AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನೀವು ಯಾವ ವಿಷಯಕ್ಕೆ ಸಿಕ್ಕಾಪಟ್ಟೆ ಭಯ ಪಡ್ತೀರಾ ಎಂಬುದನ್ನು ಈ ಚಿತ್ರ ಹೇಳುತ್ತದೆ

ವ್ಯಕ್ತಿತ್ವ ಪರೀಕ್ಷೆಯ ಹಲವು ವಿಧಾನಗಳಿವೆ. ಅವುಗಳ ಮೂಲಕ ನೀವು ಅಂತರ್ಮುಖಿಯೇ, ಮಹಿರ್ಮುಖಿಯೇ, ಸ್ವಾಭಿಮಾನಿಗಳೇ, ಹೃದಯವಂತರೇ ಎಂಬಿತ್ಯಾದಿ ನಿಮ್ಮ ನಿಗೂಢ ವ್ಯಕ್ತಿತ್ವದ ಬಗ್ಗೆ ಪರೀಕ್ಷಿಸಿರುತ್ತೀರಿ ಅಲ್ವಾ. ಅದೇ ರೀತಿ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಿಮ್ಗೆ ಏನನ್ನು ಕಂಡ್ರೆ ಭಯ, ನೀವು ಯಾವ ವಿಷಯಕ್ಕೆ ಹೆಚ್ಚು ಭಯ ಪಡುವಂತಹ ವ್ಯಕ್ತಿ ಎಂಬುದನ್ನು ತಿಳಿಯಿರಿ.

Personality Test: ನೀವು ಯಾವ ವಿಷಯಕ್ಕೆ ಸಿಕ್ಕಾಪಟ್ಟೆ ಭಯ ಪಡ್ತೀರಾ ಎಂಬುದನ್ನು ಈ ಚಿತ್ರ ಹೇಳುತ್ತದೆ
ವ್ಯಕ್ತಿತ್ವ ಪರೀಕ್ಷೆImage Credit source: Times Now
ಮಾಲಾಶ್ರೀ ಅಂಚನ್​
|

Updated on:Sep 15, 2025 | 3:36 PM

Share

ಭಯ (fear) ಯಾರಿಗೆ ತಾನೇ ಇರೋದಿಲ್ಲ ಹೇಳಿ, ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಭಯ ಇದ್ದೇ ಇರುತ್ತದೆ. ಕೆಲವರು ಕತ್ತಲನ್ನು ಕಂಡು ಭಯಪಟ್ಟರೆ, ಕೆಲವರಿಗೆ ದೆವ್ವ-ಭೂತಗಳೆಂದರೆ ಸಿಕ್ಕಾಪಟ್ಟೆ ಭಯ. ಇನ್ನೂ ಕೆಲವರು ನೀರು, ಎತ್ತರದ ಸ್ಥಳವನ್ನು ಕಂಡು ಭಯಪಡುತ್ತಾರೆ. ಹೀಗೆ ನೀವು ಯಾವ ವಿಚಾರಕ್ಕೆ ಹೆಚ್ಚು ಭಯ ಪಡುತ್ತೀರಿ, ನಿಮ್ಮ ಗುಪ್ತ ಭಯ ಯಾವುದು ಎಂಬುದನ್ನು ನೀವು ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ (Personality Test) ಮೂಲಕ ತಿಳಿಯಬಹುದು. ಸಾಮಾನ್ಯವಾಗಿ ನೀವು ವ್ಯಕ್ತಿತ್ವ ಪರೀಕ್ಷೆಯ ಮೂಲಕ ನಿಮ್ಮ ನಿಗೂಢ ಗುಣ ಸ್ವಭಾವ ಹೇಗಿದೆ ಎಂಬುದನ್ನು ಪರೀಕ್ಷಿಸಿರುತ್ತೀರಿ ಅಲ್ವಾ. ಆದರೆ ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನೀವು ಯಾವುದಕ್ಕೆ ಹೆಚ್ಚು ಭಯಪಡುವ ವ್ಯಕ್ತಿ ಎಂಬುದನ್ನು ತಿಳಿಯಿರಿ.

ನೀವು ಯಾವ ವಿಚಾರಕ್ಕೆ ಭಯ ಪಡುವವರು ಎಂಬುದನ್ನು ಈ ಚಿತ್ರ ತಿಳಿಸುತ್ತೆ:

ಮಹಿಳೆ ಮತ್ತು ಮಗುವನ್ನು ನೋಡಿದರೆ: ನೀವು ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಮಹಿಳೆ ಮತ್ತು ಮಗುವನ್ನು ಕುಳಿತಿರುವುದನ್ನು ಮೊದಲು ಗಮನಿಸಿದರೆ, ನೀವು ಪ್ರೀತಿಪಾತ್ರರಿಂದ ದೂರವಾಗುವ ವಿಷಯಕ್ಕೆ ಹೆಚ್ಚು ಭಯಪಡುವವರಾಗಿರುತ್ತೀರಿ. ನೀವು ನಿಮ್ಮ ಪ್ರೀತಿಪಾತ್ರರನ್ನು ತುಂಬಾನೇ ಪ್ರೀತಿಸುವ ಕಾರಣ ಅವರಿಂದ ದೂರವಾಗಲು ಇಷ್ಟಪಡುವುದಿಲ್ಲ, ಅವರಿಂದ ದೂರವಾದ್ರೆ ಏನಪ್ಪಾ ಮಾಡುವುದೇ ನಿಮ್ಮ ದೊಡ್ಡ ಭಯವಾಗಿದೆ.

ಪರ್ವತದಲ್ಲಿನ ಮುಖವನ್ನು ಗಮನಿಸಿದರೆ: ನೀವು ಈ ನಿರ್ದಿಷ್ಟ ಚಿತ್ರದಲ್ಲಿ ಪರ್ವತದಲ್ಲಿನ ದೈತ್ಯ ಮುಖವನ್ನು ಗಮನಿಸಿದರೆ, ನೀವು ಇತತರು ನಮ್ಮ ಬಗ್ಗೆ ಏನನ್ನುತ್ತಾರೋ ಎಂಬ ಭಯವನ್ನು ಹೊಂದಿರುವ ವ್ಯಕ್ತಿಯೆಂದು ಅರ್ಥ. ಏನೇ ಮಾಡಿದರೂ ಈ ಬಗ್ಗೆ ಬೇರೆಯವರು ಏನೆಂದುಕೊಳ್ಳುತ್ತಾರೋ ನನ್ನ ಬಗ್ಗೆ ಎಂಬ ಚಿಂತೆ ಮತ್ತು ಭಯ ನಿಮ್ಮಲ್ಲಿ ಯಾವಾಗಲೂ ಇದ್ದೇ ಇರುತ್ತದೆ.

ಇದನ್ನೂ ಓದಿ
Image
ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಈ ಚಿತ್ರದ ಮೂಲಕ ಪರೀಕ್ಷಿಸಿ
Image
ಈ ಫೋಟೋದಲ್ಲಿ ನಿಮಗೆ ಕಾಣಿಸುವ ಅಂಶ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳುತ್ತೆ
Image
ಈ ಚಿತ್ರದಲ್ಲಿ ನಿಮಗೆ ಕಾಣಿಸುವ ಅಂಶ ನಿಮ್ಮ ವ್ಯಕ್ತಿತ್ವದ ರಹಸ್ಯ ತಿಳಿಸುತ್ತೆ
Image
ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಸುವ ಚಿತ್ರವಿದು

ಇದನ್ನೂ ಓದಿ: ನೀವು ಚಿತ್ರದಲ್ಲಿ ಆಯ್ಕೆ ಮಾಡುವ ಕೈ ಗಡಿಯಾರ ಬಹಿರಂಗ ಪಡಿಸುತ್ತದೆ ನಿಮ್ಮ ವ್ಯಕ್ತಿತ್ವದ ರಹಸ್ಯ

ಬೆಟ್ಟಗಳಲ್ಲಿನ ಮನೆಗಳು: ನೀವು ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಬೆಟ್ಟಗಳಲ್ಲಿ ಮನೆಯನ್ನು ಗಮನಿಸಿದರೆ ನೀವು ಅಸ್ಥಿರತೆ ಮತ್ತು ಅನಿಶ್ಚಿತತೆಯ ಬಗ್ಗೆ ಹೆಚ್ಚು ಭಯಪಡುವ ವ್ಯಕ್ತಿಯೆಂದು ಅರ್ಥ. ಅಭದ್ರತೆಯ ಭಾವನೆ ನಿಮಗೆ ಹೆಚ್ಚು ಭಯವನ್ನು ಉಂಟುಮಾಡುತ್ತದೆ. ನಿಮ್ಮನ್ನು ಆತಂಕಕ್ಕೆ ತಳ್ಳುತ್ತದೆ. ಹಾಗಾಗಿ ನಿಮಗೆ ಭದ್ರತೆ  ಮತ್ತು ಸ್ಥಿರತೆ ತುಂಬಾನೇ ಮುಖ್ಯ.

ನೀರು ಮತ್ತು ಬಯಲು ಪ್ರದೇಶ: ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನೀವು ನೀರು ಅಥವಾ ವಿಶಾಲವಾದ ಬಯಲು ಪ್ರದೇಶವನ್ನು ಮೊದಲು ಗಮನಿಸಿದರೆ ಶೂನ್ಯತೆ ಮತ್ತು ಭವಿಷ್ಯದ ಬಗ್ಗೆ ಹೆಚ್ಚು ಭಯಪಡುವ ವ್ಯಕ್ತಿಗಳೆಂಬುದನ್ನು ತೋರಿಸುತ್ತದೆ. ನೀವು ಇಂತಹ ವಿಷಯಗಳಿಗೆ ಹೆಚ್ಚು ಭಯಪಡುತ್ತೀರಿ ಮತ್ತು ಅವುಗಳನ್ನು ನೆನೆದು ವಿಚಲಿತರಾಗುತ್ತೀರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:35 pm, Mon, 15 September 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!