AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ತಂತ್ರ, 60 ಸೆಕೆಂಡು, ರಕ್ತದೊತ್ತಡ ನಿಯಂತ್ರಣಕ್ಕೆ ಇದು ಸೂತ್ರ

ರಕ್ತದೊತ್ತಡವನ್ನು ನಿಯಂತ್ರಣ ಮಾಡಲು ಹಲವು ಕ್ರಮಗಳನ್ನು ಅನುಸರಿಸಬೇಕು. ಹಾಗೂ ಅದಕ್ಕೆ 3 ತಂತ್ರಗಳು ಕೂಡ ಇದೆ. ಆ ತಂತ್ರಗಳನ್ನು ಪಾಲಿಸಿದ್ರೆ ಖಂಡಿತ ರಕ್ತದೊತ್ತಡ ನಿಯಂತ್ರದಲ್ಲಿ ಇಟ್ಟುಕೊಳ್ಳಬಹುದು. ಈ ತಂತ್ರವು ಕೇವಲ 60 ಸೆಕೆಂಡುಗಳ ಕಾಲ ಪಾಲಿಸಿದ್ರೆ ರಕ್ತದೊತ್ತಡವನ್ನು ನಿಯಂತ್ರಣ ಮಾಡಬಹುದು. ಜತೆಗೆ ಇದನ್ನು ನಿಯಂತ್ರಣದಲ್ಲಿಡುವ 5 ಅಭ್ಯಾಸಗಳ ಬೆಳೆಸಿಕೊಳ್ಳಬೇಕು. ಅವುಗಳು ಯಾವುವು? ಇಲ್ಲಿದೆ ನೋಡಿ.

3 ತಂತ್ರ, 60 ಸೆಕೆಂಡು, ರಕ್ತದೊತ್ತಡ ನಿಯಂತ್ರಣಕ್ಕೆ ಇದು ಸೂತ್ರ
ಸಾಂದರ್ಭಿಕ ಚಿತ್ರ
ಸಾಯಿನಂದಾ
|

Updated on: May 28, 2025 | 3:04 PM

Share

ರಕ್ತದೊತ್ತಡ (Blood Pressure) ಒಂದು ರೀತಿಯ ಸೈಲೆಂಟ್ ಕ್ಲಿಲರ್, ಅದು ಹೇಗೆ ಮನುಷ್ಯನ ದೇಹವನ್ನು ಕೊಲ್ಲುತ್ತದೆ ಎಂಬುದು ಗೊತ್ತಾಗಲ್ಲ. ಅದಕ್ಕೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಕೆಲವೊಂದು ಕ್ರಮಗಳನ್ನು ಪಾಲಿಸಬೇಕು. ಕೇವಲ 60 ಸೆಕೆಂಡ್​​​ಗಳಲ್ಲಿ ಅಧಿಕ ರಕ್ತದೊತ್ತಡವನ್ನು ಹೇಗೆ ಕಡಿಮೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಈ ಸಮಸ್ಯೆ ಹೃದಯ ಮತ್ತು ಮೂತ್ರಪಿಂಡಗಳ (Lower High BP) ಆರೋಗ್ಯಕ್ಕೆ ದೊಡ್ಡ ಅಪಾಯವನ್ನುಂಟು ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ. ನೀವು ಕೂಡ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ಅದನ್ನು ಕಡಿಮೆ ಮಾಡುವ 3 ತಂತ್ರಗಳು ಇಲ್ಲಿದೆ ನೋಡಿ. ಈ ತಂತ್ರವು ಕೇವಲ 60 ಸೆಕೆಂಡುಗಳಲ್ಲಿ ರಕ್ತದೊತ್ತಡವನ್ನು ನಿಯಂತ್ರಣ ಮಾಡಬಹುದು. ಜತೆಗೆ ಇದನ್ನು ನಿಯಂತ್ರಣದಲ್ಲಿಡುವ 5 ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು.

3 ತಂತ್ರ, 60 ಸೆಕೆಂಡು, ಪೂರ್ಣ ರಕ್ತದೊತ್ತಡ ನಿಯಂತ್ರಣ

ಯೋಗೇಂದ್ರ ಪ್ರಾಣಾಯಾಮ : ಯೋಗೇಂದ್ರ ಪ್ರಾಣಾಯಾಮ ಮಾಡುವುದರಿಂದ ಹೃದಯ ಬಡಿತವನ್ನು ನಿಯಂತ್ರಿಸುವ, ಒತ್ತಡವನ್ನು ಕಡಿಮೆ ಮಾಡುವ, ಮನಸ್ಸಿಗೆ ಶಾಂತಿಯನ್ನು ತರುವ ಮತ್ತು ರಕ್ತದೊತ್ತಡವನ್ನು ಸಾಮಾನ್ಯಗೊಳಿಸಿ, ನರಮಂಡಲವನ್ನು ಸಮತೋಲನಗೊಳಿಸುತ್ತದೆ.

ಮಾಡುವುದು ವಿಧಾನ: ನಿಧಾನವಾಗಿ ಉಸಿರನ್ನು ಒಳಗೆಳೆದುಕೊಳ್ಳಿ, ಸ್ವಲ್ಪ ಹೊತ್ತು ಹಾಗೆಯೇ ಹಿಡಿದುಕೊಳ್ಳಿ, ಈ ಸಮಯದಲ್ಲಿ ಮನಸ್ಸಿನಲ್ಲಿ 1ರಿಂದ 4 ವರೆಗೆ ಎಣಿಸಿಕೊಳ್ಳಿ ಉಸಿರನ್ನು ಬಿಡಿ. ಇದನ್ನು ಒಂದು ನಿಮಿಷ ಮಾಡಿ.

ಇದನ್ನೂ ಓದಿ
Image
ಮುಟ್ಟಿದರೆ ಮುನಿಯುವ ಈ ಗಿಡದಲ್ಲಿದೆ ಹಲವು ಪ್ರಯೋಜನ
Image
ಗರ್ಭಾವಸ್ಥೆಯಲ್ಲಿ ಪತಿಯ ಬೆಂಬಲ ಹೇಗಿರಬೇಕು?
Image
ಬೆಳಗ್ಗೆ ಬೇಗ ಏಳಬೇಕು ಎಂದು ಅಲಾರಾಂ ಇಡುವವರು ಈ ಸ್ಟೋರಿ ತಪ್ಪದೆ ಓದಿ
Image
ಈ ಒಂದು ಗಿಡದ ಎಲೆ ದೇಹ ಆರೋಗ್ಯಕ್ಕೆ ರಕ್ಷಣಾ ಕವಚ

ಮುಖವನ್ನು ತಣ್ಣೀರಿನಿಂದ ತೊಳೆಯಿರಿ: ಮುಖದ ಮೇಲೆ ತಣ್ಣೀರು ಸಿಂಪಡಿಸುವುದರಿಂದ ಸಸ್ತನಿಗಳ ಡೈವ್ ರಿಫ್ಲೆಕ್ಸ್ ಸಕ್ರಿಯಗೊಳ್ಳುತ್ತದೆ, ಇದು ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ. ಇದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಮಾಡುವುದು ವಿಧಾನ: ಮುಖದ ಮೇಲೆ, ವಿಶೇಷವಾಗಿ ಹಣೆ, ಕಣ್ಣುಗಳು ಮತ್ತು ಕೆನ್ನೆಗಳ ಮೇಲೆ ತಣ್ಣೀರು ಸಿಂಪಡಿಸಬೇಕು. ಅಥವಾ ತಣ್ಣೀರಿನಲ್ಲಿ ಬಟ್ಟೆಯನ್ನು ಅದ್ದಿ ನಿಮ್ಮ ಮುಖದ ಮೇಲೆ ಇಡಬಹುದು.

ಸ್ನಾಯು ವಿಶ್ರಾಂತಿ : ನಿಮ್ಮ ದೇಹದ ವಿವಿಧ ಭಾಗಗಳ ಸ್ನಾಯುಗಳನ್ನು 5 ಸೆಕೆಂಡುಗಳ ಕಾಲ ಬಿಗಿಗೊಳಿಸಬೇಕು. ನಂತರ 30 ಸೆಕೆಂಡುಗಳ ನಂತರ ಸಡಿಲ ಮಾಡಿ.

1.ಮುಷ್ಟಿಯನ್ನು 5 ಸೆಕೆಂಡುಗಳ ಕಾಲ ಬಿಗಿಗೊಳಿಸಿ ನಂತರ ಅವುಗಳನ್ನು ಸಡಿಲಗೊಳಿಸಿ

2.ಭುಜಗಳನ್ನು ಮೇಲಕ್ಕೆ ಎತ್ತಿ, ನಂತರ ನಿಧಾನವಾಗಿ ಕೆಳಗೆ ಇಳಿಸಿ

3.ಕಾಲ್ಬೆರಳುಗಳನ್ನು ಬಿಗಿ ಮಾಡಿ, ನಂತರ ನಿಧಾನವಾಗಿ ಬಿಡಿ

ಇದನ್ನೂಓದಿ: ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಹಾರ್ವರ್ಡ್ ವೈದ್ಯರು ತಿಳಿಸಿರುವ 5 ಆಹಾರಗಳು

ಪ್ರತಿದಿನ ರಕ್ತದೊತ್ತಡ ನಿಯಂತ್ರಣ;

ಸಮತೋಲಿತ ಉಪ್ಪು ಸೇವನೆ

ನಿಯಮಿತ ವ್ಯಾಯಾಮ

ಧ್ಯಾನ ಮತ್ತು ಯೋಗ

ಒಳ್ಳೆಯ ನಿದ್ರೆ

ರಕ್ತದೊತ್ತಡ ಪರೀಕ್ಷೆ

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ