ತೂಕ ಇಳಿಸುವವರು ಈ ಕೆಲವು ಸಲಹೆಗಳನ್ನು ತಪ್ಪದೇ ಪಾಲಿಸಿ
ಇತ್ತೀಚೆಗಿನ ದಿನಗಳಲ್ಲಿ ತೂಕ ಹೆಚ್ಚಳದಿಂದ ಬಳಲುತ್ತಿರುವವರೇ ಹೆಚ್ಚು. ಹೀಗಾಗಿ ಬಹುತೇಕರು ಆಹಾರ ಸೇವನೆಯನ್ನು ನಿಯಂತ್ರಿಸುವ ಮೂಲಕ ತೂಕವನ್ನು ನಿರ್ವಹಣೆಯತ್ತ ಗಮನ ಕೊಡುತ್ತಾರೆ. ನೀವೇನಾದ್ರು ತೂಕ ಇಳಿಕೆ ಕಡೆಗೆ ಹೆಚ್ಚು ಗಮನ ನೀಡುತ್ತೀರಿ ಅಂತಾದ್ರೆ ಈ ಕೆಲವು ವಿಚಾರಗಳನ್ನು ಅನುಸರಿಸಬೇಕು. ಈ ಕೆಲವು ಅಭ್ಯಾಸಗಳು ತೂಕ ಇಳಿಕೆಯಲ್ಲಿ ಬಹುದೊಡ್ಡ ಬದಲಾವಣೆಯನ್ನು ತರುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾದ್ರೆ ಈ ಕುರಿತಾದ ಮಾಹಿತಿ ಇಲ್ಲಿದೆ.

ತೂಕ ಇಳಿಕೆImage Credit source: Pinterest
ಇತ್ತೀಚೆಗಿನ ದಿನಗಳಲ್ಲಿ ಒತ್ತಡ ಭರಿತ ಜೀವನ ಶೈಲಿ, ನಿದ್ರೆಯ ಕೊರತೆ, ಆಹಾರದಲ್ಲಿನ ಅಸಮತೋಲನ ಸೇರಿದಂತೆ ಇನ್ನಿತ್ತರ ಅಂಶವು ತೂಕ ಹೆಚ್ಚಳಕ್ಕೆ (Weight Gain) ಕಾರಣವಾಗುತ್ತಿದೆ. ಹೀಗಾಗಿ ಇದುವೇ ಬೇಡದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈಗಿನ ಜೀವನಶೈಲಿಯಲ್ಲಿ ತೂಕ ನಿರ್ವಹಣೆಯತ್ತ (Weight Management) ಹೆಚ್ಚು ಗಮನ ಕೊಡುವುದು ಅಗತ್ಯ. ಇದು ತೂಕ ಇಳಿಸಿಕೊಳ್ಳುವುದು ಮಾತ್ರ ಒಳಗೊಂಡಿಲ್ಲ, ದೀರ್ಘಕಾಲೀನ ಆರೋಗ್ಯಕ್ಕಾಗಿ ಸಮತೋಲಿತ ಆಹಾರ ಸೇವನೆ. ಉತ್ತಮ ಜೀವನಶೈಲಿ ಹಾಗೂ ನಿಯಮಿತ ವ್ಯಾಯಾಮವನ್ನು ಅಳವಡಿಸಿಕೊಳ್ಳುವುದಾಗಿದೆ. ತೂಕ ಇಳಿಸಿಕೊಳ್ಳಲು ಈ ಕೆಲವು ಟಿಪ್ಸ್ ಪಾಲಿಸುವುದು ಬಹಳ ಮುಖ್ಯ.
ತೂಕ ಇಳಿಕೆಗೆ ಇಲ್ಲಿವೆ ಸಲಹೆಗಳು
- ಬೆಳಗ್ಗೆ ಬೇಗ ಏಳುವ ಅಭ್ಯಾಸವಿರಲಿ: ನೀವು ಬೆಳಗ್ಗೆ 10 ಗಂಟೆಗೆ ಮಲಗಿ ಬೆಳಗ್ಗೆ 6 ಗಂಟೆಗೆ ಒಳಗೆ ಎಳುವ ಅಭ್ಯಾಸ ಬೆಳೆಸಿಕೊಳ್ಳಿ. ಇದು ನಿಮಗೆ 7 ರಿಂದ 8 ಗಂಟೆಗಳ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
- ಸಕ್ಕರೆ ಪಾನೀಯಗಳನ್ನು ತಪ್ಪಿಸಿ : ಸಕ್ಕರೆ ಅಧಿಕವಾಗಿರುವ ಆಹಾರ ಸೇವನೆಯೂ ಒಳ್ಳೆಯದಲ್ಲ. ಇದು ಇನ್ಸುಲಿನ್ ಅನ್ನು ಹೆಚ್ಚಿಸಿ ಹಸಿವನ್ನು ಹೆಚ್ಚಿಸಬಹುದು. ಇದು ತೂಕ ಹೆಚ್ಚಿಸುತ್ತದೆ.
- ಒಂದು ಲೋಟ ನೀರು ಕುಡಿಯಿರಿ: ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ನೀರು ಕುಡಿಯುವ ಅಭ್ಯಾಸವಿರಲಿ. ಇದು ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆ ವೇಗಗೊಳ್ಳುತ್ತದೆ. ದೇಹವು ಕ್ಯಾಲೊರಿಗಳನ್ನು ವೇಗವಾಗಿ ಸುಡಲು ಸಹಾಯ ಮಾಡುತ್ತದೆ. ಹಸಿವು ಕಡಿಮೆ ಮಾಡಿ ಹೆಚ್ಚು ತಿನ್ನುವುದನ್ನು ತಪ್ಪಿಸುತ್ತದೆ.
ಇದನ್ನೂ ಓದಿ: ಜೀವನಶೈಲಿಯ ಸಣ್ಣ ಬದಲಾವಣೆಯೊಂದಿಗೆ 30 ಕೆಜಿಗಳಷ್ಟು ತೂಕ ಇಳಿಸಿಕೊಂಡ ನ್ಯೂರಾಲಜಿಸ್ಟ್
ಇದನ್ನೂ ಓದಿ
- ಆರೋಗ್ಯಕರ ಆಹಾರ ಸೇವಿಸಿ: ದಿನನಿತ್ಯ ಆಹಾರದಲ್ಲಿ ಆವಕಾಡೊ, ಬೀಜಗಳು ಸೇರಿದಂತೆ ದ್ವಿದಳ ಧಾನ್ಯಗಳನ್ನು ಸೇರಿಸಿಕೊಳ್ಳಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಹಾಗೂ ತೂಕವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








