ಈ ಧಾನ್ಯದಿಂದ ಮಾಡಿದ ಚಪಾತಿ ತಿಂದು ನೋಡಿ! ಆರೋಗ್ಯ ಸಮಸ್ಯೆಯೇ ಬರುವುದಿಲ್ಲ
ರಾಗಿ ಹಿಟ್ಟನ್ನು ನಾನಾ ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾದ ಈ ಆಹಾರ ಪದಾರ್ಥವು ಹಲವಾರು ಪೌಷ್ಟಿಕಾಂಶದ ಮೌಲ್ಯಗಳಿಂದ ಸಮೃದ್ಧವಾಗಿದೆ. ವಿಶೇಷವಾಗಿ ಶಕ್ತಿ ಮತ್ತು ನೈಸರ್ಗಿಕ ಪೋಷಣೆಯನ್ನು ಬಯಸುವವರಿಗೆ, ರಾಗಿ ಹಿಟ್ಟು ಅತ್ಯುತ್ತಮ ಆಯ್ಕೆಯಾಗಿದೆ. ಯಾವಾಗಲೂ ಗೋಧಿ ಹಿಟ್ಟಿನ ಚಪಾತಿಗಳನ್ನು ಸೇವನೆ ಮಾಡುವ ಬದಲು ರಾಗಿಯಿಂದ ಮಾಡಿದ ರೊಟ್ಟಿ ಅಥವಾ ಚಪಾತಿಗಳ ಸೇವನೆ ಮಾಡಬಹುದು.

ಸಾಮಾನ್ಯವಾಗಿ ಅನ್ನ ಸೇವನೆ ಮಾಡುವುದಕ್ಕಿಂತ, ಚಪಾತಿ (Chapati) ತಿನ್ನುವವರ ಸಂಖ್ಯೆಯೇ ನಮ್ಮಲ್ಲಿ ಹೆಚ್ಚಾಗಿದೆ. ಆದರೆ ಪ್ರತಿನಿತ್ಯ ಗೋಧಿ ಹಿಟ್ಟಿನ ಚಪಾತಿಗಳನ್ನು ಸೇವನೆ ಮಾಡುವ ಬದಲು ರಾಗಿಯಿಂದ ಮಾಡಿದ ರೊಟ್ಟಿ ಅಥವಾ ಚಪಾತಿ (Ragi Chapati) ಗಳ ಸೇವನೆ ಮಾಡಬಹುದು. ಅದರಲ್ಲಿಯೂ ದೇಹಕ್ಕೆ ಪ್ರತಿದಿನ ಅಗತ್ಯವಿರುವ ಪ್ರೋಟೀನ್ ಸಿಗಬೇಕಾದರೆ, ರಾಗಿ ಚಪಾತಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು. ಅವುಗಳಲ್ಲಿರುವ ಹೆಚ್ಚಿನ ಪ್ರೋಟೀನ್ ಅಂಶವು ಸ್ನಾಯುಗಳ ಬೆಳವಣಿಗೆಗೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಬಯಸುವವರಿಗೆ ಇದು ಸಹಾಯ ಮಾಡುತ್ತದೆ. ಅದಲ್ಲದೆ ಬೆಳಗಿನ ಸಮಯದಲ್ಲಿ ರಾಗಿ ಚಪಾತಿ ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಶಕ್ತಿ ದೊರೆಯುತ್ತದೆ. ಹಾಗಾದರೆ ಇದರ ಸೇವನೆ ಮಾಡುವುದರಿಂದ ಸಿಗುವ ಮತ್ತಷ್ಟು ಆರೋಗ್ಯ (Health) ಪ್ರಯೋಜನಗಳು ಯಾವವು? ಇದು ಯಾವ ರೀತಿಯ ಆರೋಗ್ಯ ಸಮಸ್ಯೆಗೆ ರಾಮಬಾಣ ಎಂಬುದನ್ನು ತಿಳಿದುಕೊಳ್ಳಿ.
ರಾಗಿ ಚಪಾತಿ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನ:
ರಾಗಿಯಿಂದ ತಯಾರಾದ ಆಹಾರಗಳು ನಿಧಾನವಾಗಿ ಜೀರ್ಣವಾಗುವುದರಿಂದ ಇವು ನಿಮ್ಮ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ, ಇದರಿಂದ ಪದೇ ಪದೇ ಕಾಡುವ ಹಸಿವಿನ ಭಾವನೆ ಕಡಿಮೆಯಾಗುತ್ತದೆ. ಅಲ್ಲದೆ ಇದು ತೂಕ ನಿರ್ವಹಣೆಗೆ ಕೂಡ ಸಹಕಾರಿಯಾಗಿದೆ. ಅಲ್ಲದೆ ರಾಗಿ ಹಿಟ್ಟಿನಲ್ಲಿ ಹೇರಳವಾಗಿರುವ ಉತ್ಕರ್ಷಣ ನಿರೋಧಕಗಳಿಂದಾಗಿ, ಚರ್ಮವು ಕ್ರಮೇಣ ಹೊಳಪನ್ನು ಪಡೆಯುತ್ತದೆ. ಜೊತೆಗೆ ಚರ್ಮದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಲ್ಲದೆ ರಾಗಿಯ ಸೇವನೆ ನಮ್ಮ ಕೂದಲಿನ ಆರೋಗ್ಯಕ್ಕೂ ಕೂಡ ಒಳ್ಳೆಯದು. ಕೂದಲು ಉದುರುವಿಕೆ ಮತ್ತು ಒಣ ಕೂದಲಿನ ಸಮಸ್ಯೆಗಳಿರುವವರಿಗೆ ಇದು ಪ್ರಯೋಜನಕಾರಿಯಾಗಿದೆ. ಇನ್ನು ರಾಗಿ ಹಿಟ್ಟನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಮೂಳೆಯ ಬಲವನ್ನು ಹೆಚ್ಚಿಸುವುದಲ್ಲದೆ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ.
ಇದನ್ನೂ ಓದಿ: Benefits Of Ragi Flour: ರಾಗಿಯನ್ನು ಈ ರೀತಿ ಬಳಸುವುದರಿಂದ ಕೀಲು ನೋವು ಗುಣವಾಗುತ್ತೆ, ಒಮ್ಮೆ ಟ್ರೈ ಮಾಡಿ
ಮಹಿಳೆಯರು ಮತ್ತು ವೃದ್ಧರು ಇದನ್ನು ಅಗತ್ಯವಾಗಿ ಅವರ ಆಹಾರದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು. ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುವ ಈ ಹಿಟ್ಟು ಜೀರ್ಣಾಂಗ ವ್ಯವಸ್ಥೆಯು ಸರಾಗವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಜೊತೆಗೆ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಗೋಧಿಯಲ್ಲಿ ಕಂಡು ಬರುವ ಗ್ಲುಟನ್ ಸೇವನೆ ಮಾಡದಿದ್ದವರು ಅಥವಾ ಅಲರ್ಜಿ ಸಮಸ್ಯೆ ಇರುವವರಿಗೆ, ರಾಗಿ ಹಿಟ್ಟು ಅತ್ಯುತ್ತಮ ಪರ್ಯಾಯವಾಗಿದೆ. ಅಲ್ಲದೆ ಇದು ಸಂಪೂರ್ಣವಾಗಿ ಗ್ಲುಟನ್- ಮುಕ್ತವಾಗಿರುವುದರಿಂದ, ಭಯವಿಲ್ಲದೆ ಸುರಕ್ಷಿತವಾಗಿ ಸೇವನೆ ಮಾಡಬಹುದು. ಅದರಲ್ಲಿಯೂ ರಾಗಿ ಹಿಟ್ಟಿನಿಂದ ತಯಾರಿಸಿದ ಚಪಾತಿಗಳು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ. ಅವು ಜೀರ್ಣಿಸಿಕೊಳ್ಳಲು ಸುಲಭ ಮಾತ್ರವಲ್ಲದೆ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








