Vaikuntha Ekadashi 2025: ವೈಕುಂಠ ಏಕದಾಶಿಯಂದು ಅಪ್ಪಿತಪ್ಪಿಯೂ ಈ ಆಹಾರಗಳನ್ನು ಸೇವನೆ ಮಾಡಬೇಡಿ
ವೈಕುಂಠ ಏಕಾದಶಿಯ ದಿನ ವಿಷ್ಣುವನ್ನು ಪೂಜಿಸಿ, ಉಪವಾಸ ಮಾಡುವುದು ಮತ್ತು ದಾನ ಮಾಡುವುದು ಬಹಳ ಪುಣ್ಯದ ಕೆಲಸವೆಂದು ಪರಿಗಣಿಸಲಾಗಿದೆ. ಆದರೆ ಈ ಉಪವಾಸದಂದು ಜನರು ತಿಳಿದೋ, ತಿಳಿಯದೆಯೋ ಕೆಲವು ಆಹಾರಗಳನ್ನು ಸೇವನೆ ಮಾಡುತ್ತಾರೆ. ಇದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ, ಜೊತೆಗೆ ಶಾಸ್ತ್ರವು ಇದನ್ನು ನಿಷೇಧಿಸುತ್ತದೆ. ಹಾಗಾದರೆ ವೈಕುಂಠ ಏಕಾದಶಿಯ ದಿನ ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.
ಪುಷ್ಯ ಮಾಸದಲ್ಲಿ ಬರುವ ಶುಕ್ಲ ಪಕ್ಷದ ಏಕಾದಶಿಯನ್ನು ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನವು ಮೂರು ಕೋಟಿ ಏಕಾದಶಿಗಳಿಗೆ ಸಮಾನವಾಗಿದ್ದು ತುಂಬಾ ಮಂಗಳಕರ ದಿನ ಎಂದು ನಂಬಲಾಗಿದೆ. ಹಿಂದೂ ಪಂಚಾಗದ ಪ್ರಕಾರ ಈ ವರ್ಷದ ವೈಕುಂಠ ಏಕಾದಶಿಯನ್ನು ನಾಳೆ ಜ. 10ರಂದು ಶುಕ್ರವಾರ ಆಚರಿಸಲಾಗುತ್ತದೆ. ಈ ಏಕಾದಶಿ ತಿಥಿಯು ಜ. 9 ರಂದು ಮಧ್ಯಾಹ್ನ 12:22 ಕ್ಕೆ ಪ್ರಾರಂಭವಾಗಿ ಮರುದಿನ ಅಂದರೆ ಜ. 10 ರಂದು ಬೆಳಗ್ಗೆ 10:19 ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಅನುಸಾರ ಈ ದಿನವನ್ನು ಜ. 10 ರಂದು ವೈಕುಂಠ ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ದಿನ ವಿಷ್ಣುವನ್ನು ಪೂಜಿಸಿ, ಉಪವಾಸ ಮಾಡುವುದು ಮತ್ತು ದಾನ ಮಾಡುವುದು ಬಹಳ ಪುಣ್ಯದ ಕೆಲಸವೆಂದು ಪರಿಗಣಿಸಲಾಗಿದೆ. ಆದರೆ ಈ ಉಪವಾಸದಂದು ಜನರು ತಿಳಿದೋ, ತಿಳಿಯದೆಯೋ ಕೆಲವು ಆಹಾರಗಳನ್ನು ಸೇವನೆ ಮಾಡುತ್ತಾರೆ. ಇದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ, ಜೊತೆಗೆ ಶಾಸ್ತ್ರವು ಇದನ್ನು ನಿಷೇಧಿಸುತ್ತದೆ. ಹಾಗಾದರೆ ವೈಕುಂಠ ಏಕಾದಶಿಯ ದಿನ ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನ ಮಾಂಸಾಹಾರ, ಈರುಳ್ಳಿ, ಬೆಳ್ಳುಳ್ಳಿಯನ್ನು ಸೇವನೆ ಮಾಡಬಾರದು. ಈ ದಿನ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು ಎಂಬ ನಂಬಿಕೆ ಇದೆ. ಏಕೆಂದರೆ ಉಪವಾಸದ ಸಮಯದಲ್ಲಿ ಮನಸ್ಸಿನಲ್ಲಿ ಶುದ್ಧ ಮತ್ತು ಸಾತ್ವಿಕ ಮನೋಭಾವ ಇರಬೇಕಾಗುತ್ತದೆ. ಆದ ಕಾರಣ ನಮ್ಮ ಆಹಾರ ಕ್ರಮವು ಅದೇ ರೀತಿಯಲ್ಲಿದ್ದರೆ ಉತ್ತಮ ಎನ್ನುವುದು ನಂಬಿಕೆ.
ಏಕಾದಶಿಯ ದಿನ ಅನ್ನವನ್ನು ಸೇವಿಸಬಾರದು ಎನ್ನಲು ಕಾರಣವೇನು?
ಸಾಮಾನ್ಯವಾಗಿ ವೈಕುಂಠ ಏಕಾದಶಿಯ ದಿನದಂದು ಅನ್ನ ಸೇವನೆ ಮಾಡಬಾರದು ಎಂದು ಹೇಳಲಾಗುತ್ತದೆ. ಏಕೆಂದರೆ, ದಂತಕಥೆಯ ಪ್ರಕಾರ, ಮಹರ್ಷಿ ಮೇಧಾ ಎನ್ನುವ ವಿದ್ವಾಂಸ, ಶಕ್ತಿ ರೂಪಿಣಿಯಾಗಿರುವ ದೇವಿಯ ಕೋಪಕ್ಕೆ ಗುರಿಯಾಗುತ್ತಾನೆ. ಆಗ ಆತ ತನ್ನ ದೇಹ ತೊರೆದು ಭೂಮಿಗೆ ಬೀಳುತ್ತಾನೆ. ಏಕಾದಶಿಯ ದಿನದಂದು ಈ ಘಟನೆ ನಡೆದಿತ್ತು ಎಂದು ಹೇಳಲಾಗುತ್ತದೆ. ಬಳಿಕ ಮಹರ್ಷಿ ಮೇಧಾ ಬಾರ್ಲಿ ಮತ್ತು ಅಕ್ಕಿ ರೂಪದಲ್ಲಿ ಜನಿಸುತ್ತಾನೆ ಎಂಬ ನಂಬಿಕೆ ಇದ್ದು, ಈ ಕಾರಣದಿಂದಾಗಿ, ಬಾರ್ಲಿ ಮತ್ತು ಅಕ್ಕಿಯನ್ನು ಜೀವಿಗಳೆಂದು ಪರಿಗಣಿಸಿ ಉಪವಾಸಗಳ ಸಮಯದಲ್ಲಿ ಅದರಲ್ಲಿಯೂ ಏಕಾದಶಿಯಂದು ಇವುಗಳನ್ನು ತಿನ್ನುವುದಿಲ್ಲ, ಈ ದಿನ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಲಾಗುತ್ತದೆ. ಹಾಗಾಗಿ ಏಕಾದಶಿಯಂದು ಅನ್ನ ಸೇವಿಸದೆಯೇ ಉಪವಾಸ ಮಾಡಿ ದ್ವಾದಶಿಯಂದು ಅನ್ನವನ್ನು ಸೇವಿಸುತ್ತಾರೆ. ಈ ರೀತಿ ವಿಷ್ಣು ಪ್ರಿಯ ಏಕಾದಶಿಯ ಉಪವಾಸವನ್ನು ಸಾತ್ವಿಕ ರೂಪದಲ್ಲಿ ಪೂರ್ಣಗೊಳಿಸುವುದು ರೂಢಿ.
ಇದನ್ನೂ ಓದಿ: ವೈಕುಂಠ ಏಕಾದಶಿಯಂದು ಈ ತಪ್ಪುಗಳನ್ನು ಮಾಡಬೇಡಿ
ಮತ್ತೊಂದು ನಂಬಿಕೆಯ ಪ್ರಕಾರ, ಅಕ್ಕಿಯಲ್ಲಿ ನೀರಿನ ಅಂಶ ಜಾಸ್ತಿ ಇರುತ್ತದೆ. ಹಾಗಾಗಿ ಚಂದ್ರನ ಪ್ರಭಾವ ನೀರಿನ ಮೇಲೆ ಹೆಚ್ಚು ಇರುತ್ತದೆ ಎಂದು ನಂಬಲಾಗಿರುವುದರಿಂದ ಅನ್ನ ತಿನ್ನುವುದರಿಂದ ದೇಹದಲ್ಲಿ ನೀರಿನಂಶ ಹೆಚ್ಚುತ್ತದೆ, ಇದರಿಂದ ಮನಸ್ಸಿನ ಏಕಾಗ್ರತೆಗೆ ಭಂಗ ಬರುತ್ತದೆ ಎಂಬ ನಂಬಿಕೆ ಇದೆ.
ಈ ದಿನ ಉಪವಾಸ ಮಾಡುವುದು ಮತ್ತು ದೇವರನ್ನು ಸ್ಮರಿಸುವುದನ್ನು ಬಹಳ ಶ್ರೇಷ್ಠ ಎನ್ನಲಾಗುತ್ತದೆ. ಉಪವಾಸ ಮಾಡದವರು ಕೂಡ ಈರುಳ್ಳಿ, ಬೆಳ್ಳುಳ್ಳಿ ಮತ್ತು ಮಾಂಸಾಹಾರದಿಂದ ದೂರವಿರಬಹುದು.
ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ