AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆವರಿನ ವಾಸನೆ ಹೋಗಲಾಡಿಸಲು ಈ 20 ರೂಪಾಯಿ ವಸ್ತುವನ್ನು ಬಳಸಿ

ದೇಹದಲ್ಲಿ ಬೆವರಿನಿಂದ ಕೆಟ್ಟ ವಾಸನೆಗಳು ಉಂಟಾಗುತ್ತದೆ. ಇದರಿಂದ ದೇಹದಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳು ಉತ್ಪತಿಯಾಗುತ್ತದೆ. ಇದು ಆರೋಗ್ಯಕ್ಕೂ ದೊಡ್ಡ ಮಟ್ಟದಲ್ಲಿ ಪರಿಣಾಮವನ್ನು ಉಂಟು ಮಾಡುತ್ತದೆ. ಅದಕ್ಕಾಗಿ ದುಬಾರಿ ಸುಗಂಧ ದ್ರವ್ಯಗಳನ್ನು ಬಳಸುವ ಬದಲು 20 ರೂಪಾಯಿಯಲ್ಲಿ ಸಿಗುವ ಈ ವಸ್ತುವನ್ನು ಬಳಸಬಹುದು. ಈ ಕುರಿತಾದ ಮಾಹಿತಿ ಇಲ್ಲಿದೆ.

ಬೆವರಿನ ವಾಸನೆ ಹೋಗಲಾಡಿಸಲು ಈ 20 ರೂಪಾಯಿ ವಸ್ತುವನ್ನು ಬಳಸಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
|

Updated on: Sep 15, 2025 | 5:50 PM

Share

ಕೆಲವರ ಬೆವರಿದಾಗ (sweat odor) ಕೆಟ್ಟ ವಾಸನೆಯನ್ನು ಬೀರುತ್ತಾರೆ, ಹೀಗಾಗಿ ಎಲ್ಲರ ಮುಂದೆ ಅಪ್ಪಿಕೊಳ್ಳಲು, ಕೈ ಮೇಲೆತ್ತಲು ಮುಜುಗರ ಆಗುವುದು ಸಹಜ. ಆದರೆ ಹೆಚ್ಚಿನವರು ಬೆವರಿನಿಂದ  ಹಾಗೂ ದುರ್ನಾತದಿಂದ ತಪ್ಪಿಸಿಕೊಳ್ಳಲು ಬೇರೆ ಬೇರೆ ರೀತಿಯ ಕ್ರಮಗಳನ್ನು, ದುಬಾರಿ ಸುಗಂಧಗಳನ್ನು ಹಚ್ಚಿಕೊಳ್ಳುತ್ತಾರೆ. ಆದರೆ ಸುಲಭ ಪರಿಹಾರವನ್ನು ಕೇವಲ 20 ರೂಪಾಯಿಗಳಲ್ಲಿ ಮಾಡಬಹುದು. ಈ ವಸ್ತುವಿನಲ್ಲಿರುವ ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ವಾಸನೆಯನ್ನು ನಿವಾರಿಸುವುದಲ್ಲದೇ ಬೆವರುವಿಕೆಯನ್ನು ಕಡಿಮೆ ಮಾಡುತ್ತದೆ.

ಸ್ಪಟಿಕ:

ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸ್ಪಟಿಕದಲ್ಲಿ ಕಂಡುಬರುತ್ತವೆ. ಇದು ದೇಹದಲ್ಲಿ ಬೆವರಿನಿಂದ ಉಂಟಾಗುವ ವಾಸನೆಯನ್ನು ಹಾಗೂ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಇದರ ಸಂಕೋಚಕ ಗುಣಗಳು ಚರ್ಮದ ರಂಧ್ರಗಳನ್ನು ಕುಗ್ಗಿಸುತ್ತವೆ, ಜತೆಗೆ ಬೆವರುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ದೀರ್ಘಕಾಲದವರೆಗೆ ತಾಜಾವಾಗಿರಿಸುತ್ತದೆ.

ಸ್ಪಟಿಕವನ್ನು ಹೇಗೆ ಬಳಸುವುದು?

  • ಸ್ನಾನ ಮಾಡುವಾಗ: ಸ್ನಾನದ ನೀರಿನಲ್ಲಿ ಒಂದು ಸಣ್ಣ ತುಂಡು ಸ್ಪಟಿಕವನ್ನು ಹಾಕಿ ಕರಗಲು ಬಿಡಿ ಮತ್ತು ನಂತರ ಅದೇ ನೀರಿನಿಂದ ಸ್ನಾನ ಮಾಡಿ. ಇದು ಇಡೀ ದೇಹದಿಂದ ಕೆಟ್ಟ ವಾಸನೆಯನ್ನು ತೆಗೆದುಹಾಕುತ್ತದೆ.
  • ನೇರ ಬಳಕೆ: ಸ್ಪಟಿಕವನ್ನು ಸ್ವಲ್ಪ ತೇವಗೊಳಿಸಿ ಕಂಕುಳ ಅಥವಾ ಪಾದಗಳ ಮೇಲೆ ಉಜ್ಜಿಕೊಳ್ಳಿ. ಇದು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ , ಅದರ ಬೇರುಗಳಿಂದ ಬರುವ ಕೆಟ್ಟ ವಾಸನೆಯನ್ನು ನಿವಾರಿಸುತ್ತದೆ.
  • ಪುಡಿ: ಸ್ಪಟಿಕವನ್ನು ಪುಡಿ ಪುಡಿ ಮಾಡಿ, ಅತಿಯಾದ ಬೆವರು ಇರುವ ಪ್ರದೇಶಗಳಿಗೆ ಹಚ್ಚಿ.

ಇದನ್ನೂ ಓದಿ: ಚೀನೀಯರ ಈ ವ್ಯಾಯಮ ಮಾಡಿದ್ರೆ ಹೊಟ್ಟೆ ಮತ್ತು ಸೊಂಟದ ಕೊಬ್ಬು ಕಡಿಮೆ ಆಗುವುದು ಖಂಡಿತ

ಇದನ್ನೂ ಓದಿ
Image
ಚೀನಿ ವ್ಯಾಯಾಮ ಸೂತ್ರ, ಹೊಟ್ಟೆ ಮತ್ತು ಸೊಂಟದ ಕೊಬ್ಬು ಕಡಿಮೆ ಆಗುವುದು ಖಂಡಿತ
Image
ತೂಕ ಇಳಿಸುವವರು ಈ ಕೆಲವು ಸಲಹೆಗಳನ್ನು ತಪ್ಪದೇ ಪಾಲಿಸಿ
Image
ಯೋಗಾಸನ ಮೂಲಕ ಕರುಳಿನ ಆರೋಗ್ಯ ಪಾಲನೆ
Image
ನಿಮಗೂ ಆಗಾಗ ಆಕಳಿಕೆ ಬರುತ್ತಾ? ಇದಕ್ಕೆ ಕಾರಣ ಏನು ಗೊತ್ತಾ?

ಇದರ ಪ್ರಯೋಜಗಳು:

  • ಇದು ಅಗ್ಗದ ಮತ್ತು ಸುಲಭವಾಗಿ ಲಭ್ಯವಿರುವ ವಸ್ತು.
  • ಇದು ರಾಸಾಯನಿಕ ಮುಕ್ತವಾಗಿದ್ದು ಚರ್ಮಕ್ಕೆ ಹಾನಿ ಮಾಡುವುದಿಲ್ಲ.
  • ದೀರ್ಘಕಾಲದವರೆಗೆ ಪರಿಣಾಮಕಾರಿಯಾಗಿರುತ್ತದೆ.
  • ಬೆವರಿನ ವಾಸನೆಯನ್ನು ನಿಯಂತ್ರಿಸುತ್ತದೆ ಮತ್ತು ನಿಮ್ಮನ್ನು ತಾಜಾತನದಿಂದ ಇರುವಂತೆ ಮಾಡುತ್ತದೆ.

ದುಬಾರಿ ಸುಗಂಧ ದ್ರವ್ಯಗಳು ಮತ್ತು ಡಿಯೋಗಳು ಕೆಲವು ಗಂಟೆಗಳ ಕಾಲ ಮಾತ್ರ ಪರಿಮಳವನ್ನು ನೀಡುತ್ತವೆ. ಆದರೆ ಯಾವುದೇ ಬ್ಯಾಕ್ಟೀರಿಯಾವನ್ನು ನಿವಾರಿಸುವುದಿಲ್ಲ. ಸ್ಪಟಿಕವು ಬಜೆಟ್ ಸ್ನೇಹಿ ಮಾತ್ರವಲ್ಲದೇ ಸಮಸ್ಯೆಗೆ ಸುಲಭವಾಗಿ ಪರಿಹಾರವನ್ನು ನೀಡುತ್ತದೆ. ಅದಕ್ಕಾಗಿಯೇ ಇಂದಿಗೂ ಹಳ್ಳಿಗಳಲ್ಲಿ ಜನರು ಇದನ್ನು ದೇಹದ ಆರೈಕೆಯಲ್ಲಿ ಬಳಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ