ನೆಮ್ಮದಿಯ ನಿದ್ರೆ ಬೇಕಾ; ಹಾಗಿದ್ರೆ ರಾತ್ರಿ ಮಲಗುವ ಮುನ್ನ ತಪ್ಪದೆ ಇವುಗಳನ್ನು ತಿನ್ನಿ
ಉತ್ತಮ ಆರೋಗ್ಯಕ್ಕಾಗಿ ಉತ್ತಮ ನಿದ್ರೆಯನ್ನು ಪಡೆಯುವುದು ಕೂಡಾ ಮುಖ್ಯ. ಸರಿಯಾಗಿ ನಿದ್ರೆ ಮಾಡುವುದರಿಂದ ದಿನಪೂರ್ತಿ ಉತ್ಸಾಹಭರಿತದಿಂದ ಇರುತ್ತೇವೆ. ಆದ್ರೆ ಹಲವರು ಏನೇ ಮಾಡಿದರೂ ಕಣ್ಣಿಗೆ ನಿದ್ರೆ ಹತ್ತಲ್ಲ ಅಂತ ಹೇಳುತ್ತಿರುತ್ತಾರೆ. ನಿಮಗೂ ಕೂಡಾ ರಾತ್ರಿ ಎಷ್ಟೇ ಹೊತ್ತಾದ್ರೂ ನಿದ್ದೆ ಬರ್ತಿಲ್ವಾ. ಹಾಗಿದ್ರೆ ಈ ಕೆಲವೊಂದು ಆಹಾರಗಳನ್ನು ಸೇವನೆ ಮಾಡಿ, ಖಂಡಿತವಾಗಿಯೂ ರಾತ್ರಿ ಚೆನ್ನಾಗಿ ನಿದ್ರೆ ಪಡೆಯುತ್ತೀರಿ.

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪೌಷ್ಟಿಕಾಂಶಯುಕ್ತ ಆಹಾರದಂತೆ ಸರಿಯಾದ ನಿದ್ರೆಯೂ (Sleep) ಅತೀ ಅವಶ್ಯಕ. ಒಬ್ಬ ಮನುಷ್ಯ 7 ರಿಂದ 8 ಗಂಟೆಗಳ ನಿದ್ದೆಯನ್ನು ಪಡೆಯಲೇಬೇಕು. ನಿದ್ರೆ ಕಡಿಮೆಯಾದರೆ ಆರೋಗ್ಯ ಸಮಸ್ಯೆಗಳು (Health Problems) ಕಾಡಬಹುದು. ಆದ್ದರಿಂದ ಆರೋಗ್ಯವು ಸರಿಯಿರಬೇಕಾದರೆ ಉತ್ತಮ ನಿದ್ರೆ ಪಡೆಯುವುದು ಮುಖ್ಯ. ಆದರೆ ಕೆಲವರಿಗೆ ಒತ್ತಡ ಇನ್ನಿತರೆ ಕಾರಣಗಳಿಂದ ಸರಿಯಾಗಿ ನಿದ್ರೆ ಬರಲ್ಲ. ಅದರಲ್ಲೂ ಕೆಲವರು ಕಣ್ಣು ಮುಚ್ಚಿ ಮಲಗಿದರೂ ನಿದ್ದೆಯಂತೂ ಹತ್ತೋದೇ ಇಲ್ಲ ಎಂದು ಹೇಳುತ್ತಾರೆ. ನಿಮಗೂ ಕೂಡಾ ಹೀಗೆ ರಾತ್ರಿ ಸರಿಯಾಗಿ ನಿದ್ರೆ ಬರಲ್ವಾ. ಹಾಗಿದ್ರೆ ಈ ಕೆಲವೊಂದು ಆಹಾರಗಳನ್ನು (Food For Better Sleep) ತಿನ್ನಿ, ಖಂಡಿತವಾಗಿಯೂ ಇದು ನಿಮಗೆ ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.
ಇವುಗಳನ್ನು ಸೇವಿಸುವ ಮೂಲಕ ಉತ್ತಮ ನಿದ್ರೆ ಪಡೆಯಿರಿ:
ಬಾದಾಮಿ: ಬಾದಾಮಿ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬಾದಾಮಿಯಲ್ಲಿ ಮೆಲಟೋನಿನ್ ಇರುತ್ತದೆ. ಮೆಲಟೋನಿನ್ ನಿಮ್ಮ ನಿದ್ರೆಯ ಮಾದರಿಯನ್ನು ಸುಧಾರಿಸುತ್ತದೆ. ಇದು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.
ಡಾರ್ಕ್ ಚಾಕೊಲೇಟ್: ಡಾರ್ಕ್ ಚಾಕೊಲೇಟ್ ನಿದ್ರೆಯನ್ನು ಉತ್ತೇಜಿಸುವ ಅತ್ಯುತ್ತಮ ತಿಂಡಿಗಳಲ್ಲಿ ಒಂದಾಗಿದೆ. ಡಾರ್ಕ್ ಚಾಕೊಲೇಟ್‌ನಲ್ಲಿ ಸಿರೊಟೋನಿನ್ ಕೂಡ ಇದೆ. ಅದು ಮನಸ್ಸನ್ನು ಶಾಂತಗೊಳಿಸುತ್ತದೆ. ಇದು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.
ಕಿವಿ ಹಣ್ಣು: ಕಿವಿ ಹಣ್ಣು ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ, ವಿಶೇಷವಾಗಿ ಇದು ಪೊಟ್ಯಾಸಿಯಮ್, ಫೋಲೇಟ್ ಜೊತೆಗೆ ವಿಟಮಿನ್ ಸಿ ಮತ್ತು ಇ ಅನ್ನು ಹೊಂದಿರುತ್ತದೆ. ಇದು ನಿದ್ರೆಯನ್ನು ಸುಧಾರಿಸಲು ಸಹಕಾರಿಯಾಗಿದೆ.
ಚೆರ್ರಿ ಹಣ್ಣು: ಚೆರ್ರಿ ಹಣ್ಣಿನಲ್ಲಿ ಮೆಲಟೋನಿನ್ ಅಂಶವು ಸಮೃದ್ಧವಾಗಿದೆ. ಇದು ನಿದ್ರೆಯನ್ನು ಉತ್ತೇಜಿಸುವ ಹಾರ್ಮೋನ್ ಆಗಿದೆ. ಹಾಗಾಗಿ ಈ ಹಣ್ಣನ್ನು ಅಥವಾ ಅದರ ಜ್ಯೂಸ್ ಕುಡಿಯುವುದರಿಂದ ರಾತ್ರಿ ಉತ್ತಮ ನಿದ್ರೆ ಬರುತ್ತದೆ.
ಇದನ್ನೂ ಓದಿ: 7-8 ಗಂಟೆ ನಿದ್ರೆ ಮಾಡುತ್ತಿದ್ದೀರಾ? ಇದು ಗೂಂಬೆ ಮಾದರಿಯ ನಿದ್ರೆ, ಇದರಿಂದ ಏನು ಪ್ರಯೋಜನ?
ಕುಂಬಳಕಾಯಿ ಬೀಜಗಳು: ಕುಂಬಳಕಾಯಿ ಬೀಜಗಳಲ್ಲಿರುವ ಟ್ರಿಪ್ಟೋಫಾನ್, ಮೆಗ್ನೇಸಿಯಮ್ ಮತ್ತು ಸತುವು ಮೆಲಟೋನಿನ್ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಉತ್ತಮ ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಬಾಳೆಹಣ್ಣು: ಮೆಗ್ನೇಸಿಯಮ್ ಮತ್ತು ಪೊಟ್ಯಾಸಿಯಮ್‌ನಿಂದ ಸಮೃದ್ಧವಾಗಿರುವ ಬಾಳೆಹಣ್ಣನ್ನು ರಾತ್ರಿ ತಿನ್ನುವುದರಿಂದಲೂ ಉತ್ತಮ ನಿದ್ರೆ ಪಡೆಯಬಹುದು. ಅಲ್ಲದೆ ಇದು ಸ್ನಾಯುಗಳು ವಿಶ್ರಾಂತಿ ಪಡೆಯಲೂ ಸಹಾಯ ಮಾಡುತ್ತದೆ.
ಬಿಸಿ ಹಾಲು ಕುಡಿಯಿರಿ: ಹಾಲಿನಲ್ಲಿ ಟ್ರಿಪ್ಟೊಫಾನ್ ಮತ್ತು ಮೆಲಟೋನಿನ್ ಅಂಶವಿದ್ದು, ಇದು ನಿದ್ರೆಯನ್ನು ಸುಧಾರಿಸಲು ಸಹಕಾರಿಯಾಗಿದೆ. ಆದ್ದರಿಂದ, ಪ್ರತಿ ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲು ಕುಡಿಯಿರಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








