AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಿಯರ ಈ ವ್ಯಾಯಾಮ ಮಾಡಿದ್ರೆ ಹೊಟ್ಟೆ ಮತ್ತು ಸೊಂಟದ ಕೊಬ್ಬು ಕಡಿಮೆ ಆಗುವುದು ಖಂಡಿತ

ಪ್ರತಿದಿನ ಜೀವನಶೈಲಿ ಅಭ್ಯಾಸಗಳಲ್ಲಿ ಈ ಚೀನಿ ವ್ಯಾಯಾಮಗಳನ್ನು ಅಳವಡಿಸಿಕೊಂಡರೆ ಖಂಡಿತ ನಿಮ್ಮ ದೇಹದಲ್ಲಿರುವ ಅಥವಾ ಹೊಟ್ಟೆ ಮತ್ತು ಸೊಂಟದ ಮೇಲೆ ಉತ್ಪಾದನೆ ಆಗಿರುವ ಕೊಬ್ಬನ್ನು ಕಡಿಮೆ ಮಾಡಬಹುದು.ಇದು ದೇಹದ ಮೇಲೆ ದೊಡ್ಡ ಮಟ್ಟದ ಪರಿಣಾಮವನ್ನು ಉಂಟು ಮಾಡಬಹುದು. ಯಾವೆಲ್ಲ ವ್ಯಾಯಾಮ ಎಂಬುದು ಇಲ್ಲಿದೆ ನೋಡಿ.

ಚೀನಿಯರ ಈ ವ್ಯಾಯಾಮ ಮಾಡಿದ್ರೆ ಹೊಟ್ಟೆ ಮತ್ತು ಸೊಂಟದ ಕೊಬ್ಬು ಕಡಿಮೆ ಆಗುವುದು ಖಂಡಿತ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
|

Updated on:Sep 15, 2025 | 5:31 PM

Share

ಇಂದಿನ ಒತ್ತಡದ ಜೀವನಶೈಲಿಯ ಕಾರಣದಿಂದಾಗಿ ಹಲವರಿಗೆ ಯಾವುದೇ ಆರೋಗ್ಯಕರ ಚಟುವಟಿಕೆಗಳನ್ನು ಮಾಡಲು ಆಗುತ್ತಿಲ್ಲ. ಒತ್ತಡದ ಜೀವನದ ಮಧ್ಯೆ ಕೆಲವೊಂದು ವ್ಯಾಯಾಮಗಳನ್ನು ಮಾಡಲು ಸಮಯ ಕೂಡ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೆಟ್ಟ ಆಹಾರ ಪದ್ಧತಿ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದಾಗಿ ಹೊಟ್ಟೆ ಮತ್ತು ಸೊಂಟದ ಮೇಲೆ ಉತ್ಪಾದನೆ ಆಗಿರುವ ಕೊಬ್ಬನ್ನು ಕಡಿಮೆ ಮಾಡುವುದೇ ಒಂದು ದೊಡ್ಡ ಚಿಂತೆಯಾಗಿದೆ. ಇದನ್ನು ಕಡಿಮೆ ಮಾಡಲು ಆಹಾರದಿಂದ ಹಿಡಿದು ವ್ಯಾಯಾಮದವರೆಗೂ ಬೇರೆ ಬೇರೆ ರೀತಿಯ ಕ್ರಮಗಳನ್ನು ಅನುಸರಿಸುತ್ತೇವೆ. ಆದರೆ ಈ ಕ್ರಮ ಯಾವಾಗಲೂ ಕೆಲಸ ಮಾಡುತ್ತದೆ ಎಂದಲ್ಲ, ಇದರ ಬದಲು ಈ ಚೀನೀ ವ್ಯಾಯಾಮಗಳು ( Chinese exercises) ನಿಮ್ಮ ದೇಹದಲ್ಲಿ ಬದಲಾವಣೆಗಳನ್ನು ತರಬಹುದು. ಇದು ದೇಹದ ಮೇಲೆ ದೊಡ್ಡ ಮಟ್ಟದ ಪರಿಣಾಮವನ್ನು ಉಂಟು ಮಾಡಬಹುದು.

ಚೀನೀ ವ್ಯಾಯಾಮಗಳು:

ಸೊಂಟವನ್ನು ತಿರುಗಿಸುವ ವ್ಯಾಯಾಮ

ನಿಮ್ಮಲ್ಲಿ ಹೊಟ್ಟೆಯ ಕೊಬ್ಬು ಹೆಚ್ಚಾಗಿದ್ದಾರೆ ಈ ವ್ಯಾಯಾಮವನ್ನು ಮಾಡುವುದು ಒಳ್ಳೆಯದು. ಪ್ರತಿದಿನ 3 ರಿಂದ 5 ಸೆಟ್‌ಗಳನ್ನು ಮಾಡಿ ಮತ್ತು ಪ್ರತಿ ಸೆಟ್‌ನಲ್ಲಿ 10 ಬಾರಿ ಪುನರಾವರ್ತನೆ ಮಾಡಿ. ಕ್ರಮೇಣ ಸೊಂಟದ ಕೊಬ್ಬು ಕಡಿಮೆ ಮಾಡುತ್ತದೆ.

ಇದನ್ನೂ ಓದಿ
Image
ತೂಕ ಇಳಿಸುವವರು ಈ ಕೆಲವು ಸಲಹೆಗಳನ್ನು ತಪ್ಪದೇ ಪಾಲಿಸಿ
Image
ಸಣ್ಣ ಬದಲಾವಣೆಯೊಂದಿಗೆ 30 ಕೆಜಿಗಳಷ್ಟು ತೂಕ ಇಳಿಸಿಕೊಂಡ ನ್ಯೂರಾಲಜಿಸ್ಟ್
Image
ಯೋಗಾಸನ ಮೂಲಕ ಕರುಳಿನ ಆರೋಗ್ಯ ಪಾಲನೆ
Image
ಕೇವಲ 4 ದಿನದಲ್ಲಿ 164 ಕಿ.ಮೀ ನಡಿಗೆ, ಇದು ವಿನೋದ್ ಕೃಷ್ಣನ್ ಸಾಧನೆ

ಚೆಸ್ಟ್‌ ಓಪನಿಂಗ್ ಪಾಮ್ ಸ್ಟ್ರೈಕ್‌ಗಳು

ಈ ವ್ಯಾಯಾಮವು ನಿಮ್ಮ ಹೊಟ್ಟೆ ಮತ್ತು ತೋಳುಗಳೆರಡರ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀಗೆ ಮಾಡುವುದರಿಂದ ದೇಹದ ಮೇಲ್ಭಾಗವು ಕರಗುತ್ತದೆ. ತೂಕವೂ ನಿಯಂತ್ರಣಕ್ಕೆ ಬರುತ್ತದೆ. ಪ್ರತಿದಿನ 3 ರಿಂದ 5 ಸೆಟ್‌ಗಳನ್ನು ಮಾಡಿ ಮತ್ತು ಪ್ರತಿ ಸೆಟ್‌ನಲ್ಲಿ 10 ಬಾರಿ ಹೀಗೆ ಮಾಡಿ.

ಇಲ್ಲಿದೆ ನೋಡಿ ಇನ್ಸ್ಟಾ ವಿಡಿಯೋ:

ಕೈಗಳನ್ನು ಮೇಲಕ್ಕೆ ಮತ್ತು ಕೆಳಕ್ಕೆ ಹೊಡೆಯುವುದು

ಈ ವ್ಯಾಯಾಮವು ಕಿಬ್ಬೊಟ್ಟೆಯ ಸ್ನಾಯುಗಳನ್ನು ಹಿಗ್ಗಿಸುತ್ತದೆ. ನಿರಂತರವಾಗಿ ಮಾಡುತ್ತಿದ್ದರೆ, ಕೊಬ್ಬು ಕರಗುತ್ತದೆ ಮತ್ತು ತೂಕ ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತದೆ. ದೈನಂದಿನ ವ್ಯಾಯಾಮದಲ್ಲಿ ಇದನ್ನು ಮಾಡಿ.

ನೀರಿನಲ್ಲಿ ಆಡುವ ಚಿನ್ನದ ಆಮೆ ​​

ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ ಮತ್ತು ಕಾಲುಗಳನ್ನು ಬಲಪಡಿಸುತ್ತದೆ. ಹೀಗೆ ಮಾಡುವುದರಿಂದ, ಇಡೀ ದೇಹದ ಸ್ನಾಯುಗಳು ಸಕ್ರಿಯವಾಗುತ್ತವೆ. ಪ್ರತಿದಿನ 3 ರಿಂದ 5 ಸೆಟ್‌ಗಳನ್ನು ಮಾಡಿ. ಮತ್ತೆ 10 ಬಾರಿ ಇದನ್ನು ಪುನರಾವರ್ತನೆ ಮಾಡಬಹುದು.

ಇದನ್ನೂ ಓದಿ: ತೂಕ ಇಳಿಸುವವರು ಈ ಕೆಲವು ಸಲಹೆಗಳನ್ನು ತಪ್ಪದೇ ಪಾಲಿಸಿ

ರೈಸಿಂಗ್ ಸನ್ ಅಪ್:

ಈ ವ್ಯಾಯಾಮವು ಕಾಲುಗಳು ಮತ್ತು ತೊಡೆಗಳಿಂದ ಕೊಬ್ಬನ್ನು ಕಡಿಮೆ ಮಾಡಲು ಉತ್ತಮವಾಗಿದೆ. ಇದನ್ನು ಮಾಡುವುದರಿಂದ ನಿಮ್ಮ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ.

ಈ ಚೀನೀ ವ್ಯಾಯಾಮಗಳು ಸರಿಯಾದ ಆಯ್ಕೆ. ಇದನ್ನು ದಿನನಿತ್ಯ ನಿಮ್ಮ ವ್ಯಾಯಮದಲ್ಲಿ ಅಥವಾ ಚಟುವಟಿಕೆಯಲ್ಲಿ ಸೇರಿಸಿಕೊಂಡರೆ ಖಂಡಿತ ದೇಹದ ಕೊಬ್ಬುಗಳನ್ನು ಕಡಿಮೆ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:02 pm, Mon, 15 September 25