ಬರಿಗಾಲಿನಲ್ಲಿ ನಡೆಯುವುದು vs ಶೂ ಹಾಕಿ ನಡೆಯುವುದು, ಯಾವುದು ಒಳ್ಳೆಯದು?
ಬರಿಗಾಲಿನಲ್ಲಿ ನಡೆಯುವುದು vs ಶೂ ಹಾಕಿ ನಡೆಯುವುದರ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ನೈಸರ್ಗಿಕ ಚಲನೆ ಮತ್ತು ಪಾದದ ಆರೋಗ್ಯದ ಕಡೆಗೆ ಹೆಚ್ಚು ಒತ್ತು ನೀಡಬೇಕಾದ ಕಾರಣ ನಡಿಗೆಯಲ್ಲಿ ಯಾವುದು ಒಳ್ಳೆಯದು ಎಂಬ ಗೊಂದಲಗಳು ಎಲ್ಲರಿಗೂ ಇದೆ. ಆ ಕಾರಣಕ್ಕೆ ಯಾವ ವಿಧಾನದ ನಡಿಗೆ ಒಳ್ಳೆಯದು ಎಂದು ಮೊದಲು ತಿಳಿದುಕೊಳ್ಳುವುದು ಬಹಳ ಮುಖ್ಯ.,

ಪ್ರತಿದಿನ ನಡಿಗೆ (walking) ಆರೋಗ್ಯಕ್ಕೆ ಒಳ್ಳೆಯದು, ಆದರೆ ನಡೆಯುವಾಗ ಶೂ ಧರಿಸಿದ್ರೆ ಒಳ್ಳೆಯದಾ ಅಥವಾ ಬರಿಗಾಲಿನಲ್ಲಿ ನಡೆಯುವುದು ಒಳ್ಳೆಯದಾ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಬರಿಗಾಲಿನಲ್ಲಿ ನಡೆಯುವುದು vs ಶೂಗಳಲ್ಲಿ ನಡೆಯುವುದರ (Walking barefoot vs. walking with shoes) ಬಗ್ಗೆ ಚರ್ಚೆಗಳು ಬಹಳ ವರ್ಷಗಳಿಂದ ನಡೆಯುತ್ತ ಬಂದಿದೆ. ಆರೋಗ್ಯ ತಜ್ಞರು, ಫಿಟ್ನೆಸ್ ತರಬೇತಿದಾರರು, ಇಂತಹ ಅನೇಕರಿಗೆ ಈ ಪ್ರಶ್ನೆಗಳು ಮೂಡಿದೆ. ನೈಸರ್ಗಿಕ ಚಲನೆ ಮತ್ತು ಪಾದದ ಆರೋಗ್ಯದ ಕಡೆಗೆ ಹೆಚ್ಚು ಒತ್ತು ನೀಡಬೇಕಾದ ಕಾರಣ ಯಾವುದು ಒಳ್ಳೆಯದು ಎಂಬ ಗೊಂದಲಗಳು ಕೂಡ ಇದೆ. ಸ್ಪೋರ್ಟಿ ಬೂಟುಗಳನ್ನು ಬಳಸುವುದಕ್ಕಿಂತ ಬರಿಗಾಲಿನಲ್ಲಿ ನಡೆಯುವುದು ಆರೋಗ್ಯಕರವೇ? ಇದರ ಅಪಾಯ ಮತ್ತು ಪ್ರಯೋಜನಗಳನ್ನು ಮೊದಲು ತಿಳಿದುಕೊಳ್ಳಬೇಕು.
ಬರಿಗಾಲಿನಲ್ಲಿ ನಡೆಯುವುದರಿಂದ ಪಾದಗಳು ಹೆಚ್ಚು ನೈಸರ್ಗಿಕವಾಗಿ ಚಲಿಸಲು ಅನುವು ಮಾಡಿಕೊಡುತ್ತದೆ, ಸ್ನಾಯುಗಳು ಹಾಗೂ ಅಸ್ಥಿರಜ್ಜುಗಳು ಚೆನ್ನಾಗಿ ತೊಡಗಿಸಿಕೊಳ್ಳುತ್ತವೆ. ಬರಿಗಾಲಿನಲ್ಲಿ ನಡೆಯುವಾಗ, ಪಾದಗಳು ನೆಲವನ್ನು ಚೆನ್ನಾಗಿ ಗ್ರಹಿಸಬಹುದು, ವಿನ್ಯಾಸವು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವರ್ಧಿತ ಸಂವೇದನಾ ಪ್ರತಿಕ್ರಿಯೆಯು ಉತ್ತಮ ಸಮತೋಲನ ಮತ್ತು ಸ್ಥಿರತೆಗೆ ಕಾರಣವಾಗಬಹುದು. ಬರಿಗಾಲಿನ ನಡಿಗೆಯು ಪಾದದ ಸ್ನಾಯುಗಳನ್ನು ಬಲಪಡಿಸುತ್ತದೆ. ಪ್ರವಾಸಗಳ ಸಮಯದಲ್ಲಿ ಇಂತಹ ಅಭ್ಯಾಸಗಳು ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಇನ್ನು ವಯಸ್ಸಾದವರಿಗೆ ಶೂ ಹಾಕಿ ನಡೆಯುವುದಕ್ಕಿಂತ ಉತ್ತಮವಾಗಿರಬಹುದು ಎಂದು ಅಧ್ಯಯನ ಹೇಳುತ್ತದೆ. ಆದರೆ ಶೂ ಹಾಕಿ ನಡೆಯುವುದಕ್ಕೆ ಹೋಲಿಸಿದರೆ ಬರಿಗಾಲಿನ ನಡಿಗೆಯು ಹೆಚ್ಚಿನ ಸಮತೋಲನ ಚೇತರಿಕೆ ಸ್ಥಿರತೆಯನ್ನು ನೀಡುತ್ತದೆ ಎಂದು ಈ ಅಧ್ಯಯನ ಹೇಳುತ್ತದೆ.
ಆದರೆ ಬರಿಗಾಲಿನ ನಡಿಗೆಯುವುದು ಎಲ್ಲರಿಗೂ ಸೂಕ್ತವಲ್ಲ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಪಾದದ ವಿರೂಪ, ಮಧುಮೇಹ ಮತ್ತು ನರರೋಗ (ಅಥವಾ ಯಾವುದೇ ಗಂಭೀರ ಗಾಯ) ಇರುವವರಿಗೆ ಇದು ಸರಿಯಲ್ಲ ಎಂದು ಈ ಅಧ್ಯಯನ ಹೇಳುತ್ತದೆ. ಚಲನೆಯ ಸಮಯದಲ್ಲಿ ಪಾದಗಳನ್ನು ಮೆತ್ತನೆ ಆಗುವುದರಿಂದ ವಾಕಿಂಗ್ ಶೂಗಳನ್ನು ಹಾಕಿಕೊಳ್ಳುವುದು ಉತ್ತಮ ಎಂದು ಹೇಳಲಾಗಿದೆ. ಪಾದದ ಮೇಲೆ ಒತ್ತಡವನ್ನು ಸಮವಾಗಿ ಇರಿಸುವುದರಿಂದ ಗಾಯಗಳು ಹಾಗೂ ಕಾಲಿನಲ್ಲಿ ನೋವು ತರುವುದನ್ನು ಕಡಿಮೆ ಮಾಡುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಬ್ಯಾಕ್ಟೀರಿಯಾಗಳೊಂದಿಗಿನ ನೇರ ಸಂಪರ್ಕವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಚಪ್ಪಟೆ ಪಾದಗಳು, ಅಥವಾ ಸಂಧಿವಾತ ಅಥವಾ ಪ್ಲಾಂಟರ್ ಫ್ಯಾಸಿಟಿಸ್‌ನಂತಹ ಕೆಲವು ಪಾದದ ಸ್ಥಿತಿಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಇದು ಉತ್ತಮವಾಗಿರುತ್ತದೆ.
ಇದನ್ನೂ ಓದಿ: ರಕ್ತ ಪರಿಚಲನೆಯಲ್ಲಿ ವ್ಯಾತ್ಯಾಸ ಕಾಣಿಸಿಕೊಂಡರೆ ಮನೆಯಲ್ಲಿ ಹೀಗೆ ಮಾಡಿ
ಯಾವುದು ಆರೋಗ್ಯಕರ?
ಯಾರಿಗೆ ಆರೋಗ್ಯಕರ ಅಥವಾ ಯಾರಿಗೆ ಆರೋಗ್ಯಕರವಲ್ಲ ಎಂಬ ನಿರ್ಧಾರ ಮಾಡಲು ಸಾಧ್ಯವಿಲ್ಲ. ಅದರೂ ಸ್ನಾಯುಗಳನ್ನು ಬಲಪಡಿಸಲು, ಸಮತೋಲನವನ್ನು ಸುಧಾರಿಸಲು ಮತ್ತು ನೈಸರ್ಗಿಕ ಚಲನೆಯನ್ನು ಉತ್ತೇಜಿಸಲು ಬಯಸುವವರಿಗೆ ಬರಿಗಾಲಿನ ನಡಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಒಟ್ಟಾರೆಯಾಗಿ ಯಾವುದೇ ನಮ್ಮ ದೇಹಕ್ಕೆ ಅಥವಾ ಕಾಲಿಗೆ ಸೂಕ್ತ ಅಥವಾ ಆರಾಮ ಎಂದೆನಿಸುತ್ತದೆ ಅದನ್ನು ಮಾಡುವುದು ಅಗತ್ಯವಾಗಿರುತ್ತದೆ. ಜತೆಗೆ ವೈದ್ಯಕೀಯ ಸಲಹೆಗಳನ್ನು ಪಡೆಯುವುದು ಉತ್ತಮ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:47 pm, Mon, 8 September 25








