ಸ್ತನ ಕ್ಯಾನ್ಸರ್ಗೆ ಶುಂಠಿ ಸೂಕ್ತ, ಈ ಮನೆಮದ್ದನ್ನು ಮಾಡಿನೋಡಿ
ಶುಂಠಿಯಲ್ಲಿ ಅನೇಕ ಜೀವಸತ್ವಗಳು ಮತ್ತು ಮ್ಯಾಂಗನೀಸ್ ಅಂಶಗಳಿವೆ. ಇವುಗಳೆಲ್ಲವೂ ದೇಹದ ಸರಿಯಾದ ಕಾರ್ಯನಿರ್ವಹಣೆಗೆ ಅತ್ಯಂತ ಅವಶ್ಯವಾಗಿ ಬೇಕಾಗುವ ಅಂಶಗಳಾಗಿವೆ. ಶುಂಠಿ ಸೇವನೆ ಮಾಡುವುದು ಸಾಮಾನ್ಯ ಆದರೆ ಎಂದಾದರೂ ಶುಂಠಿ ಜ್ಯೂಸ್ ಸೇವನೆ ಮಾಡಿದ್ದೀರಾ? ಕೇಳುವುದಕ್ಕೆ ಸ್ವಲ್ಪ ವಿಚಿತ್ರ ಎನಿಸಿದರೂ ಕೂಡ, ಇದರಲ್ಲಿ ಆರೋಗ್ಯ ಪ್ರಯೋಜನಗಳು ಮಾತ್ರ ಹೇರಳವಾಗಿದೆ. ಹಾಗಾದರೆ ಶುಂಠಿ ರಸ ಯಾವ ಕಾಯಿಲೆಗೆ ಒಳ್ಳೆಯದು? ಯಾರು ಸೇವನೆ ಮಾಡಬೇಕು? ಇಲ್ಲಿದೆ ಮಾಹಿತಿ.

ಸಾಮಾನ್ಯವಾಗಿ ಶುಂಠಿ (Ginger) ಯನ್ನು ಪ್ರತಿನಿತ್ಯ ನಾವು ಸೇವನೆ ಮಾಡುವ ಆಹಾರಗಳಲ್ಲಿ ಬಳಕೆ ಮಾಡುತ್ತೇವೆ. ಇದು ಕೇವಲ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯಕ್ಕೂ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ ನೀವು ಎಂದಾದರೂ ಶುಂಠಿ ಜ್ಯೂಸ್ (Ginger Juice) ಅನ್ನು ಸೇವಿಸಿದ್ದೀರಾ? ಕೇಳುವುದಕ್ಕೆ ಸ್ವಲ್ಪ ವಿಚಿತ್ರ ಎನಿಸಿದರೂ ಕೂಡ, ಇದರಲ್ಲಿ ಆರೋಗ್ಯ (Health) ಪ್ರಯೋಜನಗಳು ಮಾತ್ರ ಹೇರಳವಾಗಿದೆ. ಇದನ್ನು ನಮ್ಮ ಪೂರ್ವಜರು ಕೂಡ ಹಿಂದಿನಿಂದಲೂ ಬಳಸಿಕೊಂಡು ಬಂದಿದ್ದು ಆಯುರ್ವೇದದ ಔಷಧಿಗಳಲ್ಲಿಯೂ ಅನೇಕ ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಹಾಗಾದರೆ ಇದರಿಂದ ಸಿಗುವ ಉಪಯೋಗಗಳೇನು ತಿಳಿದುಕೊಳ್ಳಿ.
ಈ ವಿಷಯದ ಕುರಿತು Gireesh Mutthu ಎನ್ನುವವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಶುಂಠಿ ಜ್ಯೂಸ್ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳ ಬಗೆಗಿನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಶುಂಠಿಯಲ್ಲಿ ಅನೇಕ ಜೀವಸತ್ವಗಳು ಮತ್ತು ಮ್ಯಾಂಗನೀಸ್ ಮತ್ತು ತಾಮ್ರ ಹೊಂದಿದೆ, ಇವುಗಳೆಲ್ಲವೂ ದೇಹದ ಸರಿಯಾದ ಕಾರ್ಯನಿರ್ವಹಣೆಗೆ ಅತ್ಯಂತ ಅವಶ್ಯವಾಗಿ ಬೇಕಾಗುವ ಅಂಶಗಳಾಗಿವೆ. ಹಾಗಾದರೆ ಶುಂಠಿ ರಸ ಯಾವ ಕಾಯಿಲೆಗೆ ಒಳ್ಳೆಯದು? ಯಾರು ಸೇವನೆ ಮಾಡಬೇಕು? ಇಲ್ಲಿದೆ ಮಾಹಿತಿ.
ಶುಂಠಿ ರಸದಿಂದ ವಿಶೇಷವಾಗಿ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ;
1. ಉರಿಯೂತ ವಿರೋಧಿ:
ಶುಂಠಿಯ ಅತ್ಯಂತ ಪರಿಣಾಮಕಾರಿ ಉಪಯೋಗಗಳಲ್ಲಿ ಒಂದೆಂದರೆ, ಇದು ಕೀಲುಗಳಲ್ಲಿ ಕಂಡುಬರುವ ಉರಿಯುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉರಿ ವಿರೋಧಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಶುಂಠಿ ರಸವನ್ನು ನಿಯಮಿತವಾಗಿ ಸೇವಿಸುವವರಿಗೆ ದೇಹದಲ್ಲಿ ನೋವು ಮತ್ತು ಇತರ ಉರಿಯೂತದ ಗುಣಲಕ್ಷಣಗಳು ಕಂಡುಬರುವುದು ಕಡಿಮೆಯಾಗುತ್ತದೆ.
2. ಕ್ಯಾನ್ಸರ್ ತಡೆಯುತ್ತದೆ:
ಕ್ಯಾನ್ಸರ್ ತಡೆಗಟ್ಟಲು ಶುಂಠಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಈ ಶುಂಠಿ ರಸ ಕ್ಯಾನ್ಸರ್ ಕಾರಕವನ್ನು ನಾಶ ಮಾಡುವುದಲ್ಲದೆ ಸ್ತನ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಹಾಗಾಗಿ ಸ್ತನ ಕ್ಯಾನ್ಸರ್ ತಡೆಯಲು ಇವುಗಳನ್ನು ತಪ್ಪದೆ ಸೇವನೆ ಮಾಡಿ.
3. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ:
ಶುಂಠಿ ರಕ್ತವನ್ನು ತೆಳು ಮಾಡುವುದಲ್ಲದೆ ಜನರಲ್ಲಿ ರಕ್ತದೊತ್ತಡವನ್ನು ತಕ್ಷಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮಗೆ ಶುಂಠಿ ರಸವನ್ನು ಹಾಗೆಯೇ ಸೇವನೆ ಮಾಡಲು ಇಷ್ಟವಾಗದಿದ್ದಲ್ಲಿ, ನಾಲಿಗೆಗೆ ರುಚಿ ನೀಡಲು ಕೆಲವು ಹನಿ ಜೇನುತುಪ್ಪವನ್ನು ಈ ಮಿಶ್ರಣಕ್ಕೆ ಬೆರೆಸಬಹುದು.
4. ನೋವನ್ನು ಕಡಿಮೆ ಮಾಡುತ್ತದೆ:
ಶುಂಠಿ ಹಲ್ಲು ನೋವಿನಂತಹ ಎಲ್ಲಾ ರೀತಿಯ ನೋವುಗಳನ್ನು ತಡೆಯಲು ಸಹಾಯ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿರುವ ಮೈಗ್ರೇನ್ ಅನ್ನು ಗುಣಪಡಿಸುತ್ತದೆ.
5. ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ:
ಶುಂಠಿ ರಸ ಜೀರ್ಣಕ್ರಿಯೆಗೆ ಸರಿಯಾಗಿ ಆಗಲು ಸಹಾಯ ಮಾಡುತ್ತದೆ. ಅಲ್ಲದೆ ವಿವಿಧ ಜೀರ್ಣಕಾರಿ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ. ಹೊಟ್ಟೆಯಿಂದ ಸಣ್ಣ ಕರುಳಿನ ವರೆಗೆ ಆಹಾರದ ಚಲನೆ ವೇಗವನ್ನು ಹೆಚ್ಚಿಸುತ್ತದೆ. ಶುಂಠಿ ಸೇವನೆಯಿಂದ ಹೊಟ್ಟೆ ನೋವು ಅಥವಾ ಇನ್ನಿತರ ಜೀರ್ಣಕಾರಿ ಸಮಸ್ಯೆಗಳು ಕಡಿಮೆ ಆಗುತ್ತದೆ. ಇದು ಹೊಟ್ಟೆಯನ್ನು ಸ್ವಚ್ಛ ಮಾಡುವ ಮೂಲಕ ಆರೋಗ್ಯ ಸುಧಾರಿಸಲು ನೆರವಾಗುತ್ತದೆ.
6. ಸಂಧಿವಾತವನ್ನು ನಿವಾರಿಸುತ್ತದೆ:
ಶುಂಠಿಯು ಸಂಧಿವಾತವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ಥೈರಾಯ್ಡ್ ಅಥವಾ ಸಂಧಿವಾತದಿಂದ ಬಳಲುತ್ತಿರುವವರ ನೋವನ್ನು ಕಡಿಮೆ ಮಾಡಲು ಕೂಡ ಸಹಾಯ ಮಾಡುತ್ತದೆ.
7. ಶೀತ, ವಾಕರಿಕೆಯನ್ನು ತಡೆಯುತ್ತದೆ:
ಶುಂಠಿಯು ಶೀತ, ವಾಕರಿಕೆಯನ್ನು ತಡೆಯುತ್ತದೆ. ಏಕೆಂದರೆ ಇದರಲ್ಲಿ ಆಂಟಿ- ವೈರಲ್ ಮತ್ತು ಆಂಟಿ ಫಂಗಲ್ ಗುಣಗಳನ್ನು ಹೊಂದಿದೆ. ಇದು ಶೀತ ಉಂಟುಮಾಡುವ ಬ್ಯಾಕ್ಟಿರಿಯಾಗಳನ್ನು ಕೊಲ್ಲುವ ಮೂಲಕ ಶೀತವನ್ನು ನಿವಾರಿಸುತ್ತದೆ.
ಇದನ್ನೂ ಓದಿ: Health Tips: ಶುಂಠಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆಯೇ? ತಜ್ಞರು ಹೇಳುವುದೇನು?
8. ಕೂದಲು ಆರೈಕೆಗೆ ಒಳ್ಳೆಯದು:
ಕೂದಲು ಉದ್ದ ಬರಬೇಕು ಎಂಬ ಆಸೆಯಿದ್ದರೆ ಶುಂಠಿ ರಸವನ್ನು ನಿಯಮಿತವಾಗಿ ಸೇವಿಸಬೇಕು. ಕೂದಲಿನ ಆರೋಗ್ಯ ಕಾಪಾಡಲು ಇದನ್ನು ತಲೆಗೂ ಕೂಡ ಹಚ್ಚಬಹುದು. ಈ ಶುಂಠಿಯು ನಿಮ್ಮ ಕೂದಲಿಗೆ ಉತ್ತಮ ಕಂಡಿಷನರ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಇದು ಡ್ಯಾಂಡ್ರಫ್ ಅನ್ನು ಕಡಿಮೆ ಮಾಡಲು ಮತ್ತು ಕೂದಲು ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ನೀವು ಇದನ್ನು ತಲೆಗೆ ಹಚ್ಚುವಾಗ ನೀರಿನ ಸ್ಥಿರತೆ ಕಡಿಮೆ ಇರುವಂತೆ ನೋಡಿಕೊಳ್ಳಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








