ಮದ್ಯ ಸೇವನೆ ಮಾಡಿದ ಮೇಲೆ ನಶೆ ಹೇಗೆ ಏರುತ್ತದೆ ಎಂಬುದು ತಿಳಿದಿದೆಯಾ!

ಮದ್ಯ ತಯಾರಕರಿಂದ ಹಿಡಿದು ಕುಡಿಯುವರಿಗೆ ಎಲ್ಲರಿಗೂ ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಮಾರಕ ಎಂಬುದು ಸ್ಪಷ್ಟವಾಗಿ ತಿಳಿದಿರುವ ಸತ್ಯ. ಆದರೂ ಇದರ ವ್ಯಸನಿಗಳಿಗೆ ಇದನ್ನು ತ್ಯಜಿಸಲು ಸಾಧ್ಯವಾಗುವುದಿಲ್ಲ. ಮದ್ಯ ಹೊಟ್ಟೆಗಿಳಿದರೆ ಜನ ಲೋಕವನ್ನೇ ಮರೆತು ಬಿಡುತ್ತಾರೆ. ಆದರೆ ನೀವು ಎಂದಾದರೂ ಯೋಚಿಸಿದ್ದೀರಾ? ಮದ್ಯ ಸೇವನೆ ಮಾಡಿದ ಮೇಲೆ ನಶೆ ಹೇಗೆ ಏರುತ್ತದೆ? ಆತ ಮದ್ಯ ಸೇವನೆ ಮಾಡಿದ ಮೇಲೆ ಅಷ್ಟು ಸಂತೋಷದಿಂದ ಇರಲು ಹೇಗೆ ಸಾಧ್ಯ? ಇವು ಸಹಜ ವಿಷಯ ಎನಿಸಿದರೂ ಕೂಡ, ಮದ್ಯ ಸೇವನೆಯಿಂದ ನಶೆ ಹೇಗೆ ಏರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

ಮದ್ಯ ಸೇವನೆ ಮಾಡಿದ ಮೇಲೆ ನಶೆ ಹೇಗೆ ಏರುತ್ತದೆ ಎಂಬುದು ತಿಳಿದಿದೆಯಾ!
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 13, 2024 | 5:42 PM

ಮದ್ಯಪಾನ ಆರೋಗ್ಯಕ್ಕೆ ಮಾರಕ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅದರಲ್ಲಿಯೂ ಮದ್ಯ ತಯಾರಕರಿಂದ ಹಿಡಿದು ಕುಡಿಯುವವರಿಗೆ ಎಲ್ಲರಿಗೂ ಇದು ಸ್ಪಷ್ಟವಾಗಿ ತಿಳಿದಿರುವ ಸತ್ಯ. ಆದರೂ ಇದರ ವ್ಯಸನಿಗಳಿಗೆ ಇದನ್ನು ತ್ಯಜಿಸಲು ಸಾಧ್ಯವಾಗುವುದಿಲ್ಲ. ಮದ್ಯ ಹೊಟ್ಟೆಗಿಳಿದರೆ ಜನ ಲೋಕವನ್ನೇ ಮರೆತು ಬಿಡುತ್ತಾರೆ. ಆದರೆ ನೀವು ಎಂದಾದರೂ ಯೋಚಿಸಿದ್ದೀರಾ? ಮದ್ಯ ಸೇವನೆ ಮಾಡಿದ ಮೇಲೆ ನಶೆ ಹೇಗೆ ಏರುತ್ತದೆ? ಆತ ಮದ್ಯ ಸೇವನೆ ಮಾಡಿದ ಮೇಲೆ ಅಷ್ಟು ಸಂತೋಷದಿಂದ ಇರಲು ಹೇಗೆ ಸಾಧ್ಯ? ಇವು ಸಹಜ ವಿಷಯ ಎನಿಸಿದರೂ ಕೂಡ, ಮದ್ಯ ಸೇವನೆಯಿಂದ ನಶೆ ಹೇಗೆ ಏರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

ಒಬ್ಬ ವ್ಯಕ್ತಿ ಎಣ್ಣೆ ಕುಡಿದಾಗ ಅದು ಆತನ ಗಂಟಿಲಿನ ಮೂಲಕ ಹೊಟ್ಟೆಗೆ ಹಾದು ಹೋಗುತ್ತದೆ. ಬಳಿಕ ಹೊಟ್ಟೆಯಿಂದ 20% ಆಲ್ಕೋಹಾಲ್ ರಕ್ತದೊಳಗೆ ಬೆರೆಯುತ್ತದೆ. ಇದು ರಕ್ತದಲ್ಲಿ ಬೆರೆತು ಯಕೃತ್ತಿನೊಳಗೆ ಹೋಗುತ್ತದೆ. ಆಗ ನಮ್ಮ ಯಕೃತ್ತು ಇದನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡುತ್ತದೆ. ಮೊದಲ ಹಂತದಲ್ಲಿ ಆಲ್ಕೋಹಾಲ್ ನಲ್ಲಿ ಇರುವ, ಎಡಿಹೆಚ್ ಏನ್ಜಯಂ ಎಣ್ಣೆಯನ್ನು ವಿಷಕಾರಿ ಮಾಡುತ್ತದೆ. ಆದರೆ ಯಕೃತ್ತಿನ ಎಲ್ ಡಿಹೆಚ್ ಏನ್ಜಯಂ ಈ ಆಲ್ಕೋಹಾಲ್ ರಕ್ತಕ್ಕೆ ಕಡಿಮೆ ಅಪಾಯಕಾರಿಯಾಗುವಂತೆ ಮಾಡುತ್ತದೆ. ನಂತರ ಈ ಎಣ್ಣೆ ರಕ್ತದಲ್ಲಿ ಬೆರೆತು ನ್ಯೂರಾನ್ ತಲುಪುತ್ತದೆ. ಈ ರೀತಿಯಾದಾಗ ಮೆದುಳಿನ ನ್ಯೂರಾನ್ ಗಳು ಡೊಪಾಮೈನ್ ಗಳನ್ನು ಬಿಡುಗಡೆ ಮಾಡಲು ಆರಂಭಿಸುತ್ತದೆ. ಇದರಿಂದ ವ್ಯಕ್ತಿಗೆ ತುಂಬಾ ಖುಷಿಯಾಗುವುದಲ್ಲದೆ ನಶೆ ಏರಿದಂತೆ ಆಗುತ್ತದೆ.

ಇದನ್ನೂ ಓದಿ: ದೃಷ್ಟಿ ಸಮಸ್ಯೆ ಹೆಚ್ಚಾಗುತ್ತಿದ್ದರೆ ಈ ರೋಗದ ಲಕ್ಷಣ ಆಗಿರಬಹುದು ಎಚ್ಚರ!

ಮದ್ಯ ನಮ್ಮ ಜೀರ್ಣಾಂಗಗಳಲ್ಲಿ ಜೀರ್ಣವಾಗದೇ ನೇರವಾಗಿ ಕರುಳುಗಳಿಂದ ರಕ್ತಕ್ಕೆ ಹೀರಲ್ಪಡುತ್ತದೆ. ಸುಲಭವಾಗಿ ಹೇಳಬೇಕೆಂದರೆ ಒಂದು ಇಂಜೆಕ್ಷನ್ ಮೂಲಕ ನರಕ್ಕೆ ಮದ್ಯವನ್ನು ಸೇರಿಸಿದ ಹಾಗೆಯೇ ಈ ಪ್ರಕ್ರಿಯೆ ಇರುತ್ತದೆ. ಇದು ಮೆದುಳಿಗೆ ತಲುಪಿದ ಬಳಿಕ ಮೆದುಳಿನ ಕಾರ್ಯಕ್ಷಮತೆ ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ ಹಾಗೂ ದೇಹದ ಚಟುವಟಿಕೆಯ ಮೇಲಿನ ಹತೋಟಿಯೂ ಕಡಿಮೆಯಾಗುತ್ತದೆ. ಇದನ್ನೇ ಅಮಲು ಎನ್ನುತ್ತಾರೆ. ಈ ರೀತಿ ಆಗುವುದನ್ನು ವ್ಯಸನಿಗಳು ಮದ್ಯಕ್ಕೆ ನೋವನ್ನು ಮರೆಸುವ ಶಕ್ತಿ ಇದೆ ಎಂದು ನಂಬುತ್ತಾರೆ. ಆದರೆ ಆ ನಶೆ ಅಥವಾ ಅಮಲಿನಿಂದಾಗಿ ಮೆದುಳು ಯೋಚಿಸುವ ಕ್ಷಮತೆಯನ್ನು ಕಳೆದು ಕೊಂಡಿರುವುದರಿಂದ ಜನರು ತಮ್ಮ ವಿವೇಕವನ್ನೇ ಕಳೆದುಕೊಂಡಿರುತ್ತಾರೆ ಅಷ್ಟೇ. ಅದರ ಹೊರತು ಮದ್ಯಕ್ಕೆ ಯಾವ ರೀತಿಯ ಶಕ್ತಿಯೂ ಇರುವುದಿಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ