- Kannada News Photo gallery Rajaneesh and Nagashree starrer Jalapatha Kannada movie to tell the story of nature and lifestyle
ಜೀವನ ಶೈಲಿ, ಆಹಾರ ಕ್ರಮದ ಬಗ್ಗೆ ‘ಜಲಪಾತ’ ಸಿನಿಮಾ; ಡಿಫರೆಂಟ್ ಪರಿಕಲ್ಪನೆಯಲ್ಲಿ ಬರಲಿದೆ ಕನ್ನಡ ಚಿತ್ರ
ಜಲಪಾತ ಚಿತ್ರದಲ್ಲಿ ರಜನೀಶ್ ಮತ್ತು ನಾಗಶ್ರೀ ಅವರು ಜೋಡಿಯಾಗಿ ನಟಿಸುತ್ತಿದ್ದಾರೆ. ರಮೇಶ್ ಬೇಗಾರ್ ನಿರ್ದೇಶನದ ಈ ಸಿನಿಮಾವನ್ನು ರವೀಂದ್ರ ತುಂಬರಮನೆ ನಿರ್ಮಾಣ ಮಾಡುತ್ತಿದ್ದಾರೆ.
Updated on: Apr 06, 2023 | 6:44 PM

ಪ್ರಮೋದ್ ಶೆಟ್ಟಿ ಅಭಿನಯದ ‘ವೈಶಂಪಾಯನ ತೀರ’ ಚಿತ್ರವನ್ನು ನಿರ್ದೇಶಿಸಿದ್ದ ರಮೇಶ್ ಬೇಗಾರ್ ಅವರು ಈಗ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದ ಶೀರ್ಷಿಕೆ ‘ಜಲಪಾತ’. ಇದರಲ್ಲಿ ಪರಿಸರ ಮತ್ತು ಮನುಷ್ಯನಿಗೆ ಸಂಬಂಧಿಸಿದ ಅಂಶಗಳು ಇರಲಿವೆ ಎಂಬುದು ವಿಶೇಷ.

ಇಂದಿನ ಬ್ಯುಸಿ ಬದುಕಿನಲ್ಲಿ ಜನರಿಗೆ ಮಾನಸಿಕ ಒತ್ತಡ ಹೆಚ್ಚುತ್ತಿದೆ. ನಿಸರ್ಗದಲ್ಲಿ ಮಾತ್ರ ಅದಕ್ಕೆ ಪರಿಹಾರ ಸಿಗಲು ಸಾಧ್ಯ. ಪ್ರಕೃತಿ, ಜನರ ಜೀವನ ಶೈಲಿ ಹಾಗೂ ಆಹಾರ ಕ್ರಮದ ಕುರಿತಾದ ಕಥೆ ‘ಜಲಪಾತ’ ಸಿನಿಮಾದಲ್ಲಿ ಇರಲಿದೆ. ಈ ಸಿನಿಮಾದಲ್ಲಿ ರಜನೀಶ್ ಅವರು ನಾಯಕನಾಗಿ ನಟಿಸುತ್ತಿದ್ದಾರೆ.

ಹಲವು ದಶಕಗಳ ಹಿಂದೆ ಭಾರತದ ಆಹಾರ ಪದ್ಧತಿಯೇ ಜಗತ್ತಿನಲ್ಲಿ ಹೆಚ್ಚು ಆರೋಗ್ಯಕರ ಎನ್ನಲಾಗುತ್ತಿತ್ತು. ಆದರೆ ಈಗ ಮಣ್ಣಿನಲ್ಲಿ ಸತ್ವ ಇಲ್ಲ. ಆಹಾರದಲ್ಲಿ ಕಲಬೆರಿಕೆ ಮತ್ತು ರಾಸಾಯನಿಕ ವಸ್ತುಗಳ ಬಳಕೆ ಅತಿ ಆಗಿದೆ. ಪೂರ್ವಿಕರ ಜೀವನ ಶೈಲಿ ಹಾಗೂ ಆಹಾರ ಪದ್ದತಿ ಮತ್ತೆ ಮರುಕಳಿಸಬೇಕು ಎಂಬುದು ‘ಜಲಪಾತ’ ಚಿತ್ರತಂಡದ ಉದ್ದೇಶ.

ಜಲಪಾತ ಚಿತ್ರದಲ್ಲಿ ರಜನೀಶ್ ಜೊತೆಗೆ ನಾಗಶ್ರೀ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮದ್ದೂರಿನ ಮಧುವನದಲ್ಲಿ ಈ ಸಿನಿಮಾದ ದೃಶ್ಯಗಳನ್ನು ಶೂಟಿಂಗ್ ಮಾಡಲಾಗುತ್ತಿದೆ. ಇದಲ್ಲದೇ, ಶೃಂಗೇರಿ ಸುತ್ತಮುತ್ತ 15 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.

ರವೀಂದ್ರ ತುಂಬರಮನೆ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಬೇರೆ ಬೇರೆ ಕಥೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತದೆ. ಆದರೆ ಪರಿಸರ ಕಾಳಜಿ, ಆಹಾರ ಪದ್ಧತಿ, ಜೀವನ ಶೈಲಿಯ ಕುರಿತ ಕಥೆಯನ್ನು ‘ಜಲಪಾತ’ ಸಿನಿಮಾ ಮೂಲಕ ಹೇಳಲು ಹೊರಟಿರುವುದು ಇಂಟರೆಸ್ಟಿಂಗ್ ಎನಿಸಿದೆ.




