AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Silent heart attack: ಟಿವಿ ನಟ ವಿಕಾಸ್ ಸೇಥಿಗೆ ಹೃದಯಾಘಾತ: ಅಜೀರ್ಣತೆ ದೇಹ ನೀಡುವ ಎಚ್ಚರಿಕೆಯಾಗಿರಬಹುದೇ?

silent heart attack: ಸಾವು ಯಾರನ್ನೂ ಬಿಡುವುದಿಲ್ಲ ಆದರೆ ದೇಹ ಕೆಲವೊಮ್ಮೆ ನೀಡುವ ಸೂಚನೆಗಳನ್ನು ನಾವು ನಿರ್ಲಕ್ಷಿಸಬಾರದು. ಅದರಲ್ಲಿಯೂ ಕೆಲವೊಮ್ಮೆ ಹೃದಯಾಘಾತಕ್ಕೆ ಕಾರಣವಾಗಬಹುದಾದ ಲಕ್ಷಣಗಳನ್ನು ಸಮಯೋಚಿತವಾಗಿ ಗುರುತಿಸುವುದು ಕೂಡ ಬಹಳ ಮುಖ್ಯವಾಗುತ್ತದೆ ಎಂಬುದು ನಟ ವಿಕಾಸ್ ಸೇಥಿ ಅವರ ಸಾವಿನಿಂದ ತಿಳಿದು ಬರುತ್ತದೆ. ಏಕೆಂದರೆ ವಿಕಾಸ್ ಸೇಥಿ ಪತ್ನಿ ಜಾಹ್ನವಿ ಸೇಥಿ ಅವರು ಹೇಳುವ ಪ್ರಕಾರ "ಅವರಿಗೆ ಕೇವಲ ವಾಂತಿ ಮತ್ತು ಭೇದಿ ಮಾತ್ರ ಕಂಡು ಬಂದಿತ್ತು. ಹಾಗಾಗಿ ಅವರು ಆಸ್ಪತ್ರೆಗೆ ಹೋಗಲು ಬಯಸಲಿಲ್ಲ, ಆದ್ದರಿಂದ ನಾವು ವೈದ್ಯರನ್ನು ಮನೆಗೆ ಬರಲು ಕೇಳಿದೆವು. ಭಾನುವಾರ ಬೆಳಿಗ್ಗೆ ನಾನು 6 ಗಂಟೆಗೆ ಅವರನ್ನು ಎಬ್ಬಿಸಲು ಹೋದಾಗ, ಅವರು ಎದ್ದೇಳಲಿಲ್ಲ. ಹೃದಯ ಸ್ತಂಭನದಿಂದಾಗಿ ಅವರು ರಾತ್ರಿ ನಿದ್ರೆಯಲ್ಲಿಯೇ ನಿಧನರಾದರು ಎಂದು ನಮ್ಮ ವೈದ್ಯರು ತಿಳಿಸಿದರು" ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ. ಹಾಗಾದರೆ ಅಜೀರ್ಣತೆಗೂ, ಹೃದಯದ ಆರೋಗ್ಯಕ್ಕೂ ಸಂಬಂಧವಿದೆಯೇ? ಈ ಬಗ್ಗೆ ತಜ್ಞರ ಅಭಿಪ್ರಾಯವೇನು? ಇಲ್ಲಿದೆ ಮಾಹಿತಿ.

Silent heart attack: ಟಿವಿ ನಟ ವಿಕಾಸ್ ಸೇಥಿಗೆ ಹೃದಯಾಘಾತ: ಅಜೀರ್ಣತೆ ದೇಹ ನೀಡುವ ಎಚ್ಚರಿಕೆಯಾಗಿರಬಹುದೇ?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Sep 12, 2024 | 4:44 PM

Share

ಟಿವಿ ನಟ ವಿಕಾಸ್ ಸೇಥಿ (48) ಅವರ ಹಠಾತ್ ಸಾವು ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಹೆಚ್ಚು ಕಾಳಜಿ ವಹಿಸಬೇಕು ಎನ್ನುವುದನ್ನು ಒತ್ತಿ ಹೇಳುತ್ತದೆ. ಸಾವು ಯಾರನ್ನೂ ಬಿಡುವುದಿಲ್ಲ ಆದರೆ ದೇಹ ಕೆಲವೊಮ್ಮೆ ನೀಡುವ ಸೂಚನೆಗಳನ್ನು ನಾವು ನಿರ್ಲಕ್ಷಿಸಬಾರದು. ಅದರಲ್ಲಿಯೂ ಕೆಲವೊಮ್ಮೆ ಹೃದಯಾಘಾತಕ್ಕೆ ಕಾರಣವಾಗಬಹುದಾದ ಲಕ್ಷಣಗಳನ್ನು ಸಮಯೋಚಿತವಾಗಿ ಗುರುತಿಸುವುದು ಕೂಡ ಬಹಳ ಮುಖ್ಯವಾಗುತ್ತದೆ ಎಂಬುದು ಈ ಸಾವಿನಿಂದ ತಿಳಿದು ಬರುತ್ತದೆ. ಏಕೆಂದರೆ ವಿಕಾಸ್ ಸೇಥಿ ಪತ್ನಿ ಜಾಹ್ನವಿ ಸೇಥಿ ಅವರು ಹೇಳುವ ಪ್ರಕಾರ “ಅವರಿಗೆ ಕೇವಲ ವಾಂತಿ ಮತ್ತು ಭೇದಿ ಮಾತ್ರ ಕಂಡು ಬಂದಿತ್ತು. ಹಾಗಾಗಿ ಅವರು ಆಸ್ಪತ್ರೆಗೆ ಹೋಗಲು ಬಯಸಲಿಲ್ಲ, ಆದ್ದರಿಂದ ನಾವು ವೈದ್ಯರನ್ನು ಮನೆಗೆ ಬರಲು ಕೇಳಿದೆವು. ಭಾನುವಾರ ಬೆಳಿಗ್ಗೆ ನಾನು 6 ಗಂಟೆಗೆ ಅವರನ್ನು ಎಬ್ಬಿಸಲು ಹೋದಾಗ, ಅವರು ಎದ್ದೇಳಲಿಲ್ಲ. ಹೃದಯ ಸ್ತಂಭನದಿಂದಾಗಿ ಅವರು ರಾತ್ರಿ ನಿದ್ರೆಯಲ್ಲಿಯೇ ನಿಧನರಾದರು ಎಂದು ನಮ್ಮ ವೈದ್ಯರು ತಿಳಿಸಿದರು” ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ. ಹಾಗಾದರೆ ಅಜೀರ್ಣತೆಗೂ ಹೃದಯದ ಆರೋಗ್ಯಕ್ಕೂ ಸಂಬಂಧವಿದೆಯೇ? ಈ ಬಗ್ಗೆ ತಜ್ಞರ ಅಭಿಪ್ರಾಯವೇನು? ಇಲ್ಲಿದೆ ಮಾಹಿತಿ.

ಜೀರ್ಣಕಾರಿ ಸಮಸ್ಯೆಗೂ ಹೃದಯದ ಆರೋಗ್ಯಕ್ಕೂ ಇರುವ ಸಂಬಂಧವೇನು?

ಹೃದಯಾಘಾತ ಗಂಭೀರ ಆರೋಗ್ಯ ಸಮಸ್ಯೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಕೆಲವು ಸಂದರ್ಭಗಳಲ್ಲಿ ಇದು ಸಾವಿಗೂ ಕಾರಣವಾಗಬಹುದು. ಅದಕ್ಕಾಗಿಯೇ ದೇಹ ನೀಡುವ ಆರಂಭಿಕ ಎಚ್ಚರಿಕೆಗಳನ್ನು ಮತ್ತು ಕೆಲವು ರೋಗಲಕ್ಷಣಗಳನ್ನು ಸರಿಯಾಗಿ ಗಮನಿಸುವುದು ಬಹಳ ಮುಖ್ಯವಾಗುತ್ತದೆ. ಕಾರ್ಡಿಯಾಲಜಿಸ್ಟ್ ಡಾ. ಆನಂದ್ ರಾಮ್ ಅವರ ಪ್ರಕಾರ, ವಾಕರಿಕೆ, ವಾಂತಿಯಂತಹ ಸಂವೇದನಾ ರೋಗಲಕ್ಷಣಗಳು ನಿಮ್ಮ ಹೃದಯವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದರ ಎಚ್ಚರಿಕೆಯ ಸಂಕೇತಗಳಾಗಿವೆ. ವಾಂತಿ ಮತ್ತು ಭೇದಿಯಂತಹ ರೋಗಲಕ್ಷಣಗಳು ಕೆಲವೊಮ್ಮೆ ಸಾಮಾನ್ಯ ಜಠರಗರುಳಿನ ಸಮಸ್ಯೆಗಳಿಗಿಂತ ಹೆಚ್ಚಾಗಿರಬಹುದು ಎಂದು ಡಾ. ರಾಮ್ ಹೇಳುತ್ತಾರೆ. “ಇದು ಎದೆ ನೋವು, ಉಸಿರಾಟದ ತೊಂದರೆ, ವಾಕರಿಕೆ, ಅಸ್ವಸ್ಥತೆ, ಶೀತ ಬೆವರು, ಆಯಾಸ, ಉಸಿರುಗಟ್ಟುವಿಕೆಯ ಅನುಭವ, ಹಠಾತ್ ಕುಸಿತ ಮತ್ತು ಪ್ರಜ್ಞೆ ಕಳೆದುಕೊಳ್ಳುವಿಕೆಯಂತಹ ರೋಗಲಕ್ಷಣಗಳನ್ನು ವ್ಯಕ್ತಪಡಿಸಬಹುದು” ಎಂದು ಅವರು ಹೇಳುತ್ತಾರೆ.

ಎದೆ ನೋವು ಬರದೆ ಹೃದಯಾಘಾತವಾಗಬಹುದು ಎಚ್ಚರ

ಹೈದರಾಬಾದ್ನ ಅಪೊಲೊ ಆಸ್ಪತ್ರೆಯ ಕನ್ಸಲ್ಟೆಂಟ್ ನ್ಯೂರಾಲಜಿಸ್ಟ್ ಡಾ. ಸುಧೀರ್ ಕುಮಾರ್ ಅವರು ಹೇಳುವ ಪ್ರಕಾರ, “ನಮಗೆ ಹೃದಯಾಘಾತದ ಸಾಮಾನ್ಯ ಲಕ್ಷಣವೆಂದರೆ ಎದೆ ನೋವು ಆದರೆ ಹೃದಯಾಘಾತದ ಶೇಕಡಾ 8- 33 ರಷ್ಟು ಪ್ರಕರಣಗಳಲ್ಲಿ ಎದೆ ನೋವು ಇರುವುದಿಲ್ಲ. ನಟ ವಿಕಾಸ್ ಅವರ ವಿಷಯದಲ್ಲಿಯೂ ಇದೆ ಆಗಿರುವುದು. ಅವರು ನಿದ್ರೆಯಲ್ಲಿರುವಾಗ ಹೃದಯ ಸ್ತಂಭನಕ್ಕೆ ಒಳಗಾಗಿದ್ದರು (ಇದು ಹೆಚ್ಚಾಗಿ ಹೃದಯಾಘಾತದಿಂದ ಉಂಟಾಗಿರಬಹುದು), ಹೃದಯಾಘಾತವು ಹೊಟ್ಟೆ ನೋವು, ವಾಕರಿಕೆ, ವಾಂತಿ ಮತ್ತು ಸಡಿಲವಾದ ಮಲದಂತಹ ರೋಗಲಕ್ಷಣಗಳೊಂದಿಗೆ ಕಾಣಿಸಿಕೊಳ್ಳಬಹುದು, ಅಲ್ಲದೆ ಇದು ಗ್ಯಾಸ್ಟ್ರೋಎಂಟರೈಟಿಸ್ ಅಥವಾ ಆಸಿಡ್ ಪೆಪ್ಟಿಕ್ ಕಾಯಿಲೆಯಂತಹ ರೋಗಗಳ ಲಕ್ಷಣವೂ ಆಗಿದೆ. ಅಂದರೆ ಈ ಆರೋಗ್ಯ ಸಮಸ್ಯೆಗಳಲ್ಲಿಯೂ ಇದೆ ರೀತಿಯ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ” ಎಂದು ಅವರು ಹೇಳಿದ್ದಾರೆ.

ಈ ರೀತಿ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ

“ಹೃದಯಕ್ಕೆ ರಕ್ತದ ಹರಿವು ಹಠಾತ್ ಅಡ್ಡಿಯಾದಾಗ, ದೇಹವು ಒತ್ತಡದ ಪ್ರತಿಕ್ರಿಯೆಗಳನ್ನು ಪ್ರಾರಂಭಿಸುತ್ತದೆ, ಅದು ನಿಮ್ಮ ಜೀರ್ಣಕಾರಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅತಿಸಾರ ಮತ್ತು ವಾಂತಿಯಂತಹ ಲಕ್ಷಣಗಳಿಗೆ ಕಾರಣವಾಗಬಹುದು. ಆದರೆ ಈ ರೋಗಲಕ್ಷಣಗಳು ನಿಮ್ಮ ಹೃದಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿರಬಹುದು. ವೈದ್ಯರು ಸೂಚಿಸುವ ಕೆಲವು ಔಷಧಿಗಳಿಂದಾಗಿ ಅಲರ್ಜಿಯಾಗುವುದು, ಅತಿಯಾದ ಒತ್ತಡ, ಆತಂಕ, ಖಿನ್ನತೆ, ಜಠರಗರುಳಿನ ಸಮಸ್ಯೆಗಳು, ಆಹಾರ ವಿಷವಾಗುವುದು, ಅಲ್ಸರ್ ಗಳು ಅಥವಾ ಉರಿಯೂತದ ಕರುಳಿನ ಕಾಯಿಲೆಯಂತಹ ಆರೋಗ್ಯ ಸಮಸ್ಯೆಗಳನ್ನು ಇದು ಒಳಗೊಂಡಿರಬಹುದು. ಹಾಗಾಗಿ ನೀವು ಸಾಕಷ್ಟು ವಿಶ್ರಾಂತಿ ಪಡೆದ ನಂತರವೂ ಈ ರೋಗಲಕ್ಷಣಗಳು ಅಂದರೆ ಕೆಲವು ಗಂಟೆಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ, ಸಮಯೋಚಿತ ರೋಗನಿರ್ಣಯಕ್ಕಾಗಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಅವರು ನಿಮ್ಮ ಸ್ಥಿತಿ ಮತ್ತು ಅದರ ಮೂಲ ಕಾರಣವನ್ನು ನಿರ್ಧರಿಸಲು ಸಹಕಾರಿಯಾಗಬಹುದು” ಎಂದು ಡಾ. ರಾಮ್ ಹೇಳಿದರು.

ಇದನ್ನೂ ಓದಿ: ನಿಮ್ಮ ಮಕ್ಕಳಲ್ಲಿ ಹೆಪಟೈಟಿಸ್ ತಡೆಯಲು ಡಾ. ರಾಕೇಶ್ ಹೇಳಿರುವ ಈ ಸಲಹೆಯನ್ನು ಅನುಸರಿಸಿ

ಎದೆನೋವು ಇಲ್ಲದ ರೋಗಿಗಳಲ್ಲಿ, ಹೃದಯಾಘಾತದ ರೋಗನಿರ್ಣಯ ಕೆಲವೊಮ್ಮೆ ತಪ್ಪಾಗುತ್ತದೆ ಅಥವಾ ವಿಳಂಬವಾಗುತ್ತದೆ. ಆದರೆ ಸಕಾಲಿಕ ರೋಗನಿರ್ಣಯ ಮತ್ತು ಚಿಕಿತ್ಸೆಯು ಜೀವಗಳನ್ನು ಉಳಿಸಬಹುದು ಹಾಗಾಗಿ ದೇಹ ನೀಡುವ ಮುನ್ಸೂಚನೆಯನ್ನು ನಿರ್ಲಕ್ಷಿಸಬೇಡಿ. ಜೀವಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ ಎಂಬುದನ್ನು ಎಂದಿಗೂ ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು