Pickles: ಉಪ್ಪಿನಕಾಯಿ ಇಷ್ಟ ಪಡುತ್ತೀರಾ? ಇದರಿಂದ ಎಷ್ಟೆಲ್ಲಾ ಆರೋಗ್ಯ ಸಮಸ್ಯೆಗಳಿವೆ ನೋಡಿ
ಉಪ್ಪಿನಕಾಯಿ ಇದ್ದರೆ ಅದಕ್ಕಿಂತ ಬೇರೆ ರುಚಿ ಇಲ್ಲ ಎಂದು ಹೇಳುವವರನ್ನು ನೀವು ಕೇಳಿರಬಹುದು. ಇದನ್ನು ಅಷ್ಟು ಇಷ್ಟಪಡುವವರಿದ್ದಾರೆ. ಹಾಗಾಗಿ ಉಪ್ಪಿನಕಾಯಿ ತುಂಬಿದ ಭರಣಿಗಳು ಪ್ರತಿ ಮನೆಯಲ್ಲೂ ಕಂಡು ಬರುತ್ತವೆ. ಅನೇಕ ಜನರು ಇಂದಿಗೂ ಅವುಗಳನ್ನು ಪ್ಯಾಕ್ ಮಾಡಿ ಹಳ್ಳಿಗಳಿಂದ ನಗರಗಳಿಗೆ ಅಥವಾ ವಿದೇಶಗಳಿಗೆ ತಿನ್ನಲು ತೆಗೆದುಕೊಂಡು ಹೋಗುತ್ತಾರೆ. ಅನ್ನ, ರೊಟ್ಟಿ, ಪರೋಟಾ ಹೀಗೆ ಯಾವುದರ ಜೊತೆಗೆ ಆಗಲಿ ಆ ಉಪ್ಪಿನಕಾಯಿ ತಿನ್ನುವ ಸಂತೋಷವೇ ಬೇರೆ. ಆದರೆ ನಿಮಗೆ ಗೊತ್ತೇ? ಉಪ್ಪಿನಕಾಯಿಯಲ್ಲಿ ಲ್ಯಾಕ್ಟಿಕ್ ಆಮ್ಲವಿರುತ್ತದೆ. ಇದು ನಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ? ಹಾಗಾಗಿ ತಜ್ಞರು ಇದನ್ನು ಸೇವನೆ ಮಾಡಬೇಡಿ ಎನ್ನುತ್ತಾರೆ. ಹಾಗಾದರೆ ಉಪ್ಪಿನಕಾಯಿಯ ಅಡ್ಡಪರಿಣಾಮಗಳೇನು? ಸೇವನೆ ಮಾಡುವುದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಎಲೆಯ ಬದಿಯಲ್ಲಿ ಉಪ್ಪಿನಕಾಯಿ ಇರದಿದ್ದರೆ ಊಟವೇ ಆಗುವುದಿಲ್ಲ. ಮನೆಯಲ್ಲಿ ಊಟಕ್ಕೆ ಪದಾರ್ಥವಿರದಿದ್ದರೂ ಗಂಜಿಗೆ ಉಪ್ಪಿನಕಾಯಿ ಇದ್ದರೆ ಅದಕ್ಕಿಂತ ಬೇರೆ ರುಚಿ ಇಲ್ಲ ಎಂದು ಹೇಳುವವರನ್ನು ನೀವು ಕೇಳಿರಬಹುದು. ಇದನ್ನು ಅಷ್ಟು ಇಷ್ಟಪಡುವವರಿದ್ದಾರೆ. ಹಾಗಾಗಿ ಉಪ್ಪಿನಕಾಯಿ ತುಂಬಿದ ಭರಣಿಗಳು ಪ್ರತಿ ಮನೆಯಲ್ಲೂ ಕಂಡು ಬರುತ್ತವೆ. ಅನೇಕ ಜನರು ಇಂದಿಗೂ ಅವುಗಳನ್ನು ಪ್ಯಾಕ್ ಮಾಡಿ ಹಳ್ಳಿಗಳಿಂದ ನಗರಗಳಿಗೆ ಅಥವಾ ವಿದೇಶಗಳಿಗೆ ತಿನ್ನಲು ತೆಗೆದುಕೊಂಡು ಹೋಗುತ್ತಾರೆ. ಅನ್ನ, ರೊಟ್ಟಿ, ಪರೋಟಾ ಹೀಗೆ ಯಾವುದರ ಜೊತೆಗೆ ಆಗಲಿ ಆ ಉಪ್ಪಿನಕಾಯಿ ತಿನ್ನುವ ಸಂತೋಷವೇ ಬೇರೆ. ಆದರೆ ನಿಮಗೆ ಗೊತ್ತೇ? ಉಪ್ಪಿನಕಾಯಿಯಲ್ಲಿ ಲ್ಯಾಕ್ಟಿಕ್ ಆಮ್ಲವಿರುತ್ತದೆ. ಇದು ನಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ? ಹಾಗಾಗಿ ತಜ್ಞರು ಇದನ್ನು ಸೇವನೆ ಮಾಡಬೇಡಿ ಎನ್ನುತ್ತಾರೆ. ಹಾಗಾದರೆ ಉಪ್ಪಿನಕಾಯಿಯ ಅಡ್ಡಪರಿಣಾಮಗಳೇನು? ಸೇವನೆ ಮಾಡುವುದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಲ್ಯಾಕ್ಟಿಕ್ ಆಮ್ಲ ಎಂದರೇನು?
ಇದು ನಮ್ಮ ದೇಹಕ್ಕೆ ಅಗತ್ಯವಿರುವಾಗ ಶಕ್ತಿಯ ಪ್ರಮುಖ ಮೂಲವಾಗಿ ಕಾರ್ಯನಿರ್ವಹಿಸುತ್ತದೆ, ಆದರೆ ದೇಹದಲ್ಲಿ ಅದರ ಸ್ರವಿಸುವಿಕೆಯು ಒಂದು ಮಿತಿ ಮೀರಿದರೆ, ಅದು ತೊಂದರೆಯನ್ನು ಉಂಟುಮಾಡಬಹುದು.
ಇದನ್ನೂ ಓದಿ: ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಸಿಪಿಆರ್ ಕಲಿಯಬೇಕು ಯಾಕೆ ಗೊತ್ತಾ?
ಲ್ಯಾಕ್ಟಿಕ್ ಆಮ್ಲದ 10 ಅನಾನುಕೂಲಗಳೇನು?
ಆಕ್ಸಿಡೋಸಿಸ್: ಹೆಚ್ಚುವರಿ ಲ್ಯಾಕ್ಟಿಕ್ ಆಮ್ಲದಿಂದಾಗಿ, ದೇಹದಲ್ಲಿ ಆಕ್ಸಿಡೋಸಿಸ್ ಸ್ಥಿತಿ ಉಂಟಾಗುತ್ತದೆ. ಇದರಲ್ಲಿ ರಕ್ತದ ಪಿಎಚ್ ಮಟ್ಟವು ಕಡಿಮೆಯಾಗುತ್ತದೆ. ಇದು ದೇಹದ ದೌರ್ಬಲ್ಯ, ವಾಂತಿ, ನೋವನ್ನು ಉಂಟುಮಾಡುತ್ತದೆ.
ದುರ್ಬಲ ಸ್ನಾಯುಗಳು: ಲ್ಯಾಕ್ಟಿಕ್ ಆಮ್ಲವು ಸ್ನಾಯುಗಳಲ್ಲಿ ನೋವು ಮತ್ತು ಬಿಗಿತವನ್ನು ಉಂಟು ಮಾಡುತ್ತದೆ. ಇದು ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ.
ಅಧಿಕ ರಕ್ತದೊತ್ತಡ (ಬಿಪಿ): ಅಧಿಕ ಲ್ಯಾಕ್ಟಿಕ್ ಆಮ್ಲದ ಮಟ್ಟವು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ವಾಂತಿ – ವಾಕರಿಕೆ: ಆಕ್ಸಿಡೋಸಿಸ್ ವಾಂತಿ ಮತ್ತು ವಾಕರಿಕೆಗೆ ಕಾರಣವಾಗಬಹುದು. ಇದು ನಿಮಗೆ ಅನಾನುಕೂಲತೆಯನ್ನುಂಟು ಮಾಡುತ್ತದೆ.
ಅಜೀರ್ಣ: ಅತಿಯಾದ ಲ್ಯಾಕ್ಟಿಕ್ ಆಮ್ಲದ ಬಿಡುಗಡೆಯಿಂದಾಗಿ, ಹೊಟ್ಟೆನೋವು, ಗ್ಯಾಸ್, ಮಲಬದ್ಧತೆ ಮುಂತಾದ ಜೀರ್ಣಕಾರಿ ಸಮಸ್ಯೆಗಳು ಕಂಡುಬರಬಹುದು.
ಒಣ ಬಾಯಿ: ಆಕ್ಸಿಡೋಸಿಸ್ ನಿಂದಾಗಿ ಬಾಯಿ ಒಣಗುತ್ತದೆ. ಇದು ತಿನ್ನಲು ಮತ್ತು ಕುಡಿಯಲು ತೊಂದರೆ ಉಂಟು ಮಾಡುತ್ತದೆ.
ಹೃದ್ರೋಗಗಳು: ಅಧಿಕ ಲ್ಯಾಕ್ಟಿಕ್ ಆಮ್ಲವು ಎದೆ ನೋವು, ಅನಿಯಮಿತ ಹೃದಯ ಬಡಿತದಂತಹ ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಬಹುದು.
ತಲೆನೋವು: ಲ್ಯಾಕ್ಟಿಕ್ ಆಮ್ಲವನ್ನು ಅತಿಯಾಗಿ ಸೇವಿಸುವುದರಿಂದ ತಲೆನೋವು ಮತ್ತು ತಲೆತಿರುಗುವಿಕೆ ಉಂಟಾಗಬಹುದು.
ದುರ್ಬಲ ಮೂಳೆಗಳು: ಹೆಚ್ಚುವರಿ ಲ್ಯಾಕ್ಟಿಕ್ ಆಮ್ಲವು ಮೂಳೆಯ ಆರೋಗ್ಯದ ಮೇಲೆ ಶಾಶ್ವತವಾಗಿ ಪರಿಣಾಮ ಬೀರುತ್ತದೆ. ಮೂಳೆಗಳಲ್ಲಿ ದೌರ್ಬಲ್ಯವನ್ನು ಉಂಟುಮಾಡುತ್ತದೆ.
ದೇಹದ ತಾಪಮಾನದಲ್ಲಿ ಬದಲಾವಣೆ: ನಿಮ್ಮ ದೇಹದಲ್ಲಿ ಲ್ಯಾಕ್ಟಿಕ್ ಆಮ್ಲದ ಮಟ್ಟವು ಹೆಚ್ಚಾದರೆ, ಅದು ದೇಹದ ತಾಪಮಾನದಲ್ಲಿ ಬದಲಾವಣೆಗೆ ಕಾರಣವಾಗಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ