AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹವಾಮಾನಕ್ಕೆ ಅನುಗುಣವಾಗಿ ಯಾವ ಪಾತ್ರೆಯಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು

ನೀರು ದೇಹದ ಆರೋಗ್ಯಕ್ಕೆ ಬಹಳ ಮುಖ್ಯವಾಗಿರುತ್ತದೆ. ಇದರ ಜತೆಗೆ ನೀರು ಕುಡಿಯುವ ಪಾತ್ರೆಯೂ ಕೂಡ ಬಹಳ ಮುಖ್ಯವಾಗಿರುತ್ತದೆ. ಹೀಗಿರುವಾಗ ಋತುಮಾನಗಳಿಗೆ ಅನುಗುಣವಾಗಿ ಯಾವ ಪಾತ್ರೆಯಲ್ಲಿ ನೀರು ಕುಡಿಯುವುದು ಉತ್ತಮ, ನೀರನ್ನು ಸಂಗ್ರಹಿಸಲು ಸೂಕ್ತ ಪಾತ್ರೆ ಯಾವುದು ಮತ್ತು ಇದರಿಂದ ಲಭಿಸುವ ಆರೋಗ್ಯ ಪ್ರಯೋಜನಗಳ ಬಗಿನ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಹವಾಮಾನಕ್ಕೆ ಅನುಗುಣವಾಗಿ ಯಾವ ಪಾತ್ರೆಯಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
|

Updated on: Sep 09, 2025 | 4:36 PM

Share

ನೀರು ಪ್ರತಿಯೊಬ್ಬ ಮನುಷ್ಯನ ಜೀವಕ್ಕೆ ಅಗತ್ಯವಾಗಿರುತ್ತದೆ. ದೇಹದಲ್ಲಿ ನಿರ್ಜಲೀಕರಣ ಉಂಟಾದ ಪ್ರತಿಯೊಬ್ಬ ವೈದ್ಯರು ಸಲಹೆ ನೀಡುವುದು ಸರಿಯಾಗಿ ನೀರು ಕುಡಿಯಿರಿ, ಆರೋಗ್ಯದಲ್ಲಿ ಸಮಸ್ಯೆ ಕಂಡರು ನೀರು ಕುಡಿಯುವುದನ್ನು ತಪ್ಪಿಸಬೇಡಿ ಎಂದು ಹೇಳುತ್ತಾರೆ. ನೀರು ಮನುಷ್ಯನ ದೇಹಕ್ಕೆ ಅಷ್ಟೊಂದು ಮುಖ್ಯವಾಗಿರುತ್ತದೆ. ನೀರು ದೇಹಾರೋಗ್ಯಕ್ಕೆ ಅತೀ ಮುಖ್ಯವಾಗಿರುವಂತೆ ಅದನ್ನು ಕುಡಿಯಲು ಬಳಸುವ ಪಾತ್ರೆ (container) ಕೂಡ ಮುಖ್ಯವಾಗಿರುತ್ತದೆ. ಹೀಗಿರುವಾಗ ಯಾವ ಋತುವಿನಲ್ಲಿ ಯಾವ ಪಾತ್ರೆಯಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಬೇಸಿಗೆಯಲ್ಲಿ ಮಡಕೆಯಲ್ಲಿ ತುಂಬಿಸಿದ ನೀರು:

ಬೇಸಿಗೆ ಕಾಲದಲ್ಲಿ ಕೂಲ್​​ ಆಗಿರಬೇಕು ಎಂದು ಅನೇಕರು ಇಷ್ಟಪಡುವ ಕಾರಣ, ಅವರು ಮೊದಲು ಬಳಸುವುದು ಫ್ರಿಡ್ಜ್‌ ನೀರು, ಆದರೆ ಇದು ದೇಹಕ್ಕೆ ಹಾನಿಕಾರಕವಾಗಿದೆ. ಇದರ ಬದಲಾಗಿ, ಮಣ್ಣಿನ ಪಾತ್ರೆಯಿಂದ ನೀರು ಕುಡಿಯುವುದು ಉತ್ತಮ ಆಯ್ಕೆಯಾಗಿದೆ. ಇದು ನೀರನ್ನು ನೈಸರ್ಗಿಕವಾಗಿ ತಂಪಾಗಿ ಇಡುತ್ತದೆ. ಇದರಲ್ಲಿರುವ ಖನಿಜಗಳು ನೀರಿನ ಗುಣಮಟ್ಟವನ್ನು ಹೆಚ್ಚಿಸುತ್ತವೆ. ಬೆಳಿಗ್ಗೆ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ದೇಹವು ನಿರ್ವಿಷಗೊಳ್ಳುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೂ ಇದು ಮುಖಕ್ಕೆ ನೈಸರ್ಗಿಕ ಹೊಳಪನ್ನು ತರುತ್ತದೆ.

ಚಳಿಗಾಲದಲ್ಲಿ ಚಿನ್ನದ ಪಾತ್ರೆಯ ನೀರು:

ಚಳಿಗಾಲದಲ್ಲಿ ದೇಹಕ್ಕೆ ಉಷ್ಣತೆ ಮತ್ತು ರೋಗನಿರೋಧಕ ಶಕ್ತಿ ಬೇಕಾಗುತ್ತದೆ. ಈ ಸಮಯದಲ್ಲಿ ಚಿನ್ನದ ಪಾತ್ರೆಯಲ್ಲಿ ನೀರು ಕುಡಿಯುವುದು ಪ್ರಯೋಜಕಾರಿಯಾಗಿದೆ. ಚಿನ್ನದ ಪಾತ್ರೆ ಇಲ್ಲದಿದ್ದರೆ, ಬೇರೆ ಪಾತ್ರೆಯಲ್ಲಿ ನೀರು ಕುಡಿಯಬಹುದು. ಆದರೆ ಅದಕ್ಕೆ ಚಿನ್ನ ವಸ್ತುಗಳನ್ನು ಅಂದರೆ ಉಂಗುರದಂತ ಚಿನ್ನವನ್ನು ಹಾಕಿ ಕುಡಿಯಬೇಕು. ಈ ನೀರು ಖಿನ್ನತೆ, ನಿದ್ರಾಹೀನತೆ ಮತ್ತು ನಕಾರಾತ್ಮಕ ಆಲೋಚನೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕೆಮ್ಮು, ಶೀತ ಮತ್ತು ಜ್ವರದಂತಹ ಋತುಮಾನದ ಕಾಯಿಲೆಗಳಿಂದ ಪರಿಹಾರ ನೀಡುತ್ತದೆ.

ಇದನ್ನೂ ಓದಿ
Image
ಜ್ವರ ಬಂದಾಗ ಕಾಫಿ ಕುಡಿಯಬಾರದು ಏಕೆ?
Image
ಚಹಾ ಮಾಡುವಾಗ ಈ ಮೂರು ಹಂತಗಳನ್ನು ಅನುಸರಿಸಿ
Image
ದೇಹ, ಮನಸ್ಸು ಆಕ್ಟಿವ್‌ ಆಗಿರಲು ಟೀ-ಕಾಫಿ ಬದಲು ಈ ಪಾನೀಯಗಳನ್ನು ಸೇವಿಸಿ
Image
ನಾರ್ಮಲ್‌ ಟೀ ಬದಲು ಗುಲಾಬಿ ಚಹಾ ಕುಡಿಯಿರಿ, ಹಲವು ಪ್ರಯೋಜನ ಪಡೆಯಿರಿ

ಇದನ್ನೂ ಓದಿ: ಮಳೆಗಾಲದಲ್ಲಿ ಶಿಲೀಂಧ್ರ ಸೋಂಕು, ಬೆವರು ಗುಳ್ಳೆಗಳು ಕಾಣಿಸಿಕೊಳ್ಳುವುದೇಕೆ ಗೊತ್ತಾ? ಇಲ್ಲಿದೆ ತಜ್ಞರ ಮಾಹಿತಿ

ಮಳೆಗಾಲದಲ್ಲಿ ತಾಮ್ರದ ಪಾತ್ರೆಯ ನೀರು:

ಮಳೆಗಾಲದಲ್ಲಿ ಬ್ಯಾಕ್ಟೀರಿಯಾ ಮತ್ತು ಸೋಂಕಿನ ಅಪಾಯ ಹೆಚ್ಚು. ಈ ಋತುವಿನಲ್ಲಿ ತಾಮ್ರದ ಪಾತ್ರೆಯಿಂದ ನೀರು ಕುಡಿಯುವುದು ಸುರಕ್ಷಿತ ಮತ್ತು ಆರೋಗ್ಯಕರವಾಗಿರುತ್ತದೆ. ಜತೆಗೆ ತಾಮ್ರವು ನೀರಿನಿಂದ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ.ಇದರಲ್ಲಿ ಉತ್ಕರ್ಷಣ ನಿರೋಧಕ, ಉರಿಯೂತ ನಿವಾರಕ ಮತ್ತು ಕ್ಯಾನ್ಸರ್ ವಿರೋಧಿ ಗುಣಗಳು ಕಂಡುಬರುತ್ತವೆ. ರಾತ್ರಿಯಿಡೀ ತಾಮ್ರದ ಪಾತ್ರೆಯ ನೀರು ದೇಹವನ್ನು ವಿಷಕಾರಿ ಅಂಶಗಳಿಂದ ರಕ್ಷಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಋತುಮಾನದ ಕಾಯಿಲೆಗಳಿಂದ ರಕ್ಷಿಸುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ