AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುದುರೆ, ಹಸುಗಳಿಗೆ ಆಹಾರವಾಗಿರುವ ಈ ದ್ವಿದಳ ಧಾನ್ಯ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ

ದ್ವಿದಳ ಧಾನ್ಯಗಳ ಸೇವನೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇವುಗಳನ್ನು ಪ್ರತಿನಿತ್ಯವೂ ಸೇವನೆ ಮಾಡಬೇಕು. ಆದರೆ ದ್ವಿದಳ ಧಾನ್ಯ ಎಂದಾಕ್ಷಣ ನಮಗೆ ಹುರುಳಿ ಬಿಟ್ಟು ಬೇರೆ ಎಲ್ಲವೂ ನೆನಪಾಗುತ್ತದೆ. ಹೆಚ್ಚು ಪ್ರಚಾರವಿಲ್ಲದ ಈ ದ್ವಿದಳ ಧಾನ್ಯ ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಹಾಗಾದರೆ ಇದರ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳೇನು? ಇದರ ಸೇವನೆ ಯಾರಿಗೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

ಕುದುರೆ, ಹಸುಗಳಿಗೆ ಆಹಾರವಾಗಿರುವ ಈ ದ್ವಿದಳ ಧಾನ್ಯ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ
ಹುರುಳಿ ಆರೋಗ್ಯ ಪ್ರಯೋಜನImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: May 22, 2025 | 4:38 PM

Share

ದ್ವಿದಳ ಧಾನ್ಯಗಳು (Legume) ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂಬುದು ತಿಳಿದಿರುವ ವಿಚಾರ. ಆದರೆ ಉದ್ದು, ಕಡ್ಲೆ ಬಗ್ಗೆ ಗೊತ್ತಿರುವಷ್ಟು ಹುರುಳಿ (horse gram) ಬಗ್ಗೆ ತಿಳಿದಿಲ್ಲ. ಹೆಚ್ಚು ಪ್ರಚಾರವಿಲ್ಲದ ಈ ದ್ವಿದಳ ಧಾನ್ಯವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ನಾನಾ ರೀತಿಯ ಲಾಭಗಳಿವೆ. ಇದನ್ನು ಮನುಷ್ಯರು ತಿನ್ನುವುದಕ್ಕಿಂತ ಕುದುರೆ (horse) ಮತ್ತು ಹಸುಗಳಿಗೆ ಆಹಾರವಾಗಿ ನೀಡುವುದೇ ಹೆಚ್ಚು. ಈ ಹುರುಳಿಯು ಅತೀ ಹೆಚ್ಚು ಪ್ರೊಟಿನ್ ಯುಕ್ತ ದ್ವಿದಳ ಧಾನ್ಯವಾಗಿದ್ದು ಹೆಚ್ಚು ಬಲಯುತವಾಗಿದೆ. ಅದಕ್ಕಾಗಿಯೇ ಅದನ್ನು ರೇಸ್ ಕುದುರೆಗಳಿಗೆ ಆಹಾರವಾಗಿ ತಿನ್ನಿಸುತ್ತಾರೆ. ಆದರೆ ಇದನ್ನು ನಾವು ಕೂಡ ವಿವಿಧ ರೀತಿಯಲ್ಲಿ ಬಳಕೆ ಮಾಡಬಹುದು ಎಂಬುದನ್ನು ಮರೆಯಬಾರದು. ಏಕೆಂದರೆ ಇದರಲ್ಲಿರುವ ಔಷಧೀಯ ಗುಣಗಳು ನಮ್ಮ ಎಷ್ಟೋ ಆರೋಗ್ಯ (Health) ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾದರೆ ಇದರ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳೇನು? ಇದರ ಸೇವನೆ ಯಾರಿಗೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

ಈ ಹುರುಳಿಯ ಆರೋಗ್ಯ ಪ್ರಯೋಜನಗಳ ಬಗ್ಗೆ Gireesh Mutthu ಎಂಬ ಫೇಸ್ ಬುಕ್ ಖಾತೆಯಲ್ಲಿ ಕೆಲವು ಮಾಹಿತಿ ಹಂಚಿಕೊಳ್ಳಲಾಗಿದ್ದು, ಅದರ ಪ್ರಕಾರ, ಹುರಳಿ ಒಂದು ಪರಿಪೂರ್ಣ ಪೌಷ್ಟಿಕ ಆಹಾರವಾಗಿದ್ದು ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ ಹಾಗೂ ಪ್ರೊಟಿನ್‌‌ ಅಂಶ ಸಮೃದ್ಧವಾಗಿದೆ. ದ್ವಿದಳ ಧಾನ್ಯಗಳಲ್ಲಿಯೇ ಇದು ಅತಿ ಹೆಚ್ಚು ಕ್ಯಾಲ್ಸಿಯಂ ಅನ್ನು ಹೊಂದಿದ್ದು, ಕಡಿಮೆ ಕೊಬ್ಬು ಹಾಗೂ ಹೆಚ್ಚು ಶರ್ಕರ ಪಿಷ್ಟ (carbohydrate) ದಿಂದ ಕೊಡಿದೆ. ಅಲ್ಲದೆ ಇದರಲ್ಲಿ ಕಡಿಮೆ ಪ್ರಮಾಣದಲ್ಲಿ ಮೇದಸ್ಸು (lipid) ಮತ್ತು ಸೋಡಿಯಂ ಅಂಶವಿದ್ದು ಮಧುಮೇಹ ಮತ್ತು ಸ್ಥೂಲಕಾಯತೆ ಇರುವವರಿಗೆ ಸೂಕ್ತ ಆಹಾರವಾಗಿದೆ.

ಇದನ್ನೂ ಓದಿ: ರಕ್ತಹೀನತೆಯಿಂದ ಬಳಲುತ್ತಿರುವವರು ಹುರುಳಿ ಸೇವನೆ ಮಾಡಿ

ಇದನ್ನೂ ಓದಿ
Image
ಮುಟ್ಟಿದರೆ ಮುನಿಯುವ ಈ ಗಿಡದಲ್ಲಿದೆ ಹಲವು ಪ್ರಯೋಜನ
Image
ಗರ್ಭಾವಸ್ಥೆಯಲ್ಲಿ ಪತಿಯ ಬೆಂಬಲ ಹೇಗಿರಬೇಕು?
Image
ಬೆಳಗ್ಗೆ ಬೇಗ ಏಳಬೇಕು ಎಂದು ಅಲಾರಾಂ ಇಡುವವರು ಈ ಸ್ಟೋರಿ ತಪ್ಪದೆ ಓದಿ
Image
ಈ ಒಂದು ಗಿಡದ ಎಲೆ ದೇಹ ಆರೋಗ್ಯಕ್ಕೆ ರಕ್ಷಣಾ ಕವಚ

ಹುರುಳಿ ಆಹಾರವೋ ಅಥವಾ ಔಷಧವೋ?

ದ್ವಿದಳ ಧಾನ್ಯವಾದ ಹುರುಳಿ ಸೇವನೆ ಮಾಡುವುದರಿಂದ ಸಾಕಷ್ಟು ರೀತಿಯ ಆರೋಗ್ಯಕರ ಲಾಭಗಳಿವೆ. ಅದರಲ್ಲಿಯೂ ಕಚ್ಚಾ, ಹುರುಳಿ ಮಧುಮೇಹ ಸ್ನೇಹಿ ಆಹಾರವಾಗಿದ್ದು ಊಟವಾದ ನಂತರ ಹೆಚ್ಚಾಗುವ ಮಧುಮೇಹವನ್ನು ತಗ್ಗಿಸುವ ಸಾಮರ್ಥ್ಯವನ್ನು ಹೊಂದಿವೆ. ಅಲ್ಲದೆ ಅಸ್ತಮಾ, ಬ್ರಾಂಕೈಟಿಸ್‌, ಪಾಂಡುರೋಗ, ಮೂತ್ರ ಸೋರಿಕೆ, ಮೂತ್ರ ಪಿಂಡದ ಕಲ್ಲುಗಳು ಹಾಗೂ ಹೃದಯ ರೋಗಗಳಲ್ಲಿ ಹುರುಳಿಯನ್ನು ಹೇರಳವಾಗಿ ಉಪಯೋಗ ಮಾಡಲಾಗುತ್ತದೆ. ಕಾಮಾಲೆ ಅಥವಾ ಸ್ರಾವರೋಧ (water retention) ಗಳಿಂದ ನರಳುತ್ತಿರುವವರಿಗೆ ಆಯುರ್ವೇದ ಪಾಕಪದ್ಧತಿಯು, ಹುರುಳಿ ಸೇವನೆ ಮಾಡುವುದನ್ನು ಶಿಫಾರಸ್ಸು ಮಾಡಲಾಗುತ್ತದೆ. ಅದಲ್ಲದೆ ಕಾಮಾಲೆ, ಸಂಧಿವಾತ, ಉದರದಲ್ಲಿನ ಹುಳುಗಳು, ಕಣ್ಣಿನ ಸೋಂಕು ಹಾಗೂ ಮೂಲವ್ಯಾಧಿ ಇರುವವರಿಗೂ ಕೂಡ ಇದನ್ನು ಸೇವನೆ ಮಾಡಲು ಹೇಳಲಾಗುತ್ತದೆ. ಹುರುಳಿಯಲ್ಲಿ ಸೋಂಕು ನಿರೋಧಕ ಗುಣವಿದ್ದು ನಮ್ಮ ದೇಹ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಸ್ಥೂಲಕಾಯತೆ ಹೆಚ್ಚಾಗುವುದನ್ನು ತಡೆಯುತ್ತದೆ. ದೇಹವನ್ನು ಬೆಚ್ಚಗಿಡಲು ಇದು ಸಹಾಯ ಮಾಡುತ್ತದೆ. ಹಾಗಾಗಿ ಇವುಗಳನ್ನು ನಿಯಮಿತವಾಗಿ ಸೇವನೆ ಮಾಡಬಹುದು.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ