ಗರ್ಭಿಣಿಯರೇ… ಅವಧಿ ಪೂರ್ವ ಹೆರಿಗೆ ಆಗ್ಬಾರ್ದು ಅಂದ್ರೆ ನೀವು ಸೀಮೆ ಬದನೆಕಾಯಿಯನ್ನು ಸೇವಿಸಬೇಕಂತೆ
ಸೀಮೆ ಬದನೆಯ ಆರೋಗ್ಯ ಪ್ರಯೋಜನ: ಸೀಮೆ ಬದನೆ ಬಗ್ಗೆ ನಿಮಗೆ ತಿಳಿದಿರಬಹುದು. ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಆದರೆ ಇದರ ಪ್ರಯೋಜನಗಳ ಬಗ್ಗೆ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಬೊಜ್ಜು ಸೇರಿ ಮಾರಕ ಕ್ಯಾನ್ಸರ್ ತಡೆಗೂ ಇದು ಸಹಕಾರಿ. ಹಾಗಾದರೆ ಇವುಗಳನ್ನು ಸೇವನೆ ಮಾಡಿದರೆ ಎಷ್ಟೆಲ್ಲಾ ಲಾಭಗಳಿವೆ? ಯಾಕೆ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಪ್ರತಿನಿತ್ಯ ನಾವು ಅಡುಗೆಗೆ ವಿವಿಧ ರೀತಿಯ ತರಕಾರಿಗಳನ್ನು ಬಳಸುತ್ತೇವೆ. ಅವು ನಾಲಿಗೆಗೆ ರುಚಿ ನೀಡುವುದು ಮಾತ್ರವಲ್ಲ, ಆರೋಗ್ಯಕ್ಕೂ ಕೂಡ ಬಹಳ ಪ್ರಯೋಜನಕಾರಿಯಾಗಿದೆ. ಇಂತಹ ತರಕಾರಿಗಳಲ್ಲಿ ಸೀಮೆ ಬದನೆಯೂ (Chayote) ಒಂದು. ಇವುಗಳಲ್ಲಿ ಸಾಕಷ್ಟು ಆರೋಗ್ಯ (Health) ಪ್ರಯೋಜನಗಳಿವೆ. ಸೋರೆಕಾಯಿ (Bottle Gourd /Sorakaya) ಜಾತಿಗೆ ಸೇರಿದ ಈ ತರಕಾರಿ ಪೋಷಕಾಂಶಗಳ ಆಗರವಾಗಿದ್ದು, ಬೊಜ್ಜು ಸೇರಿ ಮಾರಕ ಕ್ಯಾನ್ಸರ್ ತಡೆಗೂ ಸಹಕಾರಿಯಾಗಿದೆ. ಹಾಗಾದರೆ ಇವುಗಳನ್ನು ಸೇವನೆ ಮಾಡಿದರೆ ಎಷ್ಟೆಲ್ಲಾ ಲಾಭಗಳಿವೆ? ಯಾಕೆ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಹೃದಯದ ಆರೋಗ್ಯಕ್ಕೆ ಪೂರಕ
ಫೈಟೊಕೆಮಿಕಲ್‌ಗಳು ಸೀಮೆ ಬದನೆಯಲ್ಲಿ ಹೆಚ್ಚಿರುವುದರಿಂದ ರಕ್ತದ ಹರಿವು ಸುಧಾರಣೆ ಮತ್ತು ರಕ್ತದ ಒತ್ತಡ ನಿಯಂತ್ರಿಸಲು ಸಹಕಾರಿಯಾಗಲಿದೆ. ಹಾಗೆಯೇ ಇದರಲ್ಲಿರುವ ಮೈರಿಸೆಟಿನ್ ಕೊಲೆಸ್ಟ್ರಾಲ್ , ಉರಿಯೂತ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಕ್ಯಾನ್ಸರ್‌ನಂತಹ ಮಾರಕ ರೋಗಗಳ ತಡೆಗೆ ನೆರವಾಗಲಿದೆ.
ಚರ್ಮದ ಕ್ಯಾನ್ಸರ್ ತಡೆಗೆ ರಾಮಬಾಣ
ಸೀಮೆ ಬದನೆಯ ಒಳ ಮತ್ತು ಹೊರ ಭಾಗದ ಸಿಪ್ಪೆಯಲ್ಲಿ ಕ್ಯಾನ್ಸರ್ ತಡೆಯಬಲ್ಲ ಆಂಟಿಆಕ್ಸಿಡೆಂಟ್ಗಳು ಹೇರಳವಾಗಿದ್ದು, ಚರ್ಮದ ಕ್ಯಾನ್ಸರ್ ತಡೆಗೆ ಇದು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.
ದೇಹದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ
ಸೀಮೆ ಬದನೆ ದೇಹದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಒಂದು ಉತ್ತಮ ತರಕಾರಿಯಾಗಿದೆ. ಫೈಬರ್ ಅಂಶ ಇದರಲ್ಲಿ ಹೆಚ್ಚಾಗಿದ್ದು, ಟೈಪ್ 2 ಡಯಾಬಿಟಿಸ್ ರೋಗಿಗಳು ಸೇವಿಸಬಹುದಾದ ಉತ್ತಮ ತರಕಾರಿಗಳಲ್ಲಿ ಇದೂ ಒಂದಾಗಿದೆ.
ಲಿವರ್ ಆರೋಗ್ಯ ಕಾಪಾಡುತ್ತೆ ಸೀಮೆ ಬದನೆ
ಲಿವರ್‌ನಲ್ಲಿ ಅನಗತ್ಯ ಕೊಬ್ಬು ಶೇಖರಣೆಯಾಗದಂತೆ ತಡೆಯುವ ಸಾಮರ್ಥ್ಯ ಈ ಸೀಮೆ ಬದನೆಗೆ ಇದೆ. ಜೊತೆಗೆ ಗರ್ಭಿಣಿಯರ ಆರೋಗ್ಯ ವೃದ್ಧಿಗೂ ಇದೊಂದು ಉತ್ತಮ ತರಕಾರಿಯಾಗಿದ್ದು, ಇದರಲ್ಲಿನ ಬಿ9 ಪ್ರೊಟೀನ್ ಭ್ರೂಣದ ಬೆಳವಣಿಗೆಗೆ ಅದರಲ್ಲೂ ಮೆದುಳು ಮತ್ತು ಬೆನ್ನುಹುರಿಯ ಬೆಳವಣಿಗೆಗೆ ನೆರವಾಗಲಿದೆ. ಇದರಿಂದಾಗಿ ಅವಧಿ ಪೂರ್ವ ಮಗು ಹುಟ್ಟುವ ಸಾಧ್ಯತೆ ಕಡಿಮೆಯಾಗುತ್ತದೆ. ಅಧ್ಯಯನದ ಪ್ರಕಾರ ಲ್ಯುಕೇಮಿಯಾ ಮತ್ತು ಗರ್ಭಕಂಠದ ಕ್ಯಾನ್ಸರ್’ನಂತಹ ಕೆಲವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಧಾನಗೊಳಿಸುವ ಅಗತ್ಯ ಪೋಷಕಾಂಶಗಳನ್ನು ಸೀಮೆ ಬದನೆಕಾಯಿ ಹೊಂದಿದೆ.
ಇದನ್ನೂ ಓದಿ: Health Tips: ಕಾಡು ಬದನೆಕಾಯಿ ಪ್ರಯೋಜನ ಕೇಳಿದ ಮೇಲೆ ಇದನ್ನು ತಿಂದೆ ತಿನ್ನುತ್ತೀರಿ!
ಸೀಮೆ ಬದನೆಯಲ್ಲಿರುವ ಆಂಟಿಆಕ್ಸಿಡೆಂಟ್ಗಳು ಮತ್ತು ಪೋಷಕಾಂಶಗಳು ಜೀವಕೋಶಗಳ ಮೇಲಾಗುವ ಹಾನಿ ತಪ್ಪಿಸಲು ನೆರವಾಗುತ್ತವೆ. ಇದರಿಂದ ದೇಹದ ವಯಸ್ಸಾಗುವಿಕೆ ನಿಧಾನಗೊಳ್ಳಲಿದೆ ಎಂಬುದನ್ನ ಹಲವು ಅಧ್ಯಯನಗಳು ಹೇಳಿವೆ. ಅಲ್ಲದೆ ಉರಿಯೂತ ಸಮಸ್ಯೆಗೂ ಈ ಸೀಮೆ ಬದನೆ ರಾಮಬಾಣ. ವಿಟಮಿನ್ ಸಿ ಇದರಲ್ಲಿ ಸಮೃದ್ಧವಾಗಿದ್ದು ಮಳೆಗಾಲ ಮತ್ತು ಚಳಿಗಾಲದಲ್ಲಿ ಸಾಮಾನ್ಯವಾಗಿ ಕಂಡು ಬರುವ ವಿವಿಧ ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳ ವಿರುದ್ಧ ಹೋರಾಡಲು ಈ ತರಕಾರಿ ನಿಮಗೆ ನೆರವಾಗಲಿದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




