AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಂಜಲಿ ಉತ್ಪನ್ನದ ಸಹಾಯದಿಂದ ಬರೋಬ್ಬರಿ 70 ಕೆಜಿ ತೂಕ ಇಳಿಸಿಕೊಂಡ ಯುವತಿ

ಸ್ಥೂಲಕಾಯ, ಅಧಿಕ ತೂಕ ಸಮಸ್ಯೆಯಿಂದ ಇಂದು ಅನೇಕ ಮಂದಿ ಬಳಲುತ್ತಿದ್ದಾರೆ. ಆಹಾರ ಕ್ರಮ, ಫಿಟ್ನೆಸ್‌ ಮುಖಾಂತರ ತಮ್ಮ ತೂಕವನ್ನು ಇಳಿಸಲು ಹಲವರು ಪ್ರಯತ್ನಿಸುತ್ತಿದ್ದಾರೆ. ಆದರೆ ಕೆಲವೊಮ್ಮೆ ಅವು ಉತ್ತಮ ಫಲಿತಾಂಶವನ್ನು ನೀಡುವುದಿಲ್ಲ. ಹೀಗಿರುವಾಗ ಇಲ್ಲೊಬ್ಬಳು ಯುವತಿ ಆರೋಗ್ಯಕ ಜೀವನಶೈಲಿಯ ಪಾಲನೆ ಮತ್ತು ಪತಂಜಲಿ ಉತ್ಪನ್ನಗಳ ಸಹಾಯದಿಂದ 125 ಕೆಜಿ ಯಿಂದ 55 ಕೆಜಿಗೆ ತೂಕ ಇಳಿಸಿಕೊಂಡಿದ್ದಾಳೆ. ಈ ಸ್ಫೂರ್ತಿದಾಯಕ ಕಥೆಯನ್ನು ಬಾಬಾ ರಾಮ್‌ ದೇವ್‌ ಹಂಚಿಕೊಂಡಿದ್ದಾರೆ.

ಪತಂಜಲಿ ಉತ್ಪನ್ನದ ಸಹಾಯದಿಂದ ಬರೋಬ್ಬರಿ 70 ಕೆಜಿ ತೂಕ ಇಳಿಸಿಕೊಂಡ ಯುವತಿ
70 ಕೆಜಿ ತೂಕ ಇಳಿಸಿಕೊಂಡ ಯುವತಿ
ಮಾಲಾಶ್ರೀ ಅಂಚನ್​
|

Updated on:Sep 10, 2025 | 11:45 AM

Share

ಕಳಪೆ ಆಹಾರ ಪದ್ಧತಿ, ಜಡ ಜೀವನಶೈಲಿಯಂತಹ ಹಲವು ಕಾರಣಗಳಿಂದಾಗಿ ಅನೇಕ ಮಂದಿಗೆ ಬೊಜ್ಜಿನ ಸಮಸ್ಯೆ ಕಾಡುತ್ತಿದೆ. ಈ ಅತಿಯಾದ ದೇಹ ತೂಕವನ್ನು ಇಳಿಸಿಕೊಳ್ಳುವುದು ಸುಲಭದ ಮಾತಲ್ಲ, ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ. ಪರಿಶ್ರಮ ಪಟ್ಟರೂ ಉತ್ತಮ ಫಲಿತಾಂಶ ಲಭಿಸುತ್ತದೆಯೇ ಎಂಬುದು ಗೊತ್ತಿಲ್ಲ. ಆದರೆ ಇಲ್ಲೊಬ್ಬಳು ಯುವತಿ ಬರೋಬ್ಬರಿ 70 ಕೆಜಿ ಯಷ್ಟು ತೂಕವನ್ನು ಇಳಿಸಿಕೊಂಡಿದ್ದಾಳೆ. ಹೌದು ಆರೋಗ್ಯಕರ ಜೀವನಶೈಲಿ ಮತ್ತು ಪತಂಜಲಿಯ (Patanjali) ಮೂಲಕ ಆಕೆ 125 ಕೆಜಿ ಯಿಂದ 55 ಕೆಜಿಗೆ ತನ್ನ ತೂಕವನ್ನು ಇಳಿಸಿಕೊಂಡಿದ್ದು, ಈ ಸ್ಪೂರ್ತಿದಾಯಕ ಕಥೆಯನ್ನು ಬಾಬಾ ರಾಮ್‌ದೇವ್‌ (Baba Ramdev) ಶೇರ್‌ ಮಾಡಿಕೊಂಡಿದ್ದಾರೆ.

ಪತಂಜಲಿ ಮೂಲಕ 70 ಕೆಜಿ ತೂಕ ಇಳಿಸಿಕೊಂಡ ಯುವತಿ:

ಬಾಬಾ ರಾಮ್‌ದೇವ್‌ ಸಾಮಾಜಿಕ ಮಾಧ್ಯಮದ ಮೂಲಕ ಫಿಟ್‌ ಆಗಿರಲು ಹಲವು ಸಲಹೆಗಳನ್ನು ನೀಡುತ್ತಿರುತ್ತಾರೆ. ಅದೇ ರೀತಿ ಇದೀಗ ಅವರು ಪತಂಜಲಿ ಉತ್ಪನ್ನ ಮತ್ತು ಸರಿಯಾದ ಆಹಾರ ಕ್ರಮ, ಆರೋಗ್ಯಕರ ಜೀವನಶೈಲಿಯ ಪಾಲನೆಯ ಮೂಲಕ ಯುವತಿಯೊಬ್ಬಳು ಸುಲಭವಾಗಿ  70 ಕೆಜಿ ತೂಕವನ್ನು ಇಳಿಸಿಕೊಂಡ ಕಥೆಯನ್ನು ಹಂಚಿಕೊಂಡಿದ್ದಾರೆ. ಬ್ರಿಟನ್ ಮೂಲದ ಪೂಜಾ ಎಂಬ ಯುವತಿ ಪತಂಜಲಿ ಉತ್ಪನ್ನ ಮತ್ತು ಸರಿಯಾದ ಆಹಾರ ಕ್ರಮದ ಪಾಲನೆಯಿಂದ ಬರೋಬ್ಬರಿ 70 ಕೆಜಿ ತೂಕವನ್ನು ಇಳಿಸಿಕೊಂಡು ಇದೀಗ ಫಿಟ್‌ ಆಗಿದ್ದಾಳೆ.

ಪೂಜಾ ತೂಕ ಇಳಿಸಿಕೊಂಡಿದ್ದು ಹೇಗೆ?

ಪೂಜಾ ಕೆಲವು ಪತಂಜಲಿ ಉತ್ಪನ್ನಗಳನ್ನು ಸೇವಿಸುವ ಮೂಲಕ ಮತ್ತು ಆಕೆ ತನ್ನ ಆಹಾರಕ್ರಮವನ್ನು ಸರಿಪಡಿಸಿಕೊಳ್ಳುವ ಮೂಲಕ ತೂಕವನ್ನು ಇಳಿಸಿಕೊಂಡಿದ್ದಾಳೆ ಎಂದು ಬಾಬಾ ರಾಮ್‌ದೇವ್‌ ಹೇಳಿದ್ದಾರೆ. ಇದರರ್ಥ ಆಕೆ ತೂಕ ಇಳಿಸಿಕೊಳ್ಳಲು ತಿನ್ನುವುದು ಮತ್ತು ಕುಡಿಯುವುದನ್ನು ನಿಲ್ಲಿಸಿದಳು ಎಂದಲ್ಲ, ಬದಲಿಗೆ ಆಕೆ ಸಮತೋಲಿತ ಆಹಾರವನ್ನು ಸೇವನೆ ಮಾಡಿದಳು ಜೊತೆಗೆ ಸೋರೆಕಾಯಿ ರಸವನ್ನು ಸೇವನೆ ಮಾಡಿದಳು ಎಂದು ಹೇಳಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ದೈಹಿಕ ಚಟುವಟಿಕೆ ಹೇಗಿತ್ತು?

ತೂಕ ಇಳಿಸಿಕೊಳ್ಳಲು ಪೂಜಾ ದಿನನಿತ್ಯ ಜಾಗಿಂಗ್ ಮಾಡುವುದನ್ನು ತನ್ನ ದಿನಚರಿಯ ಭಾಗವನ್ನಾಗಿ ಮಾಡಿಕೊಂಡಿದ್ದಳು. ಇದರ ಜೊತೆಗೆ, ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಪ್ರಾಣಾಯಾಮವನ್ನು ಮಾಡುತ್ತಿದ್ದಳು ಹಾಗೂ ಸೂರ್ಯ ನಮಸ್ಕಾರವನ್ನೂ ಮಾಡುತ್ತಿದ್ದಳು ಎಂದು ಬಾಬಾ ರಾಮ್‌ದೇವ್‌ ಹೇಳುತ್ತಾರೆ. ಹೀಗೆ ಸರಿಯಾದ ಆಹಾರ ಕ್ರಮ ಮತ್ತು ದೈಹಿಕ ಚಟುವಟಿಕೆಯ ಪಾಲನೆಯಿಂದ ಸುಲಭವಾಗಿ ತೂಕ ಇಳಿಸಬಹುದು ಎನ್ನುತ್ತಾರೆ ಬಾಬಾ ರಾಮ್‌ದೇವ್.‌

ಇದನ್ನೂ ಓದಿ: ಬಾಬಾ ರಾಮದೇವ್ ಅವರ 5 ನಿಮಿಷಗಳ ಪವರ್ ಯೋಗ; ಅದ್ಭುತ ಪ್ರಯೋಜನಗಳನ್ನು ತಿಳಿದಿರಿ

ಯುಕೆಯ ಪೂಜಾ ಮಾತ್ರವಲ್ಲ, ಮುಂಬೈನ ಪೂಜಾ ಅಗರ್ವಾಲ್ ಕೂಡ ಪತಂಜಲಿ ಕೇಂದ್ರಕ್ಕೆ ಹೋಗಿ ಅಲ್ಲಿ ನೀಡಲಾದ ಸಲಹೆಗಳು ಮತ್ತು ಚಿಕಿತ್ಸೆಯನ್ನು ಅನುಸರಿಸುವ ಮೂಲಕ ತೂಕ ಇಳಿಸಿಕೊಂಡಿದ್ದಾರೆ. ಅವರ ತೂಕ 100 ಕೆಜಿ ಇತ್ತು, ಇಂದು ಅವರು ತೂಕವನ್ನು ಇಳಿಸಿಕೊಂಡು ಫಿಟ್‌ ಮತ್ತು ಆರೋಗ್ಯಕರ ಜೀವನವನ್ನು ನಡೆಸುತ್ತಿದ್ದಾರೆ. ಅದೇ ರೀತಿ, ರೋಹನ್ ಗಾಂಧಿ ಎಂಬ ವ್ಯಕ್ತಿಯ ತೂಕ ಬರೋಬ್ಬರಿ 172 ಕೆಜಿ ಇತ್ತು, ಅವರು 95 ಕೆಜಿಗೆ ತೂಕವನ್ನು ಇಳಿಸಿಕೊಂಡಿದ್ದಾರೆ. ಪತಂಜಲಿಯ ಈ ಕಥೆಗಳು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಸ್ಫೂರ್ತಿದಾಯಕವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:43 am, Wed, 10 September 25

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ನಾನು ಸಚಿವನಾಗಿ ಚಾರ್ಜ್ ತಗೊಳ್ಳಲ್ಲ: ಕಾಂಗ್ರೆಸ್‌ಗೆ ಸಚಿವ ಮುನಿಯಪ್ಪ ಶಾಕ್
ನಾನು ಸಚಿವನಾಗಿ ಚಾರ್ಜ್ ತಗೊಳ್ಳಲ್ಲ: ಕಾಂಗ್ರೆಸ್‌ಗೆ ಸಚಿವ ಮುನಿಯಪ್ಪ ಶಾಕ್
ಬೆಂಗಳೂರಿನಲ್ಲಿ ರಾಮಲಿಂಗಾ ರೆಡ್ಡಿ ಬೆಂಬಲಿಗರಿಂದ ಭಾರಿ ಪ್ರತಿಭಟನೆ
ಬೆಂಗಳೂರಿನಲ್ಲಿ ರಾಮಲಿಂಗಾ ರೆಡ್ಡಿ ಬೆಂಬಲಿಗರಿಂದ ಭಾರಿ ಪ್ರತಿಭಟನೆ
ರಾಮಲಿಂಗಾರೆಡ್ಡಿ ನನಗೆ ತುಂಬಾ ಆತ್ಮೀಯರು, ಸಮಸ್ಯೆ ಬಗೆಹರಿಸುತ್ತೇನೆ: ಸಿಎಂ
ರಾಮಲಿಂಗಾರೆಡ್ಡಿ ನನಗೆ ತುಂಬಾ ಆತ್ಮೀಯರು, ಸಮಸ್ಯೆ ಬಗೆಹರಿಸುತ್ತೇನೆ: ಸಿಎಂ
Live: ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಸುದ್ದಿಗೋಷ್ಠಿ ನೇರ ಪ್ರಸಾರ
Live: ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಸುದ್ದಿಗೋಷ್ಠಿ ನೇರ ಪ್ರಸಾರ
‘ನಂಗೆ ನೀನು ಅಂದ್ರೆ ತುಂಬಾ ಇಷ್ಟ’; ಮನದಾಳದ ಮಾತು ಹೇಳಿದ ರಕ್ಷಿತಾ ಶೆಟ್ಟಿ
‘ನಂಗೆ ನೀನು ಅಂದ್ರೆ ತುಂಬಾ ಇಷ್ಟ’; ಮನದಾಳದ ಮಾತು ಹೇಳಿದ ರಕ್ಷಿತಾ ಶೆಟ್ಟಿ
ಮನೆಯ ಗೆಸ್ಟ್ ರೂಂ ಯಾವ ದಿಕ್ಕಿನಲ್ಲಿದ್ದರೆ ಉತ್ತಮ
ಮನೆಯ ಗೆಸ್ಟ್ ರೂಂ ಯಾವ ದಿಕ್ಕಿನಲ್ಲಿದ್ದರೆ ಉತ್ತಮ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು!
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು!
‘ಬಾಸ್’ ಸಿನಿಮಾ ನಿರ್ದೇಶಕನಿಗೆ ವಾಣಿಜ್ಯ ಮಂಡಳಿ ನೋಟಿಸ್ ನೀಡಿದ್ದು ಯಾಕೆ?
‘ಬಾಸ್’ ಸಿನಿಮಾ ನಿರ್ದೇಶಕನಿಗೆ ವಾಣಿಜ್ಯ ಮಂಡಳಿ ನೋಟಿಸ್ ನೀಡಿದ್ದು ಯಾಕೆ?
ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ:ಯಾರಿಗೆ ಯಾವ ಖಾತೆ?
ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ:ಯಾರಿಗೆ ಯಾವ ಖಾತೆ?
ದರ್ಶನ್ ತಂಡದ ನೊಟೀಸ್​​ ಬಗ್ಗೆ ‘ಬಾಸ್’ ಸಿನಿಮಾ ತಂಡ ಮಾತು
ದರ್ಶನ್ ತಂಡದ ನೊಟೀಸ್​​ ಬಗ್ಗೆ ‘ಬಾಸ್’ ಸಿನಿಮಾ ತಂಡ ಮಾತು