AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಹಾರ್ವರ್ಡ್ ವೈದ್ಯರು ತಿಳಿಸಿರುವ 5 ಆಹಾರಗಳು

ಅಧಿಕ ರಕ್ತದೊತ್ತಡ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಇದನ್ನು ತಡೆಗಟ್ಟುವುದು ನಮ್ಮ ಕೈಯಲ್ಲಿಯೇ ಇದೆ. ನಾವು ಸೇವನೆ ಮಾಡುವ ಆಹಾರಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಈ ಗಂಭೀರ ಆರೋಗ್ಯ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದು. ಇದಕ್ಕೆ ಪೂರಕವಾಗಿ ಹಾರ್ವರ್ಡ್ ವೈದ್ಯರು ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಪೂರಕವಾದ ಆಹಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಹಾರ್ವರ್ಡ್ ವೈದ್ಯರು ತಿಳಿಸಿರುವ 5 ಆಹಾರಗಳು
ರಕ್ತದೊತ್ತಡImage Credit source: Getty Images
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: May 27, 2025 | 5:10 PM

Share

ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ (High Blood Pressure) ಪ್ರಕರಣಗಳು ಹೆಚ್ಚುತ್ತಿದೆ. ಜನರು ಈ ಬಗ್ಗೆ ಹೆಚ್ಚಿನ ಗಮನವಹಿಸದಿರುವುದು ಈ ರೀತಿಯ ಆರೋಗ್ಯ (Health) ಸಮಸ್ಯೆಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. ಹಾಗಾಗಿಯೇ ಹಾರ್ವರ್ಡ್ ವೈದ್ಯರು (Harvard Doctors) ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಪೂರಕವಾದ ಆಹಾರಗಳ ಬಗ್ಗೆ ಮಾಹಿತಿ ನೀಡಿದ್ದು, ಯಾರಿಗೂ ತಿಳಿಯದಂತೆ ಹೆಚ್ಚುತ್ತಿರುವ ಈ ಗಂಭೀರ ಕಾಯಿಲೆ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ. ಸಾಮಾನ್ಯವಾಗಿ ಮಾರಣಾಂತಿಕ ಕಾಯಿಲೆಗಳನ್ನು ದೂರವಿಡಲು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ವ್ಯಾಯಾಮ ಮತ್ತು ಇನ್ನಿತರ ಆರೋಗ್ಯಕರ ಅಭ್ಯಾಸಗಳ (Healthy habit) ಜೊತೆಗೆ ಕೆಲವು ಆಹಾರಗಳ ಸೇವನೆ ಮಾಡುವುದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಾದರೆ ಆ ಆಹಾರಗಳು ಯಾವವು ಎಂಬುದನ್ನು ತಿಳಿದುಕೊಳ್ಳಿ.

ಅಧಿಕ ರಕ್ತದೊತ್ತಡ ಪಾರ್ಶ್ವವಾಯು, ಹೃದಯ ಕಾಯಿಲೆ, ಮೂತ್ರಪಿಂಡ ಕಾಯಿಲೆ ಮತ್ತು ಇತರ ಗಂಭೀರ ಕಾಯಿಲೆಗಳಿಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಹಾಗಾಗಿ ಈ ಆರೋಗ್ಯ ಸಮಸ್ಯೆಯ ನಿಯಂತ್ರಣ ಮಾಡುವುದು ಬಹಳ ಅನಿವಾರ್ಯವಾಗಿದೆ. ಹಾಗಾಗಿಯೇ ಡಾ. ಸೌರಭ್ ಸೇಥಿ, ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ ಹಣ್ಣುಗಳ ಬಗ್ಗೆ ತಿಳಿಸಿದ್ದು, ಈ ಆಹಾರ ಔಷಧಿಗಳಿಗೆ ಪರ್ಯಾಯವಲ್ಲದಿದ್ದರೂ ಕೂಡ ಇವು ಖಂಡಿತವಾಗಿಯೂ ರಕ್ತದೊತ್ತಡ ಸಮಸ್ಯೆಯ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

ಬಾಳೆಹಣ್ಣು

ಪ್ರತಿನಿತ್ಯ ನಾವು ಸೇವನೆ ಮಾಡುವ ಬಾಳೆಹಣ್ಣುಗಳಲ್ಲಿ ಪೊಟ್ಯಾಸಿಯಮ್‌ ಪ್ರಮಾಣ ಅಧಿಕವಾಗಿದ್ದು, ಇದು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ನಿರ್ಣಾಯಕವಾಗಿದೆ. ಅಧಿಕ ರಕ್ತದೊತ್ತಡಕ್ಕೆ ಪ್ರಮುಖ ಕಾರಣವಾಗುವ ಹೆಚ್ಚುವರಿ ಸೋಡಿಯಂ ಅನ್ನು ಮೂತ್ರಪಿಂಡಗಳು ಹೊರಹಾಕಲು ಪೊಟ್ಯಾಸಿಯಮ್ ಸಹಾಯ ಮಾಡುತ್ತದೆ. ಹಾಗಾಗಿ ಇವುಗಳನ್ನು ನೀವು ನಿಮಗೆ ಬೇಕಾದ ರೀತಿಯ ಆಹಾರಗಳಲ್ಲಿ ಬಳಕೆ ಮಾಡಬಹುದು. ಸ್ಮೂಥಿ ಅಥವಾ ದಿನನಿತ್ಯ ತಿಂಡಿಯಲ್ಲಿ ಸೇವನೆ ಮಾಡುವ ಮೂಲಕ ಪೋಷಕಾಂಶವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ
Image
ಮುಟ್ಟಿದರೆ ಮುನಿಯುವ ಈ ಗಿಡದಲ್ಲಿದೆ ಹಲವು ಪ್ರಯೋಜನ
Image
ಗರ್ಭಾವಸ್ಥೆಯಲ್ಲಿ ಪತಿಯ ಬೆಂಬಲ ಹೇಗಿರಬೇಕು?
Image
ಬೆಳಗ್ಗೆ ಬೇಗ ಏಳಬೇಕು ಎಂದು ಅಲಾರಾಂ ಇಡುವವರು ಈ ಸ್ಟೋರಿ ತಪ್ಪದೆ ಓದಿ
Image
ಈ ಒಂದು ಗಿಡದ ಎಲೆ ದೇಹ ಆರೋಗ್ಯಕ್ಕೆ ರಕ್ಷಣಾ ಕವಚ

ಡಾರ್ಕ್ ಚಾಕೊಲೇಟ್

ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಗಂಭೀರ ಕಾಯಿಲೆಗಳು ಬರುವುದನ್ನು ಡಾರ್ಕ್ ಚಾಕೊಲೇಟ್ ತಡೆಯುತ್ತದೆ. ಇದರ ನಿಯಮಿತ ಸೇವನೆಯಿಂದ ಮೆಗ್ನೀಸಿಯಮ್ ಮತ್ತು ಫ್ಲಾವನಾಲ್‌ಗಳು ಸಿಗುತ್ತವೆ. ಜೊತೆಗೆ ರಕ್ತನಾಳಗಳನ್ನು ಸಡಿಲಗೊಳಿಸುವ ನೈಟ್ರಿಕ್ ಆಕ್ಸೈಡ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. ಡಾರ್ಕ್ ಚಾಕೊಲೇಟ್‌ನಂತಹ ಫ್ಲಾವನಾಲ್- ಭರಿತ ಕೋಕೋ ಉತ್ಪನ್ನಗಳು ಅಧಿಕ ರಕ್ತದೊತ್ತಡವನ್ನು ಸಾಧಾರಣವಾಗಿ ಕಡಿಮೆ ಮಾಡುತ್ತದೆ. ಆದರೆ 70% ಕೋಕೋ ಅಂಶವಿರುವ ಡಾರ್ಕ್ ಚಾಕೊಲೇಟ್ ಅನ್ನು ಆರಿಸಿಕೊಳ್ಳಿ ಅದನ್ನು ಮಿತವಾಗಿ ಸೇವಿಸಲು ಮರೆಯಬೇಡಿ.

ಬೀಟ್ರೂಟ್

ಒಟ್ಟಾರೆ ಆರೋಗ್ಯಕ್ಕೆ ಕಾಪಾಡಲು ಬೀಟ್ರೂಟ್ ಒಂದು ಉತ್ತಮ ಆಹಾರವಾಗಿದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ನೈಟ್ರೇಟ್‌ಗಳನ್ನು ದೇಹವು ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತಿಸುತ್ತದೆ, ಇದು ರಕ್ತನಾಳಗಳನ್ನು ಹಿಗ್ಗಿಸುತ್ತದೆ ಮತ್ತು ರಕ್ತದ ಹರಿವನ್ನು ಸುಧಾರಿಸುತ್ತದೆ. ನೀವು ಇವುಗಳನ್ನು ಸಲಾಡ್‌, ಜ್ಯೂಸ್‌ ಅಥವಾ ಸ್ಮೂಥಿಗಳಲ್ಲಿ ಬಳಕೆ ಮಾಡಬಹುದು. ಅಲ್ಲದೆ ಹುರಿದ ಬೀಟ್ರೂಟ್ ಅಥವಾ ಬೀಟ್ರೂಟ್ ಪುಡಿಯನ್ನು ಸಹ ಬಳಕೆ ಮಾಡಬಹುದಾಗಿದೆ.

ದಾಳಿಂಬೆ

ರಕ್ತದ ಬಣ್ಣದಲ್ಲಿರುವ ದಾಳಿಂಬೆ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ಹೃದಯರಕ್ತನಾಳದ ಆರೋಗ್ಯವನ್ನು ಒಟ್ಟಾರೆಯಾಗಿ ಸುಧಾರಿಸುತ್ತದೆ. ಹಾಗಾಗಿ ದಾಳಿಂಬೆ ರಸವನ್ನು ನಿಯಮಿತವಾಗಿ ಸೇವನೆ ಮಾಡಿ ಅಥವಾ ಇನ್ನಿತರ ಆಹಾರಗಳಲ್ಲಿ ಬಳಕೆ ಮಾಡಿ.

ಇದನ್ನೂ ಓದಿ: ಕರ್ನಾಟಕದಲ್ಲಿ ಹೆಚ್ಚುತ್ತಿದೆ ಅಧಿಕ ರಕ್ತದೊತ್ತಡ ಪ್ರಕರಣ: ಜೀವನಶೈಲಿಯ ಬದಲಾವಣೆ ಮಾಡಿಕೊಳ್ಳಲು ತಜ್ಞರ ಕರೆ

ಶುಂಠಿ

ಹಲವು ಆಹಾರ ಪದಾರ್ಥಗಳಿಗೆ ಪ್ರಧಾನವಾಗಿ ಬೇಕಾಗಿರುವ ಶುಂಠಿಯು ನೈಸರ್ಗಿಕ ಕ್ಯಾಲ್ಸಿಯಂ ಆಗಿ ಕಾರ್ಯನಿರ್ವಹಿಸುತ್ತದೆ, ಇದು ರಕ್ತನಾಳಗಳಿಗೆ ವಿಶ್ರಾಂತಿ ನೀಡಿ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಹೃದಯರಕ್ತನಾಳದ ಆರೋಗ್ಯ ಸುಧಾರಿಸುತ್ತದೆ. ಇವುಗಳನ್ನು ಚಹಾ, ಸ್ಮೂಥಿ ಅಥವಾ ಇನ್ನಿತರ ಆಹಾರಗಳಲ್ಲಿ ಬಳಕೆ ಮಾಡಬಹುದು. ಇದು ಆರೋಗ್ಯಕ್ಕೆ ಒಳ್ಳೆಯದಾದರೂ ಕೂಡ ಮಿತವಾಗಿ ಸೇವನೆ ಮಾಡುವುದನ್ನು ಮರೆಯಬೇಡಿ. ಏಕೆಂದರೆ ಅತಿಯಾದ ಸೇವನೆಯು ಕೆಲವು ವ್ಯಕ್ತಿಗಳಲ್ಲಿ ಜೀರ್ಣಕಾರಿ ಅಸ್ವಸ್ಥತೆಯನ್ನು ಉಂಟುಮಾಡಬಹುದು.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ