Brain Health: ಅಜ್ಜಿ ಮಾಡುವ ಈ ಮದ್ದು ಎಷ್ಟೇ ದಡ್ಡನನ್ನು ಬುದ್ದಿವಂತನಾಗಿಸುತ್ತದೆ
ಮೆದುಳಿನ ಆರೋಗ್ಯ: ಇತ್ತೀಚಿನ ದಿನಗಳಲ್ಲಿ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿದೆ. ಅದರಲ್ಲಿಯೂ ವಿದ್ಯಾರ್ಥಿಗಳಿಂದ ಹಿಡಿದು ವೃದ್ಧರ ವರೆಗೆ, ಸ್ಮರಣಶಕ್ತಿ ಅಂದರೆ, ವಿಷಯಗಳನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತಿರುವುದನ್ನು ನಾವು ಕಾಣಬಹುದಾಗಿದ್ದು ಇದಕ್ಕೆ ಹಿಂದಿನ ಕಾಲದಲ್ಲಿ, ಮನೆಯಲ್ಲಿಯೇ ಅಜ್ಜಿಯಂದಿರು ಮಾಡುತ್ತಿದ್ದ ಮನೆಮದ್ದನ್ನು ಸೇವನೆ ಮಾಡುವ ಮೂಲಕ ಈ ರೀತಿ ಸಮಸ್ಯೆಗಳು ಹೆಚ್ಚಾಗುವುದನ್ನು ತಡೆಯಬಹುದಾಗಿದೆ. ಈ ಮನೆಮದ್ದು ಬಹಳ ಸರಳವಾಗಿದ್ದು ಯಾರೂ ಬೇಕಾದರೂ ಮಾಡಿ ನೋಡಬಹುದಾಗಿದೆ.

ಮೆದುಳು ಆರೋಗ್ಯವಾಗಿ (Brain Health) ಇರದಿದ್ದರೆ ನಮ್ಮ ಯಾವ ಕೆಲಸಗಳೂ ಸಹ ಸುಲಲಿತವಾಗಿ ನಡೆಯುವುದಿಲ್ಲ. ಇದರಿಂದ ನಮ್ಮ ಸ್ಮರಣಶಕ್ತಿ (Memory) ಅಂದರೆ ನೆನಪಿಟ್ಟುಕೊಳ್ಳುವ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ಈ ರೀತಿಯ ಸಮಸ್ಯೆ ಚಿಕ್ಕ ಮಕ್ಕಳಲ್ಲಿಯೂ ಕಂಡುಬರುತ್ತದೆ. ಇದರಿಂದ ಅವರು ತಮ್ಮ ಅಧ್ಯಯನದತ್ತ ಗಮನಹರಿಸಲು ಸಾಧ್ಯವಾಗುವುದಿಲ್ಲ. ಸಣ್ಣ ಸಣ್ಣ ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಕೂಡ ಕಷ್ಟಕರವಾಗುತ್ತದೆ. ಇದು ನೇರವಾಗಿ ಅವರ ಶೈಕ್ಷಣಿಕ ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆ. ಆದರೆ ಹಿಂದೆ ಅಜ್ಜಿಯಂದಿರು ಮನೆಯಲ್ಲಿ ಮಾಡುವ ಈ ಸಣ್ಣ ಮದ್ದಿನಿಂದ (Traditional home remedies) ಸ್ಮರಣಶಕ್ತಿ ಅಥವಾ ನಮ್ಮ ನೆನಪಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕೆ ಕೇವಲ ಎರಡೇ ಪದಾರ್ಥ ಇದ್ದರೆ ಸಾಕು. ಅದಲ್ಲದೆ ಇವು ಸುಲಭವಾಗಿ ಮನೆಯಲ್ಲಿಯೇ ಸಿಗುವುದರಿಂದ ಯಾವುದೇ ಚಿಂತೆಯಿಲ್ಲದೆ ಮಾಡಬಹುದಾಗಿದೆ. ಹಾಗಾದರೆ ಅಜ್ಜಿ ಮಾಡುವ ಆ ಮನೆಮದ್ದು (Home remedies) ಯಾವುದು? ಹೇಗೆ ತಯಾರಿಸಬೇಕು ಎಂಬುದನ್ನು ತಿಳಿದುಕೊಳ್ಳಿ.
ಸಾಮಾನ್ಯವಾಗಿ ವೀಳ್ಯದ ಎಲೆಗಳ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಪ್ರತಿ ಮನೆಯಲ್ಲಿಯೂ ಇದನ್ನು ಒಂದಿಲ್ಲೊಂದು ರೀತಿಯಲ್ಲಿ ಬಳಕೆ ಮಾಡುತ್ತಾರೆ. ನಗರವಾಸಿಗಳ ಮನೆಗಳಲ್ಲಿ ಇದರ ಬಳಕೆ ಸ್ವಲ್ಪ ಕಡಿಮೆಯಾಗಿದ್ದರೂ ಸಹ, ಹಳ್ಳಿಗಳಲ್ಲಿ ಇದನ್ನು ಹೇರಳವಾಗಿ ಉಪಯೋಗ ಮಾಡಲಾಗುತ್ತದೆ. ಅದರಲ್ಲಿಯೂ ಇದರಲ್ಲಿ ಆರೋಗ್ಯ ಗುಣಗಳು ಹೆಚ್ಚಾಗಿ ಇರುವುದರಿಂದ ಇದನ್ನು ಯಾವುದೇ ರೀತಿಯ ಭಯವಿಲ್ಲದೆ ಬಳಕೆ ಮಾಡಬಹುದಾಗಿದೆ. ಈ ಎಲೆ ದೇಹಕ್ಕೆ ನೈಸರ್ಗಿಕ ಮದ್ದಾಗಿ ಉಪಯೋಗವಾಗುವುದರಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗೆ ರಾಮಬಾಣವಾಗಿದೆ. ಅದರಂತೆ ಅಜ್ಜಿಯಂದಿರು ಮಾಡುವ ಈ ಮನೆಮದ್ದು ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಎಲೆಗಳು ನರಮಂಡಲವನ್ನು ಬಲಗೊಳಿಸುವ ಕೆಲಸ ಮಾಡುತ್ತದೆ.
ವೀಳ್ಯದ ಎಲೆಯಿಂದ ಮನೆಮದ್ದನ್ನು ಹೇಗೆ ತಯಾರಿಸುವುದು?
ವೀಳ್ಯದ ಎಲೆಯನ್ನು ತೆಗೆದುಕೊಂಡು ಅದನ್ನು ಜೇನುತುಪ್ಪದಲ್ಲಿ ಅದ್ದಿ ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಕ್ಕಳಿಗೆ ಅದನ್ನು ತಿನ್ನಲು ಕೊಡಿ. ಇದು ಬಹಳ ಸರಳವಾದ ಪ್ರಕ್ರಿಯೆಯಾಗಿದ್ದು ಹಿಂದಿನ ಕಾಲದಲ್ಲಿ ಅಜ್ಜಿಯಂದಿರು ತಮ್ಮ ಮಕ್ಕಳು- ಮೊಮ್ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸಲು, ಮಾತು ಬೇಗ ಬರಲು ಈ ರೀತಿ ಮದ್ದನ್ನು ಮಾಡಿಕೊಡುತ್ತಿದ್ದರು. ಈ ರೀತಿ ಮಾಡುವುದರಿಂದ ನರಮಂಡಲದಲ್ಲಿನ ದೌರ್ಬಲ್ಯಗಳು ಕಡಿಮೆಯಾಗುತ್ತವೆ. ಮೆದುಳು ಸಕ್ರಿಯವಾಗುತ್ತದೆ. ಸ್ಮರಣಶಕ್ತಿ ಹೆಚ್ಚಾಗುತ್ತದೆ. ಅದರಲ್ಲಿಯೂ ಆರೋಗ್ಯ ತಜ್ಞರು ಕೂಡ ಈ ವಿಧಾನವನ್ನು ಶಿಫಾರಸು ಮಾಡುತ್ತಾರೆ. ಈ ರೀತಿ ಮಾಡಿದವರಿಗೆ ಸ್ಮರಣಶಕ್ತಿಯಲ್ಲಿ ಸುಧಾರಣೆ ಕಂಡುಬಂದಿದ್ದು ಇದನ್ನು ನೀವು ಕೂಡ ಮಾಡಿನೋಡಬಹುದು. ಇದು ಶಾಲೆಗೆ ಹೋಗುವ ಮಕ್ಕಳಿಗೆ ಬಹಳ ಪ್ರಯೋಜನಕಾರಿಯಾಗಿದ್ದು, ಅಧ್ಯಯನದಲ್ಲಿ ಯಶಸ್ವಿಯಾಗಲು, ಜೊತೆಗೆ ಮೆದುಳು ಬಲವಾಗಿರಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಈ ರೀತಿ ವೀಳ್ಯದ ಎಲೆ ಮತ್ತು ಜೇನುತುಪ್ಪ ಸೇವನೆ ಮಾಡಿದರೆ ಸ್ಮರಣಶಕ್ತಿ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಜೊತೆಗೆ ಅಧ್ಯಯನದಲ್ಲಿಯೂ ಕೂಡ ಆಸಕ್ತಿ ಹೆಚ್ಚಾಗುತ್ತದೆ. ಇದು ಮಕ್ಕಳ ಭವಿಷ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ದೇಹದ ಸರ್ವರೋಗಕ್ಕೂ ಹುಣಸೆ ಎಲೆ ಬ್ರಹ್ಮಸ್ತ್ರ
ವೀಳ್ಯದ ಎಲೆ ತಿನ್ನುವುದರಿಂದ ಸಿಗುವ ಪ್ರಯೋಜನಗಳೇನು?
- ಇದು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ.
- ನರಮಂಡಲವನ್ನು ಬಲಗೊಳಿಸುತ್ತದೆ.
- ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.
- ಸ್ಮರಣಶಕ್ತಿಯನ್ನು ಸುಧಾರಿಸುತ್ತದೆ.
- ಆರೋಗ್ಯವನ್ನು ರಕ್ಷಿಸಲು ನೈಸರ್ಗಿಕ ಮಾರ್ಗವಾಗಿ ಕಾರ್ಯ ನಿರ್ವಹಿಸುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








