ICMR Dietary Guidelines Part 17 : ಪ್ಯಾಕ್ ಮಾಡಿದ ಆಹಾರಗಳಲ್ಲಿ ಖರೀದಿಸುವಾಗ ಈ ವಿಚಾರಗಳು ತಲೆಯಲ್ಲಿರಲಿ, ಐಸಿಎಂಆರ್ ಹೇಳುವುದೇನು?

ಇತ್ತೀಚೆಗಿನ ದಿನಗಳಲ್ಲಿ ಕಳಪೆ ಗುಣಮಟ್ಟ ಹಾಗೂ ಕಲಬೆರಕೆಯುಕ್ತ ಆಹಾರ ಪದಾರ್ಥಗಳ ಸೇವನೆಯು ಹೆಚ್ಚಾಗುತ್ತಿದೆ. ಹೀಗಾಗಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತಿದೆ. ಆದರೆ ಇತ್ತೀಚೆಗಷ್ಟೇ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್, ತಿಳುವಳಿಕೆಯುಳ್ಳ ಮತ್ತು ಆರೋಗ್ಯಕರ ಆಹಾರದ ಆಯ್ಕೆಗಳನ್ನು ಮಾಡಲು ಮತ್ತು ಆಹಾರ ಲೇಬಲ್‌ಗಳ ಮಾಹಿತಿಯನ್ನು ಎಚ್ಚರಿಕೆಯಿಂದ ಓದಲು ಜನರಿಗೆ ಸಲಹೆಯನ್ನು ನೀಡಿದೆ.

ICMR Dietary Guidelines Part 17 : ಪ್ಯಾಕ್ ಮಾಡಿದ ಆಹಾರಗಳಲ್ಲಿ ಖರೀದಿಸುವಾಗ ಈ ವಿಚಾರಗಳು ತಲೆಯಲ್ಲಿರಲಿ, ಐಸಿಎಂಆರ್ ಹೇಳುವುದೇನು?
ICMR Dietary Guidelines
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on: May 29, 2024 | 6:23 PM

ಇತ್ತೀಚೆಗಿನ ದಿನಗಳಲ್ಲಿ ಎಲ್ಲರೂ ಕೂಡ ಒತ್ತಡ ಭರಿತ ಜೀವನ ಶೈಲಿಯಿಂದಾಗಿ ಯಾವುದಕ್ಕೂ ಕೂಡ ಸಮಯವಿಲ್ಲ. ಹೀಗಾಗಿ ಆರೋಗ್ಯದ ಕಾಳಜಿ ವಹಿಸಿದರೂ ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದ ಆರೋಗ್ಯ ಸಮಸ್ಯೆಯು ಬರುತ್ತದೆ. ಆದರೆ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳನ್ನು ಖರೀದಿಸುವಾಗ ಲೇಬಲ್ ಗಳನ್ನು ಪರೀಕ್ಷಿಸಿ ಖರೀದಿಸಬೇಕು. ಆದರೆ ಗ್ರಾಹಕರನ್ನು ಈ ಆಹಾರದ ಮೇಲಿರುವ ಲೇಬಲ್‌ಗಳು ತಪ್ಪುದಾರಿಗೆಳೆಯಬಹುದು ಎಂದು ಎಚ್ಚರಿಸಿದೆ. ಹೀಗಾಗಿ ಗ್ರಾಹಕರು ಕೇವಲ ಲೋಗೋಗಳನ್ನು ಅವಲಂಬಿಸುವ ಬದಲು ವಿವರವಾದ ಮಾಹಿತಿಯನ್ನು ಓದಬೇಕೆಂದು ಐಸಿಎಂಆರ್ ಬಿಡುಗಡೆ ಮಾಡಿದ ಆಹಾರ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ಪ್ಯಾಕ್ ಮಾಡಿದ ಆಹಾರಗಳಲ್ಲಿ ಖರೀದಿಸುವಾಗ ಈ ಬಗ್ಗೆ ಗಮನಹರಿಸಿ:

ಪ್ಯಾಕ್ ಮಾಡಿದ ಆಹಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮೊದಲಿಗಿಂತ ಉತ್ತಮ ರೀತಿಯಲ್ಲಿ ನೀಡಲಾಗಿರುತ್ತದೆ. ಹೀಗಾಗಿ ಓದಲು ಮತ್ತು ಅರ್ಥಮಾಡಿಕೊಳ್ಳಲು ಸುಲಭವಾದ ಮಾಹಿತಿಯನ್ನು ಪ್ಯಾಕಿಂಗ್‌ನಲ್ಲಿರುವ ಲೇಬಲ್ ಮೂಲಕ ನೀಡಲಾಗುತ್ತದೆ. ಆಹಾರ ಲೇಬಲ್‌ಗಳು ಆಹಾರದ ಹೆಸರು, ಪದಾರ್ಥಗಳ ಪಟ್ಟಿ, ನಿವ್ವಳ ತೂಕ, ಬ್ರಾಂಡ್ ಹೆಸರು, ತಯಾರಕರ ಹೆಸರು, ವಿಳಾಸ, ತಯಾರಿಕೆಯ ದಿನಾಂಕ, ಬಳಕೆ ಹಾಗೂ ಮುಕ್ತಾಯ ದಿನಾಂಕ, ಶೇಖರಣಾ ಸೂಚನೆಗಳು ಹಾಗೂ ಆಹಾರದ ಶೆಲ್ಫ್-ಲೈಫ್ ಈ ಎಲ್ಲಾ ವಿಷಯಗಳ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದೆ.

ಗ್ರಾಹಕರನ್ನು ಸೆಳೆಯಲು ಆಕರ್ಷಕ ಲೇಬಲ್‌ಗಳ ಬಳಕೆ:

ಪ್ಯಾಕ್ ಮಾಡಲಾದ ಆಹಾರದ ಮೇಲಿರುವ ಲೇಬಲ್ ಗಳನ್ನು, ಆಹಾರ ಉತ್ಪನ್ನವು ಆರೋಗ್ಯಕರ ಮತ್ತು ಉತ್ತಮವಾಗಿದೆ ಎಂದು ಗ್ರಾಹಕರಿಗೆ ಮನವರಿಕೆ ಮಾಡಲು ವಿನ್ಯಾಸಗೊಳಿಸಲಾಗಿದೆ ಎಂದು ವೈದ್ಯಕೀಯ ಮಂಡಳಿಯ ವರದಿ ಹೇಳಿದೆ. ಸಕ್ಕರೆ-ಮುಕ್ತ ಆಹಾರಗಳು ಕೊಬ್ಬಿನಿಂದ ಕೂಡಿರಬಹುದು. ಇಲ್ಲವಾದರೆ ಪ್ಯಾಕೇಜ್ ಮಾಡಿದ ಹಣ್ಣಿನ ರಸಗಳು ಕೇವಲ 10 ಪ್ರತಿಶತದಷ್ಟು ಹಣ್ಣುಗಳನ್ನು ಮಾತ್ರ ಹೊಂದಿರಬಹುದು ಎಂದು ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಊಟದ ಬಳಿಕ ನಡೆಯುವುದು ದೇಹಕ್ಕೆ ಎಷ್ಟು ಮುಖ್ಯ ಗೊತ್ತಾ?

ನೈಸರ್ಗಿಕ ಉತ್ಪನ್ನಗಳನ್ನು ಗುರುತಿಸುವುದೇಗೆ?

“ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಕಟ್ಟುನಿಟ್ಟಾದ ನಿಯಮಗಳನ್ನು ಹೊಂದಿದೆ ಆದರೆ ಲೇಬಲ್‌ಗಳ ಮೇಲೆ ಬರೆಯಲಾದ ಮಾಹಿತಿಯಲ್ಲಿದ್ದಂತೆ ಆಹಾರ ಪದಾರ್ಥಗಳ ಪ್ರಮಾಣವು ಇರುತ್ತದೆ ಎಂದು ಹೇಳುವುದು ಕಷ್ಟ. ಒಂದು ವೇಳೆ ನೀವು ಖರೀದಿಸುವ ಪ್ಯಾಕ್ ಮಾಡಿದ ಆಹಾರ ಉತ್ಪನ್ನಗಳಲ್ಲಿ ಬಣ್ಣಗಳ ಸೇರ್ಪಡೆ, ಸುವಾಸನೆಗಳು ಅಥವಾ ಕೃತಕ ಪದಾರ್ಥಗಳನ್ನು ಹೊಂದಿಲ್ಲದಿದ್ದರೆ ಮತ್ತು ಕನಿಷ್ಠ ಸಂಸ್ಕರಣೆಗೆ ಒಳಗಾಗಿದ್ದರೆ ಮಾತ್ರ ಅದನ್ನು ‘ನೈಸರ್ಗಿಕ’ ಎಂದು ಕರೆಯಬಹುದು ಎಂದು ತಿಳಿಸಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ