AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಮಾನಸಿಕವಾಗಿ ಬಲಿಷ್ಠರಾಗಿರಲು ಚಾಣಕ್ಯರ ಈ ಮಾತುಗಳನ್ನು ತಪ್ಪದೆ ಪಾಲಿಸಿ

ಜೀವನದಲ್ಲಿ ಸವಾಲುಗಳು, ಅಗ್ನಿ ಪರೀಕ್ಷೆಗಳು ಎದುರಾಗುತ್ತಲೇ ಇರುತ್ತವೆ. ಇವುಗಳನ್ನು ನಿರ್ವಹಿಸಲು ಕೆಲವು ಕೌಶಲ್ಯಗಳು ಬೇಕಾಗುತ್ತವೆ. ಇವುಗಳನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಕೊಂಡರೆ, ಬಲಿಷ್ಠ ವ್ಯಕ್ತಿಯಾಗಲು ಸಾಧ್ಯ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಹಾಗಿದ್ರೆ ಮೆಂಟಲಿ ಸ್ಟ್ರಾಂಗ್‌ ಆಗಿರಲು ಚಾಣಕ್ಯರು ಹೇಳಿರುವ ಆ ಸಲಹೆಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

Chanakya Niti: ಮಾನಸಿಕವಾಗಿ ಬಲಿಷ್ಠರಾಗಿರಲು ಚಾಣಕ್ಯರ ಈ ಮಾತುಗಳನ್ನು ತಪ್ಪದೆ ಪಾಲಿಸಿ
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: Sep 14, 2025 | 10:00 AM

Share

ಇಂದಿನ ಕಾರ್ಯನಿರತ ಮತ್ತು ಒತ್ತಡದ ಜೀವನದಲ್ಲಿ ಒತ್ತಡ ಎನ್ನುವುಂತಹದ್ದು ಇದ್ದೇ ಇರುತ್ತದೆ ಅದನ್ನು ನಿಭಾಯಿಸಲು ಹಾಗೂ ಜೀವನದಲ್ಲಿ ಎದುರಾಗುವ ಸವಾಲುಗಳು ಧೃತಿಗೆಡದೆ ನಿರ್ವಹಿಸಲು  ಪ್ರತಿಯೊಬ್ಬ ವ್ಯಕ್ತಿಯು ಮಾನಸಿಕವಾಗಿ ಸದೃಢರಾಗಿರುವುದು (mentally strong) ಬಹಳ ಮುಖ್ಯವಾಗಿದೆ. ನಾವು ಮಾನಸಿಕವಾಗಿ ಸದೃಢರಾದಾಗ, ನಮ್ಮ ಜೀವನದಲ್ಲಿ ಎಷ್ಟೇ ದೊಡ್ಡ ಸವಾಲುಗಳಿದ್ದರೂ, ನಾವು ಅವುಗಳನ್ನು ಸುಲಭವಾಗಿ ಎದುರಿಸಬಹುದು. ಹೀಗೆ ಜೀವನದಲ್ಲಿ ಕಷ್ಟಗಳು ಎದುರಾದಾಗ ಮೆಂಟಲಿ ಸ್ಟ್ರಾಂಗ್‌ ಆಗಿರುವುದು ಹೇಗೆ ಎಂಬುದನ್ನು ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಈ ಸೂತ್ರಗಳನ್ನು ನೀವು ನಿಮ್ಮ ಜೀವನದಲ್ಲಿ ಅನುಸರಿಸುವ ಮೂಲಕ ಮಾನಸಿಕವಾಗಿ ಸದೃಢರಾಗಬಹುದು ಮತ್ತು ದೃಢರಾಗಬಹುದು.

ಮಾನಸಿಕವಾಗಿ ಸದೃಢರಾಗಿರಲು ಚಾಣಕ್ಯರು ನೀಡಿದ ಸಲಹೆಗಳು:

ತಾಳ್ಮೆ ಕಳೆದುಕೊಳ್ಳಬೇಡಿ: ಯಾವುದೇ ಕಠಿಣ ಪರಿಸ್ಥಿತಿಯಲ್ಲಿಯೂ ಆತುರಪಡಬಾರದು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಆತುರದಿಂದ ತೆಗೆದುಕೊಳ್ಳುವ ನಿರ್ಧಾರಗಳು ಹೆಚ್ಚಾಗಿ ತಪ್ಪಾಗಿರುತ್ತವೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು, ಶಾಂತ ಮನಸ್ಸಿನಿಂದ ಯೋಚಿಸಿ ಮತ್ತು ಸರಿಯಾದ ಸಮಯದಲ್ಲಿ ಯಾವುದೇ ಹೆಜ್ಜೆ ಇರಿಸಿ. ನೀವು ಹೀಗೆ ಮಾಡಿದಾಗ, ನೀವು ಮಾನಸಿಕವಾಗಿ ಬಲಶಾಲಿಯಾಗುತ್ತೀರಿ ಮತ್ತು ನೀವು ತೆಗೆದುಕೊಳ್ಳುವ ನಿರ್ಧಾರಗಳು ಸಹ ಸರಿಯಾಗಿರುತ್ತವೆ.

ಸಕಾರಾತ್ಮಕ ಚಿಂತನೆ: ಆಚಾರ್ಯ ಚಾಣಕ್ಯರ ಪ್ರಕಾರ, ನಮ್ಮ ಆಲೋಚನೆಗಳು ನಮ್ಮ ಶಕ್ತಿಯನ್ನು ಹೆಚ್ಚಿಸುತ್ತವೆ. ಹಾಗಾಗಿ ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಬೇಕು.  ನಾವು ಯಾವಾಗಲೂ ನಕಾರಾತ್ಮಕವಾಗಿ ಯೋಚಿಸಿದರೆ, ಸಮಸ್ಯೆಗಳು ದೊಡ್ಡದಾಗಿ ಕಾಣುತ್ತವೆ. ಅದೇ ಯಾವಾಗಲೂ ಒಳ್ಳೆಯದು ಮತ್ತು ಸಕಾರಾತ್ಮಕ ವಿಷಯಗಳ ಬಗ್ಗೆ ಯೋಚಿಸಿದಾಗ ನಾವು ಮಾನಸಿಕವಾಗಿ ಬಲಶಾಲಿಗಳಾಗಿರುತ್ತೇವೆ ಜೊತೆಗೆ  ಸಣ್ಣ ವಿಷಯಗಳಲ್ಲಿಯೂ ಸಂತೋಷವನ್ನು ಕಾಣುತ್ತೇವೆ.

ಇದನ್ನೂ ಓದಿ
Image
ನಿಮ್ಮ ಅತಿಯಾದ ಕೋಪದಿಂದಾಗಿ ಈ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತೆ
Image
ಜೀವನದಲ್ಲಿ ಈ ಐದು ಜನರನ್ನು ಯಾವುದೇ ಕಾರಣಕ್ಕೂ ನಂಬಬೇಡಿ
Image
ಈ ಅಭ್ಯಾಸಗಳು ಒಬ್ಬ ವ್ಯಕ್ತಿಯನ್ನು ಖಂಡಿತವಾಗಿ ಬಡವನನ್ನಾಗಿ ಮಾಡುತ್ತದೆ
Image
ಈ ಎರಡು ವಿಷಯಗಳಿಗೆ ಹೆದರುವವರು ಎಂದಿಗೂ ಯಶಸ್ಸನ್ನು ಗಳಿಸಲು ಸಾಧ್ಯವಿಲ್ಲ

ನಿಮ್ಮ ಮೇಲೆ ನಂಬಿಕೆ ಇಡಿ: ಎಂತಹದ್ದೇ ಕಠಿಣ ಪರಿಸ್ಥಿತಿ ಎದುರಾದರೂ ನೀವು ನಿಮ್ಮ ಮೇಲೆ ನಂಬಿಕೆ ಇಡುವುದು ಬಹಳ ಮುಖ್ಯ. ನಾವು ನಮ್ಮ ನಿರ್ಧಾರಗಳು ಮತ್ತು ಕ್ರಿಯೆಗಳನ್ನು  ನಂಬದಿದ್ದರೆ, ನಾವು ಮಾನಸಿಕವಾಗಿ ದುರ್ಬಲರಾಗುತ್ತೇವೆ. ಮತ್ತು ಇತರರ ನಕಾರಾತ್ಮಕ ವಿಷಯಗಳು ನಿಮ್ಮ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ  ನಿಮ್ಮ ಮೇಲೆ ನಂಬಿಕೆ ಇಡಿ ಮತ್ತು ಜೀವನದಲ್ಲಿ ಮುಂದುವರಿಯಿರಿ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.

ಇದನ್ನೂ ಓದಿ: ನಿಮ್ಮ ಅತಿಯಾದ ಕೋಪದಿಂದಾಗಿ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತೆ, ಜೋಕೆ

ಒಳ್ಳೆಯವರ ಸಹವಾಸ: ನಮ್ಮೊಂದಿಗಿರುವ ಜನರ ಆಲೋಚನೆಗಳು ಮತ್ತು ನಡವಳಿಕೆಗಳು ಸಹ ನಮ್ಮ ಮೇಲೆ ಆಳವಾದ ಪರಿಣಾವನ್ನು ಬೀರುತ್ತದೆ. ಆದ್ದರಿಂದ ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸುವ, ನಿಮ್ಮನ್ನು ಪ್ರೇರೇಪಿಸುವ, ನಿಮ್ಮ ಜೊತೆಯಾಗಿ ನಿಲ್ಲುವ ಜನರ ಸ್ನೇಹ ಸಂಬಂಧ ಬೆಳೆಸಬೇಕು ಎನ್ನುತ್ತಾರೆ ಚಾಣಕ್ಯರು. ಒಳ್ಳೆಯ ಸ್ನೇಹಿತರು ಮತ್ತು ಸರಿಯಾದ ಸಂಗಾತಿ ಆಯ್ಕೆ ನಿಮ್ಮನ್ನು ಮಾನಸಿಕವಾಗಿ ಬಲಶಾಲಿಯಾಗಲು ಸಹಾಯ ಮಾಡುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ