ನಿಮ್ಮ ದೇಹದ ಆರೋಗ್ಯಕ್ಕೆ ದುಷ್ಟ ಶಕ್ತಿಯಾಗಿರುವ ಬಿಪಿ, ಶುಗರ್ನ್ನು ತಡೆಯುತ್ತದೆ ಬಿಂಬಳ ಕಾಯಿ
ನಮ್ಮ ಸುತ್ತಮುತ್ತ ಇರುವ ಅದೆಷ್ಟೋ ಗಿಡಗಳು ಔಷಧೀಯ ಗುಣಗಳನ್ನು ಹೊಂದಿರುತ್ತದೆ. ಅವುಗಳನ್ನು ಸರಿಯಾಗಿ ಗುರುತಿಸಿ, ಬಳಕೆ ಮಾಡುವುದು ನಮ್ಮ ಕೈಯಲ್ಲಿರುತ್ತದೆ. ಇಂತಹ ಆರೋಗ್ಯ ಗುಣಗಳು ಹೇರಳವಾಗಿರುವ ಬಿಂಬಳ ಗಿಡ ಮತ್ತು ಅದರಲ್ಲಿ ಬಿಡುವ ಬಿಂಬಳ ಕಾಯಿ ಬಗ್ಗೆ ನೀವು ಕೇಳಿರಬಹುದು. ರುಚಿಯಲ್ಲಿ ಹುಳಿಯಾಗಿದ್ದರೂ ಕೂಡ ಆರೋಗ್ಯಕರ ಗುಣಗಳು ಇದರಲ್ಲಿ ಹೇರಳವಾಗಿದೆ. ಹಾಗಾದರೆ ಇದು ಯಾವ ರೀತಿಯಲ್ಲಿ ಪ್ರಯೋಜನಕಾರಿ? ಹೇಗೆ ಬಳಕೆ ಮಾಡುವುದು ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

ಬಿಂಬಲ ಅಥವಾ ಬಿಂಬಳಕಾಯಿ (Burnt Bilimbi) ಬಗ್ಗೆ ನೀವು ಕೇಳಿರಬಹುದು. ಕರಾವಳಿ ಜಿಲ್ಲೆಗಳಲ್ಲಿ (Coastal District) ಮನೆಯ ಸುತ್ತ ಮುತ್ತ ತೋಟಗಳಲ್ಲಿ ಇದನ್ನು ಬೆಳೆಯುತ್ತಾರೆ. ರುಚಿಯಲ್ಲಿ ಹುಳಿಯಾಗಿದ್ದರೂ ಇದು ಒಂದು ರೀತಿಯ ಬಹುಪಯೋಗಿ. ಅಡುಗೆ, ಔಷಧಿ ಹೀಗೆ ಇದನ್ನು ಅನೇಕ ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಬಹುತೇಕ ವರ್ಷವೀಡಿ ಕಾಯಿ ಬಿಡುವ ಬಿಂಬಲ ಗಿಡದಲ್ಲಿ ಗೊಂಚಲು ಗೊಂಚಲಾಗಿ ಬಿಂಬಲಕಾಯಿಗಳು ಕಾಣಿಸಿಕೊಳ್ಳುತ್ತವೆ. ಇದನ್ನು ನಗರ ವಾಸಿಗಳಿಗಿಂತ ಹಳ್ಳಿಯ ಜನರೇ ಹೆಚ್ಚಾಗಿ ಉಪಯೋಗ ಮಾಡುತ್ತಾರೆ. ಇದರ ಆರೋಗ್ಯಕರ ಗುಣಗಳು ಕೂಡ ದೇಹಕ್ಕೆ ಬಹಳ ಒಳ್ಳೆಯದು. ಇದನ್ನು ಕೇವಲ ಪಲ್ಯ, ತೊಕ್ಕು, ಉಪ್ಪಿನಕಾಯಿ (pickle) ಮಾಡುವುದಕ್ಕೆ ಮಾತ್ರ ಬಳಕೆ ಮಾಡುವುದಲ್ಲ ಇದರ ಸೇವನೆಯಿಂದ ಅನೇಕ ರೀತಿಯ ಆರೋಗ್ಯ (health) ಸಮಸ್ಯೆಗಳಿಗೆ ಮುಕ್ತಿ ನೀಡಬಹುದು. ಹಾಗಾದರೆ ಇದು ಯಾವ ರೀತಿಯಲ್ಲಿ ಪ್ರಯೋಜನಕಾರಿ? ಹೇಗೆ ಬಳಕೆ ಮಾಡುವುದು ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.
ಬಿಂಬಳ ಕಾಯಿಯ ಆರೋಗ್ಯ ಪ್ರಯೋಜನ:
- ಬಿಲಿಂಬಿ ಅಥವಾ ಬಿಂಬಳ ಕಾಯಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಇದರಲ್ಲಿ ಹೇರಳವಾಗಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸೋಂಕು ನಿವಾರಕವಾಗಿ ಕಾರ್ಯ ನಿರ್ವಹಿಸುತ್ತದೆ.
- ಬಿಂಬಳ ಕಾಯಿಯ ಸೇವನೆ ರಕ್ತದೊತ್ತಡ ಇರುವವರಿಗೆ ಬಹಳ ಒಳ್ಳೆಯದು. ಸಕ್ಕರೆ ಕಾಯಿಲೆ ಇರುವವರು ಪ್ರತಿನಿತ್ಯ ಸೇವನೆ ಮಾಡಬಹುದು.
- ಬಿಂಬಲ ಕಾಯಿ ಬಿಪಿ ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುವ ಗುಣವನ್ನು ಹೊಂದಿದೆ.
- ಕ್ಯಾಲ್ಸಿಯಂ ಸಮೃದ್ಧವಾಗಿದ್ದು ನಮ್ಮ ಮೂಳೆಗಳ ಆರೋಗ್ಯಕ್ಕೂ ಬಹಳ ಒಳ್ಳೆಯದು. ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.
- ಇದು ಚರ್ಮದ ಆರೋಗ್ಯಕ್ಕೂ ಕೂಡ ಒಳ್ಳೆಯದು, ಇದರ ಸೇವನೆಯಿಂದ ಚರ್ಮ ಮೃದುವಾಗುವುದು ಮಾತ್ರವಲ್ಲ ಕಾಂತಿಯುತವಾಗುತ್ತದೆ.
ಇದನ್ನೂ ಓದಿ: ಕುದುರೆ, ಹಸುಗಳಿಗೆ ಆಹಾರವಾಗಿರುವ ಈ ದ್ವಿದಳ ಧಾನ್ಯ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ
ಅಡುಗೆಯಲ್ಲಿ ಬಿಂಬಳ ಕಾಯಿ
ಇದರಿಂದ ಕೇವಲ ಆರೋಗ್ಯ ಪ್ರಯೋಜನ ಮಾತ್ರವಲ್ಲ ಇದನ್ನು ಯಥೇಚ್ಛವಾಗಿ ಅಡುಗೆಯಲ್ಲಿಯೂ ಬಳಕೆ ಮಾಡಲಾಗುತ್ತದೆ. ಮಾವಿನಕಾಯಿ ಸಿಗದಿರುವಂತಹ ಸಂದರ್ಭಗಳಲ್ಲಿ ಇದರ ಉಪ್ಪಿನಕಾಯಿ ಮಾವಿನಮಿಡಿ ಉಪ್ಪಿನಕಾಯಿಯ ರುಚಿಯನ್ನು ನೀಡುತ್ತದೆ. ಆದರೆ ಇದನ್ನು ತುಬಾ ಸಮಯ ಇಡುವುದಕ್ಕೆ ಸಾಧ್ಯವಾಗುವುದಿಲ್ಲ. ಇದರಲ್ಲಿ ನೀರಿನಾಂಶ ಅಧಿಕವಾಗಿರುವುದರಿಂದ ಇದನ್ನು ತುಂಬಾ ಸಮಯದ ವರೆಗೆ ಶೇಖರಿಸಿ ಇಡಲು ಆಗುವುದಿಲ್ಲ. ಆದರೆ ಇದನ್ನು ರುಚಿ ರುಚಿಯಾಗಿ ಆಗ ಮಾಡಿ ಆಗ ತಿನ್ನಬಹುದು. ಇನ್ನು ಇದರಿಂದ ಮಾಡುವ ಚಟ್ನಿ ಕೂಡ ನಾಲಿಗೆಗೆ ಒಳ್ಳೆಯ ರುಚಿಯನ್ನು ನೀಡುತ್ತದೆ. ಮಾತ್ರವಲ್ಲ ಇದು ಹುಣಸೆಹಣ್ಣಿನ ಬದಲಿಯಾಗಿ ಅಡುಗೆಯಲ್ಲಿ ಬಳಕೆ ಮಾಡಲಾಗುತ್ತದೆ. ಇನ್ನು ಕೆಲವರು ಇದನ್ನು ಚಿಕ್ಕದಾಗಿ ಕತ್ತರಿಸಿ ಅದನ್ನು ಒಣಗಿಸಿ ಬಳಿಕ ಪುಡಿ ಮಾಡಿ ಅಡುಗೆಯಲ್ಲಿ ಬಳಸುತ್ತಾರೆ. ಇದನ್ನು ಆಹಾರ ಪದಾರ್ಥಗಳಲ್ಲಿ ಬಳಸುವುದರಿಂದ ರುಚಿ ದುಪ್ಪಟ್ಟಾಗುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








