AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಲೆಂಟ್ ಕ್ಲಿಲರ್​​ ಮತ್ತೆ ಎಂಟ್ರಿ, ಡೆಂಘಿ, ಚಿಕುನ್ ಗುನ್ಯಾ ಬಗ್ಗೆ ಇರಲಿ ಎಚ್ಚರ, ಈ ಆಹಾರ ತಪ್ಪದೇ ಸೇವಿಸಿ

ಕೊರೊನಾ ಹೆಚ್ಚಳವಾಗುತ್ತಿರುವ ಸಮಯದಲ್ಲಿ ಸೈಲೆಂಟ್ ಆಗಿ ಡೆಂಘಿ ಮತ್ತು ಚಿಕನ್ ಗುನ್ಯಾದ ಪ್ರಕರಣಗಳು ಕೂಡ ಹೆಚ್ಚಾಗುತ್ತಿದೆ. ಈ ಸಮಯದಲ್ಲಿ ನಾವು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ. ಆಗ ಮಾತ್ರ ಇಂತಹ ರೋಗಗಳನ್ನು ಹತೋಟಿಯಲ್ಲಿಡಲು ಸಾಧ್ಯ. ಹಾಗಾದರೆ ಡೆಂಘಿ ಮತ್ತು ಚಿಕನ್ ಗುನ್ಯಾ ಬರದಂತೆ ತಡೆಯಲು ನಾವು ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಸೈಲೆಂಟ್ ಕ್ಲಿಲರ್​​ ಮತ್ತೆ ಎಂಟ್ರಿ, ಡೆಂಘಿ, ಚಿಕುನ್ ಗುನ್ಯಾ ಬಗ್ಗೆ ಇರಲಿ ಎಚ್ಚರ, ಈ ಆಹಾರ ತಪ್ಪದೇ ಸೇವಿಸಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Jun 02, 2025 | 9:51 AM

Share

ಈ ಬಾರಿ ಮಳೆರಾಯನ ಆಗಮನ ಅಂದಾಜಿಗಿಂತಲೂ ಬೇಗ ಆಗಿದೆ. ಅದರಲ್ಲಿಯೂ ಎಡಬಿಡದೆ ಸುರುಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಮಳೆ ಹೆಚ್ಚಾದ ಹಿನ್ನೆಲೆ, ಸಾಂಕ್ರಾಮಿಕ ರೋಗಗಳ ಸಮಸ್ಯೆ ಉಂಟಾಗುತ್ತಿದ್ದು ಈ ಸಮಯದಲ್ಲಿ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಡೆಂಘಿ (dengue) ಮತ್ತು ಚಿಕನ್ ಗುನ್ಯಾದ ಟೆನ್ಷನ್ ಆರಂಭವಾಗಿದೆ. ಈಗಾಗಲೇ ಕೊರೊನಾ (Corona) ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಆದರೆ ಇದನ್ನು ನಾವು ನಿರ್ಲಕ್ಷ್ಯ ಮಾಡುವಂತಿಲ್ಲ. ಏಕೆಂದರೆ ಇವು ಹೆಚ್ಚಳವಾಗುವ ಮೊದಲೇ ನಮ್ಮ ಆರೋಗ್ಯ (health) ಕಾಪಾಡಿಕೊಳ್ಳುವುದು ಜೊತೆಗೆ ಅವು ಬರದಂತೆ ತಡೆಯಲು ಸಿದ್ಧತೆ ಮಾಡಿಕೊಳ್ಳುವುದು ಬಹಳ ಉತ್ತಮ. ಇವುಗಳನ್ನು ಬರದಂತೆ ತಡೆಯಲು ಬೇರೆ ಮುನ್ನೆಚ್ಚರಿಕೆಗಳ ಜೊತೆಗೆ ನಮ್ಮ ಆಹಾರಕ್ರಮವನ್ನು ಬದಲಾಯಿಸಿಕೊಳ್ಳಬೇಕು. ಆಗ ಮಾತ್ರ ಇಂತಹ ರೋಗಗಳನ್ನು ಹತೋಟಿಯಲ್ಲಿಡಲು ಸಾಧ್ಯ. ಹಾಗಾದರೆ ನಾವು ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಇತ್ತೀಚಿನ ದಿನಗಳಲ್ಲಿ ಡೆಂಘಿ ಕಾಯಿಲೆಯ ಅಪಾಯ ಜಾಸ್ತಿಯಾಗುತ್ತಿದೆ. ಹೀಗಾಗಿ ಜ್ವರ ಬಂದಾಕ್ಷಣ ಕೂಡಲೇ ರಕ್ತ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಡೆಂಘಿ ಜ್ವರದ ಬಗ್ಗೆ ಮೊದಲೇ ತಿಳಿದುಕೊಂಡರೆ ವಾಸಿ ಮಾಡಿಕೊಳ್ಳುವುದು ಬಹಳ ಸುಲಭ. ನಿಯಮಿತವಾದ ರಕ್ತ ಪರೀಕ್ಷೆಗಳ ಮೂಲಕ ಜ್ವರದ ಲಕ್ಷಣಗಳನ್ನು ಪತ್ತೆಹಚ್ಚಬಹುದು. ಜೊತೆಗೆ ಡೆಂಘಿ ವೈರಸ್ ವಿರುದ್ಧ ಹೋರಾಡಲು ರೋಗಿಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಅತ್ಯಗತ್ಯ. ರೋಗಿಗೆ ಅಗತ್ಯವಾದ ಪೋಷಕಾಂಶಗಳು ಮತ್ತು ವಿಟಮಿನ್‌ಗಳಿಂದ ತುಂಬಿರುವ ಆಹಾರಗಳನ್ನು ನೀಡುವ ಮೂಲಕ ಈ ರೋಗ ಬರುವುದನ್ನು ತಡೆಯಬಹುದು.

ಡೆಂಘಿ ಬರದಂತೆ ತಡೆಯಲು ಈ ಆಹಾರಗಳ ಸೇವನೆ ಮಾಡಿ:

  • ಅಗತ್ಯವಾದ ಖನಿಜಗಳು ಮತ್ತು ಪೋಷಕಾಂಶಗಳಿಂದ ತುಂಬಿರುವ ದಾಳಿಂಬೆ ಹಣ್ಣು ದೇಹಕ್ಕೆ ಅಪಾರವಾದ ಶಕ್ತಿಯನ್ನು ನೀಡುತ್ತದೆ. ಅದಲ್ಲದೆ ಈ ಹಣ್ಣು ಕಬ್ಬಿಣ ಅಂಶದಿಂದ ಸಮೃದ್ಧವಾಗಿರುವುದರಿಂದ, ಇವು ರಕ್ತದ ಪ್ಲೇಟ್‌ಲೆಟ್ ಎಣಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
  • ಇನ್ನು ಡೆಂಗ್ಯೂ ಅಥವಾ ಡೆಂಘಿ ಪ್ರಕರಣಗಳು ಹೆಚ್ಚಾಗದಂತೆ ತಡೆಯಲು ಕಿವಿ ಹಣ್ಣು, ಪಪ್ಪಾಯ ಹಣ್ಣುಗಳನ್ನು ಸೇವನೆ ಮಾಡಬಹುದು, ಆ ಮೂಲಕ ಬಿಳಿ ರಕ್ತಕಣಗಳ ಸಂಖ್ಯೆಯನ್ನು ಜಾಸ್ತಿ ಮಾಡಿಕೊಳ್ಳಬಹುದಾಗಿದೆ.
  • ಪ್ರತಿನಿತ್ಯ ಎಳ ನೀರನ್ನು ಸೇವಿಸುವುದು ದೇಹಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಇದು ಎಲೆಕ್ಟ್ರೋಲೈಟ್‌ಗಳು ಮತ್ತು ಪ್ರಮುಖ ಪೋಷಕಾಂಶಗಳಿಂದ ತುಂಬಿರುತ್ತದೆ. ಎಳನೀರಿನ ಬದಲು ನೀವು ಶುಂಠಿಯ ನೀರನ್ನು ಕೂಡ ಕುಡಿಯಬಹುದು. ಇದು ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು.
  • ಪಪ್ಪಾಯಿ ಪಾಪೈನ್, ಕ್ಯಾರಿಕೇನ್, ಚೈಮೊಪಪೈನ್, ಅಸಿಟೋಜೆನಿನ್ ಇತ್ಯಾದಿ ಸಂಯುಕ್ತಗಳನ್ನು ಹೊಂದಿದ್ದು ದೇಹದ ಪ್ರತಿರಕ್ಷಣಾ ಸ್ಥಿತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಚಿಕನ್ ಗುನ್ಯಾ ಸಮಸ್ಯೆಗೆ ಪರಿಹಾರವೇನು?

ಇನ್ನು, ಚಿಕನ್ ಗುನ್ಯಾ ಕೂಡ ವೈರಲ್ ಸೋಂಕಾಗಿದ್ದು, ಇದು ಸೊಳ್ಳೆಗಳಿಂದ ಮನುಷ್ಯರಿಗೆ ಹರಡಿ ನಂತರ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಜ್ವರ ಮತ್ತು ಮೈ ಕೈ ನೋವು ಚಿಕನ್ ಗುನ್ಯಾದ ಸಾಮಾನ್ಯ ರೋಗ ಲಕ್ಷಣಗಳು. ಇದರ ಜೊತೆಗೆ ರೋಗ ಲಕ್ಷಣಗಳು ವಿಪರೀತ ಗೊಂಡಾಗ ಮುಖದ ಮೇಲೆ ಅಲ್ಲಲ್ಲಿ ಕಲೆಗಳು ಕಂಡು ಬರುವುದು ಮಾತ್ರವಲ್ಲದೆ ತಲೆ ನೋವು, ವಿಪರೀತ ಆಯಾಸ, ವಾಕರಿಕೆ, ವಾಂತಿಯ ಲಕ್ಷಣಗಳು ಸಹ ಗೋಚರಿಸಬಹುದು. ಹಾಗಾಗಿ ಆದಷ್ಟು ಮನೆಯಲ್ಲಿಯೇ ಮುನ್ನೆಚ್ಚರಿಕೆ ವಹಿಸಬೇಕು. ಜೊತೆಗೆ ನಮ್ಮ ಆಹಾರಗಳಲ್ಲಿ ತಕ್ಕ ಮಟ್ಟಿಗೆ ಬದಲಾವಣೆ ಮಾಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಚಿಕನ್ ಗುನ್ಯಾ ಸಮಸ್ಯೆಯಿಂದ ಪಾರಾಗಬಹುದು.

ಇದನ್ನೂ ಓದಿ
Image
ಮಕ್ಕಳಿಗೆ ಕೊರೊನಾ ಬರದಂತೆ ತಡೆಯಲು ಇಲ್ಲಿದೆ ಸಿಂಪಲ್ ಟಿಪ್ಸ್
Image
ವೈದ್ಯರು ತಿಳಿಸಿರುವ ಈ ಆಹಾರಗಳು ರಕ್ತದೊತ್ತಡವನ್ನು ಕಡಿಮೆ ಮಾಡುತ್ತವೆ
Image
ನೋವು ನೀಡುವ ಕುರು ಕಡಿಮೆ ಮಾಡಲು ಹೂವಿನ ಮೊಗ್ಗನ್ನು ಈ ರೀತಿ ಬಳಸಿರಿ
Image
ಸಕ್ಕರೆ ಕಾಯಿಲೆಯಿಂದ ಕಾಪಾಡುತ್ತದೆ ಬಿಂಬಳ ಕಾಯಿ

ಇದನ್ನೂ ಓದಿ: ಕರ್ನಾಟಕದಲ್ಲಿ ಕೊರೋನಾ ಮಧ್ಯೆ ಡೆಂಘಿ, ಚಿಕುನ್ ಗುನ್ಯಾ ಟೆನ್ಷನ್: ಸೈಲೆಂಟ್ ಆಗಿ ಹೆಚ್ಚಳವಾಗುತ್ತಿವೆ ಪ್ರಕರಣಗಳು

ಚಿಕನ್ ಗುನ್ಯಾ ಬರದಂತೆ ತಡೆಯಲು ಈ ಆಹಾರಗಳ ಸೇವನೆ ಮಾಡಿ:

  • ಪ್ರತಿನಿತ್ಯ ವಿಟಮಿನ್ ಸಿ ಮತ್ತು ವಿಟಮಿನ್ ಇ ಅಂಶ ಹೆಚ್ಚಾಗಿರುವ ಆಹಾರಗಳನ್ನು ಸೇವನೆ ಮಾಡಿ.
  • ಹಸಿರು ಎಲೆಯ ತರಕಾರಿಗಳನ್ನು ಆಹಾರದಲ್ಲಿ ಬಳಕೆ ಮಾಡಿ ಇದರಿಂದ ದೇಹದ ಆರೋಗ್ಯ ಸುಧಾರಣೆಯಾಗುತ್ತದೆ ಜೊತೆಗೆ ಚಿಕೆನ್ ಗುನ್ಯಾ ವಿರುದ್ಧ ಹೋರಾಡುವಂತಹ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ.
  • ಮಳೆಗಾಲದ ಸಮಯದಲ್ಲಿ ಸಾಂಕ್ರಾಮಿಕ ರೋಗಗಳು ಬರುವುದನ್ನು ತಡೆಯಲು ದೇಹಕ್ಕೆ ನೀರಿನ ಅಂಶ ಬಹಳ ಮುಖ್ಯ. ಈ ಸಮಯದಲ್ಲಿ ನಾವು ಎಷ್ಟು ನೀರಿನ ಪ್ರಮಾಣವಿರುವ ಆಹಾರಗಳನ್ನು ಸೇವಿಸುತ್ತೇವೆ ಮತ್ತು ಕಾಯಿಸಿ ಆರಿಸಿದ ನೀರನ್ನು ಕುಡಿಯುತ್ತೇವೆ ಎಂಬುದು ಮುಖ್ಯವಾಗುತ್ತದೆ. ಹಾಗಾಗಿ ದಾಲ್, ಸೂಪ್ ಮತ್ತು ಇತರ ಗ್ರೇವಿಗಳನ್ನು ಈ ಸಮಯದಲ್ಲಿ ಸೇವಿಸಿ.
  • ಆಹಾರದಲ್ಲಿ ಒಮೆಗಾ – 3 ಫ್ಯಾಟಿ ಆಸಿಡ್ ಅಂಶಗಳು ಮತ್ತು ಅದಕ್ಕೆ ಪೂರಕವಾದ ಆಹಾರದ ಪದಾರ್ಥಗಳು ಸೇರಿದರೆ ಒಳ್ಳೆಯದು. ಏಕೆಂದರೆ ಒಮೆಗಾ – 3 ಅಂಶಗಳು ನಮ್ಮ ದೇಹದ ಮೆದುಳಿನ ಭಾಗದಲ್ಲಿ ರಕ್ತ ಸಂಚಾರವನ್ನು ಹೆಚ್ಚು ಮಾಡುವುದರ ಜೊತೆಗೆ ದೇಹದ ಯಾವುದೇ ಭಾಗದಲ್ಲಿ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:30 pm, Fri, 30 May 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ