ಸ್ನಾನ ಮಾಡಿ ಬಂದ ನಂತರ ಸುಸ್ತಾಗುತ್ತಿದೆಯೇ? ಕಾರಣ ತಿಳಿಸಿದ ಡಾ. ಐಶ್ವರ್ಯಾ
ಪ್ರತಿನಿತ್ಯ ಸ್ನಾನ ಮಾಡುವುದು ಆರೋಗ್ಯಕರ ಅಭ್ಯಾಸ. ಆದರೆ ಕೆಲವರಿಗೆ ಸ್ನಾನ ಮಾಡುವುದೇ ದೊಡ್ಡ ಯೋಚನೆಯಾಗಿರುತ್ತದೆ. ಏಕೆಂದರೆ ಕೆಲವರಿಗೆ ಸ್ನಾನ ಮಾಡಿದ ಮೇಲೆ ವಿಪರೀತ ಸುಸ್ತಾಗುತ್ತದೆ. ಆದರೆ ಈ ರೀತಿ ದೇಹ ನೀಡುವ ಸೂಚನೆಯನ್ನು ಅಲಕ್ಷ್ಯ ಮಾಡಬಾರದು. ಏಕೆಂದರೆ ವೈದ್ಯರ ಪ್ರಕಾರ, ಇದು ಒಂದು ರೀತಿಯ ಮುನ್ನೆಚ್ಚರಿಕೆ. ಹಾಗಾದರೆ ಸ್ನಾನ ಮಾಡಿ ಬಂದ ನಂತರ ಸುಸ್ತಾಗುತ್ತಿದ್ದರೆ ಅದಕ್ಕೆ ಕಾರಣವೇನು? ದೇಹ ನೀಡುವ ಮುನ್ಸೂಚನೆ ಏನಾಗಿರುತ್ತದೆ? ಈ ರೀತಿ ಆಗಬಾರದು ಎಂದರೆ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಸಾಮಾನ್ಯವಾಗಿ ನಮ್ಮ ದೇಹ ಅನಾರೋಗ್ಯ (Illness) ಬರುವ ಸೂಚನೆಗಳನ್ನು ನೀಡುತ್ತದೆ. ಆದರೆ ಅವುಗಳನ್ನು ನಾವೆಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತೇವೆ ಅಥವಾ ಅದಕ್ಕೆ ಯಾವ ರೀತಿಯ ಪರಿಹಾರಗಳನ್ನು ಕಂಡುಕೊಳ್ಳುತ್ತೇವೆ ಎನ್ನುವುದರ ಮೇಲೆ ಎಲ್ಲವೂ ನಿಂತಿರುತ್ತದೆ. ಹಾಗಾಗಿ ಯಾವುದೇ ಸಂದರ್ಭಗಳಲ್ಲಿಯೂ ನಮ್ಮ ದೇಹ ನೀಡುವ ಕೆಲವು ಸೂಚನೆಗಳನ್ನು ಅಲಕ್ಷ್ಯ ಮಾಡಬಾರದು. ಈ ರೀತಿ ದೇಹ ನೀಡುವ ಸೂಚನೆಗಳಲ್ಲಿ, ಸ್ನಾನ ಮಾಡಿದ ನಂತರ ಕಂಡುಬರುವ ಸುಸ್ತು (Fatigue After Bathing) ಕೂಡ ಒಂದು. ಈ ರೀತಿಯ ಸಮಸ್ಯೆ ಹಲವರಿಗೆ ಇರಬಹುದು. ಹಾಗಾದರೆ ಸ್ನಾನ ಮಾಡಿ ಬಂದ ನಂತರ ಸುಸ್ತಾಗುತ್ತಿದ್ದರೆ ಅದಕ್ಕೆ ಕಾರಣವೇನು? ದೇಹ ನೀಡುವ ಮುನ್ಸೂಚನೆ ಏನಾಗಿರುತ್ತದೆ? ಈ ರೀತಿ ಆಗಬಾರದು ಎಂದರೆ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಕೆಲವರು ದಣಿದಾಗ ಸ್ನಾನ ಮಾಡುತ್ತಾರೆ. ಇದರಿಂದ ದೇಹಕ್ಕೆ ಹೊಸ ಚೈತನ್ಯ ಸಿಗುತ್ತದೆ. ಆದರೆ ಕೆಲವರಿಗೆ ಸ್ನಾನ ಮಾಡಿದರೆ ಸುಸ್ತಾಗುತ್ತದೆ. ಹಾಗಾದರೆ ಈ ರೀತಿ ಆಗುವುದಕ್ಕೆ ಕಾರಣವೇನು? ಈ ಬಗ್ಗೆ ಡಾ. ಐಶ್ವರ್ಯಾ ಗೌಡ ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಕೆಲವು ಮಾಹಿತಿ ಹಂಚಿಕೊಂಡಿದ್ದು, ಅವರು ಹೇಳಿರುವ ಪ್ರಕಾರ ಈ ರೀತಿ ಆಗುವುದು ಸಾಮಾನ್ಯವಲ್ಲ. ಇದಕ್ಕೆ ಕಾರಣವಿದೆ. ಇದು ದೇಹ ನಿಮಗೆ ನೀಡುವ ಮುನ್ನೆಚ್ಚರಿಕೆ. ಆದರೆ ಈ ರೀತಿಯಾದರೆ ಹೆದರುವ ಅವಶ್ಯಕತೆ ಇಲ್ಲ. ಬದಲಾಗಿ ಕೆಲವು ಸರಳ ಅಭ್ಯಾಸಗಳನ್ನು ರೂಢಿಸಿಕೊಂಡಲ್ಲಿ ಈ ರೀತಿಯ ಸಮಸ್ಯೆಯನ್ನು ತಡೆಯಬಹುದು ಎಂದಿದ್ದಾರೆ.
ಡಾ. ಐಶ್ವರ್ಯಾ ಗೌಡ ಅವರು ಮಾಹಿತಿ ನೀಡಿದ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: Bathing Tips: ಬೆಳಿಗ್ಗೆ ಅಥವಾ ರಾತ್ರಿ ಯಾವಾಗ ಸ್ನಾನ ಮಾಡುವುದು ಒಳ್ಳೆಯದು?
ಸುಸ್ತನ್ನು ತಡೆಯಲು ಈ ರೀತಿ ಮಾಡಿ
ಸ್ನಾನ ಮಾಡಿ ಬಂದ ತಕ್ಷಣ ಅನೇಕ ಜನರಿಗೆ ಆಯಾಸವಾಗುತ್ತದೆ. ಇದಕ್ಕೆ ಕಾರಣ, ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುವುದಿಲ್ಲ. ಹಾಗಾದರೆ ಈ ರೀತಿ ಸಮಸ್ಯೆ ಆಗುತ್ತಿದ್ದರೆ ಏನು ಮಾಡಬೇಕು? ಸ್ನಾನಕ್ಕೆ ಹೋಗುವ ಮೊದಲು ಒಂದು ಲೋಟ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. ಅದರ ಜೊತೆಗೆ ಸ್ನಾನ ಮಾಡುವಾಗ ತುಂಬಾ ಬಿಸಿ ಅಥವಾ ತುಂಬಾ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದನ್ನು ನಿಲ್ಲಿಸಿ. ಈ ರೀತಿ ಮಾಡುವುದರಿಂದ ಸ್ನಾನ ಆಗಿ ಬಂದ ನಂತರ ಕಾಡುವ ಸುಸ್ತನ್ನು ತಡೆಯಬಹುದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








