AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ಬೇಗ ನಿದ್ರೆ ಬಂದು, ಬೆಳಿಗ್ಗೆ ಬೇಗ ಎಚ್ಚರವಾಗಬೇಕು, ಈ 10-3-2-1 ಸೂತ್ರ ಪಾಲಿಸಿ

ನಿದ್ದೆ ಪ್ರತಿಯೊಬ್ಬ ಮನುಷ್ಯನಿಗೆ ಅಗತ್ಯ, ಅದು ಆರೋಗ್ಯದ ಕಾರಣದಿಂದ ಹೆಚ್ಚು ಪ್ರಮುಖ್ಯತೆಯನ್ನು ವಹಿಸಿದೆ. ನಿದ್ರೆ ಆತನ ಆರೋಗ್ಯದ ಮೇಲೆ ಹೆಚ್ಚು ಪರಿಣಾಮವನ್ನು ಉಂಟು ಮಾಡುತ್ತದೆ. ಸರಿಯಾಗಿ ನಿದ್ದೆ ಮಾಡಿದ್ರೆ ಮಾತ್ರ ಆರೋಗ್ಯ ಸಮತೋಲನೆ ಇರುತ್ತದೆ. ಆದರೆ ಕೆಲವರಿಗೆ ನಿದ್ದೆಯೇ ಬರುವುದಿಲ್ಲ. ಇನ್ನು ಕೆಲವರಿಗೆ ನಿದ್ದೆ ಬಂದರು ಬೆಳಿಗ್ಗೆ ಬೇಗ ಎಚ್ಚರ ಆಗುವುದಿಲ್ಲ. ಈ ಸಮಸ್ಯೆಗೆ ವೈದ್ಯರು ಕೆಲವೊಂದು ಸೂತ್ರಗಳನ್ನು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ನೋಡಿ.

ರಾತ್ರಿ ಬೇಗ ನಿದ್ರೆ ಬಂದು, ಬೆಳಿಗ್ಗೆ ಬೇಗ ಎಚ್ಚರವಾಗಬೇಕು, ಈ 10-3-2-1 ಸೂತ್ರ ಪಾಲಿಸಿ
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on:Apr 29, 2025 | 5:28 PM

Share

ನಿದ್ರೆ ಎಂಬುದು (sleep deprivation,) ಒಬ್ಬ ಮನುಷ್ಯನಿಗೆ ಬಹಳ ಮುಖ್ಯ, ಯಾವ ಪ್ರಮಾಣದಲ್ಲಿ ನಿದ್ದೆ ಮಾಡಬೇಕು ಎನ್ನುವುದು ಕೂಡ ಮುಖ್ಯವಾಗಿರುತ್ತದೆ. ರಾತ್ರಿ ಹಾಗೂ ಹಗಲು ಯಾವ ಸಮಯದಲ್ಲಿ ಹೆಚ್ಚು ನಿದ್ದೆ ಮಾಡಬೇಕು ಎಂಬ ಬಗ್ಗೆಯೂ ಗಮನ ಇರಬೇಕು. ಅದಕ್ಕಾಗಿ ಕೆಲವೊಂದು ಸೂತ್ರಗಳನ್ನು ಅಳವಡಿಸಿಕೊಳ್ಳುವುದು ಅತೀಮುಖ್ಯವಾಗಿದೆ. ನಿದ್ರೆಗೂ ಸೂತ್ರ ಇದ್ದೀಯಾ ಎಂಬ ಪ್ರಶ್ನೆಗಳು ಇರಬಹುದು. ಹೌದು ಇದೆ, ಈ ಸೂತ್ರವನ್ನು ಪಾಲಿಸಿದ್ರೆ ರಾತ್ರಿ ಬೇಗ ಮಲಗುವಂತೆ ಹಾಗೂ ಬೆಳಿಗ್ಗೆ ಆನಂದಾಯವಾಗಿ ಎಚ್ಚರಗೊಳ್ಳಬಹುದು. ಇದು ನಿದ್ರೆಯ ನೈರ್ಮಲ್ಯ ತಂತ್ರವಾಗಿದೆ. ಬೆಂಗಳೂರಿನ ಇನ್‌ಫೆಂಟ್ರಿ ರಸ್ತೆಯ ಸ್ಪಾರ್ಷ್ ಆಸ್ಪತ್ರೆಯ ಸಲಹೆಗಾರ ನರವಿಜ್ಞಾನಿ ಡಾ. ನಿಖಿಲ್ ಬಿ ( Dr. Nikhil B) ಈ ಬಗ್ಗೆ ವಿವರಿಸಿದ್ದಾರೆ. ಮಲಗುವ 10 ಗಂಟೆಗಳ ಮೊದಲು ಕೆಫೀನ್ (ಕಾಫಿ, ಟೀ) ಕುಡಿಯಬೇಡಿ. ಊಟ, ಏನಾದರೂ ತಿನ್ನುವುದಿದ್ದರೆ ಮಲಗುವ 3 ಗಂಟೆಗಳ ಮೊದಲು ಮುಗಿಸಿಕೊಳ್ಳಬೇಕು ಎಂದು ಡಾ. ನಿಖಿಲ್ ಬಿ ಹೇಳುತ್ತಾರೆ. ಈ ಬಗ್ಗೆ indianexpress ವರದಿ ಮಾಡಿದೆ.

ಇನ್ನು ಒತ್ತಡವನ್ನು ಕಡಿಮೆ ಮಾಡಲು ಮಲಗುವ 2 ಗಂಟೆಗಳ ಮೊದಲು ಯಾವುದೇ ಕೆಲಸಗಳನ್ನು ಮಾಡಬಾರದು, ಅಂದತೆ ಆಫೀಸ್​​ ಕೆಲಸ ಅಥವಾ ಮನೆಯ ಕೆಲಸಗಳನ್ನ. ಕಣ್ಣುಗಳ ಊರಿ ಅಥವಾ ಕಣ್ಣಿನ ಆರೋಗ್ಯವಾಗಿರಬೇಕಾದರೆ ಮಲಗುವ 1 ಗಂಟೆ ಮೊದಲು ಮೊಬೈಲ್​​​​ ನೋಡುವುದನ್ನು ಬಿಡಿ. ಈ ವಿಧಾನವು ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ಪಡೆಯಲು ಸಮಯವನ್ನು ನೀಡುತ್ತದೆ. ಹಾಗೂ ಇದು ಸುಲಭವಾಗಿ ನಿದ್ರೆ ಆರಂಭವಾಗಲು ಹಾಗೂ ಬೆಳಿಗ್ಗೆ ಸಂತೃಪ್ತಿ ಮನಸ್ಸಿನಿಂದ ಹೇಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮೇಕೆ ಮಾಂಸಕ್ಕಿಂತ ರಕ್ತ ತಿನ್ನುವುದು ಉತ್ತಮ, ಯಾಕೆ? ಅತಿಯಾದರೆ ಸಮಸ್ಯೆ ಖಂಡಿತ

ನಿದ್ರೆಯ ಬಗ್ಗೆ ಹಾಗೂ ಎಷ್ಟು ಹೊತ್ತು ನಿದ್ದೆ ಮಾಡಬೇಕು ಎನ್ನುವ ಬಗ್ಗೆ ಡಾ. ಮಂಜುಷಾ ಅಗರ್ವಾಲ್ ಹೀಗೆ ಹೇಳುತ್ತಾರೆ. 7-9 ಗಂಟೆಗಳ ನಿದ್ರೆಗೆ ಆದ್ಯತೆ ನೀಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಯೋಗಕ್ಷೇಮಕ್ಕೆ ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ. ಒಂದು ವೇಳೆ ನಿದ್ರೆ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಚಿಕಿತ್ಸೆಗಾಗಿ ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು. ಆದರೆ ನಿದ್ರೆಯ ಸಮಸ್ಯೆ ನಿವಾರಣೆ ಮಾಡಲು ಈ 10-3-2-1 ವಿಧಾನವನ್ನು ಪ್ರಯತ್ನಿಸಿ. ರೋಗನಿರೋಧಕ ಪ್ರತಿಕ್ರಿಯೆಯನ್ನು ಹೆಚ್ಚಿಸಲು ಸೂಕ್ತವಾದ ನಿದ್ರೆಯ ಅವಧಿ ರಾತ್ರಿ 7-9 ಗಂಟೆಗಳು ಎಂದು ಬೆಂಗಳೂರಿನ ಇನ್‌ಫೆಂಟ್ರಿ ರಸ್ತೆಯ ಸ್ಪಾರ್ಷ್ ಆಸ್ಪತ್ರೆಯ ಸಲಹೆಗಾರ ನರವಿಜ್ಞಾನಿ ಡಾ. ನಿಖಿಲ್ ಬಿ ಹೇಳುತ್ತಾರೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:25 pm, Tue, 29 April 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!