Pimple Problem: ಏಳು ದಿನದಲ್ಲಿ ಮೊಡವೆ ಸಮಸ್ಯೆ ನಿವಾರಿಸಬಲ್ಲ ಪತಂಜಲಿ ದಿವ್ಯ ಕಾಂತಿ ಲೇಪ ಮತ್ತು ನೀಮ್ ಘನ್ ವಟಿ ಔಷಧಗಳು
Patanjali's Acne Solution: Divya Kanti Lep & Neem Ghan Vati Review: ಪತಂಜಲಿಯ ದಿವ್ಯ ಕಾಂತಿ ಲೇಪ ಮತ್ತು ನೀಮ್ ಘನ್ ವಟಿ ಔಷಧಗಳು ಮೊಡವೆ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ಎಂದು ಹೇಳಲಾಗಿದೆ. ಸಂಶೋಧನೆಗಳಿಂದ ಇದನ್ನು ದೃಢಪಡಿಸಲಾಗಿದೆ. ಈ ಉತ್ಪನ್ನಗಳು ಸಂಪೂರ್ಣವಾಗಿ ಆಯುರ್ವೇದಿಕವಾಗಿದ್ದು, ಯಾವುದೇ ಅಡ್ಡಪರಿಣಾಮಗಳಿಲ್ಲದೆ ಚರ್ಮವನ್ನು ಸ್ವಚ್ಛಗೊಳಿಸುತ್ತದೆ. 7 ದಿನಗಳ ಬಳಕೆಯ ನಂತರ ಫಲಿತಾಂಶಗಳು ಗೋಚರಿಸುತ್ತವೆ.

ನಿಮ್ಮ ಮುಖದಲ್ಲಿ ಪದೇ ಪದೇ ಮೊಡವೆಗಳು ಬಂದು ಕಿರಿಕಿರಿ ಎನಿಸುತ್ತಿದೆಯಾ? ದುಬಾರಿ ಎನಿಸಿರುವ ಬ್ಯೂಟಿ ಪ್ರಾಡಕ್ಟ್ಸ್ ಬಳಸಿ ನಿರಪಯುಕ್ತ ಎನಿಸುತ್ತಿದೆಯಾ? ನಿಮಗೆ ಪತಂಜಲಿಯಿಂದ ಸುಲಭ ಪರಿಹಾರ ಬಂದಿದೆ. ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ಪತಂಜಲಿ ಸಂಸ್ಥೆ ಏಳು ದಿನದಲ್ಲಿ ನಿಮ್ಮ ಪಿಂಪಲ್ಸ್ ನಿವಾರಿಸಬಲ್ಲಂತಹ ಆಯುರ್ವೇದ ಉತ್ಪನ್ನಗಳನ್ನು ಸಿದ್ಧಪಡಿಸಿದೆ. ‘ದಿವ್ಯ ಕಾಂತಿ ಲೇಪ’ (Divya Kanti Lep) ಮತ್ತು ‘ನೀಮ್ ಘನ್ ವಟಿ’ (Neem Ghan Vati) ಹೆಸರಿನ ಈ ಉತ್ಪನ್ನಗಳು ಮೊಡವೆ ನಿವಾರಣೆಗೆ ಪರಿಣಾಮಕಾರಿ ಎಂಬುದನ್ನು ಸಂಶೋಧನೆಗಳೂ ದೃಢಪಡಿಸಿವೆಯಂತೆ. ಈ ಔಷಧಗಳು ಯಾವುದೇ ಅಡ್ಡಪರಿಣಾಮ ಇಲ್ಲದೇ, ಮುಖದಿಂದ ಮೊಡವೆ ಮಾಯವಾಗುವಂತೆ ಮಾಡಬಲ್ಲುದು ಎಂದು ಹೇಳಲಾಗಿದೆ.
ಪತಂಜಲಿಯ ‘ದಿವ್ಯ ಕಾಂತಿ ಲೇಪ’ ಒಂದು ಹರ್ಬಲ್ ಪೇಸ್ಟ್ ಆಗಿದ್ದು ಇದನ್ನು ಮುಖಕ್ಕೆ ಹಚ್ಚಿಕೊಳ್ಳುವಂಥದ್ದು. ಆದರೆ ‘ನೀಮ್ ಘನ್ ವಟಿ’ ಔಷಧವು ಟ್ಯಾಬ್ಲೆಟ್ ರೂಪದಲ್ಲಿ ಬರುತ್ತದೆ. ಇತರ ಮಾತ್ರೆಗಳ ರೀತಿ ಇದನ್ನು ಸೇವಿಸಬಹುದು. ಈ ಎರಡು ಉತ್ಪನ್ನಗಳ ಸಂಯೋಜನೆಯು ಚರ್ಮವನ್ನು ಒಳಗಿನಿಂದ ಮತ್ತು ಹೊರಗಿನಿಂದ ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಮೊಡವೆಗಳ ಸಮಸ್ಯೆ ಕಡಿಮೆಯಾಗುತ್ತದೆ. ಈ ಔಷಧಗಳ ತಯಾರಿಕೆಯಲ್ಲಿ ಸಂಪೂರ್ಣವಾಗಿ ನೈಸರ್ಗಿಕ ಮತ್ತು ಆಯುರ್ವೇದ ಗಿಡಮೂಲಿಕೆಗಳನ್ನು ಬಳಸಲಾಗಿದೆ. ಇದು ಚರ್ಮವನ್ನು ಒಳಗಿನಿಂದ ಸ್ವಚ್ಛಗೊಳಿಸುವುದು ಮಾತ್ರವಲ್ಲ, ಮೊಡವೆಗಳನ್ನು ಮೂಲದಿಂದಲೇ ನಿವಾರಿಸುತ್ತದೆ.
ಇದನ್ನೂ ಓದಿ: ಪತಂಜಲಿ ದಂತ ಕಾಂತಿ ಟೂತ್ಪೇಸ್ಟ್ ಜನಪ್ರಿಯತೆಗೆ ಕಾರಣ ಏನು? ಶೇ. 89 ಜನರು ಕೊಟ್ಟ ಉತ್ತರ ಇದು
ಮೊಡವೆ ಸಮಸ್ಯೆಗೆ ಪತಂಜಲಿ ಔಷಧ ರಾಮಬಾಣ: ಸಂಶೋಧನೆಯಿಂದ ದೃಢ
ಈ ಔಷಧಿಯನ್ನು ಏಳು ದಿನಗಳ ಕಾಲ ನಿಯಮಿತವಾಗಿ ಸೇವಿಸಿದವರ ಮುಖದಿಂದ ಮೊಡವೆಗಳು ಸಂಪೂರ್ಣವಾಗಿ ಮಾಯವಾಗುತ್ತವೆ ಎಂಬುದು ಇತ್ತೀಚೆಗೆ ಪತಂಜಲಿ ಆಯುರ್ವೇದ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ಕಂಡುಬಂದಿದೆ. ವಿಶೇಷವೆಂದರೆ ಈ ಅವಧಿಯಲ್ಲಿ ಯಾವುದೇ ರೋಗಿಯು ಯಾವುದೇ ಅಡ್ಡಪರಿಣಾಮಗಳಿಂದ ಬಳಲಲಿಲ್ಲ. ಕಲೆಗಳು ಕಡಿಮೆಯಾಗುವುದರ ಜೊತೆಗೆ ಮುಖವು ಮೊದಲಿಗಿಂತ ಹೆಚ್ಚು ಸ್ವಚ್ಛ ಮತ್ತು ಕಾಂತಿಯುತವಾಗಿ ಕಾಣುತ್ತಿತ್ತು. ಈ ಔಷಧಿಯಲ್ಲಿ ಇರುವ ಗಿಡಮೂಲಿಕೆಗಳು ಯಾವ್ಯಾವುವು ಎನ್ನುವ ವಿವರ ಇಲ್ಲಿದೆ:
- ಬೇವು: ಚರ್ಮವನ್ನು ಸ್ವಚ್ಛಗೊಳಿಸುತ್ತದೆ, ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.
- ಗಿಲೋಯ್: ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ತ್ರಿಫಲ: ರಕ್ತವನ್ನು ಶುದ್ಧೀಕರಿಸಿ ವಿಷವನ್ನು ನಿವಾರಿಸಲು ಸಹಾಯ ಮಾಡುತ್ತದೆ.
- ಮಂಜಿಷ್ಠ: ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ, ಕಲೆಗಳನ್ನು ನಿವಾರಿಸುತ್ತದೆ.
- ಹರಿದ್ರಾ(ಅರಿಶಿನ): ಆ್ಯಂಟಿ-ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ ಇನ್ಫ್ಲಮೇಟರಿ ಗುಣ ಹೊಂದಿದೆ.
ಇದನ್ನೂ ಓದಿ: ಪತಂಜಲಿ ದಂತಕಾಂತಿ ಇತರ ಟೂತ್ಪೇಸ್ಟ್ಗಳಿಗಿಂತ ಹೇಗೆ ವಿಭಿನ್ನ? ಇದರ ಜನಪ್ರಿಯತೆಗೆ ಇಲ್ಲಿವೆ ಕಾರಣಗಳು…
ನೀಮ್ ಘನ್ ವಟಿ ಬಳಸುವುದು ಹೇಗೆ?
ನೀಮ್ ಘನ್ ವಟಿ ಟ್ಯಾಬ್ಲೆಟ್ ಅನ್ನು ಊಟದ ನಂತರ ನೀರಿನೊಂದಿಗೆ ದಿನಕ್ಕೆ ಎರಡು ಬಾರಿ ತೆಗೆದುಕೊಳ್ಳಬೇಕು. ಚರ್ಮದ ಸ್ವಚ್ಛತೆ ಬಗ್ಗೆಯೂ ಗಮನ ಹರಿಸುವುದು ಮುಖ್ಯ. ನೀವು ಹೊರಗೆ ಹೋದರೆ, ನಿಮ್ಮ ಮುಖವನ್ನು ಸ್ವಚ್ಛಗೊಳಿಸಿದ ನಂತರವೇ ಔಷಧಿ ತೆಗೆದುಕೊಂಡು ಸಮತೋಲಿತ ಆಹಾರವನ್ನು ಸೇವಿಸಿ. ಹೆಚ್ಚು ಕರಿದ ಮತ್ತು ಎಣ್ಣೆಯುಕ್ತ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ.
ಯಾರು ಬೇಕಾದರೂ ಈ ಔಷಧ ತೆಗೆದುಕೊಳ್ಳಬಹುದೇ?
ಈ ಔಷಧಿ ಸಂಪೂರ್ಣವಾಗಿ ಆಯುರ್ವೇದದ್ದಾಗಿರುವುದರಿಂದ 16 ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ ಇದನ್ನು ತೆಗೆದುಕೊಳ್ಳಬಹುದು. ಆದರೆ ಯಾರಿಗಾದರೂ ಈಗಾಗಲೇ ಚರ್ಮದ ಅಲರ್ಜಿ, ಹಾರ್ಮೋನುಗಳ ಅಸ್ವಸ್ಥತೆ ಅಥವಾ ಯಾವುದೇ ಗಂಭೀರ ಕಾಯಿಲೆ ಇದ್ದರೆ ಇದನ್ನು ಬಳಸುವ ಮುನ್ನ ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.
ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








