Chanakya Niti: ಹೆಣ್ಮಕ್ಳು ಸಾಧ್ಯವಾದಷ್ಟು ಇಂತಹ ಜನರಿಂದ ದೂರವಿರಬೇಕು ಎನ್ನುತ್ತಾರೆ ಚಾಣಕ್ಯ
ಆಚಾರ್ಯ ಚಾಣಕ್ಯರು ನಮ್ಮ ಜೀವನಕ್ಕೆ ಉಪಯುಕ್ತವಾಗಿರುವಂತ ಹಲವಾರು ವಿಚಾರಗಳ ಬಗ್ಗೆ ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಇವರು ತಮ್ಮ ನೀತಿಗಳಲ್ಲಿ, ಪ್ರತಿಯೊಬ್ಬ ಹುಡುಗಿಯೂ ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳಬೇಕಾದ ಕೆಲವು ಜನರ ಬಗ್ಗೆ ಉಲ್ಲೇಖಿಸಿದ್ದಾರೆ. ಇಂತಹ ಜನಗಳಿಂದ ಹೆಣ್ಣುಮಕ್ಕಳು ಅಂತರ ಕಾಯ್ದುಕೊಳ್ಳದಿದ್ದರೆ ಜೀವನವೇ ಹಾಳಾಗಬಹುದು ಎಂದು ಎಚ್ಚರಿಸಿದ್ದಾರೆ.

ಸುತ್ತಮುತ್ತಲಿನ ಜನರ ಬಗ್ಗೆ ಎಷ್ಟು ಜಾಗರೂಕರಾಗಿದ್ದರೂ ಸಾಲದು. ಅದರಲ್ಲೂ ಹೆಣ್ಮಕ್ಳಂತೂ (women) ಜೀವನದಲ್ಲಿ ತುಂಬಾನೇ ಎಚ್ಚರಿಕೆಯಿಂದಿರಬೇಕು. ಅದರಲ್ಲೂ ಈ ಒಂದಷ್ಟು ಜನರ ಬಗ್ಗೆ ತುಂಬಾನೇ ಎಚ್ಚರಿಕೆಯನ್ನು ವಹಿಸಬೇಕು ಇಲ್ಲದಿದ್ದರೆ ಜೀವನವೇ ನರಕವಾಗುವ ಸಾಧ್ಯತೆ ಇರುತ್ತದೆ ಎಂದು ಮಹಾನ್ ತತ್ವಜ್ಞಾನಿ ಆಚಾರ್ಯ ಚಾಣಕ್ಯರು (Acharya Chanakya) ಹೇಳಿದ್ದಾರೆ. ಇವರು ಮದುವೆ, ಪ್ರೇಮ ಜೀವನ, ವೃತ್ತಿ ಜೀವನ, ಯಶಸ್ಸು ಸೇರಿದಂತೆ ಜೀವನಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಅವರು ಮಹಿಳೆಯರಿಗೆ ಸಂಬಂಧಿಸಿದ ಒಂಷ್ಟು ವಿಚಾರಗಳ ಬಗ್ಗೆ ತಿಳಿಸಿದ್ದು, ಹೆಣ್ಣು ಮಕ್ಕಳು ಇಂತಹ ಜನರಿಂದ ಸಾಧ್ಯವಾದಷ್ಟು ದೂರವಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಹೆಣ್ಮಕ್ಳು ಸಾಧ್ಯವಾದಷ್ಟು ಇಂತಹ ಜನರಿಂದ ದೂರವಿರಬೇಕು:
ಮೋಸಗಾರರು ಮತ್ತು ಸುಳ್ಳುಗಾರರು: ಯಾವುದೇ ಸಂಬಂಧವಾಗಿರಬಹುದು ಅಥವಾ ಜೀವನದಲ್ಲಿಯೇ ಆಗಿರಬಹುದು ಸತ್ಯ ಎನ್ನುವಂತಹದ್ದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೀಗಿರುವಾಗ ಸುಳ್ಳು ಹೇಳುವ ಜನರನ್ನು ಎಂದಿಗೂ ನಂಬಬಾರದು. ಅದರಲ್ಲೂ ಮಹಿಳೆಯರು ಸುಳ್ಳು ಹೇಳುವ ಜನರೊಂದಿಗೆ ಸ್ನೇಹ ಅಥವಾ ಸಂಬಂಧವನ್ನು ಯಾವುದೇ ಕಾರಣಕ್ಕೂ ಬೆಳೆಸಬಾರದು. ಅವರು ನಂಬಿಕೆಗೆ ಅರ್ಹರಲ್ಲ ಯಾವಾಗ ಬೇಕಾದರೂ ಬಣ್ಣ ಬದಲಾಯಿಸುವ ಸಾಧ್ಯತೆ ಇರುತ್ತದೆ ಹೌದು ಅವರು ಸಿಹಿಯಾಗಿ ಮಾತನಾಡುವ ಮೂಲಕ ನಿಮ್ಮ ನಂಬಿಕೆಯನ್ನು ಗೆಲ್ಲುತ್ತಾರೆ ಮತ್ತು ಅವಕಾಶ ಸಿಕ್ಕ ತಕ್ಷಣ ನಿಮಗೆ ದ್ರೋಹ ಬಗೆಯುತ್ತಾರೆ ಎಂದು ಚಾಣಕ್ಯರು ಹೇಳುತ್ತಾರೆ.
ನಿಯಂತ್ರಿಸಲು ಬಯಸುವವರು: ಅನೇಕ ಪುರುಷರು ಮಹಿಳೆಯರನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ. ಹೀಗೆ ನಿಮ್ಮನ್ನು ನಿಯಂತ್ರಿಸುವ ಹಾಗೂ ನಿಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಬಯಸುವ ವ್ಯಕ್ತಿಯ ಜೊತೆ ಇರಬಾರದು ಅವರು ಯಾವತ್ತಿದ್ದರೂ ಅಪಾಯಕಾರಿ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಅಂತಹ ಜನರು ನಿಮ್ಮ ಸ್ವಾಭಿಮಾನಕ್ಕೆ ನೋವುಂಟು ಮಾಡುತ್ತಾರೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಕಳೆದುಹೋಗಬಹುದು ಮತ್ತು ನೀವು ನಿಮ್ಮ ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮಹಿಳೆಯರು ತಮ್ಮ ಸ್ವಾಭಿಮಾನದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಬಾರದು ಎಂದು ಚಾಣಕ್ಯರು ಹೇಳುತ್ತಾರೆ.
ಇದನ್ನೂ ಓದಿ: ಮಾನಸಿಕವಾಗಿ ಬಲಿಷ್ಠರಾಗಿರಲು ಚಾಣಕ್ಯರ ಈ ಮಾತುಗಳನ್ನು ತಪ್ಪದೆ ಪಾಲಿಸಿ
ದುರಾಸೆಯ ಜನ: ತಮ್ಮ ಲಾಭವನ್ನೇ ಬಯಸುವವರು, ತಮ್ಮ ಲಾಭಕ್ಕಾಗಿ ಇತರರೊಂದಿಗೆ ಸಂಬಂಧ ಬೆಳೆಸಿಕೊಳ್ಳುತ್ತಾರೆ. ಚಾಣಕ್ಯನ ಪ್ರಕಾರ, ಮಹಿಳೆಯರು ಅಂತಹ ಜನರೊಂದಿಗೆ ಯಾವತ್ತಿಗೂ ಸಂಬಂಧವನ್ನು ಇಟ್ಟುಕೊಳ್ಳಬಾರದು. ಸ್ವಾರ್ಥಕ್ಕಾಗಿಯೇ ಬದುಕುವ ಈ ಜನರು ಕಷ್ಟದ ಸಮಯದಲ್ಲಿ ನಿಮ್ಮನ್ನು ಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮನ್ನು ಗೌರವಿಸುವ ಜನರೊಂದಿಗೆ ಇರಿ.
ನಕಾರಾತ್ಮಕ ಜನ: ಚಾಣಕ್ಯನ ಪ್ರಕಾರ, ನಿಮ್ಮ ಯಶಸ್ಸಿನ ಬಗ್ಗೆ ಅಸೂಯೆ ಪಡುವ ಅಥವಾ ಯಾವಾಗಲೂ ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡುತ್ತಾರೆ. ಇಂತಹ ಜನರಿಂದ ಜೀವನವೇ ನರಕವಾಗುತ್ತದೆ. ಅಲ್ಲದೆ ಅವರ ನಕಾರಾತ್ಮಕ ವೈಬ್ ನಿಮ್ಮ ಉತ್ಸಾಹವನ್ನೇ ನಾಶಪಡಿಸಬಹುದು ಮತ್ತು ಇದರಿಂದ ನೀವು ಖಿನ್ನತೆಗೆ ಒಳಗಾಗಬಹುದು. ಹಾಗಾಗಿ ಅಂತಹ ಜನರ ಬಗ್ಗೆ ಜಾಗರೂಕರಾಗಿರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








