Video: ಅಜ್ಜಿಗೆ ಜಪಾನೀಸ್ ಗ್ರೀನ್ ಟೀ ಕುಡಿಸಿದ ಮೊಮ್ಮಗಳು, ಅಜ್ಜಿ ಇದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ?
ಜಪಾನೀಸ್ ಗ್ರೀನ್ ಟೀ ಬಗ್ಗೆ ಕೇಳಿರಬಹುದು, ಇದರಿಂದ ಹಲವು ಪ್ರಯೋಜನಗಳು ಇವೆ. ಆದರೆ ಇದರಲ್ಲಿ ಕಹಿ ಇರುವ ಕಾರಣ, ಅನೇಕರಿಗೆ ಇಷ್ಟವಾಗುವುದಿಲ್ಲ. ಹೀಗೆ ವ್ಲಾಗರ್ ಒಬ್ಬರು ತನ್ನ ಅಜ್ಜಿಗೆ ಈ ಮಚ್ಚಾ ಚಾಹ ಕುಡಿಸಿ, ಅಜ್ಜಿಯ ಕೋಪಕ್ಕೆ ಕಾರಣರಾಗಿದ್ದಾರೆ . ಈ ವಿಡಿಯೋ ತುಂಬಾ ತಮಾಷೆಯಾಗಿದೆ. ಆದರೆ ಜಪಾನೀಸ್ ಗ್ರೀನ್ ಟೀಯಲ್ಲಿ ಹಲವು ಆರೋಗ್ಯ ಪ್ರಯೋಜನಗಳು ಇದೆ. ಇದನ್ನು ಜೀವನಶೈಲಿಯ ದಿನಚರಿಯಲ್ಲಿ ಬಳಸಿಕೊಂಡರೆ ಖಂಡಿತ ಒಳ್ಳೆಯದು.

ವ್ಲಾಗರ್ ಒಬ್ಬರು ತನ್ನ ಅಜ್ಜಿಗೆ ಜಪಾನೀಸ್ ಗ್ರೀನ್ ಟೀ (Japanese green tea) ಕುಡಿಸಿರುವ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ವೃದ್ಧ ಮಹಿಳೆಗೆ, ಯುವತಿಯೊಬ್ಬಳು ಜಪಾನೀಸ್ ಗ್ರೀನ್ ಟೀಯನ್ನು ಕುಡಿಸಿದ್ದಾರೆ. ಇದನ್ನು ಮಚ್ಚಾ ಚಾಹ ಎಂದು ಕರೆಯುತ್ತಾರೆ. ಇದು ಆರೋಗ್ಯಕ್ಕೆ ಹಾಗೂ ದೇಹಕ್ಕೆ ತುಂಬಾ ಶಕ್ತಿಯನ್ನು ನೀಡುತ್ತದೆ. ಈ ಅಜ್ಜಿ ಒಂದು ಸಿಪ್ ಕುಡಿದ ತಕ್ಷಣ ಅವರ ರಿಯಾಕ್ಷನ್ ಮಾತ್ರ ಸಖತ್ ಆಗಿತ್ತು. “ಈ ಟೀ ಅವರಿಗೆ ಯಾಕೋ ಇಷ್ಟವಾಗಿಲ್ಲ” ಎಂದು ವ್ಲಾಗರ್ ವಿಡಿಯೋದ ಮೇಲೆ ಶೀರ್ಷಿಕೆ ಬರೆದುಕೊಂಡಿದ್ದಾರೆ. ಅಜ್ಜಿ ಮಚ್ಚಾ ಚಾಹ ಕುಡಿದು “ನನ್ನ ಬಾಯಿಗೆ ಏನ್ ಹಾಕಿದೆ” ಎಂದು ಅಜ್ಜಿ ವ್ಲಾಗರ್ಗೆ ಗದರಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಮಚ್ಚಾ ಚಾಹ ಕುಡಿದ ತಕ್ಷಣ ಅಜ್ಜಿ ಅಡುಗೆ ಮನೆಗೆ ಹೋಗಿ ಮಸಾಲಾ ಚಿಪ್ಸ್ ತಿಂದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ವ್ಲಾಗರ್, ಜಪಾನೀಸ್ ಗ್ರೀನ್ ಟೀ ಪ್ರೀಯರ ಕ್ಷಮೆಯನ್ನು ಕೂಡ ಕೇಳಿದ್ದಾರೆ. “ಜಪಾನೀಸ್ ಗ್ರೀನ್ ಟೀ ಪ್ರೀಯರೇ ನನ್ನನ್ನೂ ಕ್ಷಮಿಸಿ, ನನ್ನ ಅಜ್ಜಿ ತುಂಬಾ ಮುಗ್ದಳು” ಎಂದು ಹಾಸ್ಯಮಯ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ನೋಡಿ ಅನೇಕರು ಕಾಮೆಂಟ್ ಕೂಡ ಮಾಡಿದ್ದಾರೆ. “ಅಜ್ಜಿಗೆ ನಿಮ್ಮ ಮಚ್ಚಾ ಟೀ ಇಷ್ಟವಾಗಿಲ್ಲ ಕಾಣುತ್ತದೆ” ಎಂದು ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ “ಆಕೆಯ ಆರೋಗ್ಯ ರಕ್ಷಣೆ ನಿಮ್ಮ ಹೊಣೆ. ಅವರಿಗೆ ಮೊದಲೇ ಹೇಳಬೇಕಿತ್ತು, ಜಪಾನೀಸ್ ಗ್ರೀನ್ ಟೀ ಅಥವಾ ಮಚ್ಚಾ ಟೀ ಎಂದರೆ ಏನು” ಎಂದು ಕಾಮೆಂಟ್ ಮಾಡಿದ್ದಾರೆ. “ಇದು ನಿಮ್ಮ ಅಜ್ಜಿಯ ಓವರ್ ಆಕ್ಟ್ ಅಲ್ಲ, ಅವಳ ಪ್ರಾಮಾಣಿಕ ಪ್ರತಿಕ್ರಿಯೆ” ಎಂದು ಮತ್ತೊಬ್ಬ ಬಳಕೆದಾರ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲರಿಗೂ ಈ ಮಚ್ಚಾ ಟೀ ಇಷ್ಟವಾಗಬೇಕಿಲ್ಲ ಎಂದು ಕಾಮೆಂಟ್ ಕೂಡ ಮಾಡಿದ್ದಾರೆ. ಅಜ್ಜಿಯ ಜತೆಗೆ ಸ್ವಲ್ಪ ಇಂತಹ ವಿಚಾರಗಳ ಬಗ್ಗೆ ಹಂಚಿಕೊಳ್ಳಿ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಪಾಲಕ್ ಎಲೆ, ಕಿತ್ತಳೆ, ಆವಕಾಡೊ ಚರ್ಮದ ಆರೋಗ್ಯಕ್ಕೆ ಪ್ರತಿದಿನ ಸೇವಿಸಿ
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಮಚ್ಚಾ ಎಂಬುದು ನುಣ್ಣಗೆ ಪುಡಿ ಮಾಡಿದ ಹಸಿರು ಚಹಾ, ಇದನ್ನು ವಿಶೇಷವಾಗಿ ಜಪಾನ್‌ನಿಂದ ಉತ್ಪಾದಿಸಲಾಗುತ್ತದೆ ಮತ್ತು ಸಂಸ್ಕರಿಸಲಾಗುತ್ತದೆ. ಹಸಿರು ಬಣ್ಣ ಮತ್ತು ವಿಶಿಷ್ಟವಾದ, ಕಹಿಯಾದ, ತರಕಾರಿ ಪರಿಮಳ ಇದರಲ್ಲಿ ಇರುತ್ತದೆ. ಮಚ್ಚಾ ಪುಡಿಯನ್ನು ಬಿಸಿ ನೀರು ಅಥವಾ ಹಾಲಿನಲ್ಲಿ ಮಿಶ್ರಣ ಮಾಡಿ ಹೆಚ್ಚಾಗಿ ಸೇವಿಸಲಾಗುತ್ತದೆ. ಇದು ಚಹಾ ಅನುಭವವನ್ನು ನೀಡುತ್ತದೆ. ಇನ್ನು ಮಚ್ಚಾ ಟೀ ಸೇವನೆಯಿಂದ ದೇಹದ ಕೊಲೆಸ್ಟ್ರಾಲ್ ಮಟ್ಟವೂ ನಿಯಂತ್ರಣಕ್ಕೆ ಬರುತ್ತದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ ಮಚ್ಚಾ ಚಹಾದಲ್ಲಿರುವ ಪಾಲಿಫಿನಾಲ್ ಎಂಬ ಆಂಟಿ-ಆಕ್ಸಿಡೆಂಟ್‌ಗಳು ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ಈ ಚಾಹದಲ್ಲಿ ಥಯಾನೈನ್ ಮತ್ತು ಅರ್ಜಿನೈನ್ ಕಂಡುಬರುತ್ತದೆ, ಇದು ಮನುಷ್ಯನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರ ಜತೆಗೆ ಇದು ಫೈಬರ್, ಕ್ಲೋರೊಫಿಲ್, ಸೆಲೆನಿಯಮ್, ಸತು, ಮೆಗ್ನೀಸಿಯಮ್, ಕ್ರೋಮಿಯಂ ಮತ್ತು ವಿಟಮಿನ್ ಸಿ ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಮಚ್ಚಾ ಚಹಾವು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








