Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿಯು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ದಿನವಾಗಿದೆ. ಈ ದಿನ ವೈಕುಂಠದ ದ್ವಾರಗಳು ತೆರೆದಿರುತ್ತವೆ ಎಂದು ನಂಬಲಾಗಿದೆ, ಇದರಿಂದ ಮೋಕ್ಷವನ್ನು ಪಡೆಯಬಹುದು. ಬೆಳಗ್ಗೆ ಎಣ್ಣೆ ಸ್ನಾನ ಮಾಡಿ ವಿಷ್ಣುವಿನ ದರ್ಶನ ಮಾಡುವುದರಿಂದ ಪಾಪಗಳಿಂದ ಮುಕ್ತಿ ಹಾಗೂ ಮಾನಸಿಕ ಶಾಂತಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಈ ಲೇಖನದಲ್ಲಿ ವೈಕುಂಠ ಏಕಾದಶಿಯ ಮಹತ್ವ, ಆಚರಣಾ ವಿಧಾನ ಮತ್ತು ಪ್ರಯೋಜನಗಳನ್ನು ವಿವರಿಸಲಾಗಿದೆ.
ಹಿಂದೂ ಧರ್ಮದಲ್ಲಿ ಏಕಾದಶಿಗಳಿಗೆ ಅದರದ್ದೇ ಆದ ಒಂದು ವಿಶೇಷವಾದ ಮಹತ್ವ ಇದ್ದರೂ ಸಹ ವೈಕುಂಠ ಏಕಾದಶಿಗೆ ಬಹಳ ಮಹತ್ವ ನೀಡಲಾಗಿದೆ. ಏಕೆಂದರೆ ವೈಕುಂಠದ ದ್ವಾರ ಇಂದು ತೆರಯುತ್ತದೆ ಎಂದು ಹಿಂದೂ ಧರ್ಮದ ಶಾಸ್ತ್ರ, ಪುರಾಣಗಳಲ್ಲಿ ಹೇಳಲಾಗಿದೆ. ಈ ದಿನ ಬೆಳಗ್ಗಿನ ಜಾವ ಎದ್ದು ಎಣ್ಣೆಯ ಸ್ನಾನವನ್ನು ಮಾಡಿಕೊಂಡು ವಿಷ್ಣುವಿನ ದರ್ಶನ ಮಾಡಿದರೇ, ಪಾಪಗಳಿಂದ ಮುಕ್ತರಾಗುತ್ತಾರೆ ಎಂದು ಹೇಳಲಾಗಿದೆ. ಒಳ್ಳೆಯ ಮಾನಸಿಕ ಸ್ಥೈರ್ಯ ಸ್ಥೈರ್ಯ ಬರುತ್ತೆ. ಜೊತೆಗೆ ನಮಗೆ ಈ ಜೀವನದ ನಿರ್ವಹಣೆಗೆ ಆತ್ಮಸ್ಥೈರ್ಯ ಹೆಚ್ಚಲು ಭಗವಂತನ ಕೃಪೆಗೆ ಪಾತ್ರರಾಗುತ್ತೇವೆ.
ವೈಕುಂಠ ಏಕಾದಶಿಯ ಮಹತ್ವ, ಇದರ ಪ್ರಭಾವ, ಆಚರಣೆ ಹೇಗೆ ಮಾಡುವುದು? ಮನುಷ್ಯ ಮೋಕ್ಷಕ್ಕಾಗಿ, ಸ್ವರ್ಗ ಪ್ರಾಪ್ತಿಗಾಗಿ ಏನು ವಿಧಿವಿಧಾನಗಳನ್ನು ಪಾಲಿಸಬೇಕು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
Latest Videos