ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಸಿಪಿಆರ್ ಕಲಿಯಬೇಕು ಯಾಕೆ ಗೊತ್ತಾ?

ಹಠಾತ್ ಹೃದಯಾಘಾತ ಅಥವಾ ಹೃದಯ ಸ್ತಂಭನವನ್ನು ತಡೆಗಟ್ಟುವ ವಿಷಯಕ್ಕೆ ಬಂದಾಗ, ನೆನಪಿಗೆ ಬರುವ ಮೊದಲ ವಿಷಯವೆಂದರೆ ಅದು ಸಿಪಿಆರ್. ಇದು ಜೀವ ಉಳಿಸುವ ಒಂದು ತಂತ್ರವಾಗಿದ್ದು, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳಬೇಕಾಗಿದೆ. ಮಕ್ಕಳಾಗಿರಲಿ, ಹದಿಹರೆಯದವರಾಗಿರಲಿ, ವಯಸ್ಕರಾಗಿರಲಿ ಅಥವಾ ವಯಸ್ಸಾದ ವ್ಯಕ್ತಿಯಾಗಿರಲಿ ಸಿಪಿಆರ್ ಕಲಿಯುವುದು ಬಹಳ ಮುಖ್ಯ. ಹಾಗಾದರೆ ಸಿಪಿಆರ್ ಎಂದರೇನು? ಅದು ಹೇಗೆ ಕಾರ್ಯನಿರ್ವಹಿಸುತ್ತದೆ? ಅದರ ಪ್ರಯೋಜನಗಳು ಮತ್ತು ವಿವಿಧ ವಯೋಮಾನದವರಲ್ಲಿ ಅದರ ಪ್ರಾಮುಖ್ಯತೆಯ ಬಗ್ಗೆ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಸಿಪಿಆರ್ ಕಲಿಯಬೇಕು ಯಾಕೆ ಗೊತ್ತಾ?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 13, 2024 | 10:50 AM

ಹೃದಯಾಘಾತವು ಭಾರತ ಸೇರಿದಂತೆ ವಿಶ್ವದಾದ್ಯಂತ ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 2022 ರಲ್ಲಿ, ಭಾರತದಲ್ಲಿ ಹೃದಯಾಘಾತದಿಂದ 32,457 ಸಾವುಗಳು ಸಂಭವಿಸಿದೆ, ಇದು ಅದಕ್ಕಿಂತ ಹಿಂದಿನ ವರ್ಷದಲ್ಲಿ ದಾಖಲಾದ 28,413 ಸಾವುಗಳಿಗಿಂತ ಗಮನಾರ್ಹ ಏರಿಕೆಯಾಗಿದೆ. ಇನ್ನು ವಿಶ್ವದ ಅಂಕಿ- ಅಂಶಗಳನ್ನು ತೆಗೆದುಕೊಂಡರೆ, ಜಾಗತಿಕ ಸಾವಿನ ಸಂಖ್ಯೆ 1990 ರಲ್ಲಿ 12.4 ಮಿಲಿಯನ್ ನಿಂದ 2022 ರಲ್ಲಿ 19.8 ಮಿಲಿಯನ್ ಗೆ ಏರಿದೆ. ಈ ಸಂಖ್ಯೆಗಳನ್ನು ನೋಡಿದ ಮೇಲೆ ಪರಿಸ್ಥಿತಿ ಭೀಕರವಾಗಿದೆ ಎಂಬುದನ್ನು ಹೇಳಬೇಕಾಗಿಲ್ಲ. ಆದರೆ ಹೃದಯಾಘಾತ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರು, ಇದನ್ನು ತಡೆಯಲು ನಾವು ಎಷ್ಟು ಸಿದ್ಧರಾಗಿದ್ದೇವೆ ಎಂಬುದು ಕೂಡ ಮುಖ್ಯವಾಗುತ್ತದೆ.

ಹಠಾತ್ ಹೃದಯಾಘಾತ ಅಥವಾ ಹೃದಯ ಸ್ತಂಭನವನ್ನು ತಡೆಗಟ್ಟುವ ವಿಷಯಕ್ಕೆ ಬಂದಾಗ, ನೆನಪಿಗೆ ಬರುವ ಮೊದಲ ವಿಷಯವೆಂದರೆ ಅದು ಸಿಪಿಆರ್. ಇದು ಜೀವ ಉಳಿಸುವ ಒಂದು ತಂತ್ರವಾಗಿದ್ದು, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳಬೇಕಾಗಿದೆ. ಮಕ್ಕಳಾಗಿರಲಿ, ಹದಿಹರೆಯದವರಾಗಿರಲಿ, ವಯಸ್ಕರಾಗಿರಲಿ ಅಥವಾ ವಯಸ್ಸಾದ ವ್ಯಕ್ತಿಯಾಗಿರಲಿ ಸಿಪಿಆರ್ ಕಲಿಯುವುದು ಬಹಳ ಮುಖ್ಯ. ಹಾಗಾದರೆ ಸಿಪಿಆರ್ ಎಂದರೇನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಅದರ ಪ್ರಯೋಜನಗಳು ಮತ್ತು ವಿವಿಧ ವಯೋಮಾನದವರಲ್ಲಿ ಅದರ ಪ್ರಾಮುಖ್ಯತೆಯ ಬಗ್ಗೆ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

ಸಿಪಿಆರ್ ಎಂದರೇನು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ?

ಮಕ್ಕಳ ತಜ್ಞ ಡಾ.ಯೋಗೇಶ್ ಕುಮಾರ್ ಗುಪ್ತಾ ಹೇಳುವ ಪ್ರಕಾರ, “ಸಿಪಿಆರ್ ಎಂಬುದು ಒಬ್ಬರ ಹೃದಯ ಅಥವಾ ಉಸಿರಾಟ ನಿಂತಾಗ ತುರ್ತು ಸಂದರ್ಭಗಳಲ್ಲಿ ಬಳಸುವ ಜೀವ ಉಳಿಸುವ ಒಂದು ತಂತ್ರವಾಗಿದೆ. ಇದು ಎರಡು ಪ್ರಮುಖ ಕ್ರಿಯೆಗಳನ್ನು ಒಳಗೊಂಡಿರುತ್ತದೆ. ಮೊದಲನೇಯದು, ವ್ಯಕ್ತಿಯ ಎದೆಯ ಮಧ್ಯದಲ್ಲಿ ಗಟ್ಟಿಯಾಗಿ ಮತ್ತು ವೇಗವಾಗಿ ಒತ್ತುವುದರಿಂದ ಪ್ರಮುಖ ಅಂಗಗಳಿಗೆ ರಕ್ತ ಪರಿಚಲನೆಯಾಗುವಂತೆ ಮಾಡಲು ಸಹಾಯ ಮಾಡುತ್ತದೆ. ಎರಡನೇಯದು, ವ್ಯಕ್ತಿಯ ಬಾಯಿಗೆ ಊದುವ ಮೂಲಕ ಅಗತ್ಯವಿರುವ ಉಸಿರಾಟವನ್ನು ಒದಗಿಸುವುದು. ಈ ರೀತಿ ಮಾಡುವುದರಿಂದ ಅವರ ಶ್ವಾಸಕೋಶಕ್ಕೆ ಆಮ್ಲಜನಕವನ್ನು ತಲುಪಿಸಲು ಸಹಾಯ ಮಾಡುತ್ತದೆ. ವೈದ್ಯಕೀಯ ಸಹಾಯ ಸಿಗುವ ವರೆಗೆ ಮೆದುಳು ಮತ್ತು ಇತರ ಅಂಗಗಳಿಗೆ ರಕ್ತದ ಹರಿವು ಮತ್ತು ಆಮ್ಲಜನಕದ ಪೂರೈಕೆಯನ್ನು ಕಾಪಾಡಿಕೊಳ್ಳಲು ಈ ಹಂತಗಳು ಒಟ್ಟಾಗಿ ಕೆಲಸ ಮಾಡುತ್ತವೆ” ಎಂದಿದ್ದಾರೆ.

ಇದನ್ನೂ ಓದಿ: ಟಿವಿ ನಟ ವಿಕಾಸ್ ಸೇಥಿಗೆ ಹೃದಯಾಘಾತ: ಅಜೀರ್ಣತೆ ದೇಹ ನೀಡುವ ಎಚ್ಚರಿಕೆಯಾಗಿರಬಹುದೇ?

ವಿವಿಧ ವಯೋಮಾನದವರು ಕಲಿಯುವುದರ ಪ್ರಾಮುಖ್ಯತೆ;

ಸಿಪಿಆರ್ ಬಗ್ಗೆ ತಿಳಿಯುವುದು ಎಲ್ಲಾ ವಯೋಮಾನದವರಿಗೆ ಪ್ರಯೋಜನಕಾರಿಯಾಗಿದೆ.

•ಮಕ್ಕಳು: ಇವರಿಗೆ ಸಿಪಿಆರ್ ಕಲಿಸುವುದರಿಂದ ತುರ್ತು ಸಂದರ್ಭಗಳಲ್ಲಿ ಇದು ಉಪಯೋಗಕ್ಕೆ ಬರುತ್ತದೆ. ಕುಟುಂಬ ಸದಸ್ಯರು ಅಥವಾ ಗೆಳೆಯರ ಜೀವಗಳನ್ನು ಉಳಿಸಲು ನೆರವಾಗುತ್ತದೆ. ಒಮ್ಮೆ ಇದನ್ನು ಕಲಿತರೆ ಮುಂದೆ ಉಪಯೋಗಕ್ಕೆ ಬರುತ್ತದೆ.

•ಹದಿಹರೆಯದವರು: ಈ ವಯಸ್ಸಿನವರು ಹೆಚ್ಚಾಗಿ ಸಾಮಾಜಿಕ ಅಥವಾ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ, ಇಂತಹ ಜಾಗಗಳಲ್ಲಿ ತುರ್ತು ಪರಿಸ್ಥಿತಿಗಳು ಎದುರಾದಾಗ ಸಿಪಿಆರ್ ತರಬೇತಿ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಅವರನ್ನು ಸಜ್ಜುಗೊಳಿಸುತ್ತದೆ.

* ವಯಸ್ಕರು: ಈ ವಯಸ್ಸಿನವರು ಮನೆಯಲ್ಲಿ, ಕೆಲಸದಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಇರುವವರಾಗಿರುತ್ತಾರೆ. ಇಂತಹ ವಾತಾವರಣದಲ್ಲಿ ಇರುವವರಿಗೆ ಸಿಪಿಆರ್ ತಿಳಿದುಕೊಂಡಿರುವುದು ಉಪಯೋಗಕ್ಕೆ ಬರಬಹುದು. ಅಲ್ಲದೆ ವಯಸ್ಕರು ಸಾಮಾನ್ಯವಾಗಿ ಪರಿಣಾಮಕಾರಿ ಎದೆ ಸಂಕುಚನಕ್ಕೆ ಅಗತ್ಯವಾದ ದೈಹಿಕ ಶಕ್ತಿಯನ್ನು ಕೂಡ ಹೊಂದಿರುತ್ತಾರೆ.

•ವಯಸ್ಸಾದವರು: ಹೃದಯ ಸಂಬಂಧಿತ ಸಮಸ್ಯೆಗಳ ಹೆಚ್ಚಿನ ಅಪಾಯದಲ್ಲಿರುವವರು ವಯಸ್ಸಾದವರು. ಸಿಪಿಆರ್ ತಿಳಿದುಕೊಳ್ಳುವುದರಿಂದ ಮನೆಯಲ್ಲಿ ಇರುವಾಗ ಯಾವುದೇ ರೀತಿ ತೊಂದರೆ ಆದರೆ ಪರಸ್ಪರ ಸಹಾಯ ಮಾಡಬಹುದು. ಸಿಪಿಆರ್ ಅನ್ನು ಅರ್ಥಮಾಡಿಕೊಳ್ಳುವುದು ಅವರಿಗೆ ಹೆಚ್ಚು ಸುರಕ್ಷಿತ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ.

ಸಿಪಿಆರ್ ಕಲಿಕೆಯ ಪ್ರಯೋಜನಗಳೇನು?

•ಜೀವಗಳನ್ನು ಉಳಿಸುತ್ತದೆ: ತಕ್ಷಣವೇ ಸಿಪಿಆರ್ ಮಾಡುವುದರಿಂದ ಹೃದಯ ಸ್ತಂಭನದ ಸಂದರ್ಭದಲ್ಲಿ ವ್ಯಕ್ತಿಯ ಬದುಕುಳಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ.

•ಮೆದುಳಿನ ಹಾನಿಯನ್ನು ತಡೆಯುತ್ತದೆ: ಸಿಪಿಆರ್ ಸಮಯದಲ್ಲಿ ನಿರಂತರ ರಕ್ತದ ಹರಿವು ಮೆದುಳಿಗೆ ಸಾಕಷ್ಟು ಆಮ್ಲಜನಕವನ್ನು ಪಡೆಯುವ ಮೂಲಕ ಮೆದುಳಿನ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ.

ವೈದ್ಯಕೀಯ ಹಿನ್ನೆಲೆಯನ್ನು ಲೆಕ್ಕಿಸದೆ ಯಾರಾದರೂ ಸಿಪಿಆರ್ ಮಾಡಬಹುದು, ಇದು ಜೀವ ಉಳಿಸುವ ಕೌಶಲ್ಯವಾಗಿದೆ. ಆದರೆ ಇದನ್ನು ಸರಿಯಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:45 am, Fri, 13 September 24

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ