AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Divya Kayakalp Taila: ಚರ್ಮದ ಆರೈಕೆಗೆ ಪತಂಜಲಿಯ ದಿವ್ಯ ಕಾಯಕಲ್ಪ ತೈಲಕ್ಕಿಂತ ಉತ್ತಮ ಮದ್ದು ಇನ್ನೊಂದಿಲ್ಲ

ಅಲರ್ಜಿ, ಕಲೆಗಳು, ಶುಷ್ಕತೆ, ತುರಿಕೆ, ಕಡಿತ ಇತ್ಯಾದಿ ಚರ್ಮ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಮತ್ತು ಅವುಗಳನ್ನು ತೊಡೆದುಹಾಕಲು ಆಯುರ್ವೇದ ಪರಿಹಾರ ಕ್ರಮವನ್ನು ಹುಡುಕುತ್ತಿದ್ದರೆ, ಪತಂಜಲಿಯ ದಿವ್ಯ ಕಾಯಕಲ್ಪ ತೈಲವು ಉತ್ತಮ ಆಯ್ಕೆಯಾಗಿದೆ. ಇದು ಚರ್ಮವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡುತ್ತದೆ ಎಂದು ಪತಂಜಲಿ ಸಂಶೋಧನಾ ಸಂಸ್ಥೆ ಹೇಳಿದೆ.

Divya Kayakalp Taila: ಚರ್ಮದ ಆರೈಕೆಗೆ ಪತಂಜಲಿಯ ದಿವ್ಯ ಕಾಯಕಲ್ಪ ತೈಲಕ್ಕಿಂತ ಉತ್ತಮ ಮದ್ದು ಇನ್ನೊಂದಿಲ್ಲ
ಪತಂಜಲಿ ದಿವ್ಯ ಕಾಯಕಲ್ಪ ತೈಲ
ಮಾಲಾಶ್ರೀ ಅಂಚನ್​
|

Updated on:Sep 10, 2025 | 1:10 PM

Share

ಜೆನೆಟಿಕ್ಸ್ ,ಹಾರ್ಮೋನ್ ಬದಲಾವಣೆಗಳು , ಪರಿಸರದ ಕಾರಣಗಳು, ಜೀವನಶೈಲಿಯ ಆಯ್ಕೆಗಳು ಸೇರಿದಂತೆ ಹಲವಾರು ಕಾರಣಗಳಿಂದ ಅಲರ್ಜಿ, ಕಲೆಗಳು, ತುರಿಕೆ, ರಿಂಗ್‌ ವರ್ಮ್‌ನಂತಹ ಚರ್ಮ ಸಂಬಂಧಿ ಸಮಸ್ಯೆಗಳು (Skin Problem) ಕಾಣಿಸಿಕೊಳ್ಳುತ್ತವೆ. ಇಂತಹ ಸಮಸ್ಯೆಗಳಿಗೆ ಆಯುರ್ವೇದ, ಗಿಡಮೂಲಿಕಾ ಮನೆಮದ್ದುಗಳು ಸೂಕ್ತ ಎಂದು ಬಹಳ ಹಿಂದಿನಿಂದಲೂ ಪರಿಗಣಿಸಲಾಗಿದೆ. ನೀವು ಇಂತಹ ಚರ್ಮ ಸಂಬಂಧಿ ಸಮಸ್ಯೆಗಳಿಗೆ ಆಯುರ್ವೇದ ಪರಿಹಾರವನ್ನು ಹುಡುಕುತ್ತಿದ್ದರೆ, ಪತಂಜಲಿಯ ದಿವ್ಯ ಕಾಯಕಲ್ಪ ನಿಮಗೆ ಉತ್ತಮ ಆಯ್ಕೆಯಾಗಿದೆ. ದಿವ್ಯ ಕಾಯಕಲ್ಪ ತೈಲವು (Divya Kayakalp Taila)  ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲ್ಪಟ್ಟಿದ್ದು, ಇದು ಚರ್ಮವನ್ನು ಸ್ವಚ್ಛಗಾಗಿ, ಆರೋಗ್ಯಕರವಾಗಿಡುತ್ತದೆ ಎಂದು ಪತಂಜಲಿ ಸಂಶೋಧನಾ ಸಂಸ್ಥೆ ಹೇಳಿದೆ. ಈ ತೈಲದ ಪ್ರಯೋಜನಗಳೇನು, ಬಳಕೆಯ ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ.

ಪತಂಜಲಿಯ ದಿವ್ಯ ಕಾಯಕಲ್ಪ ತೈಲ:

ನೀವು ಅಲರ್ಜಿ, ಕಲೆಗಳು, ಶುಷ್ಕತೆ, ಕಡಿತ, ತುರಿಕೆ ಮುಂತಾದ ಯಾವುದೇ ಚರ್ಮ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಮತ್ತು ಅವುಗಳನ್ನು ಹೋಗಲಾಡಿಸಲು ಆರೋಗ್ಯಕರ ಮಾರ್ಗವನ್ನು ಹುಡುಕುತ್ತಿದ್ದರೆ, ಪತಂಜಲಿಯ ದಿವ್ಯ ಕಾಯಕಲ್ಪ ತೈಲವು ಉತ್ತಮ ಆಯ್ಕೆಯಾಗಿದೆ. ಈ ಎಣ್ಣೆ ಗಿಡಮೂಲಿಕೆಗಳಂತಹ ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲಾಗಿದೆ.

ದಿವ್ಯ ಕಾಯಕಲ್ಪ ತೈಲದ ಮುಖ್ಯ ಪದಾರ್ಥಗಳು:

ಈ ಎಣ್ಣೆಯಲ್ಲಿ ಬಕುಚಿ, ಪುನರ್ನವ ಸೊಪ್ಪು, ಅರಿಶಿನ, ದಾರುಹರಿದ್ರ, ಕಾರಂಜ ಅಥವಾ ಹೊಂಗೆ, ಬೇವು, ಅಮಲಕಿ (ನೆಲ್ಲಿಕಾಯಿ), ಮಂಜಿಷ್ಠ, ಅಮೃತಬಳ್ಳಿ, ಚಿತ್ರಕ, ಕುಟಕಿ, ದೇವದಾರು, ಚಿರಾಯತ (ನೆಲಬೇವು), ಎಳ್ಳೆಣ್ಣೆಯಂತಹ ಸಾಕಷ್ಟು ಆಯುರ್ವೇದ ಪದಾರ್ಥಗಳು ಮತ್ತು ಗಿಡಮೂಲಿಕೆಗಳನ್ನು ಒಳಗೊಂಡಿದೆ.

ದಿವ್ಯ ಕಾಯಕಲ್ಪ ತೈಲದ ಪ್ರಯೋಜನಗಳು:

ಇದು ತುರಿಕೆ, ಸೋರಿಯಾಸಿಸ್, ಎಸ್ಜಿಮಾ, ರಿಂಗ್‌ವರ್ಮ್, ಸೋರಿಯಾಸಿಸ್, ಇಸುಬು ರೋಗ, ಗಜಕರ್ಣ, ಬಿಳಿ ಚುಕ್ಕೆಯಂತಹ ಚರ್ಮದ ಅಲರ್ಜಿಗಳಿಗೆ ಒಳ್ಳೆಯದು. ಜೊತೆಗೆ ಇದು ಸನ್‌ಬರ್ನ್‌, ಚರ್ಮದ ಮೇಲಿನ ನಸುಕಂದು ಮಚ್ಚೆಗಳು, ದದ್ದುಗಳು, ಶಿಲೀಂಧ್ರ ಸೋಂಕುಗಳಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಣ್ಣ ಗಾಯಗಳು, ಬಿರುಕು ಬಿಟ್ಟ ಹಿಮ್ಮಡಿಗಳನ್ನು ಗುಣಪಡಿಸಲು ಸಹ ಇದು ಉತ್ತಮ ಆಯುರ್ವೇದ ಆಯ್ಕೆಯಾಗಿದೆ.

ದಿವ್ಯ ಕಾಯಕಲ್ಪ ಎಣ್ಣೆಯನ್ನು ಹೇಗೆ ಬಳಸುವುದು:

ಚರ್ಮದ ಸಮಸ್ಯೆ ಕಾಣಿಸಿಕೊಂಡ ಜಾಗಕ್ಕೆ ದಿನಕ್ಕೆ 2 ರಿಂದ 3 ಬಾರಿ ನಿಧಾನವಾಗಿ ದಿವ್ಯ ಕಾಯಕಲ್ಪ ತೈಲ ಹಾಕಿ ಮಸಾಜ್ ಮಾಡಿ. ನಿಯಮಿತವಾಗಿ ಮಸಾಜ್ ಮಾಡುವುದರಿಂದ ಚರ್ಮವು ಮೃದು, ಆರೋಗ್ಯಕರ ಮತ್ತು ಸ್ವಚ್ಛವಾಗಿರುತ್ತದೆ.

ಇದನ್ನೂ ಓದಿ: ಪತಂಜಲಿ ಉತ್ಪನ್ನದ ಸಹಾಯದಿಂದ ಬರೋಬ್ಬರಿ 70 ಕೆಜಿ ತೂಕ ಇಳಿಸಿಕೊಂಡ ಯುವತಿ

ಮುನ್ನೆಚ್ಚರಿಕೆಗಳು:

  • ಯಾವುದೇ ಹೊಸ ಔಷಧ ಅಥವಾ ಎಣ್ಣೆಯನ್ನು ಬಳಸುವ ಮೊದಲು, ಪ್ಯಾಚ್ ಪರೀಕ್ಷೆಯನ್ನು ಮಾಡಲು ಮರೆಯದಿರಿ.
  • ಗರ್ಭಿಣಿಯರು ಮತ್ತು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಜನರು ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.
  • ಮಕ್ಕಳಿಗೆ  ಬಳಸುವಾಗ ಡೋಸೇಜ್ ಕಡಿಮೆ ಇರಲಿ.

ಹಕ್ಕು ನಿರಾಕರಣೆ: ವೈದ್ಯರನ್ನು ಸಂಪರ್ಕಿಸದೆ ಯಾವುದೇ ಔಷಧಿಯನ್ನು ತೆಗೆದುಕೊಳ್ಳಬೇಡಿ. ನೀವು ಈ ಔಷಧಿಯನ್ನು ಬಳಸುವ ಮೊದಲು ವೈದ್ಯರ ಸಲಹೆ ಸೂಚನೆ ಪಡೆಯುವುದು ಸೂಕ್ತ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:09 pm, Wed, 10 September 25