AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಈ ಫೋಟೋದಲ್ಲಿ ನಿಮಗೆ ಕಾಣಿಸುವ ಅಂಶ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳುತ್ತೆ

ಆಪ್ಟಿಕಲ್‌ ಇಲ್ಯೂಷನ್‌ಗಳು ನಮ್ಮ ಮೆದುಳಿಗೆ ವ್ಯಾಯಾಮವನ್ನು ನೀಡುವುದು ಮಾತ್ರವಲ್ಲದೆ, ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ರಹಸ್ಯವನ್ನೂ ಬಹಿರಂಗಪಡಿಸುತ್ತದೆ. ಇಲ್ಲೊಂದು ಅಂತಹದ್ದೇ ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಫೋಟೋವೊಂದು ಹರಿದಾಡುತ್ತಿದ್ದು, ಅದರಲ್ಲಿ ಮರ ಅಥವಾ ಜೋಡಿ ಮುಖ ನಿಮ್ಮ ಕಣ್ಣಿಗೆ ಮೊದಲು ಯಾವ ಅಂಶ ಕಾಣಿಸಿತು ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿದುಕೊಳ್ಳಿ.

Personality Test: ಈ ಫೋಟೋದಲ್ಲಿ ನಿಮಗೆ ಕಾಣಿಸುವ ಅಂಶ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳುತ್ತೆ
ವ್ಯಕ್ತಿತ್ವ ಪರೀಕ್ಷೆImage Credit source: Times Of India
ಮಾಲಾಶ್ರೀ ಅಂಚನ್​
|

Updated on: Sep 09, 2025 | 2:58 PM

Share

ಪ್ರತಿಯೊಬ್ಬರ ವ್ಯಕ್ತಿತ್ವವೂ (Personality)  ಭಿನ್ನವಾಗಿರುತ್ತದೆ. ಅದರಲ್ಲಿ ಕೆಲವೊಂದು ನಿಗೂಢವಾಗಿರುತ್ತವೆ. ಇಂತಹ ನಿಗೂಢ ಆಲೋಚನೆ, ವರ್ತನೆಗಳನ್ನು ಅರ್ಥ ಮಾಡಿಕೊಳ್ಳಲು ಹಲವು ವ್ಯಕ್ತಿತ್ವ ಪರೀಕ್ಷೆಯ ವಿಧಾನಗಳಿಗೆ. ಅವುಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ (Optical Illusion Personality Test) ಕೂಡ ಒಂದು. ಇಂತಹ ಸಾಕಷ್ಟು  ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇವುಗಳ ಮುಖಾಂತರ ನೀವು ಅಂತರ್ಮುಖಿಯೇ, ಬಹಿರ್ಮುಖಿಯೇ, ಹೃದಯವಂತರೇ ಎಂಬಿತ್ಯಾದಿ ನಿಗೂಢ ಗುಣ ಸ್ವಭಾವದ ಬಗ್ಗೆ ಪರೀಕ್ಷಿಸಿರುತ್ತೀರಿ ಅಲ್ವಾ. ಅದೇ ರೀತಿ ಇಲ್ಲೊಂದು ಚಿತ್ರ ವೈರಲ್‌ ಆಗಿದ್ದು ಅದರಲ್ಲಿ ನಿಮಗ್ಯಾವ ಅಂಶ ಕಾಣಿಸಿತು ಎಂಬುದರ ಮೇಲೆ ನೀವು ತಾರ್ಕಿಕ ವ್ಯಕ್ತಿಯೇ, ಸೂಕ್ಷ್ಮ ವ್ಯಕ್ತಿಯೇ ಎಂಬುದನ್ನು ಪರೀಕ್ಷಿಸಿ.

ಈ ಫೋಟೋದಲ್ಲಿ ನೀವು ಮೊದಲು ಗಮನಿಸುವ ಅಂಶವೇ ಹೇಳುತ್ತೆ ನಿಮ್ಮ ಸ್ವಭಾವ:

ಈ ನಿರ್ಧಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಜೋಡಿ ಮುಖ ಮತ್ತು ಮರ ಇವೆರಡು ಅಂಶಗಳಿದ್ದು, ಇದರಲ್ಲಿ ನಿಮ್ಮ ಕಣ್ಣಿಗೆ ಯಾವ ಅಂಶ ಕಾಣಿಸಿತು ಎಂಬುರ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿ.

ಜೋಡಿ ಮುಖ: ಈ ಚಿತ್ರದಲ್ಲಿ ನೀವು ಜೋಡಿ ಮುಖವನ್ನು ಗಮನಿಸಿದರೆ, ನೀವು ತಾರ್ಕಿಕ ಮತ್ತು ಶಾಂತ ಸ್ವಭಾವದ ವ್ಯಕ್ತಿಯೆಂದು ಅರ್ಥ.  ನೀವು ಯಾವುದೇ ಸನ್ನಿವೇಶಗಳನ್ನು ಸ್ಪಷ್ಟತೆ ಮತ್ತು ತಾಳ್ಮೆಯಿಂದ ಅರ್ಥಮಾಡಿಕೊಳ್ಳುತ್ತೀರಿ. ಈ ನಿಮ್ಮ ಗುಣ ಜನರನ್ನು ಮತ್ತು ವಿವಿಧ ಸನ್ನಿವೇಶಗಳನ್ನು ಸುಲಭವಾಗಿ ನಿಭಾಯಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ನೀವು ಯಾವಾಗಲೂ ಹಠಾತ್ತನೆ ಪ್ರತಿಕ್ರಿಯಿಸುವ ಬದಲು ಸಂಯಮದಿಂದ ಚಿಂತನಶೀಲವಾಗಿ ಪರಿಸ್ಥಿತಿಗಳನ್ನು ನಿಭಾಯಿಸುತ್ತೀರಿ.  ಇದು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ನಿಮಗೆ ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ
Image
ಈ ಚಿತ್ರದಲ್ಲಿ ನಿಮಗೆ ಕಾಣಿಸುವ ಅಂಶ ನಿಮ್ಮ ವ್ಯಕ್ತಿತ್ವದ ರಹಸ್ಯ ತಿಳಿಸುತ್ತೆ
Image
ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಸುವ ಚಿತ್ರವಿದು
Image
ಈ ಚಿತ್ರದಲ್ಲಿ ನೀವು ಮೊದಲು ಕಂಡ ಅಂಶ ಹೇಳುತ್ತೆ ನಿಮ್ಮ ವ್ಯಕ್ತಿತ್ವ
Image
ನೀವು ಭಾವನಾತ್ಮಕ ವ್ಯಕ್ತಿಯೇ ಎಂಬುದನ್ನು ತಿಳಿಸುವ ಚಿತ್ರವಿದು

ಇದನ್ನೂ ಓದಿ: ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು? ಅಂಶವೇ ಬಹಿರಂಗಪಡಿಸುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ

ಮರವನ್ನು ನೋಡಿದರೆ: ಈ ಆಪ್ಟಿಕಲ್ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನೀವು ಮೊದಲು ಮರವನ್ನು ಗಮನಿಸಿದರೆ, ನೀವು ತುಂಬಾ ಸೂಕ್ಷ್ಮ ಸ್ವಭಾವದ ವ್ಯಕ್ತಿಯೆಂದರ್ಥ. ನೀವು ಇತರರು ನಿರ್ಲಕ್ಷಿಸುವಂತಹ ಸಣ್ಣಪುಟ್ಟ ವಿಷಯಗಳ ಮೇಲೂ ಹೆಚ್ಚು ಗಮನವನ್ನು ನೀಡುತ್ತೀರಿ. ಇದು ನಿಮ್ಮನ್ನು ವಿಭಿನ್ನ ಸಂದರ್ಭಗಳಲ್ಲಿ ಹೆಚ್ಚು ಗ್ರಹಿಸುವಂತೆ ಮಾಡುತ್ತದೆ.  ಅಲ್ಲದೆ ಈ ಗುಣ ನಿಮ್ಮ ಸುತ್ತಲಿನ ಜನರ ಮನಸ್ಥಿತಿಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಈ ಸಹಾನುಭೂತಿಯ ಗುಣದಿಂದಾಗಿ, ನೀವು ಆಳವಾದ ಸಂಪರ್ಕ ಸಾಧಿಸಲು, ನಂಬಿಕೆಯನ್ನು ಬೆಳೆಸಲು ಸಾಧ್ಯವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ