Health Tips: ಕಾಡು ಬದನೆಕಾಯಿ ಪ್ರಯೋಜನ ಕೇಳಿದ ಮೇಲೆ ಇದನ್ನು ತಿಂದೆ ತಿನ್ನುತ್ತೀರಿ!
ಈ ಬದನೆ ಸಿಕ್ಕಲ್ಲಿ ತಂದು ವಿವಿಧ ಬಗೆಯ ಅಡುಗೆ ಮಾಡಿ ಇದರ ರುಚಿ ನೋಡಬಹುದು. ಇದರಲ್ಲಿ ಪಲ್ಯ, ಸಾಂಬಾರ್, ಸಾಸಿಮೆ, ಚಟ್ನಿ ಮತ್ತು ಉಪ್ಪಿನಕಾಯಿಯನ್ನು ಮಾಡುತ್ತಾರೆ. ಜೊತೆಗೆ ಅನ್ನ, ಚಪಾತಿ, ನೀರುದೋಸೆ, ಅಕ್ಕಿರೊಟ್ಟಿಯೊಂದಿಗೆ ಕಾಡು ಬದನೆಯನ್ನು ಸವಿಯಬಹುದಾಗಿದೆ. ಇವು ನಿಮಗೆ ಒಳ್ಳೆಯ ರುಚಿ ನೀಡುವುದರ ಜೊತೆಗೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ.
ಕಾಡುಬದನೆ ಅಥವಾ ಗುಳ್ಳ ಬದನೆಕಾಯಿ ಎಂಬ ಹೆಸರನ್ನು ಕೇಳಿರಬಹುದು. ಹಿಂದಿನವರು ಇದರಿಂದ ರುಚಿರುಚಿಯಾದ ಖಾದ್ಯಗಳನ್ನು ತಯಾರಿಸಿ ಸವಿಯುತ್ತಿದ್ದರು. ಆದರೆ ಇಂದಿನವರಿಗೆ ಈ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಇದರಲ್ಲಿ ಹೇರಳವಾದ ಖನಿಜಾಂಶಗಳಿವೆ. ಸಂಸ್ಕ್ರತದಲ್ಲಿ ಇದನ್ನು ಬೃಹತಿ ಎಂದು ಕರೆಯಲಾಗುತ್ತದೆ. ಈ ಗಿಡದ ಬೇರು ಮತ್ತು ಕಾಯಿ ತುಂಬಾ ಕಾಯಿಲೆಗಳನ್ನು ಗುಣಪಡಿಸುವ ದಿವ್ಯಔಷಧವಾಗಿದೆ.
ಈ ಬದನೆಯನ್ನು ಮನೆಗಳಲ್ಲಿ ಬೆಳೆಸುವ ಅವಶ್ಯಕೆತೆ ಇಲ್ಲ. ಕಾಗೆ ಇನ್ನಿತರ ಪಕ್ಷಿಗಳು ತಿಂದು ಬಿಸಾಕಿದಾಗ ಬೀಜ ಅಲ್ಲಿಯೇ ಹುಟ್ಟಿಕೊಂಡು ಚೆನ್ನಾಗಿ ಬೆಳೆಯುತ್ತದೆ. ಇದಕ್ಕೆ ಹೆಚ್ಚಿನ ನೀರಿನ ಅವಶ್ಯಕತೆ ಇಲ್ಲವಾದದ್ದರಿಂದ ಇದು ದಾರಿ ಬದಿಗಳಲ್ಲಿ ಸೊಂಪಾಗಿ ಬೆಳೆಯುತ್ತದೆ. ಹಾಗಾಗಿ ಈ ಬದನೆ ನಿಮಗೆ ಅಲ್ಲಲ್ಲಿ ಕಾಣಸಿಗುತ್ತದೆ. ಆದರೆ ಇದನ್ನು ಹೇಗೆ ಉಪಯೋಗಿಸುತ್ತಾರೆ ಎಂಬುದು ಕೆಲವರಿಗೆ ಮಾತ್ರ ತಿಳಿದಿರದ ಕಾರಣ ಹೆಚ್ಚಿನ ಬಳಕೆ ಇಲ್ಲ. ನಿಮಗೂ ಈ ಬದನೆ ಸಿಕ್ಕಲ್ಲಿ ತಂದು ವಿವಿಧ ಬಗೆಯ ಅಡುಗೆ ಮಾಡಿ ಇದರ ರುಚಿ ನೋಡಬಹುದು. ಇದರಲ್ಲಿ ಪಲ್ಯ, ಸಾಂಬಾರ್, ಸಾಸಿಮೆ, ಚಟ್ನಿ ಮತ್ತು ಉಪ್ಪಿನಕಾಯಿಯನ್ನು ಮಾಡುತ್ತಾರೆ. ಜೊತೆಗೆ ಅನ್ನ, ಚಪಾತಿ, ನೀರುದೋಸೆ, ಅಕ್ಕಿರೊಟ್ಟಿಯೊಂದಿಗೆ ಕಾಡು ಬದನೆಯನ್ನು ಸವಿಯಬಹುದಾಗಿದೆ. ಇವು ನಿಮಗೆ ಒಳ್ಳೆಯ ರುಚಿ ನೀಡುವುದರ ಜೊತೆಗೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ.
ಕಾಡುಬದನೆಯ ಪ್ರಯೋಜನಗಳೇನು?
ಈ ಗಿಡದ ಬೇರಿನಿಂದ ಕಷಾಯ ಮಾಡಿಕೊಂಡು ಕುಡಿಯುವುದರಿಂದ ಮೂತ್ರದಲ್ಲಿನ ಕಲ್ಲಿಗೆ, ಉರಿ ಮೂತ್ರಕ್ಕೆ, ಮೂತ್ರದ ಸೋಂಕಿಗೆ ಒಳ್ಳೆಯ ಔಷಧವಾಗಿದೆ. ಇನ್ನು ಕಾಡು ಬದನೆ ಉತ್ತಮ ತರಕಾರಿಯಾಗಿದ್ದು ಪೋಷಕಾಂಶಗಳು, ಖನಿಜಗಳು ಮತ್ತು ಕಬ್ಬಿಣದ ಅಂಶಗಳಿಂದ ಸಮೃದ್ಧವಾಗಿದೆ. ಇದು ದೇಹಕ್ಕೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: