Health Tips: ಉತ್ತಮ ನಿದ್ರೆ ಬರಲು ಈ ಹಣ್ಣು ಸೇವನೆ ಮಾಡುವುದು ಒಳ್ಳೆಯದೇ?
ಬಾಳೆಹಣ್ಣು ಪೌಷ್ಟಿಕಾಂಶ ಭರಿತವಾಗಿರುವುದರಿಂದ ಇದರ ಸೇವನೆ ಮಾಡುವುದು ತುಂಬಾ ಉತ್ತಮ. ಆದರೆ ಈ ಹಣ್ಣು ಇನ್ನು ಅನೇಕ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ನಾವು ಎಷ್ಟೇ ಆರೋಗ್ಯವಾಗಿದ್ದರೂ ರಾತ್ರಿ ನಿದ್ರೆ ಸರಿಯಾಗಿ ಬರದಿದ್ದರೆ ಅದು ಪ್ರಯೋಜನವಾಗುವುದಿಲ್ಲ ಎಂದು ಇತ್ತೀಚಿನ ಅಧ್ಯಯನಗಳು ಹೇಳುತ್ತವೆ. ಹಾಗಾಗಿ ಮನುಷ್ಯನಿಗೆ ನಿದ್ರೆ ಸರಿಯಾಗಿ ಆಗಬೇಕು. ಅದಕ್ಕಾಗಿ ಔಷಧಿಗಳ ಮೊರೆ ಹೋಗುವ ಬದಲು ನೈಸರ್ಗಿಕವಾಗಿ ಸಿಗುವ ಹಣ್ಣು ತರಕಾರಿಗಳಿಂದ ಈ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಇದಕ್ಕೆ ಪೂರಕವೆಂಬ ಹಾಗೆ, ಈ ಸಮಸ್ಯೆಗೆ ಪರಿಹಾರ ನೀಡಲು ಅಗ್ರ ಸ್ಥಾನದಲ್ಲಿರುವುದು ಬಾಳೆಹಣ್ಣು. ಅದು ಹೇಗೆ? ಯಾವ ರೀತಿಯ ಸೇವನೆ ಮಾಡುವುದು ಉತ್ತಮ? ಇಲ್ಲಿದೆ ಮಾಹಿತಿ.
ಬಾಳೆಹಣ್ಣುಗಳನ್ನು ತಿನ್ನದವರಿಲ್ಲ. ಎಲ್ಲಾ ಋತುಮಾನಗಳಲ್ಲಿಯೂ ಸಿಗುವ ಈ ಹಣ್ಣು, ಆರೋಗ್ಯಕ್ಕೆ ಹಲವಾರು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಈ ಹಣ್ಣು ಪೌಷ್ಟಿಕಾಂಶ ಭರಿತವಾಗಿರುವುದರಿಂದ ಇದರ ಸೇವನೆ ಮಾಡುವುದು ತುಂಬಾ ಉತ್ತಮ. ಆದರೆ ಬಾಳೆಹಣ್ಣು ಇನ್ನು ಅನೇಕ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ನಾವು ಎಷ್ಟೇ ಆರೋಗ್ಯವಾಗಿದ್ದರೂ ರಾತ್ರಿ ನಿದ್ರೆ ಸರಿಯಾಗಿ ಬರದಿದ್ದರೆ ಅದು ಪ್ರಯೋಜನವಾಗುವುದಿಲ್ಲ ಎಂದು ಇತ್ತೀಚಿನ ಅಧ್ಯಯನಗಳು ಹೇಳುತ್ತವೆ. ಹಾಗಾಗಿ ಮನುಷ್ಯನಿಗೆ ನಿದ್ರೆ ಸರಿಯಾಗಿ ಆಗಬೇಕು. ಅದಕ್ಕಾಗಿ ಔಷಧಿಗಳ ಮೊರೆ ಹೋಗುವ ಬದಲು ನೈಸರ್ಗಿಕವಾಗಿ ಸಿಗುವ ಹಣ್ಣು ತರಕಾರಿಗಳಿಂದ ಈ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಇದಕ್ಕೆ ಪೂರಕವೆಂಬ ಹಾಗೆ, ಈ ಸಮಸ್ಯೆಗೆ ಪರಿಹಾರ ನೀಡಲು ಅಗ್ರ ಸ್ಥಾನದಲ್ಲಿರುವುದು ಬಾಳೆಹಣ್ಣು. ಅದು ಹೇಗೆ? ಯಾವ ರೀತಿಯ ಸೇವನೆ ಮಾಡುವುದು ಉತ್ತಮ? ಇಲ್ಲಿದೆ ಮಾಹಿತಿ.
ಬಾಳೆಹಣ್ಣುಗಳಲ್ಲಿ ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಬಿ 6 ಅನ್ನು ಒಳಗೊಂಡಿದ್ದು ಇದು ದೇಹವನ್ನು ತಂಪಾಗಿಸುವ ಗುಣವನ್ನು ಹೊಂದಿದೆ. ಅಲ್ಲದೆ ಬಾಳೆಹಣ್ಣು ದೇಹದ ಅಗತ್ಯವಿರುವ 10% ಪೊಟ್ಯಾಸಿಯಮ್ ಅಂಶವನ್ನು ಒದಗಿಸುತ್ತದೆ. ಜೊತೆಗೆ ಇದರಲ್ಲಿರುವ ಆರೋಗ್ಯಕರ ಗುಣಗಳು ರಾತ್ರಿ ಸಮಯದಲ್ಲಿ ಉತ್ತಮ ನಿದ್ರೆ ಮಾಡಲು ಅನುಕೂಲ ಮಾಡಿಕೊಡುತ್ತದೆ. ಮೆಗ್ನೀಸಿಯಮ್ ಅಂಶ ನಮ್ಮ ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ ಜೊತೆಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಆದರೆ ಇದರಲ್ಲಿ ಅತಿಯಾದ ಮೆಗ್ನೀಸಿಯಮ್ ಅಂಶ ಇರುವುದಿಲ್ಲ. ಈ ಅಂಶದ ಕೊರತೆ ಇದ್ದರೆ ಮೆಗ್ನೀಸಿಯಮ್ ಅಂಶ ಹೇರಳವಾಗಿರುವ ಆಹಾರವನ್ನು ಸೇವನೆ ಮಾಡಬೇಕು.
ಇದನ್ನೂ ಓದಿ: ಸಾಕು ಪ್ರಾಣಿಗಳು ನಿಮ್ಮ ಒತ್ತಡ ಗ್ರಹಿಸಬಲ್ಲವು; ಅಧ್ಯಯನದಿಂದ ಬಹಿರಂಗ
ವಿಟಮಿನ್ ಬಿ 6 ಅಂಶವು ನಿಮ್ಮ ಮನಸ್ಥಿತಿ ನಿಯಂತ್ರಿಸುವುದಲ್ಲದೆ, ಸಿರೊಟೋನಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಅಂಶವು ನಮ್ಮ ದೇಹಕ್ಕೆ 1.3 ಮಿಲಿಗ್ರಾಂ ನಷ್ಟು ಅವಶ್ಯವಿದ್ದು, ಬಾಳೆಹಣ್ಣುಗಳು 0.4 ಮಿಲಿಗ್ರಾಂಗಳನ್ನು ಒದಗಿಸುತ್ತವೆ. ಹಾಗಾಗಿ ವಿಟಮಿನ್ ಬಿ 6 ನಿದ್ರೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಯಾರು ಸೇವನೆ ಮಾಡಬೇಕು, ಮಾಡಬಾರದು?
ಈ ಹಣ್ಣು ಅತ್ಯಂತ ಪೌಷ್ಟಿಕ ಭರಿತವಾಗಿದ್ದು, ಮಲಗುವ ಮೊದಲು ಸೇವನೆ ಮಾಡುವುದು ತುಂಬಾ ಒಳ್ಳೆಯದು, ಇದರಿಂದ ಯಾವುದೇ ರೀತಿಯ ಹಾನಿಯಿಲ್ಲ. ಅದರಲ್ಲಿಯೂ ದೈನಂದಿನ ಆಹಾರದಲ್ಲಿ ಬಾಳೆಹಣ್ಣುಗಳನ್ನು ಸೇರಿಸಲು ತಜ್ಞರು ಶಿಫಾರಸು ಮಾಡುತ್ತಾರೆ. ಆದರೆ ಅಧಿಕ ರಕ್ತದ ಸಕ್ಕರೆ ಸಮಸ್ಯೆ ಇರುವವರು ಇದರ ಬಗ್ಗೆ ಜಾಗರೂಕರಾಗಿರಬೇಕು. ಅದೂ ಅಲ್ಲದೆ ಸೇವನೆ ಮಾಡುವ ಮೊದಲು ತಜ್ಞರನ್ನು ಸಂಪರ್ಕಿಸಿ.
ಈ ಲೇಖನವು ನಿಮ್ಮ ಮಾಹಿತಿಗಾಗಿ ನೀಡಲಾಗಿದ್ದು, ಯಾವುದೇ ಸಂದೇಹವಿದ್ದರೂ ನಿಮ್ಮ ವೈದ್ಯರ ಸಲಹೆ ಪಡೆದು ಆ ಬಳಿಕ ಸೇವನೆ ಮಾಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ