ಇರುವ ಋಣಾತ್ಮಕ ಶಕ್ತಿ ಅಂದ್ರೆ ಪ್ರೇತಾತ್ಮಗಳು ನಿಮ್ಮ ಮನೆಗೆ ಆಕರ್ಷಿಸುತ್ತವೆ. ಇದರಿಂದ ಮನೆಯಲ್ಲಿ ಜಗಳ, ಮನಸ್ತಾಪ, ಆರ್ಥಿಕ ಸಂಕಷ್ಟದಂತಹ ಸಮಸ್ಯೆಗಳು ಎದುರಾಗುತ್ತವೆ  ಹಾಗಾಗಿ ತಮಾಷೆಗೂ ಕೂಡ ಈ ತಂತ್ರವನ್ನು ಟ್ರೈ ಮಾಡ್ಬೇಡಿ ಎಂದು ಹೇಳಿದ್ದಾರೆ. ಜೊತೆಗೆ ಯಾರಾದ್ರೂ ಈ ರೀತಿ ಮಾಡಿದ್ರೆ, ಅದಕ್ಕೆ ಪರಿಹಾರವನ್ನು ಕೂಡ ಅವರು ತೀಳಿಸಿಕೊಟ್ಟಿದ್ದಾರೆ ಅದೇನೆಂದರೆ, ನೀರು ಮತ್ತು ಅರಶಿನವನ್ನು ಮಿಕ್ಸ್‌ ಮಾಡಿ ಅದನ್ನು ತುಳಸಿ ಗಿಡಕ್ಕೆ ಹಾಕಿ ಕ್ಷಮೆ ಕೇಳಬೇಕು ಎಂದು ಅವರು ಹೇಳಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ