AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಳಿಗಾಲದಲ್ಲಿ ತಣ್ಣೀರಿನ ಸ್ನಾನ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸಬಹುದು ಹುಷಾರ್!

ಚಳಿಗಾಲದಲ್ಲಿ, ಕೆಲವರು ತಣ್ಣೀರಿನಿಂದ ಸ್ನಾನ ಮಾಡುತ್ತಾರೆ, ಆದರೆ ತಣ್ಣೀರಿನಿಂದ ಸ್ನಾನ ಮಾಡುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಒಳ್ಳೆಯದು. ಈ ಸಮಯದಲ್ಲಿ ನೀವು ನಿರ್ಲಕ್ಷ್ಯ ವಹಿಸಿದರೆ, ಪಾರ್ಶ್ವವಾಯು ಸೇರಿದಂತೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಬಗ್ಗೆ ತಜ್ಞರು ಹಂಚಿಕೊಂಡಿರುವ ಮಾಹಿತಿ ಇಲ್ಲಿದೆ.

ಚಳಿಗಾಲದಲ್ಲಿ ತಣ್ಣೀರಿನ ಸ್ನಾನ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸಬಹುದು ಹುಷಾರ್!
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jan 08, 2025 | 5:42 PM

Share

ಚಳಿಗಾಲದ ಸಮಯದಲ್ಲಿ ಅದರಲ್ಲೂ ಮೈ ಕೊರೆಯುವ ಚಳಿ ಇದ್ದಾಗಲೂ ಕೂಡ ಅನೇಕರು ತಣ್ಣೀರಿನಿಂದ ಸ್ನಾನ ಮಾಡಲು ಇಷ್ಟಪಡುತ್ತಾರೆ. ತಂಪಾದ ನೀರಿನಿಂದ ಸ್ನಾನ ಮಾಡುವುದು ದೇಹಕ್ಕೆ ಒಂದು ರೀತಿಯ ತಾಜಾತನದ ಜೊತೆಗೆ ಉಲ್ಲಾಸ ನೀಡುತ್ತದೆ ಎಂಬ ಭಾವನೆ ಹಲವರದ್ದು, ಆದರೆ ನಿಮಗೆ ಗೊತ್ತಾ? ಕೆಲವು ಬಾರಿ ಈ ರೀತಿಯ ಅಭ್ಯಾಸ ಆರೋಗ್ಯಕ್ಕೂ ಅಪಾಯಕಾರಿಯಾಗಬಹುದು. ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಇದು ನಿಮಗೆ ಆಶ್ಚರ್ಯ ಎನಿಸಬಹುದು ಆದರೆ ಇದು ಸತ್ಯ. ಕೆಲವು ಸಂಶೋಧನೆಗಳಿಂದಲೂ ಇದು ಸಾಬೀತಾಗಿದೆ. ಹಾಗಾದರೆ ಮೆದುಳಿನ ಪಾರ್ಶ್ವವಾಯು ಎಂದರೇನು? ತಣ್ಣೀರಿನ ಸ್ನಾನಕ್ಕೂ ಇದಕ್ಕೂ ಸಂಬಂಧವಿದೆಯೇ? ಇದಕ್ಕೆ ಕಾರಣವೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ಮೆದುಳಿಗೆ ರಕ್ತದ ಹರಿವು ನಿಧಾನವಾದಾಗ ಅಥವಾ ನಿಂತಾಗ, ಮೆದುಳಿನ ಕೆಲವು ಭಾಗಗಳಿಗೆ ಆಮ್ಲಜನಕ ತಲುಪುವುದು ತಡವಾದಾಗ ಪಾರ್ಶ್ವವಾಯು ಸಂಭವಿಸುತ್ತದೆ. ಈ ಸ್ಥಿತಿಯು ಅತ್ಯಂತ ಅಪಾಯಕಾರಿಯಾಗಿದ್ದು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ವ್ಯಕ್ತಿಯ ಸಾವಿಗೆ ಕಾರಣವಾಗಬಹುದು. ಹಾಗಾದರೆ ತಣ್ಣೀರು ಮೆದುಳಿನ ಪಾರ್ಶ್ವವಾಯುವಿನ ಅಪಾಯವನ್ನು ಹೇಗೆ ಹೆಚ್ಚಿಸುತ್ತದೆ? ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

ತಣ್ಣೀರು ಪಾರ್ಶ್ವವಾಯುವಿನ ಅಪಾಯವನ್ನು ಹೇಗೆ ಹೆಚ್ಚಿಸುತ್ತದೆ?

ಹಿರಿಯ ವೈದ್ಯ ಡಾ. ಅಜಯ್ ಕುಮಾರ್ ಅವರು ಹೇಳುವ ಪ್ರಕಾರ, ತಣ್ಣೀರನ್ನು ನೇರವಾಗಿ ತಲೆಗೆ ಸುರಿದುಕೊಳ್ಳುವುದರಿಂದ ಮೆದುಳಿನ ಪಾರ್ಶ್ವವಾಯು ಅಪಾಯ ಹೆಚ್ಚಾಗಬಹುದು. ಇದಕ್ಕೆ ಕಾರಣವೆಂದರೆ ನೀವು ನೇರವಾಗಿ ತಲೆಯ ಮೇಲೆ ತಣ್ಣೀರನ್ನು ಸುರಿದಾಗ, ಮೆದುಳಿನ ನರಗಳು ಇದ್ದಕ್ಕಿದ್ದಂತೆ ಕುಗ್ಗುತ್ತವೆ, ಇದು ರಕ್ತ ಪರಿಚಲನೆಯ ಅಡಚಣೆಗೆ ಕಾರಣವಾಗಬಹುದು. ಇದಲ್ಲದೆ, ತಣ್ಣೀರಿನಿಂದ ಸ್ನಾನ ಮಾಡುವುದರಿಂದ ದೇಹದ ತಾಪಮಾನವು ಇದ್ದಕ್ಕಿದ್ದಂತೆ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ, ದೇಹದಲ್ಲಿ ದೌರ್ಬಲ್ಯ, ಆಯಾಸ, ತಲೆ ತಿರುಗುವಿಕೆ, ಹೃದಯಾಘಾತ, ಪಾರ್ಶ್ವವಾಯು ಮುಂತಾದ ಸಮಸ್ಯೆಗಳು ಉಂಟಾಗಬಹುದು ಹಾಗಾಗಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಈ ಮಸಾಲೆ ಪದಾರ್ಥದ ಸೇವನೆಯನ್ನು ನೀವು ಮಾಡಲೇಬೇಕು!

ಈ ರೀತಿಯ ಅಪಾಯದಿಂದ ರಕ್ಷಿಸಿಕೊಳ್ಳುವುದು ಹೇಗೆ?

ತಣ್ಣೀರಿನಿಂದ ಸ್ನಾನ ಮಾಡುವಾಗ ಕೈಗಳು, ಪಾದಗಳು ಮತ್ತು ಬೆನ್ನಿನಂತಹ ದೇಹದ ಇತರ ಭಾಗಗಳಿಗೆ ನೀರನ್ನು ಸುರಿಯುವುದು ಒಳ್ಳೆಯದು ಮತ್ತು ಸುರಕ್ಷಿತ . ಈ ರೀತಿ ಮಾಡುವುದರಿಂದ, ದೇಹದ ತಾಪಮಾನವು ಸಮತೋಲನಗೊಳ್ಳುತ್ತದೆ. ನಂತರ ನೀರನ್ನು ತಲೆಗೆ ಹಾಕಿಕೊಳ್ಳಬಹುದು. ಈ ರೀತಿಯಾಗಿ, ತಣ್ಣೀರಿನ ಸ್ನಾನ ಮಾಡಬಹುದು.

ಈ ರೀತಿಯ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳನ್ನು ನೋಡಿಕೊಳ್ಳಿ

ನಿಮ್ಮ ರೋಗನಿರೋಧಕ ಶಕ್ತಿ ದುರ್ಬಲವಾಗಿದ್ದರೆ ಅಥವಾ ನಿಮಗೆ ಬೇಗ ಶೀತ ಆಗುತ್ತಿದ್ದರೆ, ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಶೀತ, ಜ್ವರ ಮತ್ತು ಇತರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಇದಲ್ಲದೆ, ನೀವು ಅಧಿಕ ರಕ್ತದೊತ್ತಡ, ಹೃದ್ರೋಗವನ್ನು ಹೊಂದಿದ್ದರೆ, ತಣ್ಣೀರಿನಿಂದ ಸ್ನಾನ ಮಾಡುವುದು ನಿಮಗೆ ಅಪಾಯಕಾರಿ. ಈ ಸಂದರ್ಭಗಳಲ್ಲಿ, ನಿಮ್ಮ ಆರೋಗ್ಯಕ್ಕೆ ಅನುಗುಣವಾಗಿ ತಣ್ಣೀರಿನಿಂದ ಸ್ನಾನ ಮಾಡುವ ಅಭ್ಯಾಸವನ್ನು ಅಳವಡಿಸಿಕೊಳ್ಳಿ. ತಣ್ಣೀರು ನಿಮಗೆ ಸರಿಹೊಂದದಿದ್ದರೆ, ಸಾಮಾನ್ಯವಾಗಿ ಬೆಚ್ಚಗಿರುವ ನೀರು ಅಥವಾ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ ಆರೋಗ್ಯವಾಗಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ