AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Ozone Day 2025: ಸಕಲ ಜೀವಸಂಕುಲದದ ರಕ್ಷಕವಾದ ಓಝೋನ್‌ ಪದರದ ಸಂರಕ್ಷಣೆ ಮನುಕುಲದ ಹೊಣೆ

ಓಝೋನ್‌ ಪದರವು ಭೂಮಿಯನ್ನು ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಿಸುವುದು ಮಾತ್ರವಲ್ಲದೆ, ಇದು ಭೂಮಿಯ ಸಕಲ ಜೀವ ಸಂಕುಲವನ್ನು ರಕ್ಷಿಸುವ ಸಂರಕ್ಷಕನಾಗಿ ಕೆಲಸ ಮಾಡುತ್ತಿದೆ. ಆದರೆ ಇಂದು ಮಾನವನ ಕಾರಣದಿಂದಾಗಿ ಓಝೋನ್‌ ಪದರ ಕ್ಷೀಣಿಸುತ್ತಿದೆ. ಹಾಗಾಗಿ ಓಝೋನ್‌ ಪದರವನ್ನು ಸಂರಕ್ಷಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರತಿವರ್ಷ ಸೆಪ್ಟೆಂಬರ್‌ 16 ರಂದು ವಿಶ್ವ ಓಝೋನ್‌ ದಿನವನ್ನು ಆಚರಿಸಲಾಗುತ್ತದೆ.

World Ozone Day 2025: ಸಕಲ ಜೀವಸಂಕುಲದದ ರಕ್ಷಕವಾದ ಓಝೋನ್‌ ಪದರದ ಸಂರಕ್ಷಣೆ ಮನುಕುಲದ ಹೊಣೆ
ವಿಶ್ವ ಓಝೋನ್‌ ದಿನImage Credit source: Google
TV9 Web
| Updated By: ಮಾಲಾಶ್ರೀ ಅಂಚನ್​|

Updated on: Sep 16, 2025 | 9:30 AM

Share

ಓಝೋನ್ (Ozone) ಪದರವು ಸಕಲ ಜೀವ ಸಂಕುಲಗಳನ್ನು ರಕ್ಷಿಸುವ ನೈಸರ್ಗಿಕ ರಕ್ಷಾಕವಚವಾಗಿದ್ದು, ಇದು ಸೂರ್ಯನ ಹಾನಿಕಾರಕ UV ಕಿರಣಗಳನ್ನು ಹೀರಿಕೊಳ್ಳುವ ಮೂಲಕ  ನಮಗೆ ರಕ್ಷಣೆಯನ್ನು ನೀಡುತ್ತದೆ. ಈ UV ಕಿರಣಗಳು ನೇರವಾಗಿ ಭೂಮಿಯ ಮೇಲ್ಮೈ ತಲುಪಿದರೆ ಇದರಿಂದಾಗಿ ಚರ್ಮದ ಕ್ಯಾನ್ಸರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಓಝೋನ್‌ ಪದರವು ಸೂರ್ಯನ ನೆರಳಾತೀತ ಕಿರಣಗಳು ಭೂಮಿಗೆ ಬೀಳದಂತೆ ತಡೆಯುವ ಕಾರ್ಯವನ್ನು ಮಾಡುತ್ತದೆ. ಆದರೆ ಪ್ರಸ್ತುತ ಓಝೋನ್‌ ಪದರದಲ್ಲಿ ರಂಧ್ರಗಳು ಕಾಣಿಸಿಕೊಂಡು, ಕ್ಷೀಣಿಸುತ್ತಿದೆ. ಮಾನವರು ಬಳಸುವ ಏಸಿ, ಫ್ರಿಡ್ಜ್‌ಗಳಿಂದ ಹೊರಸೂಸುವ ಅನಿಲಗಳು ಜೊತೆಗೆ ಕ್ಲೋರೋಫ್ಲೋರೋಕಾರ್ಬನ್‌, ಕಾರ್ಬನ್‌ ಟೆಟ್ರಾಕ್ಲೋರೈಡ್‌ನಂತಹ ರಾಸಾಯನಿಕಗಳು, ಕಾರ್ಖಾನೆಗಳಿಂದ ಹೊರಸೂಸುವ ಹಾನಿಕಾರಕ ಹೊಗೆಗಳಂತಹ ಅಂಶಗಳು ಇದಕ್ಕೆಲ್ಲಾ ಮುಖ್ಯ ಕಾರಣ. ಹಾಗಾಗಿ ಓಝೋನ್‌ ಪದರವನ್ನು ಸಂರಕ್ಷಿಸಬೇಕು ಎನ್ನುವ ಉದ್ದೇಶದಿಂದ ಪ್ರತಿವರ್ಷ ಸೆಪ್ಟೆಂಬರ್‌ 16 ರಂದು ವಿಶ್ವ ಓಝೋನ್‌ (World Ozone Day) ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಓಝೋನ್‌ ದಿನದ ಇತಿಹಾಸ:

ವಿಶ್ವ ಓಝೋನ್ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 16 ರಂದು ಆಚರಿಸಲಾಗುತ್ತದೆ, ಈ ದಿನವನ್ನು ಓಝೋನ್ ಪದರದ ರಕ್ಷಣೆಗಾಗಿ ಜಾಗೃತಿ ಮೂಡಿಸಲು ಮೀಸಲಿಡಲಾಗಿದೆ. ಓಝೋನ್‌ ಪದರದ ಮಹತ್ವವನ್ನು ಗಮದಲ್ಲಿಟ್ಟುಕೊಂಡು, ಸೆಪ್ಟೆಂಬರ್‌ 16, 1987 ರಂದು ಓಝೋನ್‌ ಪದರದ ಸವಕಳಿಗೆ ಕಾರಣವಾಗುವ ವಸ್ತುಗಳ ಮೇಲೆ ಮಾಂಟ್ರಿಯಲ್‌ ಪ್ರೋಟೋಕಾಲ್‌ ಗೆ ವಿಶ್ವಸಂಸ್ಥೆ ಮತ್ತು ಇತರ 45 ದೇಶಗಳು ಸಹಿ ಹಾಕಿದ್ದವು. ಇದರ ನಂತರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜನವರಿ 23, 1995 ರಂದು ವಿಶ್ವದಾದ್ಯಂತ ಓಝೋನ್‌ ಪದರದ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸೆಪ್ಟೆಂಬರ್‌ 16 ನ್ನು ವಿಶ್ವ ಓಝೋನ್‌ ದಿನವನ್ನಾಗಿ ಆಚರಿಸಲು ನಿರ್ಣಯವನ್ನು ಅಂಗೀಕರಿಸಿತು. ಓಝೋನ್ ಪದರದ ಮಹತ್ವ ಮತ್ತು ಅದನ್ನು ರಕ್ಷಿಸುವ ಅಗತ್ಯವನ್ನು ಎತ್ತಿ ತೋರಿಸಲು ವಿಶ್ವ ಓಝೋನ್ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಓಝೋನ್‌ ದಿನದ ಮಹತ್ವ:

ಓಝೋನ್‌ ಪದರವು ಸೂರ್ಯನಿಂದ ಬರುವ ನೇರಳಾತೀತ ವಿಕಿರಣಗಳ ಕಾನಿಕಾರಕ ಅಡ್ಡಪರಿಣಾಮಗಳಿಂದ ಭೂಮಿಯಲ್ಲಿನ ಸಕಲ ಜೀವರಾಶಿಗಳನ್ನು ರಕ್ಷಿಸುತ್ತದೆ. ಆದರೆ ಈ ಪದರ ಸಂಪೂರ್ಣವಾಗಿ ಕ್ಷೀಣಿಸಿದರೆ ಜೀವರಾಶಿಗಳ ಮೇಲೆ ಗಂಭೀರ ಹಾನಿ ಉಂಟಾಗುತ್ತದೆ. ಅಲ್ಲದೆ ನಾವು ನೇರಳಾತೀತ ಕಿರಣಗಳೊಂದಿಗೆ ನೇರ ಸಂಪರ್ಕಕ್ಕೆ ಬಂದರೆ ಇದು ಚರ್ಮದ ಕ್ಯಾನ್ಸರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಸಕಲ ಜೀವಸಂಕುಲದದ ರಕ್ಷಕವಾದ ಓಝೋನ್‌ ಪದರದ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ
Image
ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ
Image
ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ಉದ್ದೇಶವನ್ನು ತಿಳಿಯಿರಿ
Image
ಶಿಕ್ಷಕರ ದಿನದ ಆಚರಣೆಯ ಹಿನ್ನೆಲೆಯ ಬಗ್ಗೆ ತಿಳಿಯಿರಿ
Image
ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹದ ಇತಿಹಾಸ, ಮಹತ್ವ ತಿಳಿಯಿರಿ

ಏನಿದು ಓಝೋನ್‌ ಪದರ?

ಓಝೋನ್ ಪದರವು ವಾತಾವರಣದ ವಾಯುಮಂಡಲದಲ್ಲಿ ಓಝೋನ್ ಅನಿಲದ ತೆಳುವಾದ ಪದರವಾಗಿದೆ. ಓಝೋನ್ ಪದರ ಇರುವಿಕೆಯನ್ನು  1913 ರಲ್ಲಿ ಫ್ರೆಂಚ್ ಭೌತಶಾಸ್ತ್ರಜ್ಞರಾದ ಫ್ಯಾಬ್ರಿ ಚಾರ್ಲ್ಸ್ ಮತ್ತು ಹೆನ್ರಿ ಬುಸ್ಸನ್ ಕಂಡುಹಿಡಿದರು. ಓಝೋನ್ ಪದರದ ಸಾಂದ್ರತೆಯು ಸುಮಾರು 10 ppm ಆಗಿದ್ದು, ಇದದು ಹಾನಿಕಾರಕ ನೇರಳಾತೀತ ಕಿರಣಗಳು ಭೂಮಿಯನ್ನು ತಲುಪದಂತೆ ತಡೆಯುತ್ತದೆ. ಸೂರ್ಯನಿಂದ ಬರುವ ಎಲ್ಲಾ ನೇರಳಾತೀತ ಕಿರಣಗಳು ಭೂಮಿಯನ್ನು ತಲುಪಿದರೆ, ಭೂಮಿಯ ಮೇಲಿನ ಎಲ್ಲಾ ಜೀವಿಗಳು ಚರ್ಮದ ಕ್ಯಾನ್ಸರ್ ನಂತಹ ಗಂಭೀರ ರೋಗಗಳಿಗೆ ತುತ್ತಾಗುತ್ತವೆ ಮತ್ತು ಮರಗಿಡಗಳು ನಾಶವಾಗುತ್ತವೆ ಅದಕ್ಕಾಗಿಯೇ ಓಝೋನ್ ಪದರವನ್ನು ರಕ್ಷಿಸುವುದು ಅಗತ್ಯವಾಗಿದೆ.

ಇದನ್ನೂ ಓದಿ: ದೇಶದ ಅಭಿವೃದ್ಧಿ ಕಾರ್ಯದಲ್ಲಿ ಇಂಜಿನಿಯರ್‌ಗಳ ಪಾತ್ರ ಹಿರಿದು

ಓಝೋನ್ ಪದರವನ್ನು ರಕ್ಷಿಸಲು ನಾವು ಹೇಗೆ ಕೊಡುಗೆ ನೀಡಬಹುದು?

ಓಝೋನ್ ಪದರವನ್ನು ಉಳಿಸಲು ನಾವು CFCಗಳು ಮತ್ತು ಹ್ಯಾಲೋನ್‌ಗಳಂತಹ ಓಝೋನ್-ಕ್ಷೀಣಿಸುವ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಬೇಕು, ಇಂಧನ ಉಳಿಸುವ ಉತ್ಪನ್ನಗಳನ್ನು ಬಳಸಬೇಕು ಮತ್ತು ವಸ್ತುಗಳನ್ನು ಮರುಬಳಕೆ ಮಾಡುವ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು, ಪರಿಸರ ನೀತಿಗಳನ್ನು ಅನುಸರಿಸಬೇಕು ಈ ಎಲ್ಲಾ ಪ್ರಯತ್ನಗಳ ಮೂಲಕ ನಾವು ಓಝೋನ್ ಪದರವನ್ನು ರಕ್ಷಿಸಲು ಕೊಡುಗೆಯನ್ನು ನೀಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ