AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vastu Tips: ಪರ್ಸನಲ್ಲಿ ಹರಿದು ಹೋಗಿರುವ ನೋಟಿದ್ದರೆ ಏನಾಗುತ್ತೆ ಗೊತ್ತಾ?

ಕೆಲವೊಮ್ಮೆ ನಾವು ಮೂಢನಂಬಿಕೆಗಳು ಎಂದು ಕೆಲವು ವಾಸ್ತು ನಿಯಮಗಳನ್ನು ಪಾಲನೆ ಮಾಡದೆಯೇ ಅದನ್ನು ಬಿಟ್ಟುಬಿಡುತ್ತೇವೆ. ಇದರಿಂದ ಹಲವಾರು ರೀತಿಯ ಸಮಸ್ಯೆಗಳು ಎದುರಿಸುವ ಸಂದರ್ಭ ಬಂದರೂ ಬರಬಹುದು. ಏಕೆಂದರೆ ವಾಸ್ತು ನಿಯಮಗಳ ಪ್ರಕಾರ ಹಣವನ್ನು ಗಳಿಸಲು ಅಥವಾ ಬಂದ ಹಣವನ್ನು ಉಳಿತಾಯ ಮಾಡಲು ಕೆಲವು ನಿಯಮಗಳಿರುತ್ತವೆ ಅದನ್ನು ಪಾಲನೆ ಮಾಡಬೇಕಾಗುತ್ತದೆ ಅದಲ್ಲದೆ ನಾವು ಮಾಡುವ ಕೆಲವು ತಪ್ಪುಗಳು ನಮ್ಮನ್ನು ಬಡವರನ್ನಾಗಿ ಮಾಡುತ್ತದೆ. ಹಾಗಾದರೆ ವಾಸ್ತು ನಿಯಮ ಹೇಳುವುದೇನು? ಯಾಕೆ ಹರಿದು ಹೋಗಿರುವ ನೋಟುಗಳನ್ನು ಇಟ್ಟುಕೊಳ್ಳಬಾರದು ಎಂಬುದನ್ನು ತಿಳಿದುಕೊಳ್ಳಿ.

Vastu Tips: ಪರ್ಸನಲ್ಲಿ ಹರಿದು ಹೋಗಿರುವ ನೋಟಿದ್ದರೆ ಏನಾಗುತ್ತೆ ಗೊತ್ತಾ?
ವಾಸ್ತು ಸಲಹೆ
ಪ್ರೀತಿ ಭಟ್​, ಗುಣವಂತೆ
|

Updated on: Jun 09, 2025 | 6:06 PM

Share

ದುಡ್ಡಿದ್ದರೆ ದುನಿಯಾ ಎಂಬ ಮಾತನ್ನು ನೀವೂ ಕೇಳಿರಬಹುದು. ಆದರೆ ದುಡ್ಡು (money) ಎಲ್ಲರ ಬಳಿಯೂ ಇರುವುದಿಲ್ಲ. ಹಾಗಾಗಿ ಹಣವನ್ನು ದೇವರಂತೆ ಪೂಜಿಸುವುದು ಮಾತ್ರವಲ್ಲ ಅದನ್ನು ಆರಾಧಿಸಬೇಕು. ಆಗ ಮಾತ್ರ ಲಕ್ಷ್ಮೀ ಒಲಿಯುತ್ತಾಳೆ, ದುಡ್ಡು ಬರುತ್ತದೆ. ಆದರೆ ಕೆಲವರ ಬಳಿ ಎಷ್ಟು ದುಡ್ಡಿದ್ದರೂ ಕೈಯಲ್ಲಿ ದುಡ್ಡೇ ನಿಲ್ಲುವುದಿಲ್ಲ. ಹಾಗಾದರೆ ಇದಕ್ಕೆ ಕಾರಣವೇನು? ಯಾಕೆ ದುಡಿದ ಹಣ ಬೇಗ ಖಾಲಿಯಾಗುತ್ತದೆ? ಈ ರೀತಿಯ ಪ್ರಶ್ನೆ ನಿಮಗೂ ಬಂದಿರಬಹುದು. ನಾವು ಕೆಲವೊಮ್ಮೆ ಮೂಢನಂಬಿಕೆಗಳು ಎಂದು ಕೆಲವು ವಾಸ್ತು ನಿಯಮಗಳನ್ನು ಪಾಲನೆ ಮಾಡದೆಯೇ ಅದನ್ನು ಬಿಟ್ಟುಬಿಡುತ್ತೇವೆ. ಇನ್ನು ಕೆಲವು ಬಾರಿ ನಮಗೆ ತಿಳಿಯದಂತೆ ನಾವು ಮಾಡುವ ತಪ್ಪುಗಳು ದುಡ್ಡಿನ ಕೊರತೆಗೆ ಕಾರಣವಾಗಬಹುದು. ಹಾಗಾದರೆ ಪರ್ಸ್ ತುಂಬಾ ಹಣವಿರಬೇಕು (Financial prosperity), ದುಡಿದ ಹಣವನ್ನು ಉಳಿತಾಯ ಮಾಡಬೇಕು ಎಂದರೆ ಏನು ಮಾಡಬೇಕು? ವಾಸ್ತು ನಿಯಮದ (Vastu shastra) ಪ್ರಕಾರ ಪರ್ಸ್ ಅಥವಾ ಬ್ಯಾಗ್ ನಲ್ಲಿ ಹಣವನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ.

ವಾಸ್ತು ನಿಯಮ ಹೇಳುವುದೇನು?

ತಜ್ಞರು ಹೇಳುವ ಪ್ರಕಾರ, ಶ್ರೀಮಂತನಾಗಲು ಕಷ್ಟ ಪಟ್ಟು ದುಡಿಯುವುದರ ಜೊತೆಗೆ ಅದನ್ನು ಉಳಿಸಿಕೊಳ್ಳಲು ಪ್ರಯತ್ನ ಪಡಬೇಕು. ಇಲ್ಲವಾದಲ್ಲಿ ನಮಗೆ ಗೊತ್ತಿಲ್ಲದಂತೆ ನಾವು ಮಾಡುವಂತಹ ಚಿಕ್ಕ ಪುಟ್ಟ ತಪ್ಪುಗಳು ಕೈ ಖಾಲಿ ಮಾಡಿಸಬಹುದು, ದುಡ್ಡಿಗೆ ಕೊರತೆಯಾಗುವಂತೆ ಮಾಡಬಹುದು. ಅದಕ್ಕಾಗಿಯೇ ವಾಸ್ತು ನಿಯಮಗಳನ್ನು ಪಾಲನೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಪರ್ಸ್ ನಲ್ಲಿ ಹಣ ಇಟ್ಟುಕೊಳ್ಳುವುದು ಸಾಮಾನ್ಯ. ಆದರೆ ಕೆಲವರು ಹಣದ ಜೊತೆಗೆ ಅನೇಕ ರೀತಿಯ ವಸ್ತುಗಳನ್ನು ಇಟ್ಟುಕೊಳ್ಳುತ್ತಾರೆ. ಅದೇ ರೀತಿ ಕೆಲವರು ಗೊತ್ತೋ ಗೊತ್ತಿಲ್ಲದೆಯೋ ತಮ್ಮ ಕೈಗೆ ಬಂದಂತಹ ಹರಿದ ನೋಟುಗಳನ್ನು ಪರ್ಸ್ ನಲ್ಲಿಯೇ ಇಟ್ಟುಕೊಂಡಿರುತ್ತಾರೆ. ಕೆಲವೊಮ್ಮೆ ಯಾರಿಗೆ ಕೊಟ್ಟರು ಆ ನೋಟನ್ನು ತೆಗೆದುಕೊಳ್ಳದಿದ್ದಾಗ ತಮ್ಮ ಬಳಿಯೇ ಇಟ್ಟುಕೊಳ್ಳುವುದು ಸಾಮಾನ್ಯ. ಆದರೆ ವಾಸ್ತು ನಿಯಮದ ಪ್ರಕಾರ ಇದು ತಪ್ಪು. ಈ ರೀತಿ ಮಾಡುವುದರಿಂದ ನಾನಾ ರೀತಿಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತದೆ. ಹಾಗಾದರೆ ನಾವು ದಿನನಿತ್ಯ ಬಳಸುವ ಪರ್ಸನಲ್ಲಿ ಹರಿದ ನೋಟುಗಳು ಇದ್ದರೆ ಯಾವ ರೀತಿಯ ಫಲಾಫಲಗಳು ಲಭ್ಯವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಇದನ್ನೂ ಓದಿ: Vastu Shastra: ಹೊಸ ಮನೆ ಖರೀದಿಸುವ ಮುನ್ನ ಈ ವಿಷಯ ಪರಿಶೀಲಿಸುವುದು ಅತ್ಯಂತ ಮುಖ್ಯ

ಇದನ್ನೂ ಓದಿ
Image
ಮೆದುಳಿನ ಆರೋಗ್ಯಕ್ಕೆ ವೀಳ್ಯದ ಎಲೆ, ಜೇನುತುಪ್ಪ ಬೆಸ್ಟ್!
Image
ಎಚ್ಚರ.... ದೇಹದಲ್ಲಿ ಈ ಬದಲಾವಣೆ ಕಂಡ್ರೆ ಅದು ಲಿವರ್ ಕ್ಯಾನ್ಸರ್ ಲಕ್ಷಣ
Image
ಚರ್ಮ ಒಣಗುವುದು ಈ ಗಂಭೀರ ಕಾಯಿಲೆಯ ಲಕ್ಷಣ
Image
ಗೋಧಿ ಬದಲು ಗ್ಲುಟನ್‌ ಫ್ರೀ ಆಗಿರುವ ಈ ಹಿಟ್ಟಿನಿಂದ ಚಪಾತಿ ಮಾಡಿ ನೋಡಿ

ಹರಿದ ನೋಟುಗಳನ್ನು ಇಟ್ಟುಕೊಂಡರೆ ಏನಾಗುತ್ತದೆ?

ವಾಸ್ತು ನಿಯಮದ ಪ್ರಕಾರ, ಹರಿದ ನೋಟುಗಳನ್ನು ನಿಮ್ಮ ಬ್ಯಾಗ್, ಪರ್ಸ್ ಅಥವಾ ನೀವು ದುಡ್ಡು ಹಾಕುವ ಇನ್ನಿತರ ವಸ್ತುವಿನಲ್ಲಿ ಇಡುವುದರಿಂದ ಅಥವಾ ಬೇರೆ ಯಾರಾದರೂ ಕೊಟ್ಟಾಗ ಅದನ್ನು ನೀವೇ ಇಟ್ಟುಕೊಳ್ಳುವುದರಿಂದ ನಿಮ್ಮ ಪ್ರಗತಿ ಕುಂಠಿತಗೊಳ್ಳುತ್ತದೆ. ಹರಿದ ನೋಟಿನಂತೆ ನಿಮ್ಮ ಯಶಸ್ಸಿನಲ್ಲಿ ಅಡೆತಡೆಗಳು ಬರುತ್ತದೆ. ಇನ್ನು ಬ್ಯಾಗ್ ಅಥವಾ ಪರ್ಸ್ ನಲ್ಲಿ ಹರಿದು ಹೋದಂತಹ ನೋಟುಗಳನ್ನು ಇಟ್ಟುಕೊಳ್ಳುವುದರಿಂದ ಲಕ್ಷೀ ದೇವಿ ಕೋಪಗೊಳ್ಳುತ್ತಾಳೆ. ಇದರಿಂದ ಆರ್ಥಿಕವಾಗಿ ನಷ್ಟ ಅನುಭವಿಸುವ ಪರಿಸ್ಥಿತಿ ಕೂಡ ಬರಬಹುದು. ಇನ್ನು ಹರಿದು ಹೋದಂತಹ ನೋಟುಗಳು ನಿಮ್ಮ ವ್ಯಾಪಾರ, ವ್ಯವಹಾರದಲ್ಲಿ ನೋವು ಉಂಟಾಗುವ ಪರಿಸ್ಥಿತಿಗೆ ತರಬಹುದು ಅಂದರೆ ದುಡ್ಡಿನ ಕೊರತೆಯಾಗಬಹುದು. ಹಣ ಬರುವ ಮೂಲ ಅಥವಾ ದಾರಿ ಮುಚ್ಚಿಹೋಗಬಹುದು. ಅಥವಾ ಆದಾಯ ಕಡಿಮೆಯೂ ಆಗಬಹುದು. ಹಾಗಾಗಿ ಹರಿದ ನೋಟುಗಳು ನಿಮ್ಮ ಪರ್ಸ ನಲ್ಲಿ ಇದೆಯೇ ಎಂಬುದನ್ನು ಗಮನಿಸಿ. ಇದ್ದರೆ ಅವುಗಳನ್ನು ಬ್ಯಾಂಕ್ ಗೆ ಕೊಡಿ. ಇನ್ನು ನಿಮ್ಮ ಬಳಿ ಇರುವ ಹಣವನ್ನು ಎಂದಿಗೂ ಮಡಚಿ ಪರ್ಸನಲ್ಲಿ ಇಟ್ಟುಕೊಳ್ಳಬೇಡಿ. ವಾಸ್ತು ನಿಯಮದ ಪ್ರಕಾರ ಈ ರೀತಿ ಮಾಡುವುದರಿಂದ ಹಣದ ಕೊರತೆ ಉಂಟಾಗುತ್ತದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ವಾಸ್ತು ತಜ್ಞರನ್ನು ಸಂಪರ್ಕಿಸಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?