Rheumatoid Arthritis: ದೃಷ್ಟಿ ಸಮಸ್ಯೆ ಹೆಚ್ಚಾಗುತ್ತಿದ್ದರೆ ಈ ರೋಗದ ಲಕ್ಷಣ ಆಗಿರಬಹುದು ಎಚ್ಚರ!

ಸಂಧಿವಾತದಲ್ಲಿ ಸಾಮಾನ್ಯವಾಗಿ ಎರಡು ವಿಧಗಳಿವೆ. ಅಸ್ಥಿಸಂಧಿವಾತ, ರುಮಟಾಯ್ಡ್ ಸಂಧಿವಾತ. ನೀವು ಅಸ್ಥಿಸಂಧಿವಾತದಿಂದ ಬಳಲುತ್ತಿದ್ದರೆ, ನಿಮಗೆ ಕೀಲು ನೋವು ಮತ್ತು ಸ್ನಾಯು ನೋವು ಹೆಚ್ಚಾಗಿ ಕಂಡು ಬರುತ್ತದೆ. ಆದರೆ ರುಮಟಾಯ್ಡ್ ಸಂಧಿವಾತದಲ್ಲಿ ಹಾಗಲ್ಲ. ಇದರಲ್ಲಿ ಕೀಲು ಮತ್ತು ಸ್ನಾಯು ನೋವಿನ ಜೊತೆಗೆ, ದೇಹದಲ್ಲಿ ವಿವಿಧ ರೀತಿಯ ಸಮಸ್ಯೆಗಳು ಸಹ ಕಂಡು ಬರುತ್ತವೆ. ನಿಮ್ಮ ಶ್ವಾಸಕೋಶ ಮತ್ತು ಹೃದಯ ರಕ್ತನಾಳಗಳಲ್ಲಿ ಸಮಸ್ಯೆಗಳು ಉಂಟಾಗಬಹುದು. ಬರು ಬರುತ್ತಾ ಇದು ಕಣ್ಣಿನ ದೃಷ್ಟಿಯ ಮೇಲೂ ಪರಿಣಾಮ ಬೀರುತ್ತದೆ. ಹಾಗಾದರೆ ಇದರಿಂದ ದೃಷ್ಟಿ ಸಮಸ್ಯೆ ಹೆಚ್ಚಾಗುತ್ತದೆಯೇ? ಇದನ್ನು ತಡೆಯಲು ಸರಳವಾಗಿ ಮಾಡಬಹುದಾದ ಕೆಲಸಗಳೇನು? ಇಲ್ಲಿದೆ ಮಾಹಿತಿ.

Rheumatoid Arthritis: ದೃಷ್ಟಿ ಸಮಸ್ಯೆ ಹೆಚ್ಚಾಗುತ್ತಿದ್ದರೆ ಈ ರೋಗದ ಲಕ್ಷಣ ಆಗಿರಬಹುದು ಎಚ್ಚರ!
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 13, 2024 | 3:34 PM

ಇತ್ತೀಚಿನ ದಿನಗಳಲ್ಲಿ ಸಂಧಿವಾತವು ಪ್ರತಿ ಮನೆಯಲ್ಲೂ ಹೆಚ್ಚಾಗುತ್ತಿದ್ದು, ಸಾಮಾನ್ಯ ಸಮಸ್ಯೆಯಾಗಿದೆ. ವಯಸ್ಸಾದಂತೆ ದೇಹದಲ್ಲಿ ಬೇರೂರುವ ರೋಗಗಳಲ್ಲಿ ಇದು ಒಂದಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಕೇವಲ ವಯಸ್ಸಾದವರಲ್ಲಿ ಮಾತ್ರವಲ್ಲದೆ ಮಕ್ಕಳಲ್ಲಿಯೂ ಕಂಡುಬರುತ್ತಿದೆ. ಸಂಧಿವಾತದಲ್ಲಿ ಸಾಮಾನ್ಯವಾಗಿ ಎರಡು ವಿಧಗಳಿವೆ. ಅಸ್ಥಿಸಂಧಿವಾತ, ರುಮಟಾಯ್ಡ್ ಸಂಧಿವಾತ. ನೀವು ಅಸ್ಥಿಸಂಧಿವಾತದಿಂದ ಬಳಲುತ್ತಿದ್ದರೆ, ನಿಮಗೆ ಕೀಲು ನೋವು ಮತ್ತು ಸ್ನಾಯು ನೋವು ಹೆಚ್ಚಾಗಿ ಕಂಡು ಬರುತ್ತದೆ. ಆದರೆ ರುಮಟಾಯ್ಡ್ ಸಂಧಿವಾತದಲ್ಲಿ ಹಾಗಲ್ಲ. ಇದರಲ್ಲಿ ಕೀಲು ಮತ್ತು ಸ್ನಾಯು ನೋವಿನ ಜೊತೆಗೆ, ದೇಹದಲ್ಲಿ ವಿವಿಧ ರೀತಿಯ ಸಮಸ್ಯೆಗಳು ಸಹ ಕಂಡು ಬರುತ್ತವೆ. ನಿಮ್ಮ ಶ್ವಾಸಕೋಶ ಮತ್ತು ಹೃದಯ ರಕ್ತನಾಳಗಳಲ್ಲಿ ಸಮಸ್ಯೆಗಳು ಉಂಟಾಗಬಹುದು. ಬರು ಬರುತ್ತಾ ಇದು ಕಣ್ಣಿನ ದೃಷ್ಟಿಯ ಮೇಲೂ ಪರಿಣಾಮ ಬೀರುತ್ತದೆ. ಹಾಗಾದರೆ ಇದರಿಂದ ದೃಷ್ಟಿ ಸಮಸ್ಯೆ ಹೆಚ್ಚಾಗುತ್ತದೆಯೇ? ಇದನ್ನು ತಡೆಯಲು ಸರಳವಾಗಿ ಮಾಡಬಹುದಾದ ಕೆಲಸಗಳೇನು? ಇಲ್ಲಿದೆ ಮಾಹಿತಿ.

ವೈದ್ಯರ ಪ್ರಕಾರ ರುಮಟಾಯ್ಡ್ ಸಂಧಿವಾತದ ಸಮಸ್ಯೆ ಹೆಚ್ಚಾದಾಗ, ಇದು ಕಣ್ಣಿನ ಆರೋಗ್ಯದ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತವೆ. ಸಮಯಕ್ಕೆ ಸರಿಯಾಗಿ ಮದ್ದನ್ನು ನೀಡದಿದ್ದರೆ, ದೃಷ್ಟಿ ಕಳೆದುಕೊಳ್ಳುವ ಅಪಾಯವಿರುತ್ತದೆ. ಆದ್ದರಿಂದ, ಕಣ್ಣುಗಳು ಪದೇ ಪದೇ ಒಣಗುತ್ತಿದ್ದರೆ, ಕಿರಿಕಿರಿ, ಕೆಂಪಾಗುವುದು ಅಥವಾ ತುರಿಕೆ ಕಂಡು ಬರುವುದು, ನೀರು ಬರುವುದು, ಮಸುಕಾದ ದೃಷ್ಟಿ ಸಮಸ್ಯೆ. ನಿಮ್ಮಲ್ಲಿಯೂ ಈ ಯಾವುದೇ ರೋಗಲಕ್ಷಣಗಳು ಕಾಣಿಸಿಕೊಂಡರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಕಣ್ಣುಗಳು ನಮ್ಮ ದೇಹದ ಪ್ರಮುಖ ಮತ್ತು ಸೂಕ್ಷ್ಮ ಭಾಗಗಳಲ್ಲಿ ಒಂದಾಗಿದೆ. ಹಾಗಾಗಿ ಈ ರೋಗಲಕ್ಷಣಗಳನ್ನು ನಾವು ನಿರ್ಲಕ್ಷಿಸುವಂತಿಲ್ಲ.

ಇದನ್ನೂ ಓದಿ: ಉಪ್ಪಿನಕಾಯಿ ಇಷ್ಟ ಪಡುತ್ತೀರಾ? ಇದರಿಂದ ಎಷ್ಟೆಲ್ಲಾ ಆರೋಗ್ಯ ಸಮಸ್ಯೆಗಳಿವೆ ನೋಡಿ

ನಿಯಮಿತ ಈಜು ದೇಹಕ್ಕೆ ಒಳ್ಳೆಯದು

ಅದಕ್ಕಾಗಿಯೇ ಈ ಸಮಸ್ಯೆಯನ್ನು ತಡೆಯಲು ನೀವು ಮೊದಲು ನಿಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಸಂಧಿವಾತದ ನೋವಿಗೆ ಪ್ರಮುಖ ಕಾರಣವೆಂದರೆ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಕೊರತೆ. ಆದ್ದರಿಂದ ನಿಮ್ಮ ದೈನಂದಿನ ಆಹಾರದಲ್ಲಿ ಈ ಎರಡು ಪದಾರ್ಥಗಳನ್ನು ಸೇವನೆ ಮಾಡುವುದು ಬಹಳ ಮುಖ್ಯ. ಜೊತೆಗೆ ನಿಮ್ಮ ತೂಕ ಕಡಿಮೆ ಇರಲಿ. ಅಗತ್ಯವಿದ್ದರೆ ನಿಯಮಿತವಾಗಿ ವ್ಯಾಯಾಮ ಮಾಡಿ. ಇದು ಮೂಳೆ ನೋವನ್ನು ನಿಯಂತ್ರಣದಲ್ಲಿಡುತ್ತದೆ. ಜೊತೆಗೆ ಕೀಲುಗಳು ಆರೋಗ್ಯಕರವಾಗಿರುತ್ತದೆ. ಸಂಧಿವಾತ ಇರುವವರು ಈಜಾಡುವುದು ಅವರ ದೇಹಕ್ಕೆ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ನಿಯಮಿತ ಈಜು ಸ್ನಾಯುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ದೇಹದ ಕಾರ್ಯವನ್ನು ಹೆಚ್ಚಿಸುತ್ತದೆ. ಮೊಣಕಾಲು ಮತ್ತು ಸೊಂಟದ ಬಲವೂ ಹೆಚ್ಚಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ