Stomach flu: ನಿಮ್ಮ ಮಕ್ಕಳಿಗೆ ಹೊಟ್ಟೆ ನೋವು ಬಂದರೆ ನಿರ್ಲಕ್ಷಿಸಬೇಡಿ, ಈ ರೀತಿ ಮಾಡಿ

ಮಕ್ಕಳಲ್ಲಿ ಹೊಟ್ಟೆ ನೋವು, ವಾಂತಿ ಮತ್ತು ಅತಿಸಾರದಿಂದ ರೋಗಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತಿದ್ದು ಇದು ಮಕ್ಕಳಿಗೆ ಹೊಟ್ಟೆಯಲ್ಲಿ ಜ್ವರವಿರುವ ಲಕ್ಷಣವಾಗಿದೆ ಎಂದು ವೈದ್ಯರು ಹೇಳುತ್ತಾರೆ. ಮಗುವು ಇಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. ಅಜಾಗರೂಕತೆಯಿಂದಾಗಿ ನಿಮ್ಮ ಮಗುವಿನ ಆರೋಗ್ಯ ಹದಗೆಡಬಹುದು.

Stomach flu: ನಿಮ್ಮ ಮಕ್ಕಳಿಗೆ ಹೊಟ್ಟೆ ನೋವು ಬಂದರೆ ನಿರ್ಲಕ್ಷಿಸಬೇಡಿ, ಈ ರೀತಿ ಮಾಡಿ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: May 30, 2024 | 6:14 PM

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಶಾದಿಂದಾಗಿ ಅನೇಕ ರೀತಿಯ ರೋಗಗಳು ಕಂಡು ಬರುತ್ತಿದೆ. ವಾಂತಿ, ಅತಿಸಾರ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಗಮನಾರ್ಹವಾಗಿ ಹೆಚ್ಚಾಗಿದೆ. ಅದರಲ್ಲಿಯೂ ಈ ಋತುವಿನಲ್ಲಿ ಮಕ್ಕಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರಸ್ತುತ, ಇಂತಹ ಅನೇಕ ಪ್ರಕರಣಗಳು ಹೆಚ್ಚುತ್ತಿದ್ದು ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡುತ್ತಿದ್ದಾರೆ. ಮಕ್ಕಳಲ್ಲಿ ಹೊಟ್ಟೆ ನೋವು, ವಾಂತಿ ಮತ್ತು ಅತಿಸಾರದಿಂದ ರೋಗಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತಿದ್ದು ಇದು ಮಕ್ಕಳಿಗೆ ಹೊಟ್ಟೆಯಲ್ಲಿ ಜ್ವರವಿರುವ ಲಕ್ಷಣವಾಗಿದೆ ಎಂದು ವೈದ್ಯರು ಹೇಳುತ್ತಾರೆ. ಮಗುವು ಇಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. ಅಜಾಗರೂಕತೆಯಿಂದಾಗಿ ನಿಮ್ಮ ಮಗುವಿನ ಆರೋಗ್ಯ ಹದಗೆಡಬಹುದು.

ಡಾ. ರಾಕೇಶ್ ಬಾಗ್ರಿ ಅವರು ಹೇಳುವ ಪ್ರಕಾರ ತೀವ್ರ ಶಾಖದಿಂದಾಗಿ ವೈರಲ್ ಗ್ಯಾಸ್ಟ್ರೋಎಂಟರೈಟಿಸ್ ಸಮಸ್ಯೆ ಹೆಚ್ಚಾಗುತ್ತಿದೆ. ಇದು ಹೊಟ್ಟೆಗೆ ಸಂಬಂಧ ಪಟ್ಟ ಕಾಯಿಲೆಯಾಗಿದ್ದು, ಇದನ್ನು ಹೊಟ್ಟೆ ಜ್ವರ ಎಂದು ಕರೆಯಲಾಗುತ್ತದೆ. ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬರುವ ಮೂಲಕ ಅಥವಾ ಕಲುಷಿತ ಆಹಾರ ಮತ್ತು ನೀರನ್ನು ಸೇವಿಸುವ ಮೂಲಕ ಈ ರೋಗವು ಬರಬಹುದು. ವೈರಲ್ ಗ್ಯಾಸ್ಟ್ರೋಎಂಟರೈಟಿಸ್ಗೆ ಯಾವುದೇ ಪರಿಣಾಮಕಾರಿ ಚಿಕಿತ್ಸೆ ಇಲ್ಲ, ಆದ್ದರಿಂದ ತಡೆಗಟ್ಟುವುದು ಬಹಳ ಮುಖ್ಯ.

ಆಹಾರವು ಹೊಟ್ಟೆ ಜ್ವರಕ್ಕೆ ಹೇಗೆ ಕಾರಣವಾಗುತ್ತದೆ?

ಬೇಸಿಗೆಯಲ್ಲಿ ಆಹಾರವು ಬೇಗನೆ ಹಾಳಾಗುವುದರಿಂದ, ನೊರೊವೈರಸ್ ಮತ್ತು ಆಸ್ಟ್ರೋವೈರಸ್ ಆಹಾರದ ಮೇಲೆ ಬೆಳೆಯಲು ಪ್ರಾರಂಭಿಸುತ್ತವೆ. ಮಗುವು ಇಂತಹ ಕಲುಷಿತ ಆಹಾರವನ್ನು ಸೇವಿಸಿದರೆ, ಈ ಬ್ಯಾಕ್ಟೀರಿಯಾಗಳು ಅವರ ದೇಹವನ್ನು ಪ್ರವೇಶಿಸಿ, ಹೊಟ್ಟೆಯ ಸೋಂಕಿಗೆ ಕಾರಣವಾಗುತ್ತವೆ. ಈ ಕಾರಣದಿಂದಾಗಿ ಈ ರೀತಿಯ ಸಮಸ್ಯೆ ಉಂಟಾಗುತ್ತದೆ. ಈ ರೋಗವು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಇದರ ಪ್ರಕರಣಗಳು ಪ್ರತಿವರ್ಷ ಬೇಸಿಗೆ ಮತ್ತು ಮಳೆಗಾಲದ ಸಮಯದಲ್ಲಿ ಹೆಚ್ಚಾಗಿ ವರದಿಯಾಗುತ್ತವೆ.

ಹೊಟ್ಟೆಯ ಸೋಂಕು ಏಕೆ ಉಂಟಾಗುತ್ತದೆ?

ಹಳಸಿದ ಆಹಾರವನ್ನು ತಿನ್ನುವ ಮೂಲಕ, ಬ್ಯಾಕ್ಟೀರಿಯಾವು ಕರುಳನ್ನು ಪ್ರವೇಶಿಸುತ್ತದೆ. ಕರುಳಿನ ಸೋಂಕುಗಳಲ್ಲಿ ನೀರಿನ ಅತಿಸಾರ, ಹೊಟ್ಟೆ ಸೆಳೆತ, ವಾಕರಿಕೆ ಅಥವಾ ವಾಂತಿ, ಮತ್ತು ಕೆಲವೊಮ್ಮೆ ಜ್ವರದಂತಹ ರೋಗಲಕ್ಷಣಗಳು ಕಂಡುಬರಬಹುದು. ಈ ರೀತಿಯ ರೋಗಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಚಿಕಿತ್ಸೆ ಪಡೆಯುವುದು ಮುಖ್ಯ.

ಇದನ್ನೂ ಓದಿ: ಯುವಜನತೆ ಮೆದುಳಿನ ಪಾರ್ಶ್ವವಾಯುವಿಗೆ ಬಲಿಯಾಗುತ್ತಿರುವುದೇಕೆ? ಇದನ್ನು ತಡೆಯುವುದು ಹೇಗೆ?

ರೋಗಲಕ್ಷಣಗಳು ಯಾವುವು?

*ಹಸಿವಾಗದಿರುವುದು *ಹೊಟ್ಟೆ ನೋವು *ವಾಂತಿ ಮತ್ತು ಅತಿಸಾರ *ಜ್ವರ *ಸ್ನಾಯು ಸೆಳೆತ *ಅತಿಯಾದ ಬೆವರುವಿಕೆ

ಹೇಗೆ ರಕ್ಷಿಸಿಕೊಳ್ಳುವುದು?

*ಯಾವಾಗಲೂ ತಾಜಾ ಆಹಾರವನ್ನು ಸೇವಿಸಿ.

*ನಿಮಗೆ ಹೊಟ್ಟೆ ನೋವು ಇದ್ದರೆ ವೈದ್ಯರನ್ನು ಸಂಪರ್ಕಿಸಿ

*ಬೀದಿ ಬದಿ ಆಹಾರವನ್ನು ತಿನ್ನುವುದನ್ನು ತಪ್ಪಿಸಿ.

*ಸರಳವಾದ ಆಹಾರಗಳನ್ನು ಸೇವಿಸಿ. ಅಂದರೆ ಬಾಳೆಹಣ್ಣು, ಅನ್ನ ಇತ್ಯಾದಿ.

*ಆರೋಗ್ಯಕರವಾದ ಪಾನೀಯಗಳು, ಎಳನೀರು, ಹಣ್ಣಿನ ರಸ ಇತ್ಯಾದಿಗಳನ್ನು ಸೇವಿಸುವುದು ಅವಶ್ಯಕವಾಗಿದೆ.

*ಈ ಸಮಯದಲ್ಲಿ ನಿದ್ರೆ ಮತ್ತು ವಿಶ್ರಾಂತಿ ಬಹಳ ಅವಶ್ಯಕ.

ಈ ಪ್ರಕರಣಗಳು ಪ್ರತಿ ವರ್ಷ ಮಕ್ಕಳಲ್ಲಿ ಕಂಡುಬರುತ್ತವೆ. ಈ ರೋಗವು ಗಂಭೀರವಲ್ಲ, ಆದರೆ ಸಮಯೋಚಿತ ಚಿಕಿತ್ಸೆ ಪಡೆಯುವುದು ಮುಖ್ಯ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ