ಮತ್ತೆ ನಿಮ್ಮನ್ನು ಕೊರೊನಾ ಕಾಡಬಾರದೆಂದರೆ ತಪ್ಪದೇ ಈ ಸಲಹೆ ಪಾಲಿಸಿ
ಮಳೆಗಾಲ, ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತದೆ. ಅದಕ್ಕಾಗಿಯೇ ಈ ಸಮಯದಲ್ಲಿ ನಿರ್ಲಕ್ಷ್ಯ ಮಾಡದೆಯೇ ಜಾಗೃತೆ ವಹಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ. ಹವಾಮಾನ ಬದಲಾವಣೆಯಿಂದ ಕೊರೊನಾ ಮಾತ್ರವಲ್ಲ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಗಿದೆ. ಆಹಾರದ ಜೊತೆಗೆ ಕೆಲವು ಮುಂಜಾಗೃತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದಲ್ಲಿ ಆರೋಗ್ಯ ಕಾಪಾಡಿಕೊಳ್ಳಬಹುದು.

ರಾಜ್ಯಕ್ಕೆ ಕೊರೊನಾ ವೈರಸ್ (Covid-19) ಮತ್ತೆ ಒಕ್ಕರಿಸಿದೆ. ಸಾಮಾನ್ಯವಾಗಿ ಮಳೆ ಆರಂಭವಾಗುತ್ತಿದ್ದಂತೆಯೇ ಕೊರೊನಾ ಪ್ರಕರಣ (Corona case) ಗಳು ಜಾಸ್ತಿಯಾಗುತ್ತಿರುವುದು ಇದೆ ಮೊದಲಲ್ಲ. ಪ್ರತಿಬಾರಿಯೂ ಈ ಮಳೆಗಾಲ, ಚಳಿಗಾಲ ಆರಂಭವಾಗುವ ಸಮಯದಲ್ಲಿಯೇ ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತದೆ. ಅದಕ್ಕಾಗಿಯೇ ಈ ಸಮಯದಲ್ಲಿ ನಿರ್ಲಕ್ಷ್ಯ ಮಾಡದೆಯೇ ಜಾಗೃತೆ ವಹಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ. ಕೆಲವೊಮ್ಮೆ ಈ ಮಳೆಗೂ ಕೊರೊನಾ ವೈರಸ್ (corona virus) ಗೂ ಸಂಬಂಧವಿದೆಯೇ ಎಂಬ ಅನುಮಾನ ಕಾಡುವುದು ಸಹಜ. ಅದಲ್ಲದೆ ಮಳೆ, ಚಳಿಯಲ್ಲಿ ಸಾಮಾನ್ಯವಾಗಿ ಸೋಂಕುಗಳ ಬೆಳವಣಿಗೆ ಜಾಸ್ತಿಯಾಗಿರುತ್ತದೆ. ಇದರಿಂದ ಈ ಸಮಯದಲ್ಲಿ ನಾನಾ ರೀತಿಯ ರೋಗಗಳು ಹೆಚ್ಚಾಗುತ್ತದೆ. ಹಾಗಾಗಿ ಈ ಸಂದರ್ಭಗಳಲ್ಲಿ ಸಾಧ್ಯವಾದಷ್ಟು ರೋಗನಿರೋಧಕ ಶಕ್ತಿ (Immunity) ಯನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಬೇಕು ಅಲ್ಲದೆ ನಮ್ಮ ಆಹಾರ ಕ್ರಮಗಳನ್ನು ಆರೋಗ್ಯಕರ ರೀತಿಯಲ್ಲಿ ಬದಲಾಯಿಸಿಕೊಳ್ಳಬೇಕು.
N95 ಮಾಸ್ಕ್ ಧರಿಸಿ
ಹವಾಮಾನಕ್ಕೆ ಶೀತ, ಜ್ವರ, ವಾಂತಿ, ಕೆಮ್ಮು ಹೀಗೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಆದರೆ ಈ ಸಮಯದಲ್ಲಿ ನಾವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಮಾತ್ರ ಬಹಳ ಮುಖ್ಯವಾಗುತ್ತದೆ. ಜನಜಂಗುಳಿ ಇರುವ ಪ್ರದೇಶಗಳಿಗೆ ಹೋಗುವುದನ್ನು ಕಡಿಮೆ ಮಾಡಬೇಕು, ಅಗತ್ಯವಾಗಿ ಹೋಗಬೇಕಾದರೆ ಒಳ್ಳೆಯ ಗುಣಮಟ್ಟದ N95 ಮಾಸ್ಕ್ ಗಳನ್ನು ಬಳಕೆ ಮಾಡುವುದನ್ನು ಮರೆಯಬೇಡಿ. ಬಟ್ಟೆಗಳಿಂದ ಅಥವಾ ಇನ್ನಿತರ ಕಡಿಮೆ ಬೆಲೆಗೆ ಸಿಗುವ ಮಾಸ್ಕ್ ಅಥವಾ ಕರ್ಚಿಪ್ ಗಳನ್ನು ಬಳಕೆ ಮಾಡಬೇಡಿ. ಇದರಿಂದ ಯಾವುದೇ ರೀತಿಯ ಪ್ರಯೋಜನಗಳಿಲ್ಲ.
ಇದನ್ನೂ ಓದಿ: ಕರ್ನಾಟಕದಲ್ಲಿ ಕೊರೊನಾ ಹೆಚ್ಚಳ: ಇನ್ಮುಂದೆ ಕೋವಿಡ್ ಟೆಸ್ಟ್ ಕಡ್ಡಾಯ
ಆಹಾರಕ್ರಮ ಸರಿಯಾಗಿರಲಿ
ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಅದಕ್ಕೆ ಭಯ ಪಡುವ ಬದಲು ನಮ್ಮ ಆಹಾರ ಕ್ರಮಗಳನ್ನು ಆರೋಗ್ಯಕರವಾಗಿ ಬದಲಾವಣೆ ಮಾಡಿಕೊಳ್ಳಿ. ಸಾಧ್ಯವಾದಷ್ಟು ಹಣ್ಣು, ತರಕಾರಿಗಳ ಸೇವನೆ ಮಾಡಿ. ಅಮೃತಬಳ್ಳಿ, ಲಿಂಬು ಸೇವನೆಯನ್ನು ಹೆಚ್ಚಾಗಿ ಮಾಡಿ. ಇದರ ಜೊತೆಗೆ ವಿಟಮಿನ್ ಸಿ ಹೆಚ್ಚಾಗಿರುವ ಆಹಾರಗಳನ್ನು ತಿನ್ನಿ. ಯಾವುದೇ ಕಾರಣಕ್ಕೂ ಹೊರಗಿನ ಆಹಾರಗಳ ಸೇವನೆ ಮಾಡಬೇಡಿ. ಸಾಧ್ಯವಾದಷ್ಟು ವ್ಯಾಯಾಮ ಮಾಡಿ. ಹಾಲು, ಮೊಸರು, ಹಣ್ಣಿನ ರಸಗಳ ಸೇವನೆ ಮಾಡಿ.
ಸಣ್ಣ ಜ್ವರ ಅಥವಾ ಶೀತ ಇನ್ನಿತರ ಆರೋಗ್ಯ ಸಮಸ್ಯೆ ಕಂಡುಬಂದಾಗ ನಿರ್ಲಕ್ಷ್ಯ ಮಾಡಬೇಡಿ. ವೈದ್ಯರ ಸಂಪರ್ಕ ಮಾಡದೆಯೇ ಬೇರೆ ಬೇರೆ ಮಾತ್ರೆಗಳ ಸೇವನೆ ಮಾಡಬೇಡಿ. ಸಾಧ್ಯವಾದಷ್ಟು ಮನೆಯಲ್ಲಿ ಬಿಸಿ ಬಿಸಿಯಾಗಿರುವ ಆಹಾರಗಳ ಸೇವನೆ ಮಾಡುವ ಮೂಲಕ ಆರೋಗ್ಯವಾಗಿರಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:16 pm, Wed, 28 May 25








